• Home
  • »
  • News
  • »
  • national-international
  • »
  • IIM Raipur: ಹುಡುಗರಿಗಿಂತ ಹುಡುಗಿಯರಿಗೇ ಹೆಚ್ಚು ಅಡ್ಮಿಷನ್! ಉನ್ನತ ಶಿಕ್ಷಣ ಸಂಸ್ಥೆಯ ದಾಖಲೆ

IIM Raipur: ಹುಡುಗರಿಗಿಂತ ಹುಡುಗಿಯರಿಗೇ ಹೆಚ್ಚು ಅಡ್ಮಿಷನ್! ಉನ್ನತ ಶಿಕ್ಷಣ ಸಂಸ್ಥೆಯ ದಾಖಲೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

2022ರ ಬ್ಯಾಚ್ ನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ರಾಯ್‌ಪುರ ಹುಡುಗರಿಗೆ 125 ಸೀಟ್ ನೀಡಿದರೆ, ಹುಡುಗಿಯರಿಗೆ 205 ಸೀಟ್ ಕಲ್ಪಿಸಿಕೊಟ್ಟಿದೆ.

  • Share this:

ದೆಹಲಿ: ವಿಶ್ವದಾದ್ಯಂತ ಶಿಕ್ಷಣ ಮ್ಯಾನೇಜ್‌ಮೆಂಟ್ (Education Management) ಸಂಸ್ಥೆಗಳು ಹುಡುಗಿಯರಿಗೂ ಸಮಾನವಾದ ಶಿಕ್ಷಣದ ಹಕ್ಕನ್ನು (Right to Education) ನೀಡಲು ಶ್ರಮಿಸುತ್ತಿದ್ದು, ಇದಕ್ಕೆ ಉತ್ತಮ ನಿದರ್ಶನ ಎನ್ನುವಂತೆ ಐಐಎಂ ರಾಯ್‌ಪುರ ಹೊಸದೊಂದು ದಾಖಲೆ ಬರೆದಿದೆ. ಹೊಸ ದೆಹಲಿಯ ಸಂಸ್ಥೆಯು ಈ ವರ್ಷ ಹುಡುಗರಿಗಿಂತ (Boys) ಹೆಚ್ಚು ಹುಡುಗಿಯರನ್ನು (Girls) ತನ್ನ ಕಾಲೇಜಿಗೆ ಪ್ರವೇಶ ನೀಡುವ ಮೂಲಕ ಇತಿಹಾಸವನ್ನು ನಿರ್ಮಿಸಿದೆ. 2022ರ ಬ್ಯಾಚ್​ನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (Indian Institute of Management) ರಾಯ್‌ಪುರ ಹುಡುಗರಿಗೆ 125 ಸೀಟ್ ನೀಡಿದರೆ, ಹುಡುಗಿಯರಿಗೆ 205 ಸೀಟ್ ಕಲ್ಪಿಸಿಕೊಟ್ಟಿದೆ. ಈ ಮೂಲಕ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣದಲ್ಲಿ ಪುರುಷರಂತೆ ಸಮಾನ ಪ್ರಾಧಾನ್ಯತೆ ನೀಡುವ ಸಲುವಾಗಿ ಈ ಕ್ರಮ ತೆಗೆದುಕೊಂಡಿದೆ.


ಹುಡುಗರಿಗಿಂತ ಹುಡುಗಿಯರ ಪ್ರವೇಶಾತಿ ಹೆಚ್ಚು 
ಕಳೆದ ವರ್ಷ ಐಐಎಂ ತನ್ನ ಸಂಸ್ಥೆಯಲ್ಲಿ 146 ಹುಡುಗರಿಗೆ ಮತ್ತು 120 ಹುಡುಗಿಯರಿಗೆ ಪ್ರವೇಶ ನೀಡಿತ್ತು. ಕ್ಯಾಂಪಸ್‌ನಲ್ಲಿ ಲಿಂಗ ತಾರತಮ್ಯವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈಗ ಇನ್‌ಸ್ಟಿಟ್ಯೂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಮುಖ ಸ್ನಾತಕೋತ್ತರ ಕಾರ್ಯಕ್ರಮದಲ್ಲಿ ಹುಡುಗರಿಗಿಂತ 20% ಹೆಚ್ಚು ಹುಡುಗಿಯರಿಗೆ ಪ್ರವೇಶಾತಿ ಒದಗಿಸಿಕೊಟ್ಟಿದೆ.


ವಿವಿಧ ಐಐಎಂಗಳಲ್ಲೂ ಹುಡುಗಿಯರೇ ಹೆಚ್ಚು 
ಏತನ್ಮಧ್ಯೆ, 2019ರಲ್ಲೂ ಐಐಎಂ ಕೋಝಿಕ್ಕೋಡ್ ಸಹ ಇಂತಹದ್ದೇ ಒಂದು ಕ್ರಮ ತೆಗೆದುಕೊಂಡಿತ್ತು. ಆ ವರ್ಷ ಮಹಿಳೆಯರಿಗೆ 60 ಸೂಪರ್‌ನ್ಯೂಮರರಿ ಸೀಟುಗಳನ್ನು ಸಂಸ್ಥೆಯು ಮೀಸಲಿಟ್ಟಿತ್ತು. ರಾಯ್‌ಪುರ ಮತ್ತು ಕೋಝಿಕ್ಕೋಡ್ ಹೊರತುಪಡಿಸಿ, ಈ ವರ್ಷ ಅನೇಕ ಐಐಎಂಗಳು 30% ರಷ್ಟು ಮಹಿಳೆಯರಿಗೆ ತಮ್ಮ ಸಂಸ್ಥೆಯಲ್ಲಿ ಸೀಟು ನೀಡಿದೆ.


ಇದನ್ನೂ ಓದಿ: Pakistan Goat Market: IITಯಂತೆ ಶಿಕ್ಷಣ ಸಂಸ್ಥೆ ಕಟ್ಟೋಕೆ ಹೊರಟ ಪಾಕ್, ಆಗಿದ್ದು ಮಾತ್ರ ಮೇಕೆ ಮಾರ್ಕೆಟ್


ಐಐಎಂ ಅಹಮದಾಬಾದ್ ಮತ್ತು ಐಐಎಂ ಕಲ್ಕತ್ತಾದಂತಹ ಸಂಸ್ಥೆಗಳು 30% ರಷ್ಟು ತಲುಪದಿದ್ದರೂ ಹತ್ತಿರದಲ್ಲಿವೆ. 2022ರಲ್ಲಿ ಐಐಎಂ ಕೋಝಿಕ್ಕೋಡ್ ದಲ್ಲಿ ಪ್ರವೇಶ ಪಡೆದ ಮಹಿಳಾ ಅಭ್ಯರ್ಥಿಗಳ ಪಾಲು 46.7% ಆಗಿದೆ. ಇನ್ನುಳಿದಂತೆ ಐಐಎಂ ಇಂದೋರ್ ನಲ್ಲಿ 33.2%, ಐಐಎಂ ಬೆಂಗಳೂರಿನಲ್ಲಿ 33.38% , ಐಐಎಂ ಉದಯ್ ಪುರ್ ನಲ್ಲಿ 30.9% ರಷ್ಟು ಮಹಿಳೆಯರು ಈ ವರ್ಷ ದಾಖಲಾಗಿದ್ದಾರೆ.


ಬಿ-ಶಾಲೆ ಅಥವಾ B-ಸ್ಕೂಲ್
GMACಯ 2021ರ ಅಪ್ಲಿಕೇಶನ್ ಟ್ರೆಂಡ್ ಸಮೀಕ್ಷೆಯು ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಪ್ರಪಂಚದಾದ್ಯಂತ ಬಿ-ಶಾಲೆಗಳಿಗೆ ಸೇರಲು ಅರ್ಜಿ ಸಲ್ಲಿಸಿದ್ದಾರೆ ಎಂದು ಬಹಿರಂಗಪಡಿಸಿದೆ. ಮತ್ತು ಇದು ಭಾರತದಲ್ಲಿನ B-ಸ್ಕೂಲ್ ಫ್ರೆಶರ್‌ಗಳ ಒಳಬರುವ ಬ್ಯಾಚ್‌ನಲ್ಲಿಯೂ ಪ್ರತಿಫಲಿಸುತ್ತದೆ.


ನಿರ್ದೇಶಕ ರಾಮ್‌ಕುಮಾರ್ ಕಾಕಾನಿ ಹೇಳಿದ್ದೇನು?
"ನಮ್ಮ BoG (ಗವರ್ನರ್‌ಗಳ ಮಂಡಳಿ) ಅಧ್ಯಕ್ಷರು ಮಹಿಳೆಯಾಗಿದ್ದಾರೆ. ಕ್ಯಾಂಪಸ್‌ನ ಒಳಗೆ, ಲಿಂಗ ತಟಸ್ಥವಾಗಿರುವ ಸಾಕಷ್ಟು ಬದಲಾವಣೆಯನ್ನು ನಾವು ತಂದಿದ್ದೇವೆ. ನಾವು ನೇರವಾಗಿ ಮತ್ತು ಪರೋಕ್ಷವಾಗಿ ಲಿಂಗ ಸಮಾನತೆಯ ಬಗ್ಗೆ ಸಾಕಷ್ಟು ಎಚ್ಚರಿಕೆಗಳನ್ನು ವಹಿಸಿದ್ದೇವೆ. ರಾಯ್‌ಪುರವನ್ನು ಸುರಕ್ಷಿತ ಸ್ಥಳವೆಂದು ಪರಿಗಣಿಸಿದ್ದು, ಕೆಲವು ಮಹಿಳಾ ಅಭ್ಯರ್ಥಿಗಳು ಉತ್ತಮ ಸಂಸ್ಥೆಗಳನ್ನು ತೊರೆದು ರಾಯ್‌ಪುರವನ್ನು ಸೇರಿಕೊಂಡಿದ್ದಾರೆ" ಎಂದು 12 ವರ್ಷದ ಯುವ ಸಂಸ್ಥೆಯ ನಿರ್ದೇಶಕ ರಾಮ್‌ಕುಮಾರ್ ಕಾಕಾನಿ ತಿಳಿಸಿದರು.


ಪ್ರವೇಶಾತಿಯ ಕುರಿತು IIMK ನಿರ್ದೇಶಕ ದೇಬಾಶಿಸ್ ಚಟರ್ಜಿ ಹೇಳಿದ್ದು ಹೀಗೆ
IIM ಕೋಝಿಕ್ಕೋಡ್ ಅನ್ನು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಮತ್ತು ಆಕ್ಸ್‌ಫರ್ಡ್ ದೇಶದ ಅತ್ಯಂತ ಸಮತೋಲಿತ ಎಂಬಿಎ ಕಾರ್ಯಕ್ರಮಗಳಲ್ಲಿ ಒಂದೆಂದು ಪರಿಗಣಿಸಿದೆ. ಅದರ ಆಡಳಿತ ಮಂಡಳಿಯಲ್ಲಿ ಮತ್ತು ಅಧ್ಯಾಪಕರ ನಡುವೆ ಬಲವಾದ ಮಹಿಳಾ ಶಕ್ತಿಯೊಂದಿಗೆ ವೈವಿಧ್ಯತೆಯು ಅದರ ಕೇಂದ್ರಭಾಗದಲ್ಲಿದೆ. "ಬಹಳ ಹಿಂದೆಯೇ, ದೇಶದ ಲಿಂಗ ಅನುಪಾತವು ಬದಲಾಗುತ್ತಿರುವುದನ್ನು ನಾವು ನೋಡಿದ್ದೇವೆ.


ಇದನ್ನೂ ಓದಿ:  Malleshwara: ಬೆಂಗಳೂರಿನ ಮಲ್ಲೇಶ್ವರಕ್ಕಿದೆ ಕುತೂಹಲಕರ ಇತಿಹಾಸ! ಜನರ ಜೊತೆಗಿದೆ ಅವಿನಾಭಾವ ಸಂಬಂಧ


ನಮ್ಮ ದೇಶದಲ್ಲಿ ಶೀಘ್ರದಲ್ಲೇ ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಇರುವುದನ್ನು ನಾವು ನೊಡಬಹುದು ಮತ್ತು ರಾಷ್ಟ್ರದ ಜನಸಂಖ್ಯೆಯ ವೈಶಿಷ್ಟ್ಯವು ನಮ್ಮ ಕ್ಯಾಂಪಸ್‌ನಲ್ಲಿ ಪ್ರತಿಫಲಿಸುತ್ತದೆ. ನಮ್ಮ ಕ್ಯಾಂಪಸ್‌ನಲ್ಲಿ ಮಹಿಳೆಯರನ್ನು ಸೇರಿಸುವ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತಿದ್ದಾಗ, ನಮ್ಮ ಜನಸಂಖ್ಯಾಶಾಸ್ತ್ರದ ಬದಲಾಗುತ್ತಿರುವ ಸ್ವರೂಪವನ್ನು ಆಧರಿಸಿ ನಾವು ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇವೆ. ಇದು ಕೇವಲ ವಿದ್ಯಾರ್ಥಿಗಳ ಸಂಖ್ಯೆಗೆ ಮಾತ್ರ ಸಂಬಂಧಿಸಿದ್ದಲ್ಲ, ಇದು ಮನಸ್ಥಿತಿಯ ಮೂಲಭೂತ ಬದಲಾವಣೆ ಕೂಡ” ಎಂದು IIMK ನಿರ್ದೇಶಕ ದೇಬಾಶಿಸ್ ಚಟರ್ಜಿ ಹೇಳಿದರು.


ಒಟ್ಟಾರೆ ಐಐಎಂ ಹೆಚ್ಚಿನ ಸೀಟುಗಳನ್ನು ನೀಡುವ ಮೂಲಕ ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ.

Published by:Ashwini Prabhu
First published: