Nepal Bans Indian News Channels: ನೇಪಾಳದಲ್ಲಿ ಭಾರತೀಯ ಮಾಧ್ಯಮಗಳಿಗೆ ನಿರ್ಬಂಧ

ಭಾರತ ನೇಪಾಳ ಗಡಿಭಾಗವಾದ ಬಿಹಾರದ ಸೀತಾಮಾರ್ಹಿ ಜಿಲ್ಲೆಯಲ್ಲಿ ನೇಪಾಳ ಪೊಲೀಸರು ನಡೆಸಿರುವ ಗುಂಡಿನ ದಾಳಿಗೆ ಓರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಕ್ಕೆ ಒಳಗಾಗಿದ್ದರು. ಈ ಬಗ್ಗೆ ಭಾರತ ಖಂಡನೆ ವ್ಯಕ್ತಪಡಿಸಿತ್ತು. 

news18-kannada
Updated:July 10, 2020, 1:25 PM IST
Nepal Bans Indian News Channels: ನೇಪಾಳದಲ್ಲಿ ಭಾರತೀಯ ಮಾಧ್ಯಮಗಳಿಗೆ ನಿರ್ಬಂಧ
ಕೆಪಿ ಶರ್ಮಾ ಓಲಿ
  • Share this:
ನವದೆಹಲಿ (ಜು.10): ಇತ್ತೀಚಿನ ದಿನಗಳಲ್ಲಿ ನೆರೆಯ ರಾಷ್ಟ್ರ ನೇಪಾಳ ಭಾರತದ ಜೊತೆ ವೈಷಮ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ನೇಪಾಳದಲ್ಲಿ ಕೊರೋನಾ ಹೆಚ್ಚಲು ಭಾರತವೇ ಕಾರಣ ಎಂದು ನೇಪಾಳ ಇತ್ತೀಚೆಗೆ ಹೇಳಿಕೆ ನೀಡಿತ್ತು. ಈಗ ಭಾರತೀಯ ಸುದ್ದಿ ವಾಹಿನಿಗಳನ್ನು ಬ್ಯಾನ್​ ಮಾಡುವ ಮೂಲಕ ನೇಪಾಳ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಭಾರತೀಯ ನ್ಯೂಸ್​ ಚಾನೆಲ್​ಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿರುವುದಾಗಿ ನೇಪಾಳದ ಕೇಬಲ್​ ಆಪರೇಟರ್​ಗಳು ಹೇಳಿದ್ದಾರೆ. ಈ ಬಗ್ಗೆ ಎಎನ್​ಐ ವರದಿ ಮಾಡಿದೆ. ಗುರುವಾರ ಸಂಜೆಯಿಂದ ಡಿಡಿ ನ್ಯೂಸ್​ ಚಾನೆಲ್​ ಹೊರತುಪಡಿಸಿ ಉಳೆದ ಎಲ್ಲ ಸುದ್ದಿ ವಾಹಿನಿಗಳನ್ನು ಬ್ಯಾನ್​ ಮಾಡಿದ್ದೇವೆ ಎಂದು ಅಲ್ಲಿನ ಕೇಬಲ್​ ಆಪರೇಟರ್​ಗಳು ಹೇಳಿಕೆ ನೀಡಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ನೇಪಾಳದ ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ಮುಖ್ಯ ಸಲಹೆಗಾರ ಭಾರತೀಯ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದರು. ನೇಪಾಳದ ಬಗ್ಗೆ ಭಾರತೀಯ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿ ಖಂಡನೀಯ ಎಂದು ಹೇಳಿದ್ದರು. ಈ ಬೆನ್ನಲ್ಲೇ ಕೇಬಲ್​ ಆಪರೇಟರ್​ಗಳು ಈ ರೀತಿಯ ನಿರ್ಧಾರ ಕೈಗೊಂಡಿವೆ.

ಭಾರತ ನೇಪಾಳ ಗಡಿಭಾಗವಾದ ಬಿಹಾರದ ಸೀತಾಮಾರ್ಹಿ ಜಿಲ್ಲೆಯಲ್ಲಿ ನೇಪಾಳ ಪೊಲೀಸರು ನಡೆಸಿರುವ ಗುಂಡಿನ ದಾಳಿಗೆ ಓರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಕ್ಕೆ ಒಳಗಾಗಿದ್ದರು. ಈ ಬಗ್ಗೆ ಭಾರತ ಖಂಡನೆ ವ್ಯಕ್ತಪಡಿಸಿತ್ತು.
Published by: Rajesh Duggumane
First published: July 10, 2020, 1:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading