Women's Online Safety ಬಗ್ಗೆ Network 18 ಅದ್ಭುತ ಕಾರ್ಯಕ್ರಮ, ಮಹಿಳೆಯರೆಲ್ಲಾ ತಪ್ಪದೇ ಇದನ್ನು ತಿಳಿಯಿರಿ

Network18 ಮತ್ತು Truecaller ಆಯೋಜಿಸಿರುವ  ‘ದಿ ಕಾಲ್ ಇಟ್ ಔಟ್ ಕಾನ್​ಕ್ಲೇವ್’ ಕಾರ್ಯಕ್ರಮದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಬಾಲಿವುಡ್ ತಾರೆ ರವೀನಾ ಟಂಡನ್, ದೆಹಲಿ ಪೊಲೀಸ್ ವಿಶೇಷ ಆಯುಕ್ತ ಶಾಲಿನಿ ಸಿಂಗ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಮಹಿಳೆಯರ ಆನ್‌ಲೈನ್ ಸುರಕ್ಷತೆಯ ಕುರಿತು ಆಯೋಜಿಸರುವ ಕಾರ್ಯಕ್ರಮ

ಮಹಿಳೆಯರ ಆನ್‌ಲೈನ್ ಸುರಕ್ಷತೆಯ ಕುರಿತು ಆಯೋಜಿಸರುವ ಕಾರ್ಯಕ್ರಮ

 • Share this:
  ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು (International Women's Day) ಮಹಿಳೆಯರ ಕಿರುಕುಳದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ItsNotOk ಅಭಿಯಾನವನ್ನು ನಡೆಸಲಾಯಿತು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಇದಾದ ಬಳಿಕ Network18 ಮತ್ತು Truecaller ಮಾರ್ಚ್ 29 ರಂದು 'ದಿ ಕಾಲ್ ಇಟ್ ಔಟ್ ಕಾನ್​ಕ್ಲೇವ್' (The Call It Out Conclave) ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ನವದೆಹಲಿಯಲ್ಲಿ (New Delhi) ಇಂದು ಈ ಕಾರ್ಯಕ್ರಮ ನಡೆಯಲಿದೆ.

  ಒಬೆರಾಯ್ ಹೋಟೆಲ್‌ನಲ್ಲಿ ಮಹಿಳೆಯರ ಕುರಿತಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ, ಇಂದಿನ ಡಿಜಿಟಲ್ (Digital) ಜಗತ್ತಿನಲ್ಲಿ ಆನ್‌ಲೈನ್ (Online) ಸುರಕ್ಷತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಮಹಿಳೆಯರಿಗೆ ಆನ್‌ಲೈನ್ ವೇದಿಕೆಯನ್ನು ಸುರಕ್ಷಿತಗೊಳಿಸಲು ಮತ್ತು ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ತೆಗೆದುಕೊಂಡ ಕ್ರಮಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬುದರ ಕುರಿತಾಗಿ ಚರ್ಚೆ ನಡೆಯಲಿದೆ.

  Network18 ಮತ್ತು Truecaller ಆಯೋಜಿಸಿರುವ  ‘ದಿ ಕಾಲ್ ಇಟ್ ಔಟ್ ಕಾನ್​ಕ್ಲೇವ್’ ಕಾರ್ಯಕ್ರಮದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಬಾಲಿವುಡ್ ತಾರೆ ರವೀನಾ ಟಂಡನ್, ದೆಹಲಿ ಪೊಲೀಸ್ ವಿಶೇಷ ಆಯುಕ್ತ ಶಾಲಿನಿ ಸಿಂಗ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

  ಸಂವಹನ ಸಚಿವಾಲಯದ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್ ಅವರ ವಿಶೇಷ ಭಾಷಣ ಮಾಡಲಿದ್ದಾರೆ. ದೆಹಲಿಯ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನ ಕೂಡ ವಿಶೇಷ ಭಾಷಣ ಮಾಡಲಿದ್ದಾರೆ.

  ಇದನ್ನೂ ಓದಿ: WhatsApp: ಮಾರ್ಚ್​ 31ರಿಂದ ಈ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ಕಾರ್ಯನಿರ್ವಹಿಸಲ್ಲ!

  ಈ ವಿಶೇಷ ಕಾರ್ಯಕ್ರಮದಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಮತ್ತು ಸಲಹೆಗಳ ಕುರಿತು ಪ್ರೇಕ್ಷಕರಿಗೆ ತಿಳುವಳಿಕೆ ನೀಡುವುದರ ಜೊತೆಗೆ, ಸ್ಪೀಕರ್‌ಗಳು ಸೈಬರ್ ಕಾನೂನುಗಳು  ಮತ್ತು ಕಿರುಕುಳದ ಪ್ರಕರಣಗಳನ್ನು ವರದಿ ಮಾಡಲು ಲಭ್ಯವಿರುವ ಸಹಾಯ ಮತ್ತು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಭವಿಷ್ಯದ ಪ್ರವಚನದ ಬಗ್ಗೆ ಮಾತನಾಡುತ್ತಾರೆ.

  CNBC-TV18 ನ ವ್ಯವಸ್ಥಾಪಕ ಸಂಪಾದಕರಾದ ಶೆರೀನ್ ಭಾನ್ ಮತ್ತು ಟ್ರೂಕಾಲರ್ ಸಹ-ಸಂಸ್ಥಾಪಕ ಮತ್ತು ಸಿಇಒ ಅಲನ್ ಮಮೆಡಿ ಅವರ ನಡುವಿನ ವಿಸ್ತೃತ ಚರ್ಚೆಗೆ ಸಾಕ್ಷಿಯಾಗುತ್ತಾರೆ. ಅದರ ಜೊತೆಗೆ ಪ್ರಚಾರ ಮತ್ತು ಸಮಾಜದ ಎಲ್ಲಾ ಪಾಲುದಾರರನ್ನು ಹೇಗೆ ಒಟ್ಟಿಗೆ ತರುತ್ತಿದ್ದಾರೆ, ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸುವುದರ ಜೊತೆಗೆ ತಮ್ಮ ಸಮಸ್ಯೆಗಳನ್ನು ಯಾವುದೇ ಕಾಳಜಿಯಿಲ್ಲದೆ ಹೇಳವಂತಹ ವೇದಿಕೆಯನ್ನು ತೆರೆದಿಟ್ಟಿದ್ದಾರೆ.

  ಇದನ್ನೂ ಓದಿ: Google Chrome Security Issue: ತಕ್ಷಣವೇ ಗೂಗಲ್ ಕ್ರೋಮ್ ಬ್ರೌಸರ್ ಅಪ್ಡೇಟ್ ಮಾಡಿ.. ಹ್ಯಾಕರ್​ಗಳು ಹ್ಯಾಕ್ ಮಾಡ್ತಾರೆ!

  'ದಿ ಕಾಲ್ ಇಟ್ ಔಟ್ ಕಾನ್​ಕ್ಲೇವ್' ಕಾರ್ಯಕ್ರಮದಲ್ಲಿ ರಾಜಕೀಯ ಕಾರ್ಯಕರ್ತೆ ಮತ್ತು ಶಾಸಕಿ, ಅತಿಶಿ ಅವರು ಭಾಗವಹಿಸಲಿದ್ದಾರೆ. ವಿನ್ಯಾಸಕಿ ಮತ್ತು ರಾಜಕಾರಣಿ ಶೈನಾ ಎನ್‌ಸಿ ಕಾಣಿಸಿಕೊಳ್ಳಲಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಮತ್ತು ಸಾಮಾಜಿಕ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ರಂಜನಾ ಕುಮಾರಿ,  ವಕೀಲ ಪುನೀತ್ ಭಾಸಿನ್, ಡಿಸಿಪಿ (ಐಎಫ್‌ಎಸ್‌ಒ), ದೆಹಲಿ ಪೊಲೀಸ್, ಕೆಪಿಎಸ್ ಮಲ್ಹೋತ್ರಾ, ಡಿಜಿಟಲ್ ಎಂಪವರ್‌ಮೆಂಟ್ ಫೌಂಡೇಶನ್ ಸಂಸ್ಥಾಪಕ ಮತ್ತು ನಿರ್ದೇಶಕ ಮತ್ತು ಡಿಜಿಟಲ್ ಎಂಪವರ್‌ಮೆಂಟ್ ಫೌಂಡೇಶನ್ ಸಂಸ್ಥಾಪಕ ಮತ್ತು ನಿರ್ದೇಶಕ ಒಸಾಮಾ ಮಂಜೆರ್ ಅವರು ಈ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ.

  Network18 ಮತ್ತು Truecaller ನಡೆಸುತ್ತಿರುವ 'ದಿ ಕಾಲ್ ಇಟ್ ಔಟ್ ಕಾನ್​ಕ್ಲೇವ್' ಕಾರ್ಯಕ್ರಮವು ಸಂಜೆ 6 ಗಂಟೆಗೆ ಸರಿಯಾಗಿ ಪ್ರಾರಂಭವಾಗುತ್ತದೆ. ಈ ಕಾರ್ಯಕ್ರವನ್ನು ಸಿಎನ್‌ಎನ್- ನ್ಯೂಸ್ 18 ಮತ್ತು ಸಿಎನ್‌ಬಿಸಿ-ಟಿವಿ 18 ಸೈಟ್ ಮತ್ತು ಯೂಟ್ಯೂಬ್, ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ.
  Published by:Harshith AS
  First published: