ಬಿಹಾರದ ಗಡಿಯಲ್ಲಿ ನೇಪಾಳ ಪೊಲೀಸರಿಂದ ಗುಂಡಿನ ದಾಳಿ; ಓರ್ವ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಸ್ಥಳೀಯರು ಮತ್ತು ನೇಪಾಳದ ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ನಡುವೆ ಈ ಘಟನೆ ನಡೆದಿದೆ ಎಂದು ಪಾಟ್ನಾ ಗಡಿನಾಡಿನ ಸಶಸ್ತ್ರ ಪಡೆಯ ಇನ್ಸ್‌ಪೆಕ್ಟರ್ ಜನರಲ್ ಸಂಜಯ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

MAshok Kumar | news18-kannada
Updated:June 12, 2020, 3:18 PM IST
ಬಿಹಾರದ ಗಡಿಯಲ್ಲಿ ನೇಪಾಳ ಪೊಲೀಸರಿಂದ ಗುಂಡಿನ ದಾಳಿ; ಓರ್ವ ಸಾವು, ಇಬ್ಬರ ಸ್ಥಿತಿ ಚಿಂತಾಜನಕ
ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಸ್ಥಳೀಯರು.
  • Share this:
ಬಿಹಾರ (ಜೂನ್‌ 12); ಭಾರತ ನೇಪಾಳ ಗಡಿಭಾಗವಾದ ಬಿಹಾರದ ಸೀತಾಮಾರ್ಹಿ ಜಿಲ್ಲೆಯಲ್ಲಿ ನೇಪಾಳ ಪೊಲೀಸರು ನಡೆಸಿರುವ ಗುಂಡಿನ ದಾಳಿಗೆ ಓರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಥಳೀಯರು ಮತ್ತು ನೇಪಾಳದ ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ನಡುವೆ ಈ ಘಟನೆ ನಡೆದಿದೆ ಎಂದು ಪಾಟ್ನಾ ಗಡಿನಾಡಿನ ಸಶಸ್ತ್ರ ಪಡೆಯ ಇನ್ಸ್‌ಪೆಕ್ಟರ್ ಜನರಲ್ ಸಂಜಯ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ಪ್ರದೇಶವನ್ನು ಪ್ರವೇಶಿಸುವ ಸೀತಾಮಾರ್ಹಿ ಜಿಲ್ಲೆಯ ಸ್ಥಳೀಯರು ಮತ್ತು ನೇಪಾಳದ ಎಪಿಎಫ್ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ಶುರುವಾಗಿದೆ. ನಂತರ ಇದು ದೊಡ್ಡ ಗಲಾಟೆಯಾಗಿ ಬದಲಾಗಿದೆ. ಹೀಗಾಗಿ ನೇಪಾಳದ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಭಾರತೀಯ ವ್ಯಕ್ತಿ ಸಾವನ್ನಪ್ಪಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಟ್ವಿಟರ್​ನಿಂದ ಮಹತ್ವದ ಕ್ರಮ; ಚೀನಾಗೆ ಸಂಬಂಧಿಸಿದ 1.70 ಲಕ್ಷ ಖಾತೆಗಳು ರದ್ದು

ಅಲ್ಲದೆ, ಈ ವಿಚಾರ ಪಾಟ್ನಾ ಗಡಿನಾಡಿನ ಸೀಮಾ ಪಡೆ ಭಾಗಿಯಾಗಿಲ್ಲ ಎಂದು ಬಿಹಾರದ ಐಜಿ ತಿಳಿಸಿದ್ದಾರೆ. ಘಟನೆಯ ಬಳಿಕ ಸ್ಥಳೀಯ ಪೊಲೀಸರು ಮತ್ತು ಎಸ್‌ಎಸ್‌ಬಿಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿದುಬಂದಿದೆ.
First published: June 12, 2020, 3:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading