MBBS ಸೀಟು ಸಿಕ್ಕರೂ ಬಾಲ್ಯದ ಕನಸನ್ನು ತ್ಯಾಗ ಮಾಡುತ್ತಿದ್ದಾರೆ ಈ ವ್ಯಕ್ತಿ- ಇದೇ ನೋಡಿ ಕಾರಣ

MBBS seat: "ನಾನು ಆ ಸೀಟನ್ನು ತೆಗೆದುಕೊಂಡು ಒಬ್ಬ ಯುವ ಸರ್ಕಾರಿ ಶಾಲಾ ವಿದ್ಯಾರ್ಥಿಯ ಅವಕಾಶಗಳನ್ನು ಹಾಳು ಮಾಡುವುದು ಸರಿಯಲ್ಲ ಎಂದು ಅವರು ಹೇಳುತ್ತಾರೆ. ಎಂಬಿಬಿಎಸ್ ನಂತರ, ನಾನು ಕೇವಲ 10-15 ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಆದರೆ ಒಬ್ಬ ಯುವ ವಿದ್ಯಾರ್ಥಿಯು 40 ರಿಂದ 50 ವರ್ಷಗಳ ಕಾಲ ಸೇವೆ ಮಾಡಬಹುದು. ನನ್ನ ಮಗ ಹೇಳುವುದರಲ್ಲಿ ಅರ್ಥವಿದೆ" ಎಂದು ಶಿವಪ್ರಕಾಶಂ ವಿವರಿಸುತ್ತಾರೆ.

ಬೇರೆ ವಿದ್ಯಾರ್ಥಿಗಳಿಗಾಗಿ ಸೀಟ್​ ತ್ಯಾಗ

ಬೇರೆ ವಿದ್ಯಾರ್ಥಿಗಳಿಗಾಗಿ ಸೀಟ್​ ತ್ಯಾಗ

  • Share this:
ನಾವೆಲ್ಲಾರೂ ಚಿಕ್ಕವರಾಗಿದ್ದಾಗ ಯಾರಾದರೂ ನಮ್ಮನ್ನು ಮುಂದೆ ಓದಿಕೊಂಡು ಏನಾಗುತ್ತಿಯಾ ಎಂದು ಕೇಳಿದರೆ, ನಾವು ಮೊದಲು ಹೇಳುತ್ತಿದ್ದುದ್ದೇ ಓದಿಕೊಂಡು ದೊಡ್ಡ ಡಾಕ್ಟರ್ (doctor) ಆಗ್ತೀನಿ ಮುಂದೆ ಅಂತ. ಈಗಲೂ ಸಹ ಚಿಕ್ಕ ಮಕ್ಕಳಿಗೆ ನೀವು ಕೇಳಿದರೆ ಅವು ವೈದ್ಯರಾಗುತ್ತೇವೆ ಎಂದು ಹೇಳುತ್ತಾರೆ.ಈ ಕನಸನ್ನು ಅನೇಕರು ಕಂಡು ತಮ್ಮ ಜೀವನದಲ್ಲಿ ನಿಜವಾಗಿ ವೈದ್ಯರು ಆಗಿರುತ್ತಾರೆ. ಆದರೆ ಇದೇ ಕನಸು (dream) ನನಸು ಮಾಡಿಕೊಳ್ಳಲು ಕೆಲವರಿಗೆ ತುಂಬಾನೇ ಕಷ್ಟವಾಗುತ್ತದೆ. ಆದರೂ ಕೆಲವರು ತಮ್ಮ ಗುರಿಯನ್ನು ಹೇಗಾದರೂ ಮಾಡಿ ಸಾಧಿಸಬೇಕೆಂಬ ಛಲದಿಂದ ಪ್ರಯತ್ನ ಮಾಡುತ್ತಲೇ ಇರುವುದನ್ನು ಸಹ ನಾವು ನೋಡಿರುತ್ತೇವೆ.

ಇಲ್ಲಿಯೂ ಸಹ ಒಬ್ಬ ವ್ಯಕ್ತಿ ಇದ್ದಾರೆ, ಅವರ ಹೆಸರು ಕೆ. ಶಿವಪ್ರಕಾಶಂ ಅಂತ. ತನ್ನ ಕನಸನ್ನು ಎಲ್ಲಿಯೂ ಹಳಿ ತಪ್ಪಲು ಬಿಡಲಿಲ್ಲ, ಆದರೆ ಅವರ ಒಂದು ಒಳ್ಳೆಯ ಯೋಚನೆಯಿಂದ ಅವರಿಗೆ ವೈದ್ಯಕೀಯ ಸೀಟು ಸಿಕ್ಕರೂ ಸಹ ಬೇಡ ಎಂದು ನಿರ್ಧರಿಸುವ ಹಂತದಲ್ಲಿದ್ದಾರೆ.

ಧರ್ಮಪುರಿಯ 61 ವರ್ಷದ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕ ಕಳೆದ ವರ್ಷ ನೀಟ್ ಪರೀಕ್ಷೆಯನ್ನು ತೆಗೆದುಕೊಂಡರು ಮತ್ತು ಶುಕ್ರವಾರ ಅವರನ್ನು ಕೌನ್ಸೆಲಿಂಗ್‌ಗೆ ಕರೆಯಲಾಯಿತು ಮತ್ತು ಅವರು ತಮ್ಮ ವಿದ್ಯಾರ್ಥಿಯೊಬ್ಬರೊಂದಿಗೆ ಅದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

"ಅವರು ಸುಲಭವಾಗಿ ವೈದ್ಯಕೀಯ ಸೀಟನ್ನು ಪಡೆಯುತ್ತಾರೆ" ಎಂದು ಆಯ್ಕೆ ಸಮಿತಿ ಕಾರ್ಯದರ್ಶಿ ಡಾ. ಪಿ. ವಸಂತಮಣಿ ಹೇಳುತ್ತಾರೆ. "ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇಕಡಾ 7.5 ಕೋಟಾ ಅಡಿಯಲ್ಲಿ 437 ಎಂಬಿಬಿಎಸ್ ಸೀಟುಗಳಿವೆ ಮತ್ತು ಈ ವಿಭಾಗದಲ್ಲಿ ಅವರ ಶ್ರೇಣಿ 349 ಆಗಿದ್ದು, ಶುಕ್ರವಾರ ಒಟ್ಟು 719 ಅಭ್ಯರ್ಥಿಗಳನ್ನು ಕೌನ್ಸೆಲಿಂಗ್‌ಗೆ ಆಹ್ವಾನಿಸಲಾಗಿದೆ.

ಇದನ್ನೂ ಓದಿ: Americaದ ಈ ಮಹಿಳೆಗೆ ನಾಲಿಗೆ ಮೇಲೆ ಕೂದಲಂತೆ- ವಿಚಿತ್ರವಾದ್ರೂ ಸತ್ಯ

ಆದರೂ, ನೀಟ್‌ನಲ್ಲಿ 249 ಅಂಕಗಳನ್ನು ಗಳಿಸಿದ ಶಿವಪ್ರಕಾಶಂ ಬಹುಶಃ ವೈದ್ಯಕೀಯ ಅಧ್ಯಯನ ಮಾಡುವುದಿಲ್ಲ, ಏಕೆಂದರೆ ಕನ್ಯಾಕುಮಾರಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈಗಾಗಲೇ ಓದುತ್ತಿರುವ  ಮಗ ಆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

"ನಾನು ಆ ಸೀಟನ್ನು ತೆಗೆದುಕೊಂಡು ಒಬ್ಬ ಯುವ ಸರ್ಕಾರಿ ಶಾಲಾ ವಿದ್ಯಾರ್ಥಿಯ ಅವಕಾಶಗಳನ್ನು ಹಾಳು ಮಾಡುವುದು ಸರಿಯಲ್ಲ ಎಂದು ಅವರು ಹೇಳುತ್ತಾರೆ. ಎಂಬಿಬಿಎಸ್ ನಂತರ, ನಾನು ಕೇವಲ 10-15 ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಆದರೆ ಒಬ್ಬ ಯುವ ವಿದ್ಯಾರ್ಥಿಯು 40 ರಿಂದ 50 ವರ್ಷಗಳ ಕಾಲ ಸೇವೆ ಮಾಡಬಹುದು. ನನ್ನ ಮಗ ಹೇಳುವುದರಲ್ಲಿ ಅರ್ಥವಿದೆ" ಎಂದು ಶಿವಪ್ರಕಾಶಂ ವಿವರಿಸುತ್ತಾರೆ.

ಅದೇನೇ ಇದ್ದರೂ, ಅವರು ಧರ್ಮಪುರಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದಾರೆ. "ನಾನು ಕೌನ್ಸೆಲಿಂಗ್‌ಗೆ ಹೋಗುತ್ತಿದ್ದೇನೆ, ಏಕೆಂದರೆ ನಾನು ನನ್ನ ವಿದ್ಯಾರ್ಥಿಗಳಲ್ಲಿ ಒಬ್ಬರನ್ನು ಕರೆದು ಕೊಂಡು ಹೋಗುತ್ತಿದ್ದೇನೆ. ಒಬ್ಬ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕನಾಗಿ, ನಾನು ಆ ವೈದ್ಯಕೀಯ ಸೀಟನ್ನು ತೆಗೆದುಕೊಂಡು ಒಬ್ಬ ವಿದ್ಯಾರ್ಥಿಯ ಅವಕಾಶವನ್ನು ಕಸಿದು ಕೊಂಡಿದ್ದಕ್ಕಾಗಿ ನಾನು ತಪ್ಪಿತಸ್ಥ ಭಾವನೆ ಹೊಂದಲು ಬಯಸುವುದಿಲ್ಲ" ಎಂದು ಹೇಳಿದರು.

ಬಾಲ್ಯದಿಂದಲೂ ವೈದ್ಯರಾಗುವ ಕನಸು ಕಂಡಿದ್ದರು

"ನಾನು ಕೌನ್ಸೆಲಿಂಗ್ ಅನ್ನು ಬಿಟ್ಟು ಬಿಟ್ಟರೆ, ಒಬ್ಬ ಯುವಕ ಆ ಸೀಟನ್ನು ತೆಗೆದುಕೊಂಡು ಸಂತೋಷದಿಂದ ಮನೆಗೆ ಹೋಗುತ್ತಾನೆ" ಎಂದು ಅವರು ಹೇಳುತ್ತಾರೆ. ಅವರು ಈ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಗಮನಿಸುತ್ತಾರೆ, ಇದರಿಂದ ಅವರು ತಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬಹುದು.

ಶಿವಪ್ರಕಾಶಂ ಅವರು ಬಾಲ್ಯದಿಂದಲೂ ವೈದ್ಯನಾಗುವ ಕನಸು ಕಂಡಿದ್ದರು, ಆದರೆ ಅವರ ಕಡಿಮೆ ಪಿಯುಸಿ ಅಂಕಗಳು ಆ ಕನಸನ್ನು ಕೈಗೆಟುಕದಂತೆ ಮಾಡಿದವು. ನಂತರ ಪ್ರಾಣಿಶಾಸ್ತ್ರದಲ್ಲಿ ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸಿದ ನಂತರ ಅವರು ಮತ್ತೆ ವೈದ್ಯಕೀಯ ಸೀಟು ಪಡೆಯಲು ತಮ್ಮ ಪ್ರಯತ್ನವನ್ನು ಹಾಗೆಯೇ ಮುಂದುವರಿಸಿದರು ಮತ್ತು ಎರಡು ಬಾರಿ ಪ್ರಯತ್ನಿಸಿದರು, ಆದರೆ ಅವರು ಅದರಲ್ಲಿ ವಿಫಲರಾದರು.

ನಂತರ, ಅವರು ಧರ್ಮಪುರಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಾಣಿಶಾಸ್ತ್ರ ಶಿಕ್ಷಕರಾಗಿ ಕೆಲಸ ಮಾಡಿದರು, ಅಲ್ಲಿಂದ ಅವರು ನಿವೃತ್ತರಾದರು.

ಇದನ್ನೂ ಓದಿ: ಹೀಗೊಂದು ಐಡಿಯಾ ಕೊಟ್ರೆ ನಾಸಾ 7.4 ಕೋಟಿ ಕೊಡುತ್ತಂತೆ

ಆದರೂ, ನೀಟ್ ಪರೀಕ್ಷೆಯನ್ನು ಬರೆಯಲು ಗರಿಷ್ಠ ವಯಸ್ಸಿನ ಮಿತಿಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದಾಗ, ಶಿವಪ್ರಕಾಶಂ ಅವರಿಗೆ ಭರವಸೆ ಸಿಕ್ಕಂತಾಗಿ ಅವರು ಕಳೆದ ವರ್ಷ ಪರೀಕ್ಷೆಯನ್ನು ಬರೆದರು. "ಇದು ಕಷ್ಟಕರವಾಗಿದ್ದರೂ, ನೀಟ್ ಬರೆಯಲು ನಾನು ತುಂಬಾನೇ ಉತ್ಸುಕನಾಗಿದ್ದೆ" ಎಂದು ಶಿವಪ್ರಕಾಶಂ ಹೇಳಿದರು.
Published by:Sandhya M
First published: