NEET UG 2021 Exam: ಈ ವರ್ಷ ದುಬೈನಲ್ಲಿ ನಡೆಯಲಿದೆ ನೀಟ್ ಪರೀಕ್ಷೆ; ಅಭ್ಯರ್ಥಿಗಳು ಹೇಗೆ ರೆಡಿಯಾಗ್ಬೇಕು? ಇಲ್ಲಿದೆ ಫುಲ್ ಡೀಟೆಲ್ಸ್

ನೀಟ್​ 2021 ಪರೀಕ್ಷೆ ಸೆಪ್ಟೆಂಬರ್​ 12ರಂದು ನಡೆಯಲಿದೆ. ಈ ಮೊದಲು ಆಗಸ್ಟ್​​ 1ಕ್ಕೆ ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಬಳಿಕ ಸೆಪ್ಟೆಂಬರ್​ 12ಕ್ಕೆ ಮುಂದೂಡಲಾಯಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ(ಜು.23): ಇದೇ ಮೊದಲ ಬಾರಿಗೆ NEET-UG ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಈ ಬಾರಿ ದುಬೈನಲ್ಲಿ ಆಯೋಜಿಸಲಾಗುತ್ತಿದ್ದು, ಗುರುವಾರ ಶಿಕ್ಷಣ ಸಚಿವಾಲಯ ಈ ವಿಷಯವನ್ನು ಖಚಿತಪಡಿಸಿದೆ. ಅದರಂತೆ ಈ ವರ್ಷ NEET-UG 2021 ಪರೀಕ್ಷೆ ಕುವೈತ್​​ನಲ್ಲಿ ನಡೆಯಲಿದೆ.

    ನೀಟ್​ 2021 ಪರೀಕ್ಷೆ ಸೆಪ್ಟೆಂಬರ್​ 12ರಂದು ನಡೆಯಲಿದೆ. ಈ ಮೊದಲು ಆಗಸ್ಟ್​​ 1ಕ್ಕೆ ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಬಳಿಕ ಸೆಪ್ಟೆಂಬರ್​ 12ಕ್ಕೆ ಮುಂದೂಡಲಾಯಿತು. ಅರಬ್ ಸಂಯುಕ್ತ ಸಂಸ್ಥಾನ (UAE) ಆಗಸ್ಟ್​ 2ರವರೆಗೆ ಭಾರತದ ಎಲ್ಲಾ ವಿಮಾನಗಳಿಗೆ ನಿರ್ಬಂಧ ಹೇರಿದೆ.

    NEET 2021 ಪರೀಕ್ಷೆಯನ್ನು ಒಟ್ಟು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಹಿಂದಿ, ಪಂಜಾಬಿ, ಅಸ್ಸಾಮಿ, ಬೆಂಗಾಳಿ, ಒಡಿಯಾ, ಗುಜರಾತಿ, ಮರಾಠಿ, ತೆಲುಗು, ಮಲೆಯಾಳಂ, ಕನ್ನಡ, ತಮಿಳು, ಉರ್ದು ಮತ್ತು ಇಂಗ್ಲಿಷ್​ ಭಾಷೆಗಲ್ಲಿ ನೀಟ್​ ಪರೀಕ್ಷೆ ನಡೆಯಲಿದೆ. ಇವುಗಳಲ್ಲಿ ಪಂಜಾಬಿ ಮತ್ತು ಮಲೆಯಾಳಂ ಭಾಷೆಗಳನ್ನು ಇತ್ತೀಚೆಗೆ ಸೇರ್ಪಡೆ ಮಾಡಲಾಯಿತು.

    ದಿ ನ್ಯಾಷನಲ್​ ಟೆಸ್ಟಿಂಗ್ ಏಜೆನ್ಸಿ (NTA)ಯು ಅತೀ ಶೀಘ್ರದಲ್ಲಿ ಮಾಹಿತಿ ಬುಲೆಟಿನ್​ ಬಿಡುಗಡೆ ಮಾಡಲಿದೆ. ಈ ಬುಲೆಟಿನ್​ನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿಯನ್ನು ನೀಡಲಾಗಿರುತ್ತದೆ. ಅಂದರೆ, NEET 2021 ಅರ್ಹತಾ ಮಾನದಂಡಗಳು, ಪ್ರಮುಖ ದಿನಾಂಕಗಳು, ಫಲಿತಾಂಶ ಮತ್ತು ಸಮಾಲೋಚನೆ ವೇಳಾಪಟ್ಟಿ, ಮೀಸಲಾತಿ ಮಾನದಂಡಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆ.. ಹೀಗೆ ಇನ್ನಿತರೆ ಮಾಹಿತಿಯನ್ನು ಬುಲೆಟಿನ್​ನಿಂದ ಪಡೆದುಕೊಳ್ಳಬಹುದು.

    ಇದನ್ನೂ ಓದಿ:Karnataka Rains: ರಾಜ್ಯದಲ್ಲಿ ಮಳೆಗೆ ಉಕ್ಕಿ ಹರಿಯುತ್ತಿರುವ ನದಿಗಳು, ಎದುರಾದ ಪ್ರವಾಹ ಭೀತಿ; ಹಲವೆಡೆ ರಾ.ಹೆ. ಬಂದ್

    ಎನ್​ಟಿಎ 2021ರ ನೀಟ್​ ಪರೀಕ್ಷೆಗಾಗಿ ದುಬೈನಲ್ಲಿ ಮತ್ತೊಂದು ಹೆಚ್ಚುವರಿ ಪರೀಕ್ಷಾ ಕೇಂದ್ರವನ್ನು ಆಯೋಜಿಸಲು ನಿರ್ಧರಿಸಿದೆ. ಈಗಾಗಲೇ ಕುವೈತ್​ನಲ್ಲಿ ಒಂದು ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ.

    ಮಧ್ಯಪ್ರಾಚ್ಯದಲ್ಲಿ ಭಾರತೀಯ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲವಾಗುವಂತೆ ಮೊದಲ ಬಾರಿಗೆ ಕುವೈತ್‌ನಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರವು ಈ ತಿಂಗಳ ಆರಂಭದಲ್ಲಿ ಘೋಷಿಸಿತ್ತು.

    "2021ನೇ ವರ್ಷದಲ್ಲಿ ಕುವೈತ್ ನಗರದಲ್ಲಿ ಈಗಾಗಲೇ ಆಯೋಜಿಸಲಾಗಿರುವ ಪರೀಕ್ಷಾ ಕೇಂದ್ರಕ್ಕೆ ಹೆಚ್ಚುವರಿಯಾಗಿ ದುಬೈನಲ್ಲಿ ಇನ್ನೂ ಒಂದು ಪರೀಕ್ಷಾ ಕೇಂದ್ರವನ್ನು ತೆರೆಯಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಿರ್ಧರಿಸಿದೆ" ಎಂದು ಮಾನವ ಸಂಪನ್ಮೂಲ ಕಾರ್ಯದರ್ಶಿ ಅಮಿತ್ ಖರೆ ವಿದೇಶಾಂಗ ಸಚಿವಾಲಯದ ವಿದೇಶಾಂಗ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ .

    ಇದನ್ನೂ ಓದಿ:Morning Digest: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​, ಈ ವರ್ಷ ದುಬೈನಲ್ಲಿ ನೀಟ್ ಪರೀಕ್ಷೆ; ಇಂದಿನ ಪ್ರಮುಖ ಸುದ್ದಿಗಳಿವು

    "ಗಲ್ಫ್​​ ರಾಷ್ಟ್ರಗಳಲ್ಲಿನ ಭಾರತೀಯ ಸಮುದಾಯಕ್ಕೆ ಈ ಬಗ್ಗೆ ಸೂಕ್ತವಾಗಿ ತಿಳಿಸಬಹುದು. ಕುವೈತ್ ಮತ್ತು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ನ್ಯಾಯಯುತ ಮತ್ತು ಸುರಕ್ಷಿತ ರೀತಿಯಲ್ಲಿ ಪರೀಕ್ಷೆಯನ್ನು ನಡೆಸಲು ಎನ್‌ಟಿಎಗೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡುವಂತೆ ಸೂಚಿಸಿದರೆ ನಾನು ಕೃತಜ್ಞನಾಗುತ್ತೇನೆ" ಎಂದು ಅವರು ಹೇಳಿದ್ದಾರೆ.

    ಇತ್ತೀಚೆಗೆ, ಶಿಕ್ಷಣ ಸಚಿವಾಲಯವು ತಮಿಳುನಾಡಿನಲ್ಲಿ ಹೆಚ್ಚುವರಿ ನೀಟ್​ ಯಜಿ ಪರೀಕ್ಷಾ ಕೇಂದ್ರಗಳನ್ನು ತೆರೆದಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮಿಳುನಾಡಿನ ಹೆಚ್ಚುವರು ನೀಟ್​ ಪರೀಕ್ಷಾ ಕೇಂದ್ರಗಳನ್ನು ಘೋಷಿಸಿದ್ದಾರೆ. ತಮಿಳುನಾಡಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚೆಂಗಲ್ ಪೇಟೆ, ವಿರುಧುನಗರ, ದಿಂಡಿಗಲ್ ಮತ್ತು ತಿರುಪ್ಪುರ್​ ಎಂಬ ನಾಲ್ಕು ನಗರಗಳನ್ನು ನೀಟ್​ ಪರೀಕ್ಷಾ ಕೇಂದ್ರಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಸಚಿವರು ಹೇಳಿದರು.

    ನೀಟ್​​ ಪರೀಕ್ಷೆಯನ್ನು ನಡೆಸುವ ನಗರಗಳ ಸಂಖ್ಯೆಯನ್ನು 155 ರಿಂದ 198 ಕ್ಕೆ ಹೆಚ್ಚಿಸಲಾಗುವುದು. ಕಳೆದ ವರ್ಷ 3,862 ಪರೀಕ್ಷಾ ಕೇಂದ್ರಗಳಲ್ಲಿ ನೀಟ್​ ಪರೀಕ್ಷೆಯನ್ನು ನಡೆಸಲಾಗಿತ್ತು. ಮುಂಬರುವ ದಿನಗಳಲ್ಲಿ ಈ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗುತ್ತದೆ ಎಂದು ಕೇಂದ್ರ ಹೇಳಿದೆ.

    2020 ರಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಕಠಿಣ ಮುನ್ನೆಚ್ಚರಿಕೆಗಳ ನಡುವೆ ಸೆಪ್ಟೆಂಬರ್ 13 ರಂದು ನೀಟ್​ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಒಟ್ಟು 13.66 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಅವರಲ್ಲಿ 7,71,500 ಮಂದಿ ಅರ್ಹತೆ ಪಡೆದಿದ್ದಾರೆ.
    Published by:Latha CG
    First published: