4ನೇ ತ್ರೈಮಾಸಿಕದಲ್ಲಿ ಶೇ.177ರಷ್ಟು ಏರಿಕೆ ಕಂಡ ರಿಲಯನ್ಸ್ ಜಿಯೋ; 2331 ಕೋಟಿ ನಿವ್ವಳ ಲಾಭ

ಫೇಸ್​ಬುಕ್​ 43,574 ಬಂಡವಾಳ ಹೂಡಿಕೆಯೊಂದಿಗೆ ಶೇ.9.99 ಪಾಲುದಾರಿಕೆ ಪಡೆದ ಬಳಿಕ ಪ್ರಬಲ ಹೂಡಿಕೆದಾರರು ಜಿಯೋ ಪ್ಲಾಟ್​ಫಾರಂನಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಜಾಗತಿಕವಾಗಿ ಇಂತಹ ಹೆಚ್ಚುವರಿ ಹೂಡಿಕೆದಾರರ ಪಾಲುದಾರಿಕೆಯ ಆಸಕ್ತಿಯನ್ನು ಜಿಯೋ ಮುಕ್ತವಾಗಿ ಸ್ವಾಗತಿಸಿದೆ.

news18-kannada
Updated:April 30, 2020, 8:38 PM IST
4ನೇ ತ್ರೈಮಾಸಿಕದಲ್ಲಿ ಶೇ.177ರಷ್ಟು ಏರಿಕೆ ಕಂಡ ರಿಲಯನ್ಸ್ ಜಿಯೋ; 2331 ಕೋಟಿ ನಿವ್ವಳ ಲಾಭ
ಜಿಯೋ
  • Share this:
ದೇಶದ ಅತಿದೊಡ್ಡ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರಿ 2020ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 6,348 ಕೋಟಿ ಆದಾಯ ಗಳಿಸಿದೆ ಎಂದು ಏಪ್ರಿಲ್​ 30ರ ವರದಿ ತಿಳಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ 11,640 ಕೋಟಿ ರೂ. ಲಾಭ ಮತ್ತು ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 10,362 ಕೋಟಿ ರೂ. ಇತ್ತು.

ಮಾರ್ಚ್ ತ್ರೈಮಾಸಿಕದಲ್ಲಿ ಆದಾಯವು 136,000 ಕೋಟಿ ರೂ., ಡಿಸೆಂಬರ್ ತ್ರೈಮಾಸಿಕದಲ್ಲಿ 152,939 ಕೋಟಿ ರೂ. ಹಾಗೂ ಹಿಂದಿನ ವರ್ಷದ ಇದೇ ಅವಧಿಯ ತ್ರೈಮಾಸಿಕ ಅವಧಿಯಲ್ಲಿ 138,659 ಕೋಟಿ ರೂಪಾಯಿಯಾಗಿತ್ತು ಎಂದು ಆರ್​ಐಎಲ್​ ತಿಳಿಸಿದೆ.

ರಿಲಯನ್ಸ್​ ಜಿಯೋ ನಿವ್ವಳ ಲಾಭವು ನಾಲ್ಕನೇ ತ್ರೈಮಾಸಿಕದಲ್ಲಿ ಶೇ.177ರಷ್ಟು ಏರಿಕೆ ಕಂಡಿದ್ದು 2,331 ಕೋಟಿ ರೂ. ಗಳಿಸಿದೆ. ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ಟೆಲಿಕಾಂ ಉದ್ಯಮವು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 840 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ರಿಲಯನ್ಸ್ ಇಂಡಸ್ಟ್ರಿ ಘೋಷಣೆಯ ಪ್ರಮುಖಾಂಶಗಳು

ಭಾರತದ ಅತಿದೊಡ್ಡ ಹಕ್ಕುಗಳ ವಿತರಣೆ 53,125 ಕೋಟಿ ರೂ. 1:15 ಅನುಪಾತದಲ್ಲಿ ಪ್ರತಿ ಷೇರಿಗೆ 1,257 ರೂ. ರಿಲಯನ್ಸ್‌ ಬೆಳವಣಿಗೆಯ ವ್ಯವಹಾರಗಳಲ್ಲಿ ಎಲ್ಲಾ ಷೇರುದಾರರ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸಲು ಹಕ್ಕುಗಳ ಹಂಚಿಕೆ.

ಡಿಜಿಟಲ್ ವ್ಯವಹಾರವು ದಾಖಲೆಯ ತ್ರೈಮಾಸಿಕ ಇಬಿಐಟಿಡಿಎ 6,452 ಕೋಟಿ ರೂ.ಗಳೊಂದಿಗೆ ದೊಡ್ಡ ಬೆಳವಣಿಗೆ ಸಾಧಿಸಿದೆ. ಇದು ವರ್ಷದಿಂದ ವರ್ಷಕ್ಕೆ 42.9 ರಷ್ಟು ಹೆಚ್ಚಾಗಿದೆ. ಡಿಜಿಟಲ್ ಸೇವೆಗೆ ವಾರ್ಷಿಕ ಆದಾಯ ಶೇ. 40.7 ಮತ್ತು ಚಿಲ್ಲರೆ ವ್ಯಾಪಾರ  24.8 ರಷ್ಟು ಆದಾಯವನ್ನು ದಾಖಲಿಸಿದೆ.

ಆರ್‌ಐಎಲ್ ಪ್ರತಿ ಷೇರಿಗೆ 6.50 ರೂ. ಲಾಭಾಂಶ ಪ್ರಕಟಿಸಿದೆ.ಫೇಸ್​ಬುಕ್​ 43,574 ಬಂಡವಾಳ ಹೂಡಿಕೆಯೊಂದಿಗೆ ಶೇ.9.99 ಪಾಲುದಾರಿಕೆ ಪಡೆದ ಬಳಿಕ ಪ್ರಬಲ ಹೂಡಿಕೆದಾರರು ಜಿಯೋ ಪ್ಲಾಟ್​ಫಾರಂನಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಜಾಗತಿಕವಾಗಿ ಇಂತಹ ಹೆಚ್ಚುವರಿ ಹೂಡಿಕೆದಾರರ ಪಾಲುದಾರಿಕೆಯ ಆಸಕ್ತಿಯನ್ನು ಜಿಯೋ ಮುಕ್ತವಾಗಿ ಸ್ವಾಗತಿಸಿದೆ.

ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ಅನ್ನು ಸಿಎಂಡಿ ಮುಖೇಶ್ ಅಂಬಾನಿ ಮುನ್ನಡೆಸುತ್ತಿದ್ದು, ಮಾರಕ ಕೊರೋನಾ ಬಿಕ್ಕಟ್ಟು ಕಡಿಮೆಯಾಗುವವರೆಗೂ ತಮ್ಮ ಸಂಬಳವನ್ನು ತ್ಯಜಿಸಿದ್ದಾರೆ.

ಇದನ್ನು ಓದಿ: ಕೋವಿಡ್-19 ಬಿಕ್ಕಟ್ಟು: ಇಡೀ ಸಂಬಳ ಬಿಟ್ಟುಕೊಟ್ಟ ಅಂಬಾನಿ; 15 ಲಕ್ಷದವರೆಗಿನ ಸಂಬಳದ ಉದ್ಯೋಗಿಗಳಿಗಿಲ್ಲ ವೇತನ ಕಡಿತ
First published: April 30, 2020, 8:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading