ರಾಷ್ಟ್ರ ರಾಜಧಾನಿಯಲ್ಲಿ ಮಿಶ್ರಿತ ಭಾವನೆ ತಂದ ಮಳೆರಾಯ: ಕೆಲವೆಡೆ ಕಿರಿಕಿರಿ, ಹಲವೆಡೆ ಸಂತಸ

New Delhi Weather Update: ಮೋಡ ಮುಸುಕಿದ ಆಕಾಶ (Cloudy Weather in New Delhi), ಮಳೆ ಬಿದ್ದು ಕೊಂಚ ಮಟ್ಟಿಗೆ ಇಳೆ ತಂಪಾಗಿರುವ ಫೋಟೋಗಳಿಂದ ಹಿಡಿದು ತುಂತುರು ಮಳೆ, ಇಬ್ಬನಿ ಹೀಗೆ, ದೆಹಲಿಯ ಇತರ ಭಾಗದವರು ಮಳೆಯ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ದೆಹಲಿಯಲ್ಲಿ ಭಾರೀ ಮಳೆ

ದೆಹಲಿಯಲ್ಲಿ ಭಾರೀ ಮಳೆ

 • Share this:

  ನವದೆಹಲಿ: ದೇಶದ ರಾಜಧಾನಿಯಲ್ಲಿ (New Delhi) ಬೆಳ್ಳಂಬೆಳಗ್ಗೆ ಮಳೆರಾಯ ತಂಪೆರೆದಿದ್ದಾನೆ. ಯಾವಾಗಲೂ ಧೂಳು ಮಾಲಿನ್ಯದಿಂದ ಬದುಕುತ್ತಿರುವ ದೆಹಲಿ ಮಂದಿಗೆ ಕೊಂಚ ಖುಷಿ ನೀಡಿದ್ದಾನೆ. ಮಳೆಯ ಸುಂದರ ವಾತಾವರಣವನ್ನು ಕೆಲವು ನೆಟ್ಟಿಗರು ಸಂತಸಗೊಂಡು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಮಳೆಯಿಂದ ಉಂಟಾದ ಟ್ರಾಫಿಕ್ ಜಾಮ್ ಹಾಗೂ ರಸ್ತೆಯಲ್ಲಿ ನಿಂತ ನೀರಿಗೆ ಬೇಸರಿಸಿಕೊಂಡಿದ್ದಾರೆ. ಫ್ಲೈಓವರ್ ಮೇಲಿಂದ ಬೀಳುವ ನೀರಿನ ದೃಶ್ಯ ಸೆರೆಹಿಡಿದ ಹಲವರು ಜಲಪಾತ ಎಂದು ಈ ಸಂಬಂಧದ ವಿಡಿಯೋ ಶೇರ್ ಮಾಡಿದ್ದಾರೆ.


  ಆಗಸ್ಟ್ 27 ರಂದು, ಹವಾಮಾನ ಇಲಾಖೆಯು (Meteorological Department) ಮುಂಬರುವ ವಾರದ ಆರಂಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿತ್ತು. ಹವಾಮಾನ ಇಲಾಖೆ ಸೋಮವಾರ, ಮಂಗಳವಾರ ಮತ್ತು ಬುಧವಾರ ನಗರಕ್ಕೆ ಯೆಲ್ಲೋ ಅಲರ್ಟ್ (Yellow Alert) ಮತ್ತು ಮುಂದಿನ ಎರಡು ದಿನಗಳವರೆಗೆ ಗ್ರೀನ್ ಅಲರ್ಟ್ ನೀಡಿದೆ.


  ದೆಹಲಿಯ ಬಹುತೇಕ ಸ್ಥಳಗಳಲ್ಲಿ ಲೋಧಿ ರಸ್ತೆ, ಐಜಿಐ ವಿಮಾನ ನಿಲ್ದಾಣ, ಎನ್‍ಸಿಆರ್ ಗುರುಗ್ರಾಮ (NCR Gurugaon), ಮನೇಸರ್, ಫರೀದಾಬಾದ್, ನೋಯ್ಡಾ (Noida), ಗ್ರೇಟರ್ ನೋಯ್ಡಾ (Greater Noida), ಇಂದಿರಾಪುರಂ, ಲೋನಿ ಡೆಹಾಟ್, ಹಿಂಡನ್ ಎಎಫ್, ಗಾಜಿಯಾಬಾದ್‍ನಲ್ಲಿ ಗುಡುಗು ಸಹಿತ ಭಾರಿ ಮಳೆ ಎದುರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತನ್ನ ಅಧಿಕೃತ ಟ್ವಿಟ್ಟರ್‌ ಹ್ಯಾಂಡಲ್ ಮೈಕ್ರೋಬ್ಲಾಗಿಂಗ್ ವೇದಿಕೆಯಲ್ಲಿ ಗುರುವಾರ ತಿಳಿಸಿದ್ದಾರೆ.


  ಇದನ್ನೂ ಓದಿ: ವಿಮಾ ಮೊತ್ತ ಬಳಸಿಕೊಂಡು ಡ್ರಗ್ಸ್ ದಂಧೆ ಆರಂಭಿಸಿದ ಹೊಟೇಲ್ ಮ್ಯಾನೇಜ್‍ಮೆಂಟ್ ಪದವೀಧರನ ಬಂಧನ

  ಮೋಡ ಮುಸುಕಿದ ಆಕಾಶ (Cloudy Weather in New Delhi), ಮಳೆ ಬಿದ್ದು ಕೊಂಚ ಮಟ್ಟಿಗೆ ಇಳೆ ತಂಪಾಗಿರುವ ಫೋಟೋಗಳಿಂದ ಹಿಡಿದು ತುಂತುರು ಮಳೆ, ಇಬ್ಬನಿ ಹೀಗೆ, ದೆಹಲಿಯ ಇತರ ಭಾಗದವರು ಮಳೆಯ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.


  ಅನುಜ್ ಶರ್ಮಾ ಎಂಬಾತ ಟ್ವೀಟ್ ಮಾಡಿ, ಅದ್ಭುತ ವಾತಾವರಣ, ಶುಭೋದಯ ಎಂಬ ಶೀರ್ಷಿಕೆಯಡಿ ಮಳೆಬಿದ್ದು ಹಸಿಯಾಗಿರುವ ರಸ್ತೆಯಲ್ಲಿ ಕಾರು ಚಲಾಯಿಸುತ್ತಿರುವ ವಿಡಿಯೋವ ಹಂಚಿಕೊಂಡಿದ್ದಾರೆ.


  ಇದನ್ನೂ ಓದಿ:  ಕತ್ತರಿ ಬದಲು ಹಲ್ಲಿನಿಂದ ರಿಬ್ಬನ್ ಕತ್ತರಿಸಿದ ಮಂತ್ರಿ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

  ಮಾಧವ್ ಪುರಿ ಎಂಬುವವರು ಮೋಡ ಕವಿದ ಆಕಾಶದ ಫೋಟೋ ಸಮೇತ ಉತ್ತಮವಾದ ಬೆಳಗ್ಗೆ. ಗುಡುಗು ಸಹಿತ ಬಿರುಗಾಳಿಯು 30 ಎಂಎಂ ಇರಬಹುದು. ನನ್ನ ಪ್ರಕಾರ ಸುಮಾರು ಏಳು ಗಂಟೆಯ ವಾತಾವರಣ ವೀಕ್ಷಿಸಿದರೆ ಕಳೆದ 24 ಗಂಟೆಯಲ್ಲಿ 118 ಮಿ.ಮೀ. ಮಳೆ ಸುರಿದಿರಬಹುದು ಎಂದು ಅಂದಾಜಿಸಿದ್ದಾರೆ.


  ಸೋನಾ, ಒಂದು ಹೂವಿನ ಫೋಟೋ, ಮತ್ತೆರಡು ಕಪ್ಪು ಮೋಡದ ಫೋಟೋ ಅಪ್‍ಲೋಡ್ ಮಾಡಿ, ಮಳೆಯ ಒಂದು ಸುಂದರವಾದ ದೃಶ್ಯ ಎಂದು ಟ್ವೀಟ್ ಮಾಡಿದ್ದಾರೆ.


  ದೀಪಕ್ ಕುಮಾರ್ ಎಂಬಾತ ಕಾಫಿ ಮತ್ತು ಬಿಸ್ಕೆಟ್ ಜೊತೆಗಿನ ಫೋಟೋ ಹಾಕಿ ಮಳೆಗಾಲದ ಬೆಳಗ್ಗೆಗೆ ಇದು ಉತ್ತಮವಾದ ಉಪಾಹಾರ ಎಂದು ಟೀ ಮತ್ತು ಬಿಸ್ಕೆಟ್ ಫೋಟೋ ಹಾಕಿದ್ದಾರೆ.


  ಮೋನು ಸಿಂಗ್ ಎಂಬುವವರು, ಇದು ಮಳೆ ಬೆಕ್ಕು ಮತ್ತು ನಾಯಿಗಳು ಎಂಬ ಶೀರ್ಷಿಕೆಯಡಿ ಮಳೆ ಸುರಿಯುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.


  ಒಂದೇ ಕಿಟಕಿಯಿಂದ ದೆಹಲಿಯ ಮಾನ್ಸೂನ್‍ನ ವಿವಿಧ ಛಾಯೆಗಳು. ಹಸಿರು ಮತ್ತು ಹಳದಿ ಸಿಎನ್‌ಜಿ ಆಟೋ #DelhiRain #Delhiಎಂದು ರಾಜ್ ಸುರಾನ್ ಎಂಬಾತ 3 ಫೋಟೋ ಅಪ್‍ಲೋಡ್ ಮಾಡಿ ಮಳೆಯ ಸುಂದರ ವಾತಾವರಣವನ್ನು ಖುಷಿಪಟ್ಟಿದ್ದಾರೆ.


  ಇನ್ನು ಫ್ಲೈಓವರ್‌ನಿಂದ ಮಳೆಯ ನೀರು ಬೀಳುತ್ತಿರುವ ವಿಡಿಯೋ ಹಾಕಿ ಜಲಪಾತದ ನಗರಕ್ಕೆ ಸ್ವಾಗತ ಎಂದು ಹೇಳಿದ್ದಾರೆ. ಇನ್ನು ಕೆಲವರು ರಸ್ತೆಯೆಲ್ಲಾ ಮಳೆನೀರಿನಿಂದ ತುಂಬಿದ್ದು ಅದರೊಳಗೆ ಸೈಕಲ್ ಸವಾರ ತನ್ನ ಸೈಕಲ್ ಜೊತೆ ನಡೆದುಹೋಗುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.

  Published by:Sharath Sharma Kalagaru
  First published: