ಹೊಸ ನಕ್ಷೆ ವಿಚಾರದಲ್ಲಿ ಭಾರತ ಮಾತುಕತೆಗೆ ಕರೆದರೂ ಕಿವಿಗೊಡದೆ ಸಂವಿಧಾನ ತಿದ್ದುಪಡಿ ಮಾಡಿತಾ ನೇಪಾಳ?

ಭಾರತದ ಗಡಿಭಾಗದೊಳಗೆ ಇರುವ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳು ತಮಗೆ ಸೇರಿದ್ದೆಂಬುದು ನೇಪಾಳದ ವಾದ. ಈ ಮೂರು ಪ್ರದೇಶಗಳು ಭಾರತಕ್ಕೆ ಗಡಿ ನಿರ್ವಹಣೆ ವಿಚಾರದಲ್ಲಿ ಬಹಳ ಮಹತ್ವದ್ದು.

Vijayasarthy SN | news18
Updated:June 15, 2020, 9:20 PM IST
ಹೊಸ ನಕ್ಷೆ ವಿಚಾರದಲ್ಲಿ ಭಾರತ ಮಾತುಕತೆಗೆ ಕರೆದರೂ ಕಿವಿಗೊಡದೆ ಸಂವಿಧಾನ ತಿದ್ದುಪಡಿ ಮಾಡಿತಾ ನೇಪಾಳ?
ನೇಪಾಳದ ಹೊಸ ನಕ್ಷೆ ತೋರಿಸುತ್ತಿರುವ ಪ್ರಧಾನಿ ಕೆಪಿ ಶರ್ಮಾ ಓಲಿ
  • News18
  • Last Updated: June 15, 2020, 9:20 PM IST
  • Share this:
ನವದೆಹಲಿ(ಜೂನ್ 15): ಭಾರತಕ್ಕೆ ಸೇರಿದ ಮೂರು ಪ್ರದೇಶಗಳು ತನ್ನ ಭೂಭಾಗಕ್ಕೆ ಸೇರಿದ್ದೆಂದು ನೇಪಾಳ ವಾದಿಸಿದೆ. ತನ್ನ ಹೊಸ ನಕ್ಷೆಯಲ್ಲಿ ಈ ನಾಲ್ಕು ಪ್ರದೇಶಗಳನ್ನ ಸೇರಿಸಿದೆ. ಆ ನಕ್ಷೆಯನ್ನು ಅಧಿಕೃತಗೊಳಿಸಲು ಸಂವಿಧಾನದಲ್ಲಿ ತಿದ್ದುಪಡಿ ತಂದು ಸಂಸತ್​ನಲ್ಲೂ ಅನುಮೋದನೆ ಪಡೆದಿದೆ. ಆದರೆ, ಸಂವಿಧಾನ ತಿದ್ದುಪಡಿ ಮಾಡುವ ಮುನ್ನವೇ ಭಾರತ ತನ್ನ ನೆರೆ ರಾಷ್ಟ್ರಕ್ಕೆ ಮಾತುಕತೆಗೆ ಆಹ್ವಾನ ನೀಡಿತ್ತು. ಆದರೆ, ಈ ಮಾತುಕತೆಯ ಫಲಿತಾಂಶ ಹೀಗೇ ಇರುತ್ತದೆಂದು ಪೂರ್ವಭಾವಿಸಿ ನೇಪಾಳ ತನ್ನ ಹಾದಿಯಲ್ಲೇ ನಡೆಯಿತು ಎಂದು ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.

“ಮಸೂದೆಗೆ ಅಂಗೀಕಾರ ದೊರೆತಂತೆ ನೇಪಾಳವು ಈ ಮಾತುಕತೆಯ ಫಲಿತಾಂಶವನ್ನ ಪೂರ್ವನಿಶ್ಚಿಯ ಮಾಡಿಕೊಂಡಿದ್ದಂತಿದೆ…. ಆದಾಗ್ಯೂ ಮುಂದಿನ ದಿನಗಳಲ್ಲಿ ಮಾತುಕತೆಗೆ ಸಕಾರಾತ್ಮಕ ಮತ್ತು ಪೂರಕ ವಾತಾವರಣ ನಿರ್ಮಿಸುವ ಹೊಣೆ ನೇಪಾಳ ಸರ್ಕಾರದ್ದಾಗಿದೆ” ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಭಾರತದ ಗಡಿಭಾಗದೊಳಗೆ ಇರುವ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳು ತಮಗೆ ಸೇರಿದ್ದೆಂಬುದು ನೇಪಾಳದ ವಾದ. ಈ ಮೂರು ಪ್ರದೇಶಗಳು ಭಾರತಕ್ಕೆ ಗಡಿ ನಿರ್ವಹಣೆ ವಿಚಾರದಲ್ಲಿ ಬಹಳ ಮಹತ್ವದ್ದು. ಆದರೆ, ನೇಪಾಳ ಈಗ ಇವು ತನ್ನ ಭೂಭಾಗ ಎನ್ನುತ್ತಿರುವುದು ಭಾರತಕ್ಕೆ ಕಳವಳಕಾರಿ ಸಂಗತಿಯೇ. ಈ ಪ್ರದೇಶಗಳನ್ನ ಒಳಗೊಂಡಿರುವ ಹೊಸ ರಾಷ್ಟ್ರ ನಕ್ಷೆಯನ್ನ ನೇಪಾಳ ರೂಪಿಸಿದೆ. ಶನಿವಾರ ಈ ನಕ್ಷೆಗೆ ಸಂಸತ್​ನಲ್ಲಿ ಒಮ್ಮತದ ಅಂಗೀಕಾರ ದೊರೆತಿದೆ.

ನೇಪಾಳದ ಈ ಹೊಸ ರಾಜಕೀಯ ನಕ್ಷೆಯನ್ನ ಭಾರತ ಸಾರಾಸಗಟಾಗಿ ತಿರಸ್ಕರಿಸಿದೆ. ಈ ರೀತಿ ಕೃತಕವಾಗಿ ನಕ್ಷೆ ಉಬ್ಬಿಸುವುದು ತರವಲ್ಲ. ನೇಪಾಳದ ಬೇಡಿಕೆ ನ್ಯಾಯಯುತವಾಗಿಲ್ಲ ಎಂದು ಕೇಂದ್ರ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಹೊಸ ನಕ್ಷೆಗೆ ಮುಂದಾಗಿರುವ ನೇಪಾಳಕ್ಕೆ ಎರಡೂ ದೇಶಗಳ ಐತಿಹಾಸಿಕ ಸ್ನೇಹ ನೆನಪಿಸಿಕೊಟ್ಟ ಭಾರತ

ಅಚ್ಚರಿಯ ವಿಷಯವೆಂದರೆ, ನೇಪಾಳದಲ್ಲಿ ಪರಸ್ಪರ ಉಗ್ರವಾಗಿ ಹರಿಹಾಯ್ದುಕೊಳ್ಳುವ ಅಲ್ಲಿನ ಪಕ್ಷಗಳು ಈ ನಕ್ಷೆ ವಿಚಾರದಲ್ಲಿ ಸಂಪೂರ್ಣ ಏಕತೆ ತೋರಿವೆ. ವಿಪಕ್ಷಗಳಾದ ನೇಪಾಳ ಕಾಂಗ್ರೆಸ್, ರಾಷ್ಟ್ರೀಯ ಜನತಾ ಪಾರ್ಟಿ, ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ ಈ ಮಸೂದೆ ಪರವೇ ಮತ ಚಲಾಯಿಸಿದವು.

ಇನ್ನು, ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ಭಾರತದ ವಿರುದ್ಧ ಆಗಾಗ ವಿಷ ಕಾರುತ್ತಲೇ ಬಂದಿದ್ಧಾರೆ. ಕೆಲ ವರ್ಷಗಳ ಹಿಂದೆ ಭಾರತ ನೇಪಾಳಕ್ಕೆ ಅಗತ್ಯ ವಸ್ತುಗಳ ಸರಬರಾಜು ನಿಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 2016ರಲ್ಲಿ ತನ್ನ ಸರ್ಕಾರ ಪತನಗೊಳ್ಳಲು ಭಾರತವೇ ಕಾರಣ ಎಂದು ದೂಷಿಸಿದ್ದರು. ಈ ವರ್ಷ ಕೊರೋನಾ ವೈರಸ್ ಬಿಕ್ಕಟ್ಟ ಎದುರಾದಾಗ ನೇಪಾಳಕ್ಕೆ ಕೊರೋನಾ ವೈರಸ್ ಬರಲು ಮತ್ತು ಹರಡಲು ಭಾರತವೇ ಕಾರಣ ಎಂದು ಆರೋಪಿಸಿದ್ದಾರೆ.

ಕೊರೋನಾ ವಿಚಾರದಲ್ಲಿ ನೇಪಾಳ ಪ್ರಧಾನಿಯ ಈ ಆರೋಪಗಳನ್ನ ಭಾರತ ಬಲವಾಗಿ ನಿರಾಕರಿಸಿದೆ. ಕೊರೋನಾ ಬಿಕ್ಕಟ್ಟಿನಲ್ಲಿ ನೇಪಾಳಕ್ಕೆ ಭಾರತ ಎಲ್ಲಾ ರೀತಿಯ ಸಹಕಾರ ನೀಡಿದೆ. ವಿಮಾನ ಸಾಗಣೆ, ನೇಪಾಳಿಗರ ರಕ್ಷಣೆ, ಔಷಧಗಳ ವಿತರಣೆ ಇತ್ಯಾದಿಯಲ್ಲಿ ಭಾರತ ಸಾಕಷ್ಟು ಸಹಾಯ ಮಾಡಿದೆ. ಆದರೂ ಭಾರತವನ್ನು ದೂಷಿಸುತ್ತಿರುವುದು ನೇಪಾಳದ ರಾಜಕೀಯ ದುರುದ್ದೇಶವನ್ನ ತೋರಿಸುತ್ತದೆ ಎಂಬುದು ಕೇಂದ್ರ ಸರ್ಕಾರದ ಮೂಲಗಳು ಹೇಳುತ್ತವೆ.
First published: June 15, 2020, 9:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading