ನಮ್ಮ ಸಾವು ಕೂಡ ಮೇಡ್​ ಇನ್​ ಚೀನಾ ಅಂತ ಗೊತ್ತಿರಲಿಲ್ಲ: ರಾಮ್​ಗೋಪಾಲ್​ ವರ್ಮಾ

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಯಾವಾಗಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸೆಕ್ಸ್​ ಬಗೆಗಿನ ಮುಚ್ಚುಮರೆಯಿಲ್ಲದ ಹೇಳಿಕೆಗಳನ್ನು ಆಗಾಗ ನೀಡಿ ಸುದ್ದಿಯಾಗುತ್ತಾರೆ. 

ರಾಮ್​ಗೋಪಾಲ್​ ವರ್ಮಾ

ರಾಮ್​ಗೋಪಾಲ್​ ವರ್ಮಾ

 • Share this:
  ಮುಂಬೈ: ಭಾರತ ಸೇರಿದಂತೆ 70ಕ್ಕೂ ಹೆಚ್ಚು ದೇಶಗಳಲ್ಲಿ ಕೊರೋನಾ ವೈರಸ್ ಹರಡಿದ್ದು, 3000ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ಭಯಾನಕ ವೈರಸ್ ಇಡೀ ದೇಶದ ಜನರನ್ನು ಬೆಚ್ಚಿ ಬೀಳಿಸಿದ್ದರೆ, ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ವೈರಸ್ ಬಗ್ಗೆ ತಮಾಷೆ ಮಾಡಿದ್ದಾರೆ.

  'ನಮ್ಮ ಸಾವು ಕೂಡ ಮೇಡ್ ಇನ್ ಚೀನಾ ಆಗಿರುತ್ತದೆ ಎಂದು ನಾನು ಯೋಚಿಸಿರಲಿಲ್ಲ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

  "ಇದೊಂದೇ ಅಲ್ಲದೇ ಇನ್ನೊಂದು ಟ್ವೀಟ್​ನಲ್ಲಿ, ಪ್ರೀತಿಯ ವೈರಸ್, ಮೂರ್ಖನಂತೆ ಎಲ್ಲರನ್ನು ಬಲಿ ತೆಗೆದುಕೊಳ್ಳುವ ಮುನ್ನ ಯೋಚಿಸು ಯಾಕೆಂದರೆ ನೀನು ಪರಾವಲಂಬಿ ಜೀವಿ , ನಮ್ಮೊಂದಿಗೆ ನೀನು ಕೂಡ ಸಾಯುತ್ತೀಯ. ನನ್ನ ಮೇಲೆ ನಿನಗೆ ನಂಬಿಕೆ ಇಲ್ಲದಿದ್ದರೆ ಹೋಗಿ ವೈರಾಲಜಿಯನ್ನು ಕಲಿತುಕೊಂಡು ಬಾ. ಹಾಗಾಗಿ ನನ್ನ ಕೋರಿಕೆ ಏನೆಂದರೆ ನೀನು ಬದುಕು , ನಮಗೂ ಬದುಕಲು ಬಿಡು. ನಿನ್ನ ವಿವೇಚನೆ ನನ್ನ ಸಲಹೆಯನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ ಎಂದು ನಂಬಿದ್ದೇನೆ," ಎನ್ನವ ಮೂಲಕ ವೈರಸ್ಗೆ ಕಿವಿ ಮಾತು ಹೇಳಿದ್ದಾರೆ.

  Dear Virus, instead of being so dumb and killing everyone get educated that u too will die along with us because u are a parasite ..If u don’t believe me take a crash course in virology ..So my request to u is to live and let live ..I hope wisdom will prevail upon u  ಇನ್ನು ರಾಮ್ ಗೋಪಾಲ್ ವರ್ಮಾ ಅವರ ಈ ಟ್ವೀಟ್​ಗೆ ಹಲವರು ಪ್ರತಿಕ್ರಿಯಿಸಿದ್ದಾರೆ.  ಒಬ್ಬರು ವೈರಸ್ ಟ್ವಿಟ್ಟರ್ನಲ್ಲಿ ಇಲ್ಲ ಹಾಗಾಗಿ ನೀವು ಚೀನಾಗೆ ಹೋಗಿ, ವೈರಸ್ ಬಳಿ ಇದನ್ನು ಹೇಳಿ ಎಂದಿದ್ದಾರೆ. ಇನ್ನೊಬ್ಬರು ಅದ್ಭುತವಾದ ಜಾಣ್ಮೆ ಎಂದರೆ, ಮತ್ತೊಬ್ಬರು ಆಸ್ಪತ್ರೆಗಳಿಗೆ ಹೋಗಿ ವೈರಸ್ ಬಳಿ ಇದನ್ನು ಹೇಳಿ ಎಂದಿದ್ದಾರೆ.

  ಇದನ್ನೂ ಓದಿ: ಕೊರೋನಾ ಭಯ: ಏರ್​ಪೋರ್ಟ್​ಗೆ ಸಿಗ್ತಿಲ್ಲ ಕ್ಯಾಬ್​, ನಿಲ್ದಾಣಕ್ಕೆ ಕಾಲಿಡಲ್ಲ ಅಂತಾರೆ ಡ್ರೈವರ್​ಗಳು

  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಯಾವಾಗಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸೆಕ್ಸ್​ ಬಗೆಗಿನ ಮುಚ್ಚುಮರೆಯಿಲ್ಲದ ಹೇಳಿಕೆಗಳನ್ನು ಆಗಾಗ ನೀಡಿ ಸುದ್ದಿಯಾಗುತ್ತಾರೆ.

  ಇದನ್ನೂ ಓದಿ: ಸೆಕ್ಸ್ ಮಾಡಿದರೆ ಸೋಂಕು ತಗುಲುತ್ತಾ? ಸೋಂಕಿತರ ಬಳಿ ಇದ್ದರೆ ಹರಡುತ್ತಾ? ಇಲ್ಲಿವೆ ಕೊರೊನಾ ವೈರಸ್ ಬಗ್ಗೆ ಸಾಮಾನ್ಯ ಅನುಮಾನಗಳು

  ಭಾರತದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ಕೇರಳದಲ್ಲಿ ವರದಿಯಾಗಿತ್ತು, ಇತ್ತೀಚೆಗಷ್ಟೆ ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಗ್ಯ ಇಲಾಖೆ ಮತ್ತು ಸರ್ಕಾರ ಜನರಿಗೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ.

  ಇದನ್ನೂ ಓದಿ: ಮೋದಿ ಜೀ ಕೊರೋನಾ ವೈರಸ್​ನಿಂದ ಕಾಪಾಡಿ; ಮಾಸ್ಕ್​ಗಳಿಂದಲೂ ಪ್ರಚಾರಕ್ಕೆ ಮುಂದಾದ ಪಶ್ಚಿಮಬಂಗಾಳ ಬಿಜೆಪಿ
  First published: