Pani Puri: ಈ ಊರಲ್ಲಿ ಪಾನಿಪೂರಿ ಬ್ಯಾನ್ ಬ್ಯಾನ್ ಬ್ಯಾನ್! ಜನಪ್ರಿಯ ಆಹಾರ ಇಲ್ಲಿ ಸಿಗೋದೂ ಇಲ್ಲ, ಮಾರೋದೂ ಇಲ್ಲ

ಈ ಪ್ರಸಿದ್ಧ ಪ್ರದೇಶದಲ್ಲಿ ಪಾನಿಪೂರಿ ಬ್ಯಾನ್ (Ban) ಮಾಡಿ ಸರ್ಕಾರ ಆದೇಶ ನೀಡಿದೆ. ಹಾಗಿದ್ರೆ ಇಲ್ಲಿ ಪಾನಿಪೂರಿ ಬ್ಯಾನ್ ಆಗಿದ್ದೇಕೆ? ಸರ್ಕಾರದ ಈ ನಿರ್ಧಾರಕ್ಕೆ ಕಾರಣ ಏನು? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ…

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಠ್ಮಂಡು, ನೇಪಾಳ: ಪಾನಿಪೂರಿ (Pani Poori) ಅಂದ್ರೆ ಸಾಕು ಆಹಾರ ಪ್ರಿಯರ (Foodies) ಕಿವಿ ನೆಟ್ಟಗಾಗುತ್ತದೆ. ಪಾನಿಪೂರಿ ತಿನ್ನೋದು ಆಮೇಲಿನ ಮಾತು, ಅದರ ಹೆಸರು (Name) ಕೇಳಿದರೆ, ಕಣ್ಣಿಂದ ನೋಡಿದರೆ ಬಾಯಲ್ಲಿ ನೀರು ತನ್ನಿಂದ ತಾನೇ ಬರುತ್ತದೆ. ಪಾನಿ ಕುಡಿತಾ, ಪೂರಿ ತಿಂತಾ ಇದ್ರೆ ಸ್ವರ್ಗಕ್ಕೆ (Heaven) ಮೂರೇ ಗೇಣು ಎನ್ನಿಸುತ್ತೆ. ಒಟ್ಟಾರೆ ಪಾನಿಪೂರಿ ಅಂದ್ರೆ ಬಹುತೇಕರಿಗೆ ಪಂಚಪ್ರಾಣ ಅಂದ್ರೂ ತಪ್ಪಾಗಲ್ಲ. ಆದ್ರೆ ನೆರೆ ರಾಷ್ಟ್ರ ನೇಪಾಳದ (Nepal) ರಾಜಧಾನಿ ಕಠ್ಮಂಡುವಿನಲ್ಲಿ (Kathmandu) ನೀವು ಇನ್ನು ಮುಂದೆ ಪಾನಿಪೂರಿ ತಿನ್ನೋ ಹಾಗೇ ಇಲ್ಲ. ಯಾಕೆಂದ್ರೆ ಇನ್ಮುಂದೆ ಅಲ್ಲಿ ಯಾರೂ ಪಾನಿಪೂರಿ ಮಾರಾಟ (Sale) ಮಾಡೋದಿಲ್ಲ. ನೇಪಾಳ ಸರ್ಕಾರ (Nepal Government) ಇಂಥದ್ದೊಂದು ಆದೇಶ (Order) ಮಾಡಿದೆ. ಕಠ್ಮಂಡು ಕಣಿವೆಯಲ್ಲಿ (Kathmandu Valley) ಪಾನಿಪೂರಿ ಬ್ಯಾನ್ (Ban) ಮಾಡಿ ಸರ್ಕಾರ ಆದೇಶ ನೀಡಿದೆ. ಹಾಗಿದ್ರೆ ಕಠ್ಮಂಡು ಕಣಿವೆಯಲ್ಲಿ ಪಾನಿಪೂರಿ ಬ್ಯಾನ್ ಆಗಿದ್ದೇಕೆ? ನೇಪಾಳ ಸರ್ಕಾರದ ಈ ನಿರ್ಧಾರಕ್ಕೆ ಕಾರಣ ಏನು? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ…

ಕಠ್ಮಂಡು ಕಣಿವೆಯಲ್ಲಿ ಪಾನಿಪೂರಿ ಬ್ಯಾನ್

ಪಾನಿಪೂರಿಯ ರುಚಿಗೆ ಮಾರು ಹೋಗದವರೇ ಕಡಿಮೆ. ಈ ಪಾನಿಪೂರಿ ಭಾರತದಲ್ಲಿ ಮಾತ್ರವಲ್ಲದೆ ನೇಪಾಳದಲ್ಲೂ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ. ಆದರೆ ಕಠ್ಮಂಡು ಕಣಿವೆ ಹಾಗೂ ಜನವಸತಿ ಪ್ರದೇಶಗಳಲ್ಲಿ ಪಾನಿಪೂರಿ ತಯಾರಿ ಮತ್ತು ಮಾರಾಟವನ್ನು ನಿಷೇಧ ಮಾಡಿ ನೇಪಾಳ ಸರ್ಕಾರ ಆದೇಶ ನೀಡಿದೆ.

ಕಾಲರಾದಿಂದ ಪಾನಿಪೂರಿ ಮಾರಾಟ ನಿಷೇಧ

ಕಠ್ಮಂಡು ಕಣಿವೆಯ ಲಲಿತ್‌ಪುರ ಮೆಟ್ರೋಪಾಲಿಟನ್ ಸಿಟಿ ಕಣಿವೆಯಲ್ಲಿ ಕಾಲರಾ ಪ್ರಕರಣಗಳು ಹೆಚ್ಚಾಗಿರುವುದರಿಂದ ಬೀದಿ ಆಹಾರ ಪಾನಿ ಪೂರಿ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. 12 ಮಂದಿಗೆ ಕಾಲರಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಲಲಿತ್‌ಪುರ ಮೆಟ್ರೋಪಾಲಿಟನ್ ಸಿಟಿ ಪಾನಿ ಪೂರಿಯಲ್ಲಿ ಬಳಸುವ ನೀರಿನಲ್ಲಿ ಕಾಲರಾ ಬ್ಯಾಕ್ಟೀರಿಯಾ ಕಂಡುಬಂದಿದೆ ಎಂದು ಹೇಳಿಕೊಂಡಿದೆ, ಹೀಗಾಗಿ ನೇಪಾಳ ಸರ್ಕಾರದ ಸೂಚನೆ ಮೇರೆಗೆ ಪಾನಿ ಪೂರಿ ಮಾರಾಟ ಮತ್ತು ವಿತರಣೆಯನ್ನು ನಿಲ್ಲಿಸಲು ನಿರ್ಧರಿಸಿದೆ.

ಇದನ್ನೂ ಓದಿ: Lassi: ಆರ್ಥಿಕತೆ ಹಿಡಿದೆತ್ತಲು ಪಾಕ್ ಹೊಸ ಸೂತ್ರ; ಟೀ ಬಿಡಿ, ಲಸ್ಸಿ ಕುಡಿ ಎಂದ ಆಯೋಗ!

ದಿನದಿಂದ ದಿನಕ್ಕೆ ಕಾಲರಾ ಪ್ರಕರಣಗಳ ಸಂಖ್ಯೆ ಹೆಚ್ಚಳ

ಈ ಬಗ್ಗೆ ಮುನ್ಸಿಪಲ್ ಪೊಲೀಸ್ ಮುಖ್ಯಸ್ಥ ಸೀತಾರಾಮ್ ಹಚೇತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಠ್ಮಂಡು ಕಣಿವೆಯಲ್ಲಿ ಕಾಲರಾ ಹರಡುವ ಅಪಾಯದ ಹೆಚ್ಚಳದಿಂದಾಗಿ ಜನನಿಬಿಡ ಮತ್ತು ಕಾರಿಡಾರ್ ಪ್ರದೇಶಗಳಲ್ಲಿ ಪಾನಿ ಪೂರಿ ಮಾರಾಟವನ್ನು ನಿಲ್ಲಿಸಲು ಮಹಾನಗರ ಪಾಲಿಕೆಯಿಂದ ಆಂತರಿಕ ಸಿದ್ಧತೆಗಳನ್ನು ಮಾಡಲಾಗಿದೆ. ಅದೇ ಸಮಯದಲ್ಲಿ, ಆರೋಗ್ಯ ಮತ್ತು ಜನಸಂಖ್ಯೆ ಸಚಿವಾಲಯದ ಪ್ರಕಾರ, ಕಠ್ಮಂಡು ಕಣಿವೆಯಲ್ಲಿ ಇನ್ನೂ ಏಳು ಜನರು ಕಾಲರಾಗೆ ತುತ್ತಾಗಿದ್ದಾರೆ. ಹೀಗಾಗಿ ಕಾಲರಾ ಸೋಂಕಿಗೆ ಒಳಗಾದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 12ಕ್ಕೆ ಏರಿಕೆ ಆಗಿದೆ.

ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ

ಕಠ್ಮಂಡು ಮಹಾನಗರದಲ್ಲಿ ಐದು ಕಾಲರಾ ಪ್ರಕರಣಗಳು, ಚಂದ್ರಗಿರಿ ಪುರಸಭೆಯಿಂದ ಒಂದು ಪ್ರಕರಣ ಮತ್ತು ಬುಧನೀಲಕಂಠ ಪುರಸಭೆಯಲ್ಲಿ ಮತ್ತೊಂದು ಪ್ರಕರಣವನ್ನು ಗುರುತಿಸಲಾಗಿದೆ. ಸೋಂಕಿತರು ಟೇಕುನಲ್ಲಿರುವ ಸುಕ್ರರಾಜ್ ಉಷ್ಣವಲಯದ ಮತ್ತು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೂಕ್ತ ಚಿಕಿತ್ಸೆ ಪಡೆಯುವಂತೆ ಸರ್ಕಾರದ ಸಲಹೆ

ನೇಪಾಳ ರಾಜಧಾನಿ ಕಠ್ಮಂಡುವಿನ ವಿವಿಧ ಭಾಗಗಳಲ್ಲಿ ಐದು ಕಾಲರಾ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಯಾರಿಗಾದರೂ ಕಾಲರಾ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯ ಅವರನ್ನು ಒತ್ತಾಯಿಸಿದೆ. ಅತಿಸಾರ, ಕಾಲರಾ ಮತ್ತು ಇತರ ನೀರಿನಿಂದ ಹರಡುವ ರೋಗಗಳು ವಿಶೇಷವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಹರಡುವುದರಿಂದ, ಅಂತಹ ಸಂದರ್ಭಗಳಲ್ಲಿ ಜಾಗರೂಕರಾಗಿರಿ ಮತ್ತು ಜಾಗರೂಕರಾಗಿರಲು ಸಚಿವಾಲಯ ವಿನಂತಿಸಿದೆ.

ಇದನ್ನೂ ಓದಿ: BJP Government: ಕಾಶಿ ಯಾತ್ರೆ ಹೋಗುವವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಬಿಗ್ ಆಫರ್

ಕಾಲರಾ ಸಾಮಾನ್ಯವಾಗಿ ಕಲುಷಿತ ನೀರಿನಿಂದ ಹರಡುವ ಬ್ಯಾಕ್ಟೀರಿಯಾದ ಕಾಯಿಲೆಯಾಗಿದೆ ಮತ್ತು ತೀವ್ರ ಅತಿಸಾರ ಮತ್ತು ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಹಿಂದೆ ಆರೋಗ್ಯವಂತ ಜನರಲ್ಲಿಯೂ ಸಹ ಚಿಕಿತ್ಸೆ ನೀಡದೆ ಬಿಟ್ಟರೆ ಇದು ಮಾರಕವಾಗಬಹುದು.
Published by:Annappa Achari
First published: