• Home
  • »
  • News
  • »
  • national-international
  • »
  • Covid Variant: ಫ್ರಾನ್ಸ್‌ನಲ್ಲಿ ಹೊಸ ಕೋವಿಡ್ ರೂಪಾಂತರ 'IHU' ಪತ್ತೆ, ಓಮೈಕ್ರಾನ್‌ಗಿಂತಲೂ ಅಪಾಯಕಾರಿಯೇ?

Covid Variant: ಫ್ರಾನ್ಸ್‌ನಲ್ಲಿ ಹೊಸ ಕೋವಿಡ್ ರೂಪಾಂತರ 'IHU' ಪತ್ತೆ, ಓಮೈಕ್ರಾನ್‌ಗಿಂತಲೂ ಅಪಾಯಕಾರಿಯೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಓಮೈಕ್ರಾನ್‌ನಂತೆ ಕಳವಳದ ರೂಪಾಂತರವಾದಾಗ ಹೆಚ್ಚು ಸಾಂಕ್ರಾಮಿಕ ಹಾಗೂ ಹಿಂದಿನ ರೋಗನಿರೋಧಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಈ ಹೊಸ ರೂಪಾಂತರ ಯಾವ ವರ್ಗಕ್ಕೆ ಸೇರುತ್ತದೆ ಎಂಬುದನ್ನು ಇನ್ನಷ್ಟೇ ನೋಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ

  • Share this:

ಓಮೈಕ್ರಾನ್ ( Omicron) ಕೋವಿಡ್ ರೂಪಾಂತರವು (Covid variant)  ಪ್ರಪಂಚದಾದ್ಯಂತ ಅತಿ ರಭಸದಿಂದ ಹರಡುತ್ತಿದೆ. ಕಳವಳಕಾರಿಯಾಗಿರುವ ಈ ರೂಪಾಂತರವು ಜಗತ್ತಿನಾದ್ಯಂತ ಕೋವಿಡ್ -19 ಪ್ರಕರಣಗಳ ಹೆಚ್ಚಿನ ಉಲ್ಬಣಕ್ಕೆ (Increased) ಕಾರಣವಾಗಿದೆ. ಮತ್ತು ಇದೀಗ, ಇತ್ತೀಚೆಗೆ ಫ್ರಾನ್ಸ್‌ನಲ್ಲಿ  (France) ಕೋವಿಡ್ -19 ನ ಹೊಸ ರೂಪಾಂತರವು ಹೊರಹೊಮ್ಮಿದೆ. ಇತ್ತೀಚೆಗೆ ಇಸ್ರೇಲ್‌ ನಲ್ಲಿ ಕೂಡ ಪ್ಲೋರೊನಾ ಸೋಂಕು ಪತ್ತೆಯಾಗಿರುವುದನ್ನು ಗಮನಿಸಬೇಕಾಗಿದೆ.


ಹೊಸ ರೂಪಾಂತರದ ಕುರಿತು ಎಚ್ಚರಿಕೆ:


IHU ಎಂದು ಹೆಸರಿಸಲಾದ, B.1.640.2 ರೂಪಾಂತರವನ್ನು ಇನ್‌ಸ್ಟಿಟ್ಯೂಟ್ IHU ಮೆಡಿಟರೇನಿ ಇನ್‌ಫೆಕ್ಷನ್‌ನಲ್ಲಿನ ಶಿಕ್ಷಣ ತಜ್ಞರು ಪತ್ತೆಹಚ್ಚಿದ್ದಾರೆ. ಸಂಶೋಧಕರ ಪ್ರಕಾರ, ಹೊಸ ರೂಪಾಂತರವು  ಓಮೈಕ್ರಾನ್‌ಗಿಂತಲೂ ಹೆಚ್ಚಿನ ಅಂದರೆ 46 ರೂಪಾಂತರಗಳನ್ನು ಹೊಂದಿದೆ ಎಂಬುದಾಗಿ ಪರಿಗಣಿಸಲಾಗಿದೆ. ಈ ಹೊಸ ಪ್ರಕರಣದ ಕನಿಷ್ಟ 12 ಪ್ರಕರಣಗಳು ಮಾರ್ಸಿಲ್ಲೆಸ್ ಬಳಿ ವರದಿಯಾಗಿದೆ ಹಾಗೂ ಆಫ್ರಿಕನ್ ದೇಶ ಕ್ಯಾಮರೂನ್‌ಗೆ ಪ್ರಯಾಣದ ಸಂಪರ್ಕ ಹಿನ್ನಲೆಯನ್ನು ಹೊಂದಿದೆ ಎನ್ನಲಾಗಿದೆ. ಫ್ರಾನ್ಸ್‌ನವರೇ ಆದ ಯುಎಸ್ ಎಪಿಡೆಮಿಯಾಲಜಿಸ್ಟ್ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಹೊಸ ರೂಪಾಂತರದ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.


IHU ಎಂದು ಹೆಸರಿಸಿದ ಹೊಸ ರೂಪಾಂತರ

ಇಲ್ಲಿ ಪಡೆದ ಜೀನೋಮ್‌ಗಳ ರೂಪಾಂತರ ಸೆಟ್ ಮತ್ತು ಫೈಲೋಜೆನೆಟಿಕ್ ಸ್ಥಾನವು ನಮ್ಮ ಹಿಂದಿನ ವ್ಯಾಖ್ಯಾನದ ಆಧಾರದ ಮೇಲೆ ನಾವು IHU ಎಂದು ಹೆಸರಿಸಿದ ಹೊಸ ರೂಪಾಂತರವನ್ನು ಸೂಚಿಸುತ್ತದೆ ಎಂಬುದಾಗಿ ಎರಿಕ್ ತಿಳಿಸಿದ್ದಾರೆ. medRxiv ನಲ್ಲಿ ಪೋಸ್ಟ್ ಮಾಡಿದ ಮಾಹಿತಿಯ ಪ್ರಕಾರ, GridION ಉಪಕರಣಗಳಲ್ಲಿ ಆಕ್ಸ್‌ಫರ್ಡ್ ನ್ಯಾನೊಪೋರ್ ಟೆಕ್ನಾಲಜೀಸ್‌ನೊಂದಿಗೆ ಮುಂದಿನ ಪೀಳಿಗೆಯ ಅನುಕ್ರಮದ ಮೂಲಕ ಜೀನೋಮ್‌ಗಳನ್ನು ಪಡೆಯಲಾಗಿದೆ.


ಇದನ್ನೂ ಓದಿ: Flurona: ಕೋವಿಡ್ ಆಂತಕದ ಮಧ್ಯೆ ಫ್ಲೋರೋನಾ ಭೀತಿ, ಏನಿದರ ಲಕ್ಷಣ?


ದಕ್ಷಿಣ ಫ್ರಾನ್ಸ್‌ನಲ್ಲಿ 46 ರೂಪಾಂತರ

ಕ್ಯಾಮರೂನ್‌ನಿಂದ ಹಿಂತಿರುಗಿದ ದಕ್ಷಿಣ ಫ್ರಾನ್ಸ್‌ನಲ್ಲಿ 46 ರೂಪಾಂತರಗಳು ಮತ್ತು 37 ಅಳಿಸುವಿಕೆಗಳೊಂದಿಗೆ ವಿಲಕ್ಷಣ ಸಂಯೋಜನೆಯ ರೂಪಾಂತರದ ಕ್ಲಸ್ಟರ್‌ನ 12 ಪ್ರಕರಣಗಳನ್ನು ಪತ್ತೆಮಾಡಿದ ನಂತರ ಫ್ರೆಂಚ್ ವಿಜ್ಞಾನಿಗಳು ಈ ಕುರಿತು ಎಚ್ಚರಿಕೆಯನ್ನು ಸಂದೇಶವನ್ನು ರವಾನಿಸಿದ್ದಾರೆ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಎರಿಕ್ ಫೀಗಲ್ ಹೊಸ ರೂಪಾಂತರಗಳನ್ನು ನಿರಂತರವಾಗಿ ಪತ್ತೆಹಚ್ಚಲಾಗುತ್ತಿದೆ ಎಂಬುದಾಗಿ ಅವರು ತಿಳಿಸಿದ್ದು ಅವುಗಳು ಇನ್ನಷ್ಟು ಅಪಾಯಕಾರಿಯಾಗಿವೆ ಎಂಬುದು ಇದರರ್ಥವಲ್ಲವೆಂದು ತಿಳಿಸಿದ್ದಾರೆ.


ಪ್ರತೀ ಬಾರಿಯೂ ಹಲವಾರು ರೂಪಾಂತರಗಳನ್ನು ಪತ್ತೆಹಚ್ಚಲಾಗುತ್ತಿದೆ ಆದರೆ ಇದರರ್ಥ ಅವುಗಳು ಹೆಚ್ಚು ಅಪಾಯಕಾರಿ ಎಂದಲ್ಲ. ಮೂಲ ವೈರಸ್‌ಗೆ ಸಂಬಂಧಿಸಿದಂತೆ ಅದು ಹೊಂದಿರುವ ರೂಪಾಂತರಗಳ ಸಂಖ್ಯೆಯಿಂದ ಅಪವರ್ತಿಸುವ ಸಾಮರ್ಥ್ಯವನ್ನು ಹೊಂದಿಕೊಂಡು ಅವುಗಳು ಹೆಚ್ಚು ಪ್ರಸಿದ್ಧ ಹಾಗೂ ಅಪಾಯಕಾರಿ ಎಂಬುದನ್ನು ಕಂಡುಹಿಡಿಯಲಾಗುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.


ಹೊಸ ರೂಪಾಂತರ ಅಪಾಯಕಾರಿಯೇ?


ಓಮೈಕ್ರಾನ್‌ನಂತೆ ಕಳವಳದ ರೂಪಾಂತರವಾದಾಗ ಹೆಚ್ಚು ಸಾಂಕ್ರಾಮಿಕ ಹಾಗೂ ಹಿಂದಿನ ರೋಗನಿರೋಧಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಈ ಹೊಸ ರೂಪಾಂತರ ಯಾವ ವರ್ಗಕ್ಕೆ ಸೇರುತ್ತದೆ ಎಂಬುದನ್ನು ಇನ್ನಷ್ಟೇ ನೋಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಾರ್ವಕಾಲಿಕವಾಗಿ ಹೊಸ ಹೊಸ ರೂಪಾಂತರಗಳನ್ನು ಪತ್ತೆಹಚ್ಚಲಾಗುತ್ತದೆ B.1.640.2 ಯಾವುದೇ ಇತರ ದೇಶಗಳಲ್ಲಿ ವರದಿಯಾಗಿಲ್ಲ ಅಥವಾ ವಿಶ್ವ ಆರೋಗ್ಯ ಸಂಸ್ಥೆ (WHO) ತನಿಖೆಯ ಅಡಿಯಲ್ಲಿ ಒಂದು ರೂಪಾಂತರ ಎಂಬುದಾಗಿ ಲೇಬಲ್ ಮಾಡಲಾಗಿಲ್ಲ ಎಂದು ಎರಿಕ್ ತಿಳಿಸಿದ್ದಾರೆ. ಲಸಿಕೆ ಹಾಕಿಸದವರ ಮೇಲ್ವಿಚಾರಣೆಗಾಗಿ ಫ್ರಾನ್ಸ್ ಹೊಸ ಘೋಷಣೆಯನ್ನು ಮಾಡುತ್ತಿರುವಂತೆಯೇ ಈ ಸುದ್ದಿ ಹೊರಬಿದ್ದಿದೆ.


ಇದನ್ನೂ ಓದಿ: COVID ವಿರುದ್ಧ ಮಕ್ಕಳಿಗೆ ಲಸಿಕೆ ಹಾಕಬೇಕಿಲ್ಲ ಎಂದು ಕೆಲ ವೈದ್ಯರು ಹೇಳ್ತಿರೋದು ಯಾಕೆ? ಈ ಸ್ಟೋರಿ ಓದಿ

B.1.640.2 ಎಂಬ ಹೆಸರಿನ ಹೊಸ ಪ್ಯಾಂಗೊಲಿನ್ ವಂಶಾವಳಿ:


ಕಳೆದ ವರ್ಷ ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಿಂದ ತೆಗೆದ ಮಾದರಿಯಲ್ಲಿ ಓಮೈಕ್ರಾನ್‌ ರೂಪಾಂತರವು ಪತ್ತೆಯಾಗಿದೆ. N501Y ಮತ್ತು E484K ಸೇರಿದಂತೆ ಹದಿನಾಲ್ಕು ಅಮೈನೋ ಆಮ್ಲ ಪರ್ಯಾಯಗಳು ಮತ್ತು 9 ಅಳಿಸುವಿಕೆಗಳು ಸ್ಪೈಕ್ ಪ್ರೋಟೀನ್‌ನಲ್ಲಿವೆ. ಈ ಜೀನೋಟೈಪ್ ಮಾದರಿಯು B.1.640.2 ಎಂಬ ಹೆಸರಿನ ಹೊಸ ಪ್ಯಾಂಗೊಲಿನ್ ವಂಶಾವಳಿಯನ್ನು ಸೃಷ್ಟಿಸಲು ಕಾರಣವಾಯಿತು, ಇದು B.1.640.1 ಎಂದು ಮರುನಾಮಕರಣಗೊಂಡ ಹಳೆಯ B.1.640 ವಂಶಾವಳಿಗೆ ಫೈಲೋಜೆನೆಟಿಕ್ ಸಹೋದರಿ ಗುಂಪಾಗಿದೆ, ”ಎಂದು ಸಂಶೋಧನಾ ಪತ್ರಿಕೆ ತಿಳಿಸಿದೆ.


Published by:vanithasanjevani vanithasanjevani
First published: