NEET 2021: 720ಕ್ಕೆ 720 ಅಂಕ ಪಡೆದ ಮೃಣಾಲ್ ಪ್ರತಿದಿನ ಅಭ್ಯಸಿಸಿದ್ದು ಕೇವಲ 4 ಗಂಟೆ..!

ಪ್ರಾರಂಭದಲ್ಲಿ ನನಗೆ ಟಿವಿ, ಲ್ಯಾಪ್‍ಟಾಪ್, ಫೋನ್ ನನ್ನ ಏಕಾಗ್ರತೆಯನ್ನು ಹಾಳುಮಾಡುತ್ತಿದ್ದವು. ನಂತರ ದೃಢ ನಿಶ್ಚಯದೊಂದಿಗೆ ಪ್ರತಿದಿನ 4 ಗಂಟೆಗಳು ಓದುವ ಅವಧಿಯಲ್ಲಿ ನಾನು ಮೊದಲು ಭೌತಶಾಸ್ತ್ರಕ್ಕೆ ಪ್ರಾಮುಖ್ಯತೆ ನೀಡಿದೆ.

ಮೃಣಾಲ್ ಕುಟೇರಿ

ಮೃಣಾಲ್ ಕುಟೇರಿ

  • Share this:
ದಿನಕ್ಕೆ 12 ಗಂಟೆಗಳ ಕಾಲ ಓದಿಕೊಳ್ಳುವೆ ಎಂದು ಹೇಳುವ ಹಲವಾರು ಟಾಪರ್‌ಗಳ ಮುಂದೆ ನೀಟ್ 2021ರಲ್ಲಿ (Neet 2021) ಸಂಪೂರ್ಣ ಅಂಕ ಪಡೆದು ಟಾಪರ್ ಆಗಿರುವ ಮೃಣಾಲ್ ಕುಟೇರಿ (Mrinal Kutteri) ಭಿನ್ನವಾಗಿ ನಿಲ್ಲುತ್ತಾರೆ. ಕೊರೋನಾ ಸಮಯವು ನನ್ನ ಓದನ್ನು ಎಚ್ಚರಿಸಿತು ಎನ್ನುವ ಮೃಣಾಲ್ ದಿನದಲ್ಲಿ 4 ಗಂಟೆ ಓದಿಗೆ ಮೀಸಲಿಟ್ಟಿದ್ದರಂತೆ. ಪ್ರತಿ 45 ನಿಮಿಷಕ್ಕೊಮ್ಮೆ ವಿರಾಮ ( NEET preparation) ತೆಗೆದುಕೊಳ್ಳುತ್ತಿದ್ದರಂತೆ. ನ್ಯೂಸ್ 18ಗೆ ಸಂದರ್ಶನ ನೀಡಿರುವ ಮೃಣಾಲ್ ತಮ್ಮ ಓದಿನ ಯಶಸ್ಸನ್ನು ಬಿಚ್ಚಿಟ್ಟಿದ್ದಾರೆ.

ಭೌತಶಾಸ್ತ್ರ ಪ್ರಾಮುಖ್ಯತೆ

ಪ್ರಾರಂಭದಲ್ಲಿ ನನಗೆ ಟಿವಿ, ಲ್ಯಾಪ್‍ಟಾಪ್, ಫೋನ್ ನನ್ನ ಏಕಾಗ್ರತೆಯನ್ನು ಹಾಳುಮಾಡುತ್ತಿದ್ದವು. ನಂತರ ದೃಢ ನಿಶ್ಚಯದೊಂದಿಗೆ ಪ್ರತಿದಿನ 4 ಗಂಟೆಗಳು ಓದುವ ಅವಧಿಯಲ್ಲಿ ನಾನು ಮೊದಲು ಭೌತಶಾಸ್ತ್ರಕ್ಕೆ ಪ್ರಾಮುಖ್ಯತೆ ನೀಡಿದೆ. ಹೆಚ್ಚಿನ ಟಾಪರ್‌ಗಳು ಜೀವಶಾಸ್ತ್ರದ ಮೇಲೆ ಮೊದಲು ಗಮನ ಕೇಂದ್ರಕರಿಸುತ್ತಾರೆ. ಆದರೆ ಮೃಣಾಲ್, ನಾನು ಮೊದಲು ಭೌತಶಾಸ್ತ್ರ ಓದಲು ಪ್ರಾರಂಭಿಸಿದೆ. ಸಮಯ ಸಿಕ್ಕಾಗಲೆಲ್ಲಾ ನಾನು ಇದನ್ನು ಉತ್ತಮವಾಗಿ ನಿರ್ವಹಿಸಬಲ್ಲೆ ಎಂದೆನಿಸುತ್ತಿತ್ತು. ನನಗೆ ಜೀವಶಾಸ್ತ್ರ ಸುಲಭ ಎನಿಸಿತು. ಕಡಿಮೆ ಸಮಯದಲ್ಲಿ ಉತ್ತಮವಾಗಿ ಸ್ಕೋರ್ ಮಾಡಬಹುದು ಎಂದು ನನಗೆ ಅನಿಸಿತು. ಹಾಗಾಗಿ ಭೌತಶಾಸ್ತ್ರಕ್ಕೆ ಹೆಚ್ಚು ಸಮಯ ಮೀಸಲಿಟ್ಟೆ ಎಂದು ತಮ್ಮ ಓದಿನ ವಿಧಾನ ಹಂಚಿಕೊಂಡಿದ್ದಾರೆ.

ಸ್ವಂತ ಶೈಲಿಯ ಅಧ್ಯಯನ 

ತನ್ನ ಗೆಳೆಯರಿಗೆ ಸಲಹೆ ನೀಡುತ್ತಾ ಮೃಣಾಲ್, “ನಾನು ಟಾಪರ್ ಸಂದರ್ಶನಗಳನ್ನು ಓದುವಾಗ, ಅವರು ಯಾವ ವೇಳಾಪಟ್ಟಿ ಅನುಸರಿಸುತ್ತಾರೆ ಮತ್ತು ಅವರಿಗೆ ಯಾವ ದಿನಚರಿ ಕೆಲಸ ಮಾಡಿದೆ ಎಂದು ನಾನು ಕಂಡುಕೊಳ್ಳುತ್ತಿದ್ದೆ. ನನ್ನ ಅಭ್ಯಾಸದ ಸಮಯದಲ್ಲಿ, ನಾನು ಕೂಡ ಬಹಳಷ್ಟು ದಿನಚರಿಗಳನ್ನು ಅನುಸರಿಸಿದೆ. ಆದರೆ ರಚನಾತ್ಮಕ ವಿಧಾನವು ನನಗೆ ಸರಿ ಹೊಂದುವುದಿಲ್ಲ ಎಂದು ನಾನು ಅರಿತುಕೊಂಡೆ. ನನ್ನ ಸ್ವಂತ ಶೈಲಿಯ ಅಧ್ಯಯನ ರೂಢಿಸಿಕೊಂಡೆ. ಇದಕ್ಕೆ ನನ್ನ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡಿದರು. ನಾನು ಅದೃಷ್ಟಶಾಲಿ ಎಂದು ಹೇಳಿದರು.

ಪ್ರಯೋಗಶೀಲತೆಗೆ ಒತ್ತು

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಮೊದಲು ಧೈರ್ಯವಾಗಿರಬೇಕು. ಪ್ರಯೋಗಶೀಲರಾಗಿರಬೇಕು. ಯಾರು ಏನೇ ಸಲಹೆ ನೀಡಿದರೂ ತಮಗೆ ಯಾವುದು ಸರಿ ಹೊಂದುತ್ತದೋ ಯಶಸ್ಸು ಸಿಗುತ್ತದೆ ಎಂದು ಅರಿವಾಗುತ್ತದೋ ಆ ತತ್ವಕ್ಕೆ ಅಂಟಿಕೊಳ್ಳಬೇಕು ಎಂದು ಹೇಳುವ ಮೃಣಾಲ್ ಸಮತೋಲಿತ ಮತ್ತು ಆರಾಮದಾಯಕ ಅಧ್ಯಯನವು ನನ್ನ ಯಶಸ್ಸಿಗೆ ಕಾರಣ ಎಂದರು.

ಮೃಣಾಲ್ 2020ರಲ್ಲಿ 11ನೇ ತರಗತಿಯಲ್ಲಿದ್ದಾಗಿನಿಂದ ನೀಟ್‍ಗೆ ತಯಾರಿ ನಡೆಸುತ್ತಿದ್ದಾರೆ. ಆಗ ಕೋವಿಡ್ -19 ಕಾರಣ ಆನ್‍ಲೈನ್ ತರಗತಿ ಪ್ರಾರಂಭವಾಯಿತು. ಸಾಂಕ್ರಾಮಿಕ ರೋಗವು ಸ್ವಲ್ಪ ಸಮಯದವರೆಗೆ ಅಧ್ಯಯನವನ್ನು ಹಳಿತಪ್ಪಿಸಿದರೂ, ಅದು ಅವರನ್ನು ಪ್ರೇರೇಪಿಸಿತು.

ಕೋವಿಡ್​ ಹೋರಾದ ಹೀರೋಗಳಾದ ವೈದ್ಯರೇ ಸ್ಪೂರ್ತಿ

"ಬಿಕ್ಕಟ್ಟಿನ ಸಮಯದಲ್ಲಿ, ವೈದ್ಯರು ದೇಶದ ಶಕ್ತಿಯಾಗಿದ್ದರು. ಅವರ ನಿರಂತರ ಸೇವೆ ಕಂಡು ನಾನು ಅವರಂತೆ ಆಗಲು ಪ್ರೇರೇಪಿಸಿತು ಮತ್ತು ಆದರೆ ಇದು ಒಂದು ಸವಾಲಾಗಿತ್ತು. ಒಂದು ದಿನ ನಾನು ವೈದ್ಯ ಎಂದು ಹೇಳಲು ಸಾಧ್ಯವಾಯಿತು. ಈ ವೈದ್ಯರು ಮಾಡಿದ ಸೇವೆಯನ್ನು ನಾನು ಮಾಡುತ್ತೇನೆ” ಎಂದು ಮೃಣಾಲ್ ಹೇಳಿದರು.

18 ವರ್ಷದ ಮೃಣಾಲ್ ಈ ಮೂಲಕ ಕುಟುಂಬದ ಮೊದಲ ವೈದ್ಯರಾಗುವ ಹಾದಿಯಲ್ಲಿದ್ದಾರೆ. ಅವರು ತಮ್ಮ ಕನಸಿನ ಸಂಸ್ಥೆಯಾದ ನವದೆಹಲಿಯ ಏಮ್ಸ್‌ನಲ್ಲಿ ಎಂಬಿಬಿಎಸ್ ಅಧ್ಯಯನ ಮಾಡಲು ಬಯಸುತ್ತಾರೆ.

ಇದನ್ನು ಓದಿ: ಗೆಲುವಿನ ನಗೆ ಬೀರಿದ ದೀದಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​; ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ

ಪರೀಕ್ಷೆ ವಿಭಿನ್ನವಾಗಿತ್ತು

ಈ ಬಾರಿ ಏಮ್ಸ್ ಪರೀಕ್ಷೆ ವಿಭಿನ್ನವಾಗಿತ್ತು. ಈ ಬಾರಿ ಏಮ್ಸ್ ಗೆ ಪ್ರವೇಶಾತಿ ನೀಟ್ ಪರೀಕ್ಷೆಯ ಮೂಲಕವೇ ಆಗುವುದಿತ್ತು. AIIMS ಮತ್ತು ಜಿಪ್ಮರ್ ವಿಭಿನ್ನ ಪ್ರವೇಶ ಪರೀಕ್ಷೆಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಆಯ್ಕೆ ನೀಡಿತು. ನೀಟ್ ಒಂದೇ ಪರೀಕ್ಷೆಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವಿತ್ತು. ಅದರಂತೆ ಪರೀಕ್ಷೆಗಳನ್ನು ಎದುರಿಸಿದೆ. ನನಗೆ ಖುಷಿಯಾಗಿದೆ" ಎಂದು ಮೃಣಾಲ್ ಹೇಳಿದರು.

ಇದನ್ನು ಓದಿ: ಇಂದಿನಿಂದ ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ; ಬೆಳಗಲಿದೆ 9 ಲಕ್ಷ ದೀವಟಿಕೆಗಳು

ಅಚ್ಚರಿ ಮೂಡಿಸಿದ ಫಲಿತಾಂಶ

ಅವರು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ 2021ರಲ್ಲಿ ಪೂರ್ಣ ಅಂಕಗಳನ್ನು ಪಡೆದಿದ್ದಾರೆ. ಅವರು 720ಕ್ಕೆ 720 ಗಳಿಸಿದ ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಸ್ಕೋರ್‌ ಕಾರ್ಡ್‌ನಲ್ಲಿ AIR 1 ಅನ್ನು ನೋಡಿ ಉತ್ತರಗಳನ್ನು ಪರಿಶೀಲಿಸಿದ ನಂತರ ಅವರು ಅಗ್ರ ಶ್ರೇಯಾಂಕಿತರಲ್ಲಿ ಒಬ್ಬರು ಎಂದು ಕಂಡುಕೊಂಡರು.

ಮೃಣಾಲ್ ಸಿಬಿಎಸ್‍ಸಿ 12ನೇ ತರಗತಿ ಪರೀಕ್ಷೆಗಳಲ್ಲಿ 88.6% ಗಳಿಸಿದರು. ನೀಟ್ ಮತ್ತು 12ನೇ ತರಗತಿ ಬೋರ್ಡ್‍ಗಳ ಮೂಲವು ಒಂದೇ ಆಗಿದ್ದರೂ, ಪರೀಕ್ಷೆಯ ಪ್ರಯತ್ನದ ತಂತ್ರಗಳು ವಿಭಿನ್ನವಾಗಿವೆ.


First published: