HOME » NEWS » National-international » NEET RESULT 2020 NTA TO RELEASE NEET RESULT ON 16 OCTOBER SPECIAL EXAM TO BE HELD ON 14 OCTOBER SCT

NEET Result 2020: ಅಕ್ಟೋಬರ್ 16ಕ್ಕೆ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ

ಕೊರೋನಾದಿಂದಾಗಿ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದವರು ಅಕ್ಟೋಬರ್ 14ರಂದು ಪರೀಕ್ಷೆ ಬರೆಯಬಹುದಾಗಿದೆ. ಎಲ್ಲರ ಫಲಿತಾಂಶವೂ ಅ. 16ರಂದೇ ಪ್ರಕಟವಾಗಲಿದೆ.

news18-kannada
Updated:October 12, 2020, 2:34 PM IST
NEET Result 2020: ಅಕ್ಟೋಬರ್ 16ಕ್ಕೆ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ. 12): ಎನ್​ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಎನ್​ಇಇಟಿ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್​ ಟೆಸ್ಟ್​) ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಫಲಿತಾಂಶ ಇಂದೇ ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ, ನೀಟ್ ಪರೀಕ್ಷೆಯ ಫಲಿತಾಂಶ ಅಕ್ಟೋಬರ್ 16ರಂದು ಪ್ರಕಟವಾಗಲಿದೆ. ದೇಶಾದ್ಯಂತ ಸುಮಾರು 14.37 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದರು. ಕೊರೋನಾದಿಂದಾಗಿ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದವರು ಅಕ್ಟೋಬರ್ 14ರಂದು ಪರೀಕ್ಷೆ ಬರೆಯಬಹುದಾಗಿದೆ. ಎಲ್ಲರ ಫಲಿತಾಂಶವೂ ಅ. 16ರಂದೇ ಪ್ರಕಟವಾಗಲಿದೆ.

ಫಲಿತಾಂಶವನ್ನು ntaneet.nic.in ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ಅಡ್ಮಿಟ್​ ಕಾರ್ಡ್​ನಲ್ಲಿ ತಮ್ಮ ರೋಲ್ ನಂಬರ್ ದಾಖಲಿಸಬೇಕು. ನಂತರ ಫಲಿತಾಂಶವನ್ನು ವೀಕ್ಷಿಸಬಹುದು. ನೀಟ್ ಪರೀಕ್ಷೆಗಳ ಫಲಿತಾಂಶವನ್ನು ಅಕ್ಟೋಬರ್ 12ರಂದು ಪ್ರಕಟಿಸಲಾಗುವುದು ಎಂದು ಪರೀಕ್ಷಾ ಮಂಡಳಿ ತಿಳಿಸಿತ್ತು. ಅದರಂತೆ ಇಂದು ಫಲಿತಾಂಶ ಹೊರಬೀಳಲಿದೆ ಎನ್ನಲಾಗಿತ್ತು. ಆದರೆ, ಅಕ್ಟೋಬರ್ 16ರಂದು ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಲಾಗಿದೆ. ಕೊರೋನಾ ಪ್ರೋಟೋಕಾಲ್ ನಡುವೆಯೂ ಸೆಪ್ಟೆಂಬರ್ 14ರಂದು ಎನ್​ಟಿಎ ಮತ್ತು ನೀಟ್ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಪ್ರಕಟವಾದ ನಂತರ nta.ac.in, ntaneet.nic.in ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.




ಪರೀಕ್ಷೆ ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ....
  • ಅಧಿಕೃತ ವೆಬ್​ಸೈಟ್ ntaneet.nic.inಗೆ ಹೋಗಿ..

  • ವೆಬ್​ಸೈಟ್​ನಲ್ಲಿರುವ ಡೌನ್​ಲೋಡ್​ ರಿಸಲ್ಟ್​ ಎಂಬಲ್ಲಿ ಕ್ಲಿಕ್ ಮಾಡಿ

  • ನಿಮ್ಮ ರಿಜಿಸ್ಟ್ರೇಷನ್ ನಂಬರ್, ರೋಲ್ ನಂಬರ್ ನಮೂದಿಸಿ.

  • ಆಗ ನಿಮ್ಮ ಫಲಿತಾಂಶ ವೆಬ್​ಸೈಟ್​ನ ಸ್ಕ್ರೀನ್ ಮೇಲೆ ಕಾಣುವುದು.

  • ಆ ಫಲಿತಾಂಶದ ಸ್ಕ್ರೀನ್ ಅನ್ನು ಡೌನ್​ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದಿಟ್ಟುಕೊಳ್ಳಿ.


Youtube Video

ಎಂಬಿಬಿಎಸ್/ ಬಿಎಸ್​ಡಿ ಕೋರ್ಸ್​ಗಳಿಗೆ ಅಭ್ಯರ್ಥಿಗಳು ನೀಟ್​ನಲ್ಲಿ ಶೇ. 50ರಷ್ಟು ಅಂಕ ಪಡೆದು ತೇರ್ಗಡೆಯಾಗಬೇಕು. ಎಸ್​ಸಿ, ಎಸ್​ಟಿ ಅಭ್ಯರ್ಥಿಗಳು ಶೇ. 40 ಅಂಕ ಪಡೆಯಬೇಕು. ಪಿಡಬ್ಲ್ಯುಡಿ ಅಭ್ಯರ್ಥಿಗಳು ಶೇ 45 ಅಂಕ ಪಡೆಯಬೇಕು.
Published by: Sushma Chakre
First published: October 12, 2020, 2:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories