ಕಠ್ಮಂಡು(ಜ.16): ನೇಪಾಳದಲ್ಲಿ (Nepal) ಪತನಗೊಂಡ ಯೇತಿ ಏರ್ಲೈನ್ಸ್ (Yeti Airlines) ವಿಮಾನದ ಅವಶೇಷಗಳಡಿ ಸಿಕ್ಕ ಮೊಬೈಲ್ ಫೋನ್ ಒಂದರಲ್ಲಿ, ವಿಮಾನ ಪತನಗೊಳ್ಳುವ ಕೆಲ ಸೆಕೆಂಡುಗಳ ಮೊದಲು ತೆಗೆದ ವಿಡಿಯೋ ಒಂದು ಸದ್ಯ ಭಾರೀ ವೈರಲ್ ಆಗಿದೆ. ಪತನಕ್ಕೂ (Nepal Plane Crash) ಮುನ್ನ ವಿಮಾನದೊಳಗೆ ಏನಾಗುತ್ತಿತ್ತು ಮತ್ತು ಇದ್ದಕ್ಕಿದ್ದಂತೆ ವಿಮಾನ ಹೇಗೆ ಪತನವಾಯಿತು ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಈ ಫೋನ್ ವಿಮಾನದಲ್ಲಿದ್ದ ಭಾರತೀಯ ಪ್ರಜೆಯದ್ದೆಂದು ಎಂದು ಹೇಳಲಾಗುತ್ತಿದೆ.
ಈ ಅಪಘಾತದಲ್ಲಿ ಇಲ್ಲಿಯವರೆಗೆ 72 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯಚವಾಗಿದೆ. ಇದೀಗ ಬೆಳಕಿಗೆ ಬಂದಿರುವ ವೀಡಿಯೋವನ್ನು ಅಪಘಾತಕ್ಕೂ ಕೆಲವು ಸೆಕೆಂಡುಗಳ ಮೊದಲು ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.
Moments before the tragic plane crash in Nepal today streamed by a passenger on Facebook live…Don’t take the gift of life for granted. pic.twitter.com/Xix1EZjeEm
— Mike Crispi (@MikeCrispiNJ) January 15, 2023
ಅಪಘಾತಕ್ಕೂ ಮುನ್ನ ಹೇಳಲಾದ ಈ ವಿಡಿಯೋದಲ್ಲಿ ಭಾರತೀಯ ಪ್ರಜೆಯೊಬ್ಬರು ತಮ್ಮ ಫೋನ್ನಲ್ಲಿ ವಿಮಾನದ ಒಳಗೆ ಮತ್ತು ಹೊರಗಿನ ದೃಶ್ಯವನ್ನು ಚಿತ್ರೀಕರಿಸುತ್ತಿರುವುದು ಕಂಡುಬರುತ್ತದೆ. ಇದಾದ ಕೆಲವೇ ಕ್ಷಣಗಳಲ್ಲಿ ವಿಮಾನವು ಒಂದು ಬದಿಗೆ ವಾಲುತ್ತಿರುವುದು ಕಂಡು ಬಂದಿದೆ. ಇದರ ಬೆನ್ನಲ್ಲೇ ಫೋನ್ ರೆಕಾರ್ಡಿಂಗ್ನಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದೆ. ಈ ವೀಡಿಯೋ ಪೋಖರಾ ವಿಮಾನ ಪತನದ ದೃಶ್ಯವೆಂದೇ ಬಗ್ಗೆ ಹೇಳಲಾಗುತ್ತಿದೆ. ಆದರೆ, ಇದನ್ನು ಯಾರೂ ಈವರೆಗೆ ಅಧಿಕೃತವಾಗಿ ದೃಢಪಡಿಸಿಲ್ಲ.
ಇದನ್ನೂ ಓದಿ: Pokhara Plane Crash: ಸಂಕ್ರಾಂತಿ ದಿನವೇ ಭೀಕರ ವಿಮಾನ ದುರಂತ; 72 ಪ್ರಯಾಣಿಕರಿದ್ದ ವಿಮಾನ ಪತನ
ಈ ದುರಂತದಲ್ಲಿ ಐವರು ಭಾರತೀಯ ನಾಗರಿಕರೂ ಸಾವನ್ನಪ್ಪಿದ್ದಾರೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಈ ಎಲ್ಲಾ ಪ್ರಯಾಣಿಕರು ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ನಿವಾಸಿಗಳು. ಅವರಲ್ಲಿ ಸೋನು ಜೈಸ್ವಾಲ್ ಎಂಬಾತ ವಿಮಾನ ಲ್ಯಾಂಡ್ ಆಗುವ ಮುನ್ನ ವಿಮಾನದ ಒಳಗಿನಿಂದ ಫೇಸ್ ಬುಕ್ ಲೈವ್ ಮಾಡುತ್ತಿದ್ದ. ಈ ವೇಳೆ ಈ ಅವಘಡ ಸಂಭವಿಸಿದೆ. ಮೃತಪಟ್ಟವರಲ್ಲಿ ಸೋನು ಜೈಸ್ವಾಲ್ ಕೂಡ ಸೇರಿದ್ದಾರೆ.
Pokhara Nepal Plane Crash -#नेपाल के #पोखरा में प्लेन क्रैश
कुल 72 लोग सवार थे 16 से ज़्यादा शव बरामद
---#Nepal #planecrash pic.twitter.com/aFBfGBJlv4
— Chandan kumar singh (@Chandan48430579) January 15, 2023
ಈ ವಿಡಿಯೋವನ್ನು ನೇಪಾಳದ ಮಾಜಿ ಸಂಸದ ಅಭಿಷೇಕ್ ಪ್ರತಾಪ್ ಕಳುಹಿಸಿರುವುದಾಗಿ ಎನ್ಡಿಟಿವಿ ಹೇಳಿದೆ. ಸಚಿವರು ಈ ವಿಡಿಯೋವನ್ನು ತನ್ನ ಸ್ನೇಹಿತರೊಬ್ಬರು ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ. ಇತ್ತ ಇದೇ ವಿಡಿಯೋ ಅವಶೇಷಗಳಡಿ ಪತ್ತೆಯಾದ ಮೊಬೈಲ್ನಲ್ಲೂ ಪತ್ತೆಯಾಗಿದ್ದು, ದುರಂತಕ್ಕೂ ಮೊದಲಿನ ದೃಶ್ಯಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ