ಕಳ್ಳತನ ಮಾಡಲು ಮಗನಿಗೆ ಕುಮ್ಮಕ್ಕು ಕೊಟ್ಟ ತಾಯಿ; 1 ಲಕ್ಷ ದೋಚಿ ಸಿಕ್ಕಿಬಿದ್ದ ಅಪ್ರಾಪ್ತ ಬಾಲಕ

ಬಾಲಕನು ಕದ್ದ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ಆತನ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಹುಡುಗನ ತಾಯಿ ಪರಾರಿಯಾಗಿದ್ದು, ಆಕೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

news18-kannada
Updated:August 5, 2020, 4:03 PM IST
ಕಳ್ಳತನ ಮಾಡಲು ಮಗನಿಗೆ ಕುಮ್ಮಕ್ಕು ಕೊಟ್ಟ ತಾಯಿ; 1 ಲಕ್ಷ ದೋಚಿ ಸಿಕ್ಕಿಬಿದ್ದ ಅಪ್ರಾಪ್ತ ಬಾಲಕ
ಸಾಂರ್ಭಿಕ ಚಿತ್ರ
  • Share this:
ನವದೆಹಲಿ(ಆ.05): ಕಳ್ಳತನ ಮಾಡಲು ಮಗನಿಗೆ ತಾಯಿಯೇ ಕುಮ್ಮಕ್ಕು ನೀಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. 12 ವರ್ಷದ ಬಾಲಕ ಕಳ್ಳತನ ಮಾಡಿ ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ತನ್ನ ತಾಯಿಯೇ ಕಳ್ಳತನ ಮಾಡಲು ಹೇಳಿದಳು ಎಂಬ ವಿಷಯ ಬಾಯ್ಬಿಟ್ಟಿದ್ದಾನೆ.

ದಕ್ಷಿಣ ದೆಹಲಿಯ ಅಂಬೇಡ್ಕರ್ ನಗರದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ವಾಹನದಲ್ಲಿ 1.2 ಲಕ್ಷ ಹಣ ಇದ್ದ ಬ್ಯಾಗ್​ನ್ನು ಬಾಲಕ ಕಳುವು ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಅಪ್ರಾಪ್ತ ಬಾಲಕ ಈ ಕಳ್ಳತನ ಎಸಗಲು ಆತನ ತಾಯಿ ಮತ್ತು ಅಜ್ಜಿ ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನು ಕದ್ದ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ಆತನ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಹುಡುಗನ ತಾಯಿ ಪರಾರಿಯಾಗಿದ್ದು, ಆಕೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

Bangalore Crime: ಹೆಂಡತಿಯನ್ನು ಕೊಂದು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಲು ಯತ್ನಿಸಿದ ಗಂಡ

ಇದೇ ಜುಲೈ 27ರಂದು ಹುಡುಗನು 1,20,000 ಹಣ ಇದ್ದ ಬ್ಯಾಗ್​ನ್ನು ಕಳ್ಳತನ ಮಾಡಿದ್ದಾನೆ, ಬಳಿಕ ಬಾಲಾಪರಾಧಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯೂ ಪೊಲೀಸರಿಗೆ ಲಭ್ಯವಾಗಿದೆ. ಬಾಲಾಪರಾಧಿಯ ಬಳಿ ಇದ್ದ 5 ಸಾವಿರ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತನ್ನ ತಾಯಿಯ ಮಾತಿನಂತೆ ಬಾಲಕ ವಾಹನದಲ್ಲಿದ್ದ ಬ್ಯಾಗ್​ನ್ನು ಕದ್ದಿರುವುದಾಗಿ ಪೊಲೀಸರ ಬಳಿ ಹೇಳಿದ್ದಾನೆ. ಹುಡುಗನ ತಾಯಿ ಮತ್ತು ಅಜ್ಜಿ ಆತನನ್ನು ಕಳ್ಳತನ ಮಾಡಲು ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು
ತಿಳಿಸಿದ್ದಾರೆ.

ಪೊಲೀಸರು ಬಾಲಾಪರಾಧಿಯ ಮನೆ ಮೇಲೆ ದಾಳಿ ನಡೆಸಿದ್ದು, ಬಾಲಕನ ಅಜ್ಜಿಯನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕಳುವು ಮಾಡಿದ್ದ 1,05,000 ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು 1,10,000 ಹಣವನ್ನು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದಿದ್ದಾರೆ.

ಬಾಲಕನ ತಾಯಿಯು ಪರಾರಿಯಾಗಿದ್ದು, ಪೊಲೀಸರು ಆಕೆಯ ಹುಡುಕಾಟಕ್ಕಾಗಿ ತೀವ್ರ ಶೋಧನೆ ನಡೆಸುತ್ತಿದ್ದಾರೆ. ಬಾಲಾಪರಾಧಿಯ ತಂದೆ ಉತ್ತರ ಪ್ರದೇಶದ ಜೈಲಿನಲ್ಲಿದ್ದಾರೆ.
Published by: Latha CG
First published: August 5, 2020, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading