ಬಿಹಾರದ ಕಿಶನ್​ಗಂಜ್ ಗಡಿಭಾಗದಲ್ಲಿ ನೇಪಾಳ ಪೊಲೀಸರಿಂದ ಗುಂಡಿನ ದಾಳಿ; ಒಬ್ಬರಿಗೆ ಗಾಯ

ಕಳೆದ ಒಂದು ತಿಂಗಳ ಅವಧಿಯಲ್ಲಿ ಬಿಹಾರದ ಗಡಿಭಾಗದಲ್ಲಿ ನೇಪಾಳ ಪೊಲೀಸರು ಭಾರತೀಯ ನಾಗರಿಕರ ಮೇಲೆ ಎರಡನೇ ಬಾರಿ ಗುಂಡಿನ ದಾಳಿ ನಡೆಸಿದ್ದಾರೆ.

news18
Updated:July 20, 2020, 8:49 AM IST
ಬಿಹಾರದ ಕಿಶನ್​ಗಂಜ್ ಗಡಿಭಾಗದಲ್ಲಿ ನೇಪಾಳ ಪೊಲೀಸರಿಂದ ಗುಂಡಿನ ದಾಳಿ; ಒಬ್ಬರಿಗೆ ಗಾಯ
ಸಾಂದರ್ಭಿಕ ಚಿತ್ರ
  • News18
  • Last Updated: July 20, 2020, 8:49 AM IST
  • Share this:
ಪಾಟ್ನಾ: ಭಾರತದ ಮೇಲೆ ನೇಪಾಳದ ಗಡಿತಂಟೆ ಮುಂದುವರಿದಂತೆ ಕಾಣುತ್ತಿದೆ. ನೇಪಾಳದ ಪೊಲೀಸರಿಂದ ಭಾರತೀಯ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ಮತ್ತೊಂದು ಘಟನೆ ನಿನ್ನೆ ವರದಿಯಾಗಿದೆ. ಬಿಹಾರದ ಕಿಶನ್​ಗಂಜ್​ನಲ್ಲಿರುವ ಗಡಿಭಾಗದಲ್ಲಿ ಮೂವರು ಭಾರತೀಯ ನಾಗರಿಕರ ಮೇಲೆ ನೇಪಾಳ ಪೊಲೀಸರು ಗುಂಡು ಹೊಡೆದಿದ್ಧಾರೆ. ಈ ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗಾಯವಾಗಿರುವುದು ತಿಳಿದುಬಂದಿದೆ. ಈ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಕಿಶನ್​ಗಂಜ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಭಾರತದ ಭಾಗವಾಗಿರುವ ಕಾಲಾಪಾನಿ, ಲಿಪುಲೇಖ ಮತ್ತು ಲಿಂಪಿಯಧುರಾ ಪ್ರದೇಶಗಳು ತನಗೆ ಸೇರಿದ್ದೆಂದು ನೇಪಾಳ ಇತ್ತೀಚೆಗೆ ವಿವಾದ ಹುಟ್ಟುಹಾಕಿದೆ. ಈ ಪ್ರದೇಶಗಳನ್ನ ಒಳಗೊಂಡಿರುವ ನೇಪಾಳದ ಹೊಸ ಭೂಪಟಕ್ಕೆ ಅಲ್ಲಿನ ಸಂಸತ್ ಒಪ್ಪಿಗೆ ನೀಡಿದೆ. ಈ ಮೂಲಕ ಭಾರತಕ್ಕೆ ನೇಪಾಳ ಹೊಸ ಗಡಿ ತಲೆನೋವು ಸೃಷ್ಟಿಸಿದೆ.

ಇನ್ನು, ನಿನ್ನೆ ನಡೆದ ಗುಂಡಿನ ದಾಳಿಯು ಬಿಹಾರದ ಗಡಿಭಾಗದಲ್ಲಿ ಒಂದು ತಿಂಗಳಲ್ಲಿ ನೇಪಾಳ ನಡೆಸಿದ ಗಡಿತಂಟೆಯ ಎರಡನೇ ಘಟನೆಯಾಗಿದೆ. ಕಳೆದ ತಿಂಗಳು ಬಿಹಾರದ ಸೀತಾಮಡಿ ಎಂಬಲ್ಲಿನ ಗಡಿಭಾಗದಲ್ಲಿ ನೇಪಾಳ ಶಸ್ತ್ರ ಪೊಲೀಸ್ ಪಡೆಯವರು ಭಾರತದ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಒಬ್ಬ ಭಾರತೀಯ ಬಲಿಯಾಗಿದ್ದರು. ಬೇರಿಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿತ್ತು.

ಇದನ್ನೂ ಓದಿ: ದಿನ ಬಿಟ್ಟು ದಿನ ಡೀಸೆಲ್ ಬೆಲೆ ಏರಿಕೆ; 12 ದಿನದಲ್ಲಿ 7 ಬಾರಿ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ಚೀನಾದೊಂದಿಗೆ ಸಖ್ಯ ಹೆಚ್ಚಿಸಿಕೊಳ್ಳುತ್ತಿರುವಂತೆಯೇ ನೇಪಾಳ ಭಾರತದ ಜೊತೆ ಗಡಿತಂಟೆ ನಡೆಸುವುದು ಹೆಚ್ಚಾಗುತ್ತಿದೆ. ಗಡಿ ವಿಚಾರದ ಜೊತೆಗೆ ಇತ್ತೀಚೆಗೆ ನೇಪಾಳದ ಅಯೋಧ್ಯೆ ವಿಚಾರ ಕೂಡ ಪ್ರಸ್ತಾಪವಾಗಿ ವಿವಾದವಾಗಿದೆ. ಶ್ರೀರಾಮ ಜನಿಸಿದ ಅಯೋಧ್ಯೆ ನಗರ ಉತ್ತರ ಪ್ರದೇಶದಲ್ಲಿಲ್ಲ, ನೇಪಾಳದಲ್ಲಿದೆ. ರಾಮ ಭಾರತೀಯನಲ್ಲ, ನೇಪಾಳಿ ಎಂದು ಅಲ್ಲಿನ ಪ್ರಧಾನಿ ಕೆ.ಪಿ. ಓಲಿ ಹೇಳಿದ್ಧಾರೆ.
Published by: Vijayasarthy SN
First published: July 20, 2020, 8:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading