ಸಾಮಾನ್ಯ ವ್ಯಕ್ತಿ ಈಗ ಕೋಟ್ಯಧಿಪತಿ; ಅದೃಷ್ಟ ಖುಲಾಯಿಸಿದ್ದು ಹೇಗೆ ಅಂತೀರಾ..?

ಜಾರ್ಜ್​ಗೆ ಮೊದಲಿನಿಂದಲೂ ಬಿಗ್​ ಟಿಕೆಟ್​ ವಿನ್ನರ್​ ಆಗುತ್ತೇನೆ ಎಂಬ ನಂಬಿಕೆಯಿತ್ತು. ಹೀಗಾಗಿ ಅವರು ಟಿಕೆಟ್​​ ಖರೀದಿ ಮಾಡಲು ಪ್ರಾರಂಭಿಸಿದ್ದರು.  ಬಿಗ್​ ಟಿಕೆಟ್​​ ವಿನ್ನರ್​ ಭಾರತದ ವ್ಯಕ್ತಿ ಎಂಬ ಸುದ್ದಿ ಓದಿದಾಗ ನಾನು ಆಶ್ಚರ್ಯಚಕಿತನಾಗಿದ್ದೆ ಎಂದು ಅವರೇ ಹೇಳಿದ್ದಾರೆ.

Latha CG | news18
Updated:March 4, 2019, 4:15 PM IST
ಸಾಮಾನ್ಯ ವ್ಯಕ್ತಿ ಈಗ ಕೋಟ್ಯಧಿಪತಿ; ಅದೃಷ್ಟ ಖುಲಾಯಿಸಿದ್ದು ಹೇಗೆ ಅಂತೀರಾ..?
ರೋಜಿ ಜಾರ್ಜ್​​​
  • News18
  • Last Updated: March 4, 2019, 4:15 PM IST
  • Share this:
ಅದೃಷ್ಟ ಯಾರಿಗೆ, ಹೇಗೆ, ಯಾವಾಗ ಖುಲಾಯಿಸುತ್ತದೆ ಎಂದು ಹೇಳಲು ಬರುವುದಿಲ್ಲ. ಅದೃಷ್ಟ ಒಲಿದರೆ ಅವರ ಜೀವನವೇ ಬದಲಾಗುತ್ತದೆ. ಆ ಅದೃಷ್ಟ ಈಗ ಭಾರತೀಯನಿಗೆ ಒಲಿದಿದೆ. ಲಾಟರಿ ಟಿಕೆಟ್​​ ಖರೀದಿಸಿದ್ದ ಅವರು ಈಗ ಕೋಟ್ಯಧಿಪತಿಯಾಗಿದ್ಧಾರೆ.  ಆದರೆ ಅವರು ಮೊದಲು ಈ ವಿಷಯವನ್ನು ನಂಬಲು ಸಿದ್ದರಿರಲಿಲ್ಲ. ಇದು ನಕಲಿ ಎಂದು ಭಾವಿಸಿದ್ದರು. ಏನದು ಕಥೆ ನೀವೇ ಓದಿ.

ಭಾರತೀಯ ಮೂಲದ  ರೋಜಿ ಜಾರ್ಜ್​ ಭಾನುವಾರ ಸಂಜೆ ದುಬೈನಿಂದ ಒಂದು ಫೋನ್​ ಕರೆಯನ್ನು ಸ್ವೀಕರಿಸುತ್ತಾರೆ. ನೀವು 12 ಮಿಲಿಯನ್  ದಿರ್ಹಮ್​ (ದುಬೈ ಕರೆನ್ಸಿ) ಗೆದ್ದಿದ್ದೀರಾ ಎಂದು ಹೇಳುತ್ತಾರೆ (23,14,85,567 ರೂಪಾಯಿಗಳಲ್ಲಿ). ಆದರೆ ಜಾರ್ಜ್​ ಅವರ ಮಾತನ್ನು ನಂಬಲು ಸಿದ್ದವಿರಲಿಲ್ಲ. ಇದು ನಕಲಿ ಕರೆ ಎಂದು ಭಾವಿಸಿರುತ್ತಾರೆ. ಬಳಿಕ 'ಬಿಗ್ ಟಿಕೆಟ್​​' ವೆಬ್​​ಸೈಟ್​ಗೆ ಭೇಟಿ ನೀಡಿ ತಾನು ಟಿಕೆಟ್​ ಗೆದ್ದಿರುವ ವಿಷಯವನ್ನು ಎರಡೆರಡು ಬಾರಿ ಅಧಿಕೃತವಾಗಿ ಸ್ಪಷ್ಟಪಡಿಸಿಕೊಳ್ಳುತ್ತಾರೆ.  ಆಗ ಜಾರ್ಜ್​ಗೆ ತಾನು ಕೋಟ್ಯಧಿಪತಿಯಾಗಿರುವುದು ತಿಳಿಯುತ್ತದೆ.

ಆ ಕ್ಷಣ ಜಾರ್ಜ್​ ಖುಷಿ ದುಪ್ಪಟ್ಟಾಗುತ್ತದೆ. 'ನಾನು ಮೊದಲು ನನ್ನ ತಾಯಿಗೆ ಕರೆ ಮಾಡಿ ಇಷ್ಟು ದೊಡ್ಡ ಸಿಹಿ ಸುದ್ದಿಯನ್ನು ಹಂಚಿಕೊಂಡೆ. ಆದರೆ ಮೊದಲು ಇದು ನಕಲಿ ಎಂದು ಭಾವಿಸಿದ್ದೆ' ಎಂದು ಹೇಳುತ್ತಾರೆ.  ಜಾರ್ಜ್ ಅವರು​ ಫೆಬ್ರವರಿ 23 ರಂದು 014394 ಸಂಖ್ಯೆಯ ಲಕ್ಕಿ ಟಿಕೆಟ್​ ಖರೀದಿ ಮಾಡಿದ್ದರು. ಜಾರ್ಜ್ ಕಳೆದ ವರ್ಷ ರಾಫೆಲ್​ ಡ್ರಾ ಸೇರಿದ ಬಳಿಕ ಐದಾರು ಬಾರಿ ಟಿಕೆಟ್​​ ಖರೀದಿ ಮಾಡಿದ್ದರು. ಈ ಬಾರಿ ಜಾರ್ಜ್​ಗೆ ಅದೃಷ್ಟ ಖುಲಾಯಿಸಿದ್ದು, ಕೋಟ್ಯಧಿಪತಿಯಾಗಿದ್ದಾರೆ.

ಕಾರು ಚಾಲಕರಿಗೆ ಸಿಹಿಸುದ್ದಿ; ಹೀಗೆ ಮಾಡಿದರೆ ಕೇವಲ 30 ರೂ.ನಲ್ಲಿ 22 ಕಿ.ಮೀ. ಹೋಗಬಹುದು!

ಜಾರ್ಜ್​ ತಾವು ಗೆದ್ದಿರುವ ಟಿಕೆಟ್​ ಹಣವನ್ನು ತನ್ನ ಗೆಳೆಯರು ಹಾಗೂ ಉದ್ಯೋಗಿಗಳ ಜೊತೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. 'ನಾನು ನನಗೋಸ್ಕರ ಟಿಕೆಟ್​​ ಖರೀದಿಸಿದ್ದೇನೆ. ನನಗೆ ಸಿಕ್ಕಿರುವ ಟಿಕೆಟ್​​ ಹಣವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ನಾನು ಗೆದ್ದಿರುವ ಎಲ್ಲಾ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.

ಜಾರ್ಜ್​ಗೆ ಮೊದಲಿನಿಂದಲೂ ಬಿಗ್​ ಟಿಕೆಟ್​ ವಿನ್ನರ್​ ಆಗುತ್ತೇನೆ ಎಂಬ ನಂಬಿಕೆಯಿತ್ತು. ಹೀಗಾಗಿ ಅವರು ಟಿಕೆಟ್​​ ಖರೀದಿ ಮಾಡಲು ಪ್ರಾರಂಭಿಸಿದ್ದರು.  'ಬಿಗ್​ ಟಿಕೆಟ್​​ ವಿನ್ನರ್​ ಭಾರತದ ವ್ಯಕ್ತಿ ಎಂಬ ಸುದ್ದಿ ಓದಿದಾಗ ನಾನು ಆಶ್ಚರ್ಯಚಕಿತನಾಗಿದ್ದೆ' ಎಂದು ಅವರೇ ಹೇಳಿದ್ದಾರೆ.

ಭಾರತೀಯ ಮೂಲದ ಜಾರ್ಜ್​​ ಕಳೆದ 12 ವರ್ಷಗಳಿಂದ ಕುವೈತ್​ನಲ್ಲಿ ನೆಲೆಸಿದ್ದಾರೆ. ಮುಂದೆಯೂ ಸಹ ಕುವೈತ್​ನಲ್ಲಿಯೇ ಕೆಲಸ ಮುಂದುವರೆಸುವುದಾಗಿ ಹೇಳಿದ್ದಾರೆ. ಆದರೆ ಹೆಚ್ಚಿನ ಸಮಯ ಇರುವುದಿಲ್ಲ. ಇನ್ನೂ ಒಂದೆರಡು ವರ್ಷಗಳಲ್ಲಿ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದಾರೆ. ರಾಫೆಲ್​ ಡ್ರಾ ಟಿಕೆಟ್​ ಖರೀದಿಸುವವರಿಗೆ ಜಾರ್ಜ್​ ಕೊನೆಯಲ್ಲಿ ಒಂದು ಮಾತು ಹೇಳಿದ್ದಾರೆ. 'ನಂಬಿಕೆ ಇಟ್ಟುಕೊಂಡು ಮುಂದೆ ಸಾಗಿ. ಒಂದು ದಿನ ಗೆದ್ದೇ ಗೆಲ್ಲುತ್ತೀರಿ' ಎಂದಿದ್ದಾರೆ.
First published:March 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ