Marburg Virus: ಹೊಸ ಮಾರಣಾಂತಿಕ ಮಾರ್ಬರ್ಗ್ ವೈರಸ್ ತಗುಲಿದರೆ ಏನಾಗುತ್ತೆ? ಇದನ್ನು ತಡೆಗಟ್ಟುವುದು ಹೇಗೆ?

ಮಾರ್ಬರ್ಗ್ ವೈರಸ್ ಇದು ಮಲೇರಿಯಾ, ಟೈಫಾಯಿಡ್ ಜ್ವರ ಮತ್ತು ಇತರ ವೈರಲ್ ಹೆಮರಾಜಿಕ್ ಜ್ವರಗಳಂತಹ ರೋಗಗಳನ್ನು ಇದು ಹೋಲುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊರೊನಾ ವೈರಸ್ (Corona Virus) ಸಾಂಕ್ರಾಮಿಕ ಕಾಯಿಲೆ (Disease) ಮತ್ತು ಮಂಕಿಪಾಕ್ಸ್ ಇದೆಲ್ಲದರ ಮಧ್ಯೆ ಏಕಾಏಕಿ ಈಗ ಹೊಸ ಮಾರಣಾಂತಿಕ ವೈರಸ್ (Virus) ಒಂದು ಪತ್ತೆ ಆಗಿದೆ. ಘಾನಾ ದೇಶದಲ್ಲಿ ಎಬೋಲಾ ವೈರಸ್ 'ಮಾರ್ಬರ್ಗ್ ವೈರಸ್' ನಂತಹ (Marburg Virus) ಅಪಾಯಕಾರಿ ಕಾಯಿಲೆಯ ಎರಡು ಪ್ರಕರಣಗಳು ಕಂಡು ಬಂದಿವೆ ಎಂದು ಹೇಳಲಾಗ್ತಿದೆ. ಈ ಎರಡೂ ಪ್ರಕರಣಗಳು ಸೆನೆಗಲ್ ಪ್ರಯೋಗಾಲಯದಲ್ಲಿ ದೃಢವಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮೊದಲ ಪ್ರಕರಣವು 26 ವರ್ಷದ ಪುರುಷನಲ್ಲಿ ಕಂಡು ಬಂದಿದೆ. ಅವರು ವೈರಸ್ ರೋಗ ನಿರ್ಣಯ ಮಾಡಿದ ಒಂದು ದಿನದ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಎರಡನೇ ಪ್ರಕರಣ 51 ವರ್ಷದ ಪುರುಷನಿಗೆ ಸಂಬಂಧಿಸಿದೆ. ಅವರು ಜೂನ್ 28 ರಂದು ಆಸ್ಪತ್ರೆಗೆ ತೆರಳಿದ್ದರು. ಅದೇ ದಿನ ಮರಣ ಹೊಂದಿದ್ದರು. ಪಶ್ಚಿಮ ಆಫ್ರಿಕಾದಲ್ಲಿ ಈ ರೋಗ ಪತ್ತೆ ಆಗಿದ್ದು ಇದು ಎರಡನೇ ಬಾರಿ ಪ್ರಕರಣ ಆಗಿದೆ.

    ಹೊಸದಾಗಿ ಪತ್ತೆ ಆಗಿರುವ ಮಾರ್ಬರ್ಗ್ ವೈರಸ್ ರೋಗ ಎಂದರೇನು?
    WHO ಪ್ರಕಾರ, ಮಾರ್ಬರ್ಗ್ ಹೆಮರಾಜಿಕ್ ಜ್ವರ ಎಂದು ಈ ಹಿಂದೆ ಕರೆಯಲ್ಪಡುವ ಮಾರ್ಬರ್ಗ್ ವೈರಸ್ ಕಾಯಿಲೆ (MVD), ಇದು ತೀವ್ರ ಹಾಗೂ ಆಗಾಗ್ಗೆ ಮಾರಣಾಂತಿಕ ಹೆಮರಾಜಿಕ್ ಜ್ವರ ಆಗಿದೆ. ಇದು ಎಬೋಲಾದಂತಹ ಫಿಲೋ ವೈರಸ್ ಆಗಿದೆ. ರೂಸೆಟಸ್ ಹಣ್ಣು-ಬ್ಯಾಟ್ ಮಾರ್ಬರ್ಗ್ ವೈರಸ್‌ಗೆ  ಮೂಲ ಕಾರಣ ಎಂದು ಭಾವಿಸಲಾಗಿದೆ.

    ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡಲು ನೀರನ್ನು ಹೀಗೆ ಕುಡಿಯಬೇಕಂತೆ

    ಮಾರ್ಬರ್ಗ್ ಹೆಮರಾಜಿಕ್ ಜ್ವರ, ಜರ್ಮನಿಯ ಮಾರ್ಬರ್ಗ್ ಮತ್ತು ಫ್ರಾಂಕ್‌ಫರ್ಟ್, ಬೆಲ್‌ ಗ್ರೇಡ್ ಮತ್ತು ಸೆರ್ಬಿಯಾದಲ್ಲಿ ಏಕ ಕಾಲದಲ್ಲಿ ಏಕಾಏಕಿ ಸಂಭವಿಸಿದ ನಂತರ 1967 ರಲ್ಲಿ ಇದನ್ನು ಮೊದಲು ಕಂಡು ಹಿಡಿಯಲಾಯಿತು.

    ಮಾರ್ಬರ್ಗ್ ವೈರಸ್ ಕಾಯಿಲೆ ಎಷ್ಟು ಮಾರಕ? ಘಾನಾದಲ್ಲಿ ಇಬ್ಬರ ಸಾವು
    ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಬರ್ಗ ವೈರಸ್ ರೋಗ ಸರಾಸರಿ ಮರಣ ಪ್ರಮಾಣ ಸುಮಾರು 50% ಎಂದು ಹೇಳುತ್ತದೆ. ಆದಾಗ್ಯೂ, ಇದು ವೈರಸ್ ಸ್ಟ್ರೈನ್ ಮತ್ತು ಕೇಸ್ ಮ್ಯಾನೇಜ್ಮೆಂಟ್ ಅನ್ನು ಅವಲಂಬಿಸಿ 24% ಅಥವಾ 88% ರಷ್ಟು ಕಡಿಮೆ ಇದೆ.

    ಮಾರ್ಬರ್ಗ್ ವೈರಸ್ ಕಾಯಿಲೆಯ ಲಕ್ಷಣಗಳು ಯಾವುವು?
    ಇದರ ಲಕ್ಷಣಗಳು 2 ರಿಂದ 21 ದಿನಗಳ ನಡುವೆ ಯಾವಾಗ ಬೇಕಾದರೂ ಆರಂಭವಾಗುವ ಸಂಭವ ಹೆಚ್ಚು. ಇದರ ನಂತರ ನೀವು ತೀವ್ರ ಜ್ವರ, ಸ್ನಾಯು ನೋವು ಮತ್ತು ತೀವ್ರ ತಲೆನೋವು ಮುಂತಾದ ಲಕ್ಷಣ ಅನುಭವಿಸಬಹುದು.

    ಇದನ್ನೂ ಓದಿ: ಥೈರಾಯ್ಡ್‌ನಿಂದಾಗಿ ನಿಮ್ಮ ತೂಕ ಹೆಚ್ಚುತ್ತಿದೆಯೇ? ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ

    ಮೂರನೇ ದಿನದಲ್ಲಿ, ರೋಗಿಯು ಹೊಟ್ಟೆ ನೋವು, ವಾಂತಿ, ತೀವ್ರವಾದ ನೀರಿನ ಅತಿಸಾರ ಮತ್ತು ಸೆಳೆತದ ನೋವು ಹೊಂದಿರುವ ಸಮಭವ ಇದೆ. 5 ಮತ್ತು 7 ದಿನಗಳ ನಡುವೆ ರೋಗಿಯು ಮೂಗಿನ ರಕ್ತಸ್ರಾವ, ಒಸಡುಗಳಲ್ಲಿ ರಕ್ತಸ್ರಾವ ಮತ್ತು ವಾಂತಿ ಮತ್ತು ಮಲದಲ್ಲಿ ರಕ್ತದ ಸಮಸ್ಯೆ ಎದುರಿಸುತ್ತಾರೆ. ರೋಗ ಲಕ್ಷಣ ಆರಂಭವಾದ ನಂತರ 8 ಮತ್ತು 9 ದಿನಗಳ ನಡುವೆ ರಕ್ತಸ್ರಾವದಿಂದ ರೋಗಿಯು ಸಾವನ್ನಪ್ಪುವ ಸಾಧ್ಯತೆ ಹೆಚ್ಚು.

    ಮಾರಣಾಂತಿಕ ಮಾರ್ಬರ್ಗ್ ವೈರಸ್ ಕಾಯಿಲೆಗೆ ಚಿಕಿತ್ಸೆ ಏನು?
    ವೈರಸ್ ಮಲೇರಿಯಾ, ಟೈಫಾಯಿಡ್ ಜ್ವರ ಮತ್ತು ಇತರ ವೈರಲ್ ಹೆಮರಾಜಿಕ್ ಜ್ವರಗಳಂತಹ ರೋಗಗಳನ್ನು ಇದು ಹೋಲುತ್ತದೆ. ಮತ್ತು ಇದೇ ರೀತಿಯ ರೋಗ ಲಕ್ಷಣಗಳನ್ನು ಹೊಂದಿದೆ. ಆದಾಗ್ಯೂ, ಪರೀಕ್ಷೆ ನಂತರವೇ ಅದನ್ನು ಸರಿಯಾಗಿ ಗುರುತಿಸಬಹುದು ಆಗಿದೆ. ಹಾಗಾಗಿ ಮೇಲೆ ತಿಳಿಸಿದ ರೋಗ ಲಕ್ಷಣಗಳು ಕಂಡು ಬಂದರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
    Published by:renukadariyannavar
    First published: