ಪಿಎಂ ಕೇರ್ಸ್‌ ಕುರಿತ ರಾಹುಲ್ ಗಾಂಧಿ ಪ್ರಶ್ನೆ; ಕಿಡಿಕಾರಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪ್ರಾಮಾಣಿಕ ಸರ್ಕಾರವಾಗಿದೆ. ಆದರೆ, ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ರಾಷ್ಟ್ರದ ಸಂಕಲ್ಪವನ್ನು ದುರ್ಬಲಗೊಳಿಸುವ ಅವಕಾಶವನ್ನು ರಾಹುಲ್ ಗಾಂಧಿ ಎಂದಿಗೂ ಕಳೆದುಕೊಂಡಿಲ್ಲ ಎಂದು ಸಚಿವ ರವಿಶಂಕರ್‌ ಕಿಡಿಕಾರಿದ್ದಾರೆ.

ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್, ರಾಹುಲ್ ಗಾಂಧಿ.

ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್, ರಾಹುಲ್ ಗಾಂಧಿ.

  • Share this:
ನವ ದೆಹಲಿ (ಆಗಸ್ಟ್ 18); ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ಹಣವನ್ನು ಕಾಂಗ್ರೆಸ್ನವರು ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ನೀಡಿದಂತೆ ನಾವು ಪಿಎಂ ಕೇರ್ಸ್ ಹಣವನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಪಿಎಂ ಕೇರ್ಸ್ ಹಣದ ಲೆಕ್ಕಾಚಾರ ಕೇಳಿದ್ದ ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗಾಂಧಿ ಕಳೆದ ಹಲವು ದಿನಗಳಿಂದ ಕೊರೋನಾ ಸಂಕಷ್ಟ ಕಾಲದಲ್ಲಿ ಪಿಎಂ ಕೇರ್ಸ್‌‌ಗೆ ಜನ ಎಷ್ಟು ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ? ಈ ಹಣವನ್ನು ಬಿಜೆಪಿ ಸರ್ಕಾರ ಯಾವ ಯಾವ ಕಾರ್ಯಗಳಿಗೆ ಬಳಸಿಕೊಂಡಿದೆ? ಈ ಕುರಿತು ಕೇಂದ್ರ ಸರ್ಕಾರ ಲೆಕ್ಕ ನೀಡಲಿ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೂ ಆರಂಭಿಸಿದ್ದರು.

ಪಿಎಂ ಕೇರ್ಸ್ ಕುರಿತ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಉತ್ತರ ನೀಡಿರುವ ಸಚಿವ ರವಿ ಶಂಕರ್ ಪ್ರಸಾದ್, "ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಅವರ ಎಲ್ಲಾ ವಾದಗಳನ್ನು ಹೊಡೆದುರುಳಿಸಿದೆ. ಪಿಎಂ ಕೇರ್ಸ್ ಎಂಬುದು ಕೋವಿಡ್ ತರಹದ ತುರ್ತು ಪರಿಸ್ಥಿತಿಗಳಿ ಸಂದರ್ಭಗಳಲ್ಲಿ ನೆರವು ಪಡೆಯುವ ನೋಂದಾಯಿತ ಸಾರ್ವಜನಿಕ ಟ್ರಸ್ಟ್ ಆಗಿದೆ. ಈ ಹಣ ದುರುಪಯೋಗವಾಗಿಲ್ಲ.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪ್ರಾಮಾಣಿಕ ಸರ್ಕಾರವಾಗಿದೆ. ಆದರೆ, ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ರಾಷ್ಟ್ರದ ಸಂಕಲ್ಪವನ್ನು ದುರ್ಬಲಗೊಳಿಸುವ ಅವಕಾಶವನ್ನು ರಾಹುಲ್ ಗಾಂಧಿ ಎಂದಿಗೂ ಕಳೆದುಕೊಂಡಿಲ್ಲ" ಎಂದು ಕಿಡಿಕಾರಿದ್ದಾರೆ."ಮನಮೋಹನ್ ಸಿಂಗ್ ಯುಗದಲ್ಲಿ, ಪ್ರಧಾನಮಂತ್ರಿಯ ಪರಿಹಾರ ನಿಧಿಯಿಂದ ಹಣವನ್ನು ಬೇರೆಡೆಗೆ ತಿರುಗಿಸಿ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ನೀಡಲಾಗುತ್ತಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಬಿಜೆಪಿ ಸರ್ಕಾರ ಇತ್ತೀಚೆಗೆ ಈ ಎಲ್ಲಾ ಪುರಾವೆಗಳನ್ನು ಬಿಡುಗಡೆ ಮಾಡಿತ್ತು. ಸೋನಿಯಾ ಗಾಂಧಿ ಈ ಪ್ರತಿಷ್ಠಾನದ ಮುಖ್ಯಸ್ಥರಾಗಿದ್ದು, ಮಂಡಳಿಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಪಿ ಚಿದಂಬರಂ ಮತ್ತು ಮನಮೋಹನ್ ಸಿಂಗ್ ಸಹ ಇದ್ದರು" ಎಂದು ಸಚಿವ ರವಿ ಶಂಕರ್ ಪ್ರಸಾದ್ ಆರೋಪಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಜೊತೆಗೆ ಫೇಸ್‌ಬುಕ್‌ ನಂಟು; ಸಾಮಾಜಿಕ ಜಾಲತಾಣ ದಿಗ್ಗಜನ ಪ್ರಶ್ನಿಸಲು ಮುಂದಾದ ತರೂರ್‌ ನೇತೃತ್ವದ ಸ್ಥಾಯಿ ಸಮಿತಿ

ಪಿಎಂ ಕೇರ್ಸ್ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ವರ್ಗಾವಣೆ ಮಾಡಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಳೆದ ಮಂಗಳವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, "ಪಿಎಂ ಕೇರ್ಸ್ ನಿಧಿಯಿಂದ ಹಣವನ್ನು ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ) ವರ್ಗಾವಣೆ ಮಾಡುವಂತೆ ಆದೇಶಿಸಲು ನಿರಾಕರಿಸಿತ್ತು. ಅಲ್ಲದೆ, ಎರಡೂ ಸಂಪೂರ್ಣವಾಗಿ ವಿಭಿನ್ನ ರೀತಿಯ ದೇಣಿಗೆ ಎಂದು ಅಭಿಪ್ರಾಯಪಟ್ಟಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಿಗೆ ಟ್ವೀಟ್ ಮೂಲಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, "ಪಿಎಂ ಕೇರ್ಸ್ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ರಾಹುಲ್ ಗಾಂಧಿ ಮತ್ತು ಅವರ ಬಾಡಿಗೆಗೆ ಕಾರ್ಯಕರ್ತರಿಗೆ ನೀಡಿದ ದೊಡ್ಡ ಹೊಡೆತವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಸಹಚರರ ದುರುದ್ದೇಶಪೂರಿತ ಪ್ರಯತ್ನಗಳ ಹೊರತಾಗಿಯೂ ಸತ್ಯವು ಹೊಳೆಯುತ್ತದೆ ಎಂಬುದಕ್ಕೆ ಈ ತೀರ್ಪು ಸಾಕ್ಷಿ" ಎಂದು ಕಿಡಿಕಾರಿದ್ದರು.
Published by:MAshok Kumar
First published: