Instagram: 16 ವರ್ಷದೊಳಗಿನವರ ಇನ್​ಸ್ಟಾಗ್ರಾಮ್​​ ಖಾತೆ ಇನ್ಮೇಲೆ ಸಂಪೂರ್ಣ Private...!

ಖಾಸಗಿ ಖಾತೆಯಲ್ಲಿ ಅನುಮೋದಿತ ಅನುಯಾಯಿಗಳು ಮಾತ್ರ ಬಳಕೆದಾರರ ಪೋಸ್ಟ್​​, ಸ್ಟೋರಿ ಮತ್ತು ರೀಲ್ಸ್‌ಗೆ ಪ್ರತಿಕ್ರಿಯೆ, ಮೆಚ್ಚುಗೆಗಳನ್ನು ನೀಡಲು ಸಾಧ್ಯ. ಇನ್ನಿತರ ಬಳಕೆದಾರರು ಹ್ಯಾಷ್​ಟ್ಯಾಗ್, ಎಕ್ಸ್​ಪ್ಲೋರ್​​ಗಳನ್ನು ನೋಡಲಾಗುವುದಿಲ್ಲ.

ಇನ್​ಸ್ಟಾಗ್ರಾಂ ಖಾತೆ

ಇನ್​ಸ್ಟಾಗ್ರಾಂ ಖಾತೆ

  • Share this:

ಇನ್​ಸ್ಟಾ​ಗ್ರಾಮ್​​​ನಲ್ಲಿ 16 ವರ್ಷದ ಒಳಗಿನ ಬಳಕೆದಾರರ ಖಾತೆ ಸ್ವಯಂ ಆಗಿ ಖಾಸಗಿಯಾಗಿ ಬದಲಾಗುವುದು. ಈ ಬದಲಾವಣೆ ಜಾಹೀರಾತುದಾರರು ಹದಿಹರೆಯದವರನ್ನು ತಲುಪುವುದರ ಮೇಲೂ ಪ್ರಭಾವ ಬೀರಲಿದೆ.ಇನ್‌ಸ್ಟಾಗ್ರಾಮ್​​​​ನಲ್ಲಿ ಈಗಾಗಲೇ ಸಾರ್ವಜನಿಕ ಖಾತೆ ಹೊಂದಿರುವ 16 ವರ್ಷದೊಳಗಿನ ಬಳಕೆದಾರರು ಖಾಸಗಿಯಾಗಿ ಖಾತೆ ಹೊಂದುವಂತೆ ಹೇರುವುದಿಲ್ಲ. ಬದಲಾಗಿ, ಇದು ಖಾಸಗಿ ಖಾತೆಯನ್ನು ಹೊಂದುವ ಅನುಕೂಲಗಳನ್ನು ಒತ್ತಿಹೇಳುವ ಅಧಿಸೂಚನೆಯನ್ನು ಪ್ರದರ್ಶಿಸುತ್ತದೆ. ಗ್ರಾಹಕರಿಗೆ ಅವರ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಹೇಗೆ ಹೊಂದಿಸಬೇಕು ಎಂಬುದರ ಕುರಿತು ಸೂಚಿಸುತ್ತದೆ. ನಾವು ಹೊಸ ತಂತ್ರಜ್ಞಾನವನ್ನು ರಚಿಸಿದ್ದೇವೆ. ಅದು ಅನುಮಾನಾಸ್ಪದ ನಡವಳಿಕೆಯನ್ನು ಪ್ರದರ್ಶಿಸಿದ ಖಾತೆಗಳನ್ನು ಪತ್ತೆಹಚ್ಚಲು ಮತ್ತು ಹದಿಹರೆಯದವರಿಗೆ ಸೇರಿದ ಖಾತೆಗಳೊಂದಿಗೆ ಸಂವಹನ ನಡೆಸುವುದನ್ನು ನಿಯಂತ್ರಿಸಲು ನಮಗೆ ಅನುಮತಿಸುತ್ತದೆ. ಅನುಮಾನಾಸ್ಪದ ವಯಸ್ಕರ ಖಾತೆಗಳನ್ನು ಇತ್ತೀಚೆಗೆ ನಿರ್ಬಂಧಿಸಲಾಗಿದ್ದು, ಕೆಲವು ವರದಿಗಳನ್ನು ಮಾಡಲಾಗಿದೆ ಎಂದು ಇನ್‌ಸ್ಟಾಗ್ರಾಮ್‌ನ ಸಾರ್ವಜನಿಕ ನೀತಿ ನಿರ್ದೇಶಕಿ ಕರೀನಾ ನ್ಯೂಟನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ವೈಯಕ್ತಿಕ ಖಾತೆಗಳತ್ತ ಗಮನ


ಸ್ವಂತ ಪರೀಕ್ಷೆಗಳ ಪ್ರಕಾರ, ಸೈನ್ ಅಪ್ ಸಮಯದಲ್ಲಿ ಹತ್ತು ಯುವಕರಲ್ಲಿ ಎಂಟು ಮಂದಿ ಖಾಸಗಿ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಸ್ವೀಕರಿಸಿದ್ದಾರೆ. ಆಗ್ನೇಯ ಏಷ್ಯಾ ಮತ್ತು ಭಾರತದ ಎಲ್ಲ ಬಳಕೆದಾರರ ಮೇಲೆ ಈ ಪರಿಣಾಮ ಬೀರುತ್ತದೆ. ವಯಸ್ಸನ್ನು ನಮೂದಿಸಲು ಸೂಚಿಸಲಾಗುತ್ತದೆ. ಇದರಿಂದ ಸಾರ್ವಜನಿಕ ಖಾತೆಗೆ ಯಾವಾಗ ಬೇಕಾದರೂ ಬದಲಾಗುವ ಅವಕಾಶವಿದೆ.


ಇದನ್ನೂ ಓದಿ:ಕೊರೋನಾ ಮತ್ತೆ ಹೆಚ್ಚಾಗಲಿದೆ, ಕಾರ್ತಿಕ ಮಾಸದವರೆಗೂ ಜಲಗಂಡಾಂತರ ಇದೆ; ಕೋಡಿಮಠದ ಶ್ರೀಗಳ ಭವಿಷ್ಯ

ಖಾಸಗಿ ಖಾತೆಯಲ್ಲಿ ಅನುಮೋದಿತ ಅನುಯಾಯಿಗಳು ಮಾತ್ರ ಬಳಕೆದಾರರ ಪೋಸ್ಟ್​​, ಸ್ಟೋರಿ ಮತ್ತು ರೀಲ್ಸ್‌ಗೆ ಪ್ರತಿಕ್ರಿಯೆ, ಮೆಚ್ಚುಗೆಗಳನ್ನು ನೀಡಲು ಸಾಧ್ಯ. ಇನ್ನಿತರ ಬಳಕೆದಾರರು ಹ್ಯಾಷ್​ಟ್ಯಾಗ್, ಎಕ್ಸ್​ಪ್ಲೋರ್​​ಗಳನ್ನು ನೋಡಲಾಗುವುದಿಲ್ಲ. ಅಲ್ಲದೇ ಸರ್ಚ್​ನಲ್ಲಿ ಹದಿಹರೆಯದವರ ಖಾತೆಯನ್ನು ಹುಡುಕಿದರೆ ಮಾಹಿತಿಯೂ ಸಿಗುವುದಿಲ್ಲ. ಹೆಚ್ಚಿನ ಸರ್ಚ್​ಗಳನ್ನು ಮಾಡಲು ತಂತ್ರಜ್ಞಾನ ಸೂಚಿಸುತ್ತದೆ.


ಸಮಸ್ಯಾತ್ಮಕ ವ್ಯಕ್ತಿಗಳನ್ನು ಗುರುತಿಸಲು ನಾವು ಹಲವಾರು ರೀತಿಯ ಸುರಕ್ಷತೆಗಳನ್ನು ಹೊಂದಿದ್ದೇವೆ. ಸಂಬಂಧವಿಲ್ಲದ ವಯಸ್ಕರಿಗೆ ಸಂದೇಶ ಕಳುಹಿಸುವ ಮೂಲಕ ಮಕ್ಕಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ ಎಂದು ನಾವು ಈ ವರ್ಷದ ಆರಂಭದಲ್ಲಿಯೇ ಘೋಷಿಸಿದ್ದೇವೆ. ಅದೇ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಇದೆ ಎಂದು ನ್ಯೂಟನ್ ವಿವರಿಸಿದರು.


ಈ ಅನುಮಾನಾಸ್ಪದ ವ್ಯಕ್ತಿಗಳು ಸಂಪೂರ್ಣ ನಿಷೇಧವನ್ನು ನೀಡುವ ಯಾವುದೇ ಪ್ಲಾಟ್‌ಫಾರ್ಮ್ ನಿಯಮಗಳನ್ನು ಉಲ್ಲಂಘಿಸಿರಲಾರರು. ಆದರೆ ಅವರ ಕ್ರಮಗಳು ಸುರಕ್ಷತಾ ವ್ಯವಸ್ಥೆಗಳಿಂದ ಕೆಲವು ಸಂಕೇತ ನೀಡಿವೆ. ಇದನ್ನು ಸುರಕ್ಷತಾ ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.


ಇದನ್ನೂ ಓದಿ:Karnataka Cabinet Expansion: ಬೊಮ್ಮಾಯಿ ಸಂಪುಟ ಸೇರಲು ಬೆಳಗಾವಿ ಬಿಜೆಪಿ ಶಾಸಕರಲ್ಲಿ ತೀವ್ರ ಪೈಪೋಟಿ; 13 ಮಂದಿ ಪೈಕಿ ಯಾರಿಗೆ ಒಲಿಯಲಿದೆ ಅದೃಷ್ಟ?

ಈ ಸೂಚನೆಗಳು, ಮತ್ತು ಈ ಶಂಕಿತ ಬಳಕೆದಾರರಿಂದ ಉತ್ಪತ್ತಿಯಾಗುವ ಯಾವುದೇ ಹೆಚ್ಚಿನ ಖಾತೆಗಳನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ. ಇವರು ನಿಯಮ ಮೀರಿದವರಲ್ಲ. ಈ ಕೆಲವು ಖಾತೆಗಳು ನಿಯಮ ಮೀರಿರದೇ ಅವರ ಚಟುವಟಿಕೆಯ ಗಮನವನ್ನು ಕೇಂದ್ರಿಕರಿಸಿಕೊಂಡಿದೆ. ಅವರ ಮತ್ತು ಯುವಜನರ ಖಾತೆಗಳ ನಡುವೆ ಸಾಕಷ್ಟು ಎಚ್ಚರಿಕೆಯಿಂದ ತಡೆಗೋಡೆ ಸ್ಥಾಪಿಸಲು ನಾವು ಬಯಸುತ್ತೇವೆ ಎಂದು ವಿವರಿಸಿದರು. ಹದಿಹರೆಯದವರ ಖಾತೆಗಳ ನಡುವೆ ಬಫರ್ ಕ್ರಿಯೆಟ್ ಮಾಡಲಾಗುತ್ತಿದೆ ಎಂದೂ ಹೇಳಿದರು.


ಈ ಮಾರ್ಪಾಡುಗಳನ್ನು ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಜಪಾನ್‌ನಲ್ಲಿ ಜಾರಿಗೆ ತರಲಾಗುವುದು, ಶೀಘ್ರದಲ್ಲೇ ಇತರ ರಾಷ್ಟ್ರಗಳಿಗೆ ತಲುಪುವ ಯೋಜನೆ ಇದೆ.


ಜಾಹೀರಾತುದಾರರು


ಆ್ಯಪ್​ ಮತ್ತು ವೆಬ್​ಸೈಟ್​ಗಳಲ್ಲಿ 18 ವರ್ಷದ ವಯಸ್ಸಿನ ಒಳಗಿರುವವರು ಏನೆಲ್ಲಾ ಹುಡುಕಿದ್ದಾರೆ ಎನ್ನುವುದು ಇನ್ನು ಮುಂದೆ ಜಾಹೀರಾತುದಾರರಿಗೆ ತಿಳಿಯಲು ಸಾಧ್ಯವಿಲ್ಲ. ಈ ಬದಲಾವಣೆ ಜಾಗತಿಕವಾಗಿ ಇನ್​ಸ್ಟಾಗ್ರಾಂ, ಫೇಸ್​ಬುಕ್ ಮತ್ತು ಮೆಸೆಂಜರ್​ಗಳಿಗೆ ಅನ್ವಯವಾಗಲಿದೆ. ಜಾಹೀರಾತುದಾರರು 18 ವರ್ಷದೊಳಗಿನ ಬಳಕೆದಾರರನ್ನು ಗುರಿಯಾಗಿಸಲು ವಯಸ್ಸು, ಲಿಂಗ ಮತ್ತು ಸ್ಥಳ ಎಂಬ ಮೂರು ಅಂಶಗಳ ಆಧಾರದ ಮೇಲೆ ಮಾತ್ರ ಇನ್‌ಸ್ಟಾಗ್ರಾಮ್ ಅನುಮತಿಸುತ್ತದೆ.
ಬಳಕೆದಾರರಿಗೆ 18 ವರ್ಷ ತುಂಬಿದ ಬಳಿಕ ಜಾಹೀರಾತುದಾರರಿಗೆ ಸೂಚನೆ ಕಳುಹಿಸುತ್ತೇವೆ. ಆ ಮೂಲಕ ಅವರು ಜಾಹೀರಾತುಗಳ ಬಗ್ಗೆ ಚಿಂತಿಸಬಹುದಾಗಿದೆ ಎಂದು ನ್ಯೂಟನ್ ವಿವರಿಸಿದರು.

Published by:Latha CG
First published: