NEET Result 2020: ನೀಟ್ ಪರೀಕ್ಷೆ ಫಲಿತಾಂಶ ಇಂದು ಪ್ರಕಟ ಸಾಧ್ಯತೆ; ರಿಸಲ್ಟ್ ಲಿಂಕ್ ಇಲ್ಲಿದೆ
NEET Result 2020: ಕೊರೋನಾ ಪ್ರೋಟೋಕಾಲ್ ನಡುವೆಯೂ ಸೆಪ್ಟೆಂಬರ್ 14ರಂದು ನೀಟ್ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಪ್ರಕಟವಾದ ನಂತರ nta.ac.in, ntaneet.nic.in ವೆಬ್ಸೈಟ್ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.
ಬೆಂಗಳೂರು (ಅ. 12): ಎನ್ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಎನ್ಇಇಟಿ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್) ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಫಲಿತಾಂಶ ಇಂದೇ ಪ್ರಕಟವಾಗುವ ಸಾಧ್ಯತೆಯಿದೆ. ದೇಶಾದ್ಯಂತ ಸುಮಾರು 14.37 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದರು. ಫಲಿತಾಂಶವನ್ನು ntaneet.nic.in ವೆಬ್ಸೈಟ್ನಲ್ಲಿ ವೀಕ್ಷಿಸಬಹುದು ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ಅಡ್ಮಿಟ್ ಕಾರ್ಡ್ನಲ್ಲಿ ತಮ್ಮ ರೋಲ್ ನಂಬರ್ ದಾಖಲಿಸಬೇಕು. ನಂತರ ಫಲಿತಾಂಶವನ್ನು ವೀಕ್ಷಿಸಬಹುದು.
ನೀಟ್ ಪರೀಕ್ಷೆಗಳ ಫಲಿತಾಂಶವನ್ನು ಅಕ್ಟೋಬರ್ 12ರಂದು ಪ್ರಕಟಿಸಲಾಗುವುದು ಎಂದು ಪರೀಕ್ಷಾ ಮಂಡಳಿ ತಿಳಿಸಿತ್ತು. ಅದರಂತೆ ಇಂದು ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ. ಕೊರೋನಾ ಪ್ರೋಟೋಕಾಲ್ ನಡುವೆಯೂ ಸೆಪ್ಟೆಂಬರ್ 14ರಂದು ನೀಟ್ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಪ್ರಕಟವಾದ ನಂತರ nta.ac.in, ntaneet.nic.in ವೆಬ್ಸೈಟ್ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.
ವೆಬ್ಸೈಟ್ನಲ್ಲಿರುವ ಡೌನ್ಲೋಡ್ ರಿಸಲ್ಟ್ ಎಂಬಲ್ಲಿ ಕ್ಲಿಕ್ ಮಾಡಿ
ನಿಮ್ಮ ರಿಜಿಸ್ಟ್ರೇಷನ್ ನಂಬರ್, ರೋಲ್ ನಂಬರ್ ನಮೂದಿಸಿ.
ಆಗ ನಿಮ್ಮ ಫಲಿತಾಂಶ ವೆಬ್ಸೈಟ್ನ ಸ್ಕ್ರೀನ್ ಮೇಲೆ ಕಾಣುವುದು.
ಆ ಫಲಿತಾಂಶದ ಸ್ಕ್ರೀನ್ ಅನ್ನು ಡೌನ್ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಎಂಬಿಬಿಎಸ್/ ಬಿಎಸ್ಡಿ ಕೋರ್ಸ್ಗಳಿಗೆ ಅಭ್ಯರ್ಥಿಗಳು ನೀಟ್ನಲ್ಲಿ ಶೇ. 50ರಷ್ಟು ಅಂಕ ಪಡೆದು ತೇರ್ಗಡೆಯಾಗಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಶೇ. 40 ಅಂಕ ಪಡೆಯಬೇಕು. ಪಿಡಬ್ಲ್ಯುಡಿ ಅಭ್ಯರ್ಥಿಗಳು ಶೇ 45 ಅಂಕ ಪಡೆಯಬೇಕು.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ