New Rule: ವಿಮಾನದಲ್ಲಿ ಇನ್ಮುಂದೆ ಹೆಚ್ಚಿನ Handbags ಕೊಂಡೊಯ್ಯುವಂತಿಲ್ಲ, ಕ್ಯಾಬಿನ್​ನಲ್ಲಿ ಇಷ್ಟೇ ತೂಕದ ಬ್ಯಾಗಿಗೆ ಅವಕಾಶ

ಹೆಚ್ಚಿನ ಹ್ಯಾಂಡ್ ಬ್ಯಾಗ್‌ಗಳನ್ನು ತೆರವುಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಭದ್ರತಾ ಸಂಸ್ಥೆ ಹೇಳಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ (Bureau of Civil Aviation Security) (BCAS) ಜನವರಿ 21 ರಂದು ವಿಮಾನ ನಿಲ್ದಾಣದಲ್ಲಿ ದಟ್ಟಣೆ ಮತ್ತು ಭದ್ರತಾ ಬೆದರಿಕೆಯನ್ನು(Security Threats) ಕಡಿಮೆ ಮಾಡಲು ಪ್ರತಿ ಪ್ರಯಾಣಿಕರ ಹ್ಯಾಂಡ್‌ಬ್ಯಾಗ್‌ಗಳ (Passenger Handbags) ಸಂಖ್ಯೆಯನ್ನು ಒಂದಕ್ಕೆ ಇಳಿಸಿದೆ. ಅಧಿಸೂಚನೆಯ ಪ್ರಕಾರ, ಭಾರತದಲ್ಲಿನ ಎಲ್ಲಾ ದೇಶೀಯ ವಿಮಾನಗಳಿಗೆ (Domestic Flights) ನಿಯಮವಿದೆ. BCAS AVSEC ಸುತ್ತೋಲೆಯ ಪ್ರಕಾರ ಮಹಿಳೆಯರ ಹ್ಯಾಂಡ್‌ಬ್ಯಾಗ್ ಸೇರಿದಂತೆ ಸುತ್ತೋಲೆಯಲ್ಲಿ ಪಟ್ಟಿಮಾಡಿರುವ ಐಟಂಗಳನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚಿನ ಹ್ಯಾಂಡ್ ಬ್ಯಾಗ್ ಅನ್ನು ಸಾಗಿಸಲು ಅನುಮತಿಸಬಾರದು ಎಂದಾಗಿದೆ.

ಅದಾಗ್ಯೂ ಒಬ್ಬ ಪ್ರಯಾಣಿಕರು ಸರಾಸರಿ 2-3 ಹ್ಯಾಂಡ್ ಬ್ಯಾಗ್‌ಗಳನ್ನು ಕೊಂಡೊಯ್ಯುವುದು ಸ್ಕ್ರೀನಿಂಗ್ ಪಾಯಿಂಟ್‌ನಲ್ಲಿ ಕಂಡುಬಂದಿದೆ. ಇದರಿಂದಾಗಿ ಕ್ಲಿಯರೆನ್ಸ್ ಸಮಯದಲ್ಲಿ ಹೆಚ್ಚಳ ಕಂಡುಬಂದಿದ್ದು ವಿಳಂಬಗಳು ಉಂಟಾಗುತ್ತಿವೆ ಅಂತೆಯೇ PESC ಪಾಯಿಂಟ್ (ಪೂರ್ವ ಆರೋಹಣಾ ಭದ್ರತಾ ತಪಾಸಣೆ) ನಲ್ಲಿ ನೂಕುನುಗ್ಗಲು ಉಂಟಾಗುತ್ತಿದ್ದು ಪ್ರಯಾಣಿಕರಿಗೆ ಅನಾನುಕೂಲತೆಯಾಗುತ್ತಿದೆ ಎಂದಾಗಿದೆ. ಹೀಗಾಗಿ ಎಲ್ಲಾ ಸ್ಟೇಕ್‌ಹೋಲ್ಡರ್‌ಗಳು/ವಿಮಾನ ಯಾನ ಸಂಸ್ಥೆಗಳು ಸುತ್ತೋಲೆಗಳನ್ನು ನಿಖರವಾಗಿ ಪಾಲಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಸುತ್ತೋಲೆಯಲ್ಲಿ ಏನು ಮಾಹಿತಿ ಇದೆ?
ಸುತ್ತೋಲೆಯ ಕ್ರಮದಂತೆ ವಿಮಾನ ಹತ್ತುವ ಮುನ್ನ ನಡೆಸುವ ಪರಿಶೀಲನೆಗೆ ಪ್ರಯಾಣಿಕರನ್ನು ಅನುಮತಿಸುವ ಮೊದಲು ಪ್ರತಿಯೊಂದು ವಿಮಾನ ಯಾನ ಸಂಸ್ಥೆಗಳು ನಿಯಮಗಳನ್ನು ಪಾಲಿಸುವಲ್ಲಿ ಜವಬ್ದಾರರಾಗಿದ್ದು ಮಾರ್ಗದರ್ಶನ ನೀಡಲು, ಹ್ಯಾಂಡ್ ಬ್ಯಾಗ್‌ಗಳನ್ನು ಪರೀಕ್ಷಿಸಲು ಹಾಗೂ ಪರಿಶೀಲನೆ ನಡೆಸಲು ಸಿಬ್ಬಂದಿಯನ್ನು ನಿಯೋಜಿಸಬಹುದಾಗಿದೆ ಎಂಬುದಾಗಿ ತಿಳಿಸಿದೆ.

ಇದನ್ನೂ ಓದಿ: Explained: ಈ ವಿಮಾನ ಸಂಸ್ಥೆಗಳು ಸದ್ಯಕ್ಕೆ ತಮ್ಮ ಸೇವೆ ನಿಲ್ಲಿಸಿವೆ, ಇನ್ನು ಕೆಲವು ಭಾರೀ ಡಿಸ್ಕೌಂಟ್ ಕೊಡುತ್ತಿವೆ

ಒಂದೇ ಹ್ಯಾಂಡ್ ಬ್ಯಾಗ್ ನಿಯಮ
ಮಾರ್ಗದರ್ಶನ ನೀಡಲು ಹಾಗೂ ಪ್ರಯಾಣಿಕರ ಟಿಕೆಟ್‌ಗಳು / ಬೋರ್ಡಿಂಗ್ ಪಾಸ್‌ಗಳಲ್ಲಿ ಏಕೈಕ ಹ್ಯಾಂಡ್ ಬ್ಯಾಗ್ ನಿಯಮವನ್ನು ಪ್ರದರ್ಶಿಸಲು ಸೂಕ್ತವಾಗಿ ನಿರ್ದೇಶಿಸಬಹುದು ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಚೆಕ್-ಇನ್ ಕೌಂಟರ್‌ಗಳು, ವಿಮಾನ ನಿಲ್ದಾಣಗಳಲ್ಲಿ ಅನುಕೂಲಕರ ಸ್ಥಳಗಳಲ್ಲಿ ‘ಒಂದೇ ಹ್ಯಾಂಡ್ ಬ್ಯಾಗ್ ನಿಯಮ’ ಪ್ರದರ್ಶಿಸುವ ಹೋರ್ಡಿಂಗ್ / ಬ್ಯಾನರ್/ಬೋರ್ಡ್/ಫಲಕಗಳನ್ನು ಇರಿಸುವಂತೆ ನಿಲ್ದಾಣ ನಿರ್ವಾಹಕರಿಗೆ ಸೂಚನೆ ನೀಡಬಹುದು ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಸ್ಯಾನಿಟೈಜ್ ಮಾಡಬಹುದಾಗಿದೆ ಹಾಗೂ ಅಗತ್ಯವಿದ್ದಲ್ಲಿ ತಮ್ಮ ಹೆಚ್ಚುವರಿ ಬ್ಯಾಗ್‌ಗಳನ್ನು ನೋಂದಾಯಿತ ಬ್ಯಾಗೇಜ್‌ಗೆ ಬದಲಿಸುವ ಆಯ್ಕೆಯನ್ನು ಪ್ರಯಾಣಿಕರು ಹೊಂದಿರುತ್ತಾರೆ.

ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಖಾಸಗಿ ಏರ್‌ಲೈನ್‌ನ ಕಾರ್ಯನಿರ್ವಾಹಕರೊಬ್ಬರು ಸರಕಾರದ್ದೇ ಕೆಲವೊಂದು ನಿಯಮಗಳು ಇತರ ಅನೇಕ ವಿಷಯಗಳಿಗೆ ಅನುಮತಿ ನೀಡುತ್ತಿರುವಾಗ ಈ ನಿಯಮವನ್ನು ಜಾರಿಗೊಳಿಸುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ನಿಯಂತ್ರಕವು ತನ್ನ ಸೂಚನೆಯಲ್ಲಿ ಸ್ಪಷ್ಟವಾಗಿರಬೇಕು ಅಂತೆಯೇ ವಿಮಾನ ಯಾನ ಸಂಸ್ಥೆಗಳ ಸಿಬ್ಬಂದಿಯಲ್ಲಿ ಗೊಂದಲವನ್ನುಂಟು ಮಾಡಬಾರದು ಎಂದು ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು:
ಕೆಲವು ಸಂಸದರು ಭದ್ರತಾ ತಪಾಸಣೆಯಲ್ಲಿ ಉಂಟಾಗುತ್ತಿರುವ ನೂಕು ನುಗ್ಗಲಿನ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು ಇದರ ನಂತರವೇ ನುಗ್ಗಾಟವನ್ನು ಕಡಿಮೆ ಮಾಡಲು ಕ್ರಮಗಳನ್ನು ಜಾರಿಗೆ ತರಲು ನಿಯಂತ್ರಕರನ್ನು ಕೇಳಲಾಯಿತು. ನಾವು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದೇವೆ ಮತ್ತು ನಿಯಮವನ್ನು ವಿಧಿಸಲು ಹೇಳಿದ್ದೇವೆ. ಹೆಚ್ಚಿನ ಹ್ಯಾಂಡ್ ಬ್ಯಾಗ್‌ಗಳನ್ನು ತೆರವುಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಭದ್ರತಾ ಸಂಸ್ಥೆ ಹೇಳಿದೆ.

ಇದನ್ನೂ ಓದಿ: Omicron Effect: ಶೇ. 20 ರಷ್ಟು ವಿಮಾನ ಹಾರಾಟ ರದ್ದುಗೊಳಿಸಿದ ಇಂಡಿಗೋ

ಜನದಟ್ಟಣೆ ತಡೆಗಟ್ಟಲು
ಪ್ರಯಾಣಿಕರು ಬಹು ಸಾಮಾನು ಸರಂಜಾಮುಗಳನ್ನು ಸಾಗಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎಂದು ಅಧಿಕಾರಿ ಹೇಳಿದರು. ಲ್ಯಾಪ್‌ಟಾಪ್ ಅಥವಾ ಪರ್ಸ್ ಹೊರತುಪಡಿಸಿ ವಿಮಾನದಲ್ಲಿ ಸಾಗಿಸುವ ಸರಾಸರಿ ಬ್ಯಾಗ್‌ಗಳ ಸಂಖ್ಯೆಯು ಪ್ರತಿ ಪ್ರಯಾಣಿಕರಿಗೆ 1.8 ರಂತೆ ಬರುತ್ತದೆ ಎಂದು BCAS ಕಂಡುಹಿಡಿದಿದೆ. ಅಲ್ಲದೆ, ವಿಮಾನ ನಿಲ್ದಾಣಗಳಲ್ಲಿ ಜನದಟ್ಟಣೆಯನ್ನು ತಡೆಗಟ್ಟಲು ಹಲವಾರು ವಿಮಾನಗಳು ಒಂದೇ ಸಮಯದಲ್ಲಿ ಆಗಮಿಸುವುದಿಲ್ಲ ಅಥವಾ ನಿರ್ಗಮಿಸುವುದಿಲ್ಲ ಎಂಬುದನ್ನು ಖಚಿತಪಡಿಸಲು ವಿಮಾನಗಳ ಸಮಯವನ್ನು ಬದಲಾಯಿಸಲು ವಿಮಾನಯಾನ ಸಂಸ್ಥೆಗಳಿಗೆ ಕೇಳಲಾಯಿತು. ಆದರೆ ವಿಮಾನ ಯಾನ ಸಂಸ್ಥೆಗಳು ಈ ವಿನಂತಿಯನ್ನು ಕೈಬಿಡುವಂತೆ ಒತ್ತಾಯಪಡಿಸಿದ ಕಾರಣ ಈ ಆಲೋಚನೆಯನ್ನು ಕೈಬಿಡಲಾಯಿತು ಎನ್ನಲಾಗಿದೆ.
Published by:vanithasanjevani vanithasanjevani
First published: