ಗುಜರಾತ್​ ಸಿಎಂ ಓಡಾಟಕ್ಕೆ 191 ಕೋಟಿ ರೂ. ವಿಮಾನ ಖರೀದಿ; ಇದರ ವಿಶೇಷತೆಗಳೇನು ಏನು ಗೊತ್ತಾ?

ಎರಡು ಎಂಜಿನ್​ ಹೊಂದಿರುವ ಚಾಲೆಂಜರ್​ 650 ಹೆಸರಿನ ವಿಮಾನ ಇದಾಗಿದೆ. 12 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ.

Rajesh Duggumane | news18-kannada
Updated:November 7, 2019, 7:19 AM IST
ಗುಜರಾತ್​ ಸಿಎಂ ಓಡಾಟಕ್ಕೆ 191 ಕೋಟಿ ರೂ. ವಿಮಾನ ಖರೀದಿ; ಇದರ ವಿಶೇಷತೆಗಳೇನು ಏನು ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಅಹ್ಮದಾಬಾದ್​ (ನ.7): ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾಣಿ ಸೇರಿ ಇತರ ವಿಐಪಿಗಳನ್ನು ಹೊತ್ತೊಯ್ಯಲು ಅಲ್ಲಿನ ರಾಜ್ಯ ಸರ್ಕಾರ 191 ಕೋಟಿ ರೂಪಾಯಿ ಮೌಲ್ಯದ ವಿಮಾನ ಖರೀದಿಸಿದೆ.

ಬೊಂಬಾರ್ಡಿಯರ್ ಸಂಸ್ಥೆ ಈ ವಿಮಾ ನಿರ್ಮಾಣ ಮಾಡಿದೆ. ಎರಡು ಎಂಜಿನ್​ ಹೊಂದಿರುವ ಚಾಲೆಂಜರ್​ 650 ಹೆಸರಿನ ವಿಮಾನ ಇದಾಗಿದೆ. 12 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಮತ್ತೊಂದು ವಿಶೇಷ ಎಂದರೆ, ಈ ವಿಮಾನ 7,000 ಕಿ.ಮೀವರೆಗೆ ಹಾರುವ ಸಾಮರ್ಥ್ಯವನ್ನು ಇದು ಹೊಂದಿದೆ. ಮುಖ್ಯಮಂತ್ರಿ ಹಾಗೂ ಇತರರ ವಿಐಪಿಗಳನ್ನು ಕೊಂಡೊಯ್ಯಲು ಈಗ ಬಳಕೆ ಮಾಡುತ್ತಿರುವ ವಿಮಾನಕ್ಕಿಂತ ಇದು ಹೆಚ್ಚು ಶಕ್ತಿಶಾಲಿಯಾಗಿದೆ.

“ಚಾಲೆಂಜರ್​ 650 ವಿಮಾನ 191 ಕೋಟಿ ರೂ. ಬೆಲೆಬಾಳಲಿದೆ. ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಮುಂದಿನ ಎರಡು ವಾರಗಳಲ್ಲಿ ಈ ವಿಮಾನ ಸರ್ಕಾರಕ್ಕೆ ಹಸ್ತಾಂತರಗೊಳ್ಳಲಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:  ಗುಜರಾತ್​ನಲ್ಲಿ ಹೆಚ್ಚಿದ ಮಳೆಯ ಅಬ್ಬರ

ವಿಮಾನ ಬಳಕೆ ಏತಕ್ಕೆ: 

ಮುಖ್ಯಮಂತ್ರಿ ಮೊದಲಾದವರನ್ನು ಕರೆದೊಯ್ಯಲು ಹಾಲಿ ಬಳಕೆಯಲ್ಲಿರುವ ವಿಮಾನ 870 ಕಿ.ಮೀ ದೂರದವರೆಗೆ ಮಾತ್ರ ಹಾರಾಟ ನಡೆಸಬಹುದು. ಹೀಗಾಗಿ ದೂರದ ಪ್ರಯಾಣ ನಡೆಸುವ ಪರಿಸ್ಥಿತಿ ಬಂದೊದಗಿದರೆ ಈ ವಿಮಾನದಿಂದ ಸಾಧ್ಯವಿಲ್ಲ. ಹೀಗಾಗಿ, ಈ ವಿಮಾನ ಅದಕ್ಕೆ ಸಹಕಾರಿಯಾಗಲಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜ್ಯಪಾಲರು ಸೇರಿ ಇತರರನ್ನು ಈ ವಿಮಾನ ಹೊತ್ತೊಯ್ಯಲಿದೆ.

First published: November 7, 2019, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading