‘ಸ್ನೇಹಿತ’ ಮೋದಿಯನ್ನು ಹಾಡಿ ಹೊಗಳಿದ ನೇಪಾಳ ಪ್ರಧಾನಿ Sher Bahadur Deuba.. ಕಾರಣವೇನು?

ನೇಪಾಳದ ಪ್ರಧಾನಿಯೂ ಸಹ ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಲು ಹಿಂದೆ ಬೀಳಲಿಲ್ಲ. ಅವರು, "ಕೋವಿಡ್-19 ಅನ್ನು ನಿರ್ವಹಿಸಿದ ಭಾರತದ ಬಗೆ ಅತ್ಯಂತ ಮೆಚ್ಚುಗೆದಾಯಕವಾದದ್ದು, ನಮಗೆ ಮೊದಲ ಕೊರೋನಾ ವಿರೋಧಿ ಲಸಿಕೆ ಸಿಕ್ಕಿದ್ದೆ ನವದೆಹಲಿಯಿಂದ" ಎಂದು ಹೊಗಳಿದರು.

ಮೋದಿ, ಶೇರ್​ ಬಹದ್ದೂರ್​ ಭೇಟಿ

ಮೋದಿ, ಶೇರ್​ ಬಹದ್ದೂರ್​ ಭೇಟಿ

 • Share this:
  ಪ್ರಸ್ತುತ ರಷ್ಯಾ-ಉಕ್ರೇನ್ ಯುದ್ಧವು (Russia Ukraine War) ಜಾಗತಿಕ ವಲಯದಲ್ಲಿ ವಿಶ್ವದ ಸ್ಥಾನಮಾನಗಳನ್ನೇ ಬದಲಿಸುವಂತಹ ಸಂಕೇತಗಳನ್ನು ಒಂದೆಡೆ ನೀಡುತ್ತಿದೆ ಎಂದರೆ ತಪ್ಪಾಗಲಾರದು. ಇಂತಹ ಸಂದರ್ಭದಲ್ಲಿ ವಿಶ್ವದಲ್ಲೇ ಭಾರತವು (India) ಹಿಂದೆಂದಿಗಿಂತಲೂ ಹೆಚ್ಚಿನ ಗಮನ ಸೆಳೆಯುತ್ತಿದೆ ಎಂದರೂ ತಪ್ಪಿಲ್ಲ. ಈಗ ಎಲ್ಲ ದೇಶಗಳ ಗಮನ ಸದ್ಯ ಭಾರತದತ್ತಲೇ ನೆಟ್ಟಿದ್ದು ಇದಕ್ಕೆ ಪ್ರಮುಖ ಕಾರಣ ಭಾರತ ಮುಂಚಿನಿಂದಲೂ ಪಾಲಿಸಿಕೊಂಡು ಬರುತ್ತಿರುವ ಹಾಗೂ ಈಗಲೂ ಕಟಿಬಧವಾಗಿರುವ ತಟಸ್ಥ ವಿದೇಶಿ ನೀತಿಯೇ (Foreign Policy) ಕಾರಣ ಎಂದು ಹೇಳಬಹುದು.ಕಳೆದ ಕೆಲ ಸಮಯದಿಂದ ಭಾರತಕ್ಕೆ ದೊಡ್ಡ ದೊಡ್ಡ ದೇಶಗಳ ವಿದೇಶ ವ್ಯವಹಾರಗಳ ಸಚಿವರು, ಕಾರ್ಯದರ್ಶಿಗಳು ನವದೆಹಲಿಯತ್ತ ಪರೇಡ್ ಮಾಡುತಲೇ ಇದ್ದಾರೆ. ಇದೀಗ ಶುಕ್ರವಾರದಂದು ನೇಪಾಳದ ಪ್ರಧಾನಿಯಾದ ಶೇರ್ ಬಹದ್ದೂರ್ ದೆವುಬಾ (Nepal PM Sher Bahadur Deuba) ಅವರು ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎರಡೂ ದೇಶಗಳ ಮಧ್ಯೆ ಸಂಬಂಧಗಳನ್ನು ಮತ್ತಷ್ಟು ಸುಧಾರಿಸುವ ಬಗ್ಗೆ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.

  ಇದನ್ನೂ ಓದಿ: Uttar Pradesh: ಭಾರೀ ರೈಲು ಅಪಘಾತ ತಪ್ಪಿಸಲು ಉಟ್ಟ ಸೀರೆ ಬಿಚ್ಚಿ ರೆಡ್ ಸಿಗ್ನಲ್ ಕೊಟ್ಟ ಹಳ್ಳಿ ಮಹಿಳೆ

  ಭಾರತ-ನೇಪಾಳ ಸಂಬಂಧಗಳ ಸುಧಾರಣೆ

  ನೇಪಾಳದ ಪ್ರಧಾನಿ ಭೇಟಿಯ ಬಳಿಕ ಭಾರತದ ಪ್ರಧಾನಿ ಮೋದಿ ಅವರು, ಶೇರ್ ಬಹದ್ದೂರ್ ಅವರನ್ನು "ಭಾರತದ ಹಳೆಯ ಮಿತ್ರ" ಎಂದು ಶ್ಲಾಘಿಸಿದ್ದಲ್ಲದೆ ಭಾರತ ಮತ್ತು ನೇಪಾಳ ಜನರ ಮಧ್ಯೆ ಇರುವ ಪರಸ್ಪರ ಸಂಬಂಧವನ್ನು ಬಹುಶಃ ಜಗತ್ತಿನಲ್ಲಿ ಮತ್ತಿನ್ನೆಲ್ಲೂ ಕಾಣಲಾಗದು ಎಂದು ಬಣ್ಣಿಸಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅವರು, ನೇಪಾಳದ ಪ್ರಧಾನಿಯಾಗಿ ಬಹದ್ದೂರ ಅವರ ಭಾರತಕ್ಕೆ ಇದು ಐದನೇ ಭೇಟಿಯಾಗಿದೆ. ಭಾರತ-ನೇಪಾಳ ಸಂಬಂಧಗಳ ಸುಧಾರಣೆಯಲ್ಲಿ ಅವರು ಅತ್ಯಂತ ಮಹತ್ವದ ಪಾತ್ರವಹಿಸಿದ್ದಾರೆಂದು ಹೇಳಿದ್ದು ಎರಡೂ ದೇಶಗಳ ಮಧ್ಯದ ಸ್ನೇಹ ಹಾಗೂ ಪರಸ್ಪರ ಜನರ ಮಧ್ಯದ ಸಂಬಂಧ ಜಗತ್ತಿನಲ್ಲೇ ಎಲ್ಲೂ ಕಾಣಸಿಗದು ಎಂದು ಪ್ರಶಂಸಿಸಿದ್ದಾರೆ.
  ಹಿಂದೊಮ್ಮೆ ಭಾರತ-ನೇಪಾಳ ಮಧ್ಯದ ಸಂಬಂಧ ಸ್ವಲ್ಪ ವಾಲುತ್ತಿದ್ದಂತಹ ಸಂದರ್ಭ ಎದುರಾಗಿತ್ತಾದರೂ ಬಹದ್ದೂರ್ ಅವರು ಪ್ರಧಾನಿ ಆದಾಗಿನಿಂದ ಈ ಸಂಬಂಧ ಸುಧಾರಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಈಗ ಅದನ್ನು ಮತ್ತೊಂದು ಉತುಂಗಕ್ಕೆ ಒಯ್ಯುವ ದೃಷ್ಟಿಯಿಂದ ಮೂರು ದಿನಗಳ ಕಾಲ ಭಾರತದ ಭೇಟಿಗಾಗಿ ಶುಕ್ರವಾರದಂದು ನವದೆಹಲಿಗೆ ಆಗಮಿಸಿದರು.

  ಸಮಾನ ಮನಸ್ಥಿತಿಯನ್ನು ಹೊಂದಿದ್ದೇವೆ

  ಈ ಸಂದರ್ಭದಲ್ಲಿ ಬಹದ್ದೂರ್ ಅವರನ್ನು ಭೇಟಿ ಮಾಡಿದ ನಂತರ ಮೋದಿ ಅವರು, "ನಾವು ನಮ್ಮಿಬ್ಬರ ಸಹಯೋಗಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಮೇಲೆ ಚರ್ಚೆ ಮಾಡಿದ್ದೇವೆ, ನಮ್ಮ ಹಲವು ಯೋಜನೆಗಳ ಕುರಿತು ಪರಿಶೀಲನೆ ನಡೆಸಿದ್ದು ಭವಿಷ್ಯದ ನಕ್ಷೆಯ ಬಗ್ಗೆಯೂ ವಿವರವಾಗಿ ಚರ್ಚೆ ನಡೆಸಿದ್ದೇವೆ. ಶಕ್ತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಅವಕಾಶಗಳ ಲಾಭಗಳನ್ನು ಇಬ್ಬರೂ ಸಹಯೋಗದ ಮೂಲಕ ಹಂಚಿಕೊಳ್ಳುವ ಬಗ್ಗೆ ಸಮಾನ ಮನಸ್ಥಿತಿಯನ್ನು ಹೊಂದಿದ್ದೇವೆ" ಎಂದು ಹೇಳಿದರು.

  ಕೊರೊನಾ ಕಷ್ಟ ಕಾಲದಲ್ಲಿ ಕೈ ಹಿಡಿದ ಭಾರತ 

  ಈ ಮಧ್ಯದಲ್ಲಿ ನೇಪಾಳದ ಪ್ರಧಾನಿಯೂ ಸಹ ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಲು ಹಿಂದೆ ಬೀಳಲಿಲ್ಲ. ಅವರು, "ಕೋವಿಡ್-19 ಅನ್ನು ನಿರ್ವಹಿಸಿದ ಭಾರತದ ಬಗೆ ಅತ್ಯಂತ ಮೆಚ್ಚುಗೆದಾಯಕವಾದದ್ದು, ನಮಗೆ ಮೊದಲ ಕೊರೋನಾ ವಿರೋಧಿ ಲಸಿಕೆ ಸಿಕ್ಕಿದ್ದೆ ನವದೆಹಲಿಯಿಂದ" ಎಂದು ಹೊಗಳಿದರು. ಅಲ್ಲದೆ, ಮೋದಿ ಆವರ ನಾಯ್ಕತ್ವದ ಬಗ್ಗೆ ಕೊಂಡಾಡಿದ ಬಹದ್ದೂರ್ ಅವರು, ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ಪ್ರಗತಿ ಸಾಧಿಸುತ್ತಿರುವುದನ್ನು ನಾನು ಬಹು ಮೆಚ್ಚಿಕೊಂಡಿದ್ದೇನೆಂದು ಹೇಳಿದರು. ನಮಗೆ ಕೋವಿಡ್ ಅನ್ನು ನಿರ್ವಹಿಸಲು ಭಾರತ ಸಾಕಷ್ಟು ಸಹಾಯ ಮಾಡಿದ್ದು ಲಸಿಕೆ, ವೈದ್ಯಕೀಯ ಸಾಧನಗಳು ಹಾಗೂ ಔಷಧಿಗಳು ಭಾರತದಿಂದ ದೊರೆತಿರುವುದಾಗಿ ಶೇರ್ ಬಹದೂರ್ ದೆವೂಬಾ ಈ ಸಂದರ್ಭದಲ್ಲಿ ಹೇಳಿದರು.

  ಇದನ್ನೂ ಓದಿ: Viral Video: ಪಾರ್ಕ್‌ನಲ್ಲಿ ಪ್ರೇಮಿಗಳ ಹೊಡೆದಾಟ! ತಪ್ಪಿಸೋಕೆ ಬಂದ ಈ ಮಹಾನುಭಾವ ಏನು ಮಾಡಿದ ನೋಡಿ...

  ಇನ್ನು ಮಾತುಕತೆ ವಿಚಾರಕ್ಕೆ ಸಂಬಂಧಿಸಿದಂತೆ, ದೆವೂಬಾ ಅವರು, "ಮೋದಿ ಅವರು ಈಗಾಗಲೇ ಹೇಳಿರುವಂತೆ ನಮ್ಮ ದ್ವಿಪಕ್ಷೀಯ ಸಂಬಂಧ ಸುಧಾರಣೆಗಳ ಬಗ್ಗೆ ನಾವು ಚರ್ಚಿಸಿದ್ದೇವೆ, ಭವಿಷ್ಯದಲ್ಲಿ ಇಬ್ಬರೂ ಹೇಗೆ ಸಹಯೋಗ ಒದಗಿಸುವುದರ ಮೂಲಕ ಹೆಚ್ಚಿನ ಸಂಪನ್ಮೂಲಗಳನ್ನು ಕ್ರೋಢಿಕರಿಸಬಹುದೆಂಬುದರ ಬಗ್ಗೆ ಮಾತುಕತೆಗಳನ್ನಾಡಿದ್ದೇವೆ " ಎಂದು ಹೇಳಿದರು.

  ಇದಕ್ಕೂ ಮುಂಚೆ ಇಬ್ಬರು ನಾಯಕರು ನವದೆಹಲಿಯ ಹೈದರಾಬಾದ್ ಭವನದಲ್ಲಿ ಪರಸ್ಪರ ಭೇಟಿ ಮಾಡಿದರು. ಇದಕ್ಕೂ ಮುಂಚೆ ನೇಪಾಳ ಪ್ರಧಾನಿಯವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಎಸ್. ಜೈಶಂಕರ್ ಹಾಗೂ ಭಾರತದ ಫಾರೀನ್ ಸೆಕ್ರೆಟರಿಯಾಗಿರುವ ಹರ್ಷ್ ಶ್ರಿಂಗ್ಲಾ ಅವರನ್ನು ನಿನ್ನೆ ಮೊದಲಿಗೆ ಭೇಟಿ ಮಾಡಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜೀತ್ ದೋವಲ್ ಅವರನ್ನೂ ಸಹ ದೆವೂಬಾ ಅವರು ಇಷ್ಟರಲ್ಲೇ ಭೇಟಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
  Published by:Kavya V
  First published: