HOME » NEWS » National-international » NEW DEATH WARRANT ISSUED FOR NIRBHAYA CONVICTS TO BE HANGED ON MARCH 3 MAK

ನಿರ್ಭಯಾ ಅಪರಾಧಿಗಳಿಗೆ ನಾಲ್ಕನೇ ಬಾರಿಗೆ ಡೆತ್​ ವಾರೆಂಟ್​ ಹೊರಡಿಸಿದ ಪಟಿಯಾಲ ಕೋರ್ಟ್​​; ಮಾರ್ಚ್​.3 ಕ್ಕೆ ಗಲ್ಲು

ನಾಲ್ಕು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈತನನ್ನು ಗಲ್ಲಿಗೆ ಏರಿಸಬಾರದು ಎಂದು ಒಂದಷ್ಟು ವಕೀಲರು ನ್ಯಾಯಾಂಗ ವ್ಯವಸ್ಥೆಯ ಎದುರು ಮನವಿ ಇಟ್ಟಿದ್ದಾರೆ. ಹೀಗಾಗಿ ಈ ಬಾರಿಯೂ ಇವರನ್ನು ಗಲ್ಲಿಗೆ ಏರಿಸುವ ಪ್ರಕ್ರಿಯೆ ಕೊನೆವರೆಗೂ ಅನಿಶ್ಚಿತತೆಯಿಂದ ಕೂಡಿರಲಿದೆ ಎನ್ನಲಾಗುತ್ತಿದೆ.

MAshok Kumar | news18-kannada
Updated:February 17, 2020, 4:31 PM IST
ನಿರ್ಭಯಾ ಅಪರಾಧಿಗಳಿಗೆ ನಾಲ್ಕನೇ ಬಾರಿಗೆ ಡೆತ್​ ವಾರೆಂಟ್​ ಹೊರಡಿಸಿದ ಪಟಿಯಾಲ ಕೋರ್ಟ್​​; ಮಾರ್ಚ್​.3 ಕ್ಕೆ ಗಲ್ಲು
ನಿರ್ಭಯಾ ಆರೋಪಿಗಳು.
  • Share this:
ನವ ದೆಹಲಿ (ಫೆಬ್ರವರಿ 17); ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳಿಗೆ ದೆಹಲಿ ಪಟಿಯಾಲ ನ್ಯಾಯಾಲಯ ನಾಲ್ಕನೇ ಬಾರಿ ಡೆತ್​ ವಾರೆಂಟ್ ಹೊರಡಿಸಿದ್ದು, ಮಾರ್ಚ್​ 3 ಬೆಳಗ್ಗೆ 6 ಗಂಟೆಗೆ ನಾಲ್ಕೂ ಆರೋಪಿಗಳನ್ನು ಒಟ್ಟಿಗೆ ಗಲ್ಲಿಗೆ ಏರಿಸುವಂತೆ ಆದೇಶಿಸಿದೆ.

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್​ ಕಳೆದ ತಿಂಗಳೇ ಖಚಿತಪಡಿಸಿತ್ತು. ಅಲ್ಲದೆ, ದೆಹಲಿ ಹೈಕೋರ್ಟ್​ ಸಹ ಇವರಿಗೆ ಗಲ್ಲು ಶಿಕ್ಷೆ ನೆರವೇರಿಸಲು  ಮೂರು ಬಾರಿ ಡೆತ್​ ವಾರಂಟ್​ ಹೊರಡಿಸಿತ್ತು. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಜುಲೈ.01 ರಂದು ಇವರ ಗಲ್ಲು ಶಿಕ್ಷೆ ಜಾರಿಯಾಗಬೇಕಿತ್ತು. ಆದರೆ, ತಾಂತ್ರಿಕವಾಗಿ ಈ ನಾಲ್ವರೂ ಆರೋಪಿಗಳ ಕ್ಷಮಾಪಣಾ ಅರ್ಜಿ ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸುವುದು ತಡವಾಗಿತ್ತು.

ಆದರೆ, ನಾಲ್ಕನೇ ಅಪರಾಧಿ ವಿನಯ್ ಕ್ಷಮಾಪಣಾ ಅರ್ಜಿಯನ್ನೂ ಸಹ ಇದೀಗ ರಾಷ್ಟ್ರಪತಿ ಭವನ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ದೆಹಲಿ ಪಟಿಯಾಲ ನ್ಯಾಯಾಲಯ ಹೊಸ ಡೆತ್​ ವಾರೆಂಟ್ ಅನ್ನು ಹೊರಡಿಸಿದೆ. ಇದರ ಅನ್ವಯ ಮಾರ್ಚ್​.3 ರ ಬೆಳಗ್ಗೆ 6 ಗಂಟೆಗೆ ಎಲ್ಲಾ ಅಪರಾಧಿಗಳೂ ಒಟ್ಟಾಗಿ ನೇಣಿಗೆ ಕೊರಳೊಡ್ಡುವುದು ಖಚಿತವಾಗಿದೆ.

ಆದರೆ, ನಾಲ್ಕು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈತನನ್ನು ಗಲ್ಲಿಗೆ ಏರಿಸಬಾರದು ಎಂದು ಒಂದಷ್ಟು ವಕೀಲರು ನ್ಯಾಯಾಂಗ ವ್ಯವಸ್ಥೆಯ ಎದುರು ಮನವಿ ಇಟ್ಟಿದ್ದಾರೆ. ಹೀಗಾಗಿ ಈ ಬಾರಿಯೂ ಇವರನ್ನು ಗಲ್ಲಿಗೆ ಏರಿಸುವ ಪ್ರಕ್ರಿಯೆ ಕೊನೆವರೆಗೂ ಅನಿಶ್ಚಿತತೆಯಿಂದ ಕೂಡಿರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ನಿರ್ಭಯಾ ಅತ್ಯಾಚಾರಿಗಳಿಗೆ 7 ದಿನದಲ್ಲಿ ಗಲ್ಲು; ದೆಹಲಿ ಹೈಕೋರ್ಟ್​ನಿಂದ ಮಹತ್ವದ ಆದೇಶ
First published: February 17, 2020, 4:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories