NEET UG Admit Card 2021: ನೀಟ್​ ಪರೀಕ್ಷೆಗೆ ಅಡ್ಮಿಟ್​ ಕಾರ್ಡ್​ ಡೌನ್​ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ..!

ಯಾವುದೇ ವಿದ್ಯಾರ್ಥಿಯು ಕೊಟ್ಟಿರುವ ವೆಬ್​ಸೈಟ್​​ ಮೂಲಕ ನೀಟ್​ 2021ರ ಪ್ರವೇಶ ಪತ್ರವನ್ನು ಡೌನ್​​ಲೋಡ್ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅಥವಾ ಯಾವುದೇ ಸಮಸ್ಯೆ ಎದುರಿಸಿದರೆ, ಅಭ್ಯರ್ಥಿಯು 011-40759000 ಸಂಖ್ಯೆಗೆ ಸಂಪರ್ಕಿಸಬಹುದು ಅಥವಾ e-mail at neet@nta.ac.in.ಗೆ ಇ-ಮೇಲ್ ಮಾಡಬಹುದು.

ಅಡ್ಮಿಟ್ ಕಾರ್ಡ್​ ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ

ಅಡ್ಮಿಟ್ ಕಾರ್ಡ್​ ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ

  • Share this:
ನವದೆಹಲಿ(ಸೆ.07): ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-2021(NEET) ದಿನಾಂಕವನ್ನು ಮುಂದೂಡಲು ಸುಪ್ರೀಂ ಕೋರ್ಟ್​ ನಿರಾಕರಿಸಿದ ಬಳಿಕ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಮೆಡಿಕಲ್ ವಿದ್ಯಾರ್ಥಿಗಳಿಗೆ ಅಧಿಕೃತ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. NEET 2021ಕ್ಕೆ ನೊಂದಾಯಿಸಿದ ಅಭ್ಯರ್ಥಿಗಳು ತಮ್ಮ ಹಾಲ್​ ಟಿಕೆಟ್​ಗಳನ್ನು ಅಧಿಕೃತ ವೆಬ್​ಸೈಟ್​​​ ntaneet.nic.in ಅಥವಾ nta.ac.in ಗೆ ಭೇಟಿ ನೀಡಿ ಡೌನ್​ಲೋಡ್ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳ ಭಾರೀ ವಿರೋಧದ ನಡುವೆಯೂ ಇದೇ ಸೆಪ್ಟೆಂಬರ್ 12ರಂದು ಮಧ್ಯಾಹ್ಯ 2ರಿಂದ 5 ಗಂಟೆಯವರೆಗೆ ನೀಟ್ ಪರೀಕ್ಷೆ ನಡೆಯಲಿದೆ.

ಕೊಟ್ಟಿರುವ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಮ್ಮ ಅಪ್ಲಿಕೇಶನ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ಭರ್ತಿ ಮಾಡಿ ಬಳಿಕ ತಮ್ಮ ನೀಟ್​ ಪ್ರವೇಶ ಪತ್ರವನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು. ಓಎಂಆರ್(OMR)​ ಉತ್ತರ ಪತ್ರಿಕೆಯನ್ನು ಹೇಗೆ ಭರ್ತಿ ಮಾಡುವುದು ಎಂಬ ಸೂಚನೆಗಳೊಂದಿಗೆ ಮಾದರಿ ಓಎಂಆರ್​ ಉತ್ತರ ಪತ್ರಿಕೆಯನ್ನು ಈಗಾಗಲೇ ವೆಬ್​ಸೈಟ್​​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಯಾವುದೇ ವಿದ್ಯಾರ್ಥಿಯು ಕೊಟ್ಟಿರುವ ವೆಬ್​ಸೈಟ್​​ ಮೂಲಕ ನೀಟ್​ 2021ರ ಪ್ರವೇಶ ಪತ್ರವನ್ನು ಡೌನ್​​ಲೋಡ್ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅಥವಾ ಯಾವುದೇ ಸಮಸ್ಯೆ ಎದುರಿಸಿದರೆ, ಅಭ್ಯರ್ಥಿಯು 011-40759000 ಸಂಖ್ಯೆಗೆ ಸಂಪರ್ಕಿಸಬಹುದು ಅಥವಾ e-mail at neet@nta.ac.in.ಗೆ ಇ-ಮೇಲ್ ಮಾಡಬಹುದು.

ಇದನ್ನೂ ಓದಿ:Gold Price Today: ಮತ್ತೆ ಹೆಚ್ಚಾದ ಚಿನ್ನದ ಬೆಲೆ; ಇಂದು ಬೆಂಗಳೂರಿನಲ್ಲಿ ಎಷ್ಟಿದೆ ಗೊತ್ತಾ ರೇಟ್?

NEET 2021: ಪ್ರವೇಶ ಪತ್ರ ಡೌನ್​ಲೋಡ್ ಮಾಡಿಕೊಳ್ಳುವುದು ಹೇಗೆ?

ಹಂತ 1: ಮೊದಲಿಗೆ ntaneet.nic.in ವೆಬ್​ಸೈಟ್​ಗೆ ಭೇಟಿ ನೀಡಿ.

ಹಂತ 2: ಬಳಿಕ ‘ಡೌನ್​ಲೋಡ್​ ಅಡ್ಮಿಟ್​ ಕಾರ್ಡ್​‘ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 3: ಅಲ್ಲಿ ಕೇಳಿರುವ ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಆಗಿ.

ಹಂತ 4: ಆಗ ನಿಮ್ಮ ಪ್ರವೇಶ ಪತ್ರ ಲಭ್ಯವಾಗುತ್ತದೆ, ಬಳಿಕ ಡೌನ್​ಲೋಡ್ ಮಾಡಿಕೊಳ್ಳಿ.

NEET 2021: ಅಡ್ಮಿಟ್ ಕಾರ್ಡ್​​ನಲ್ಲಿ ಅಭ್ಯರ್ಥಿಗಳು ಯಾವೆಲ್ಲಾ ವಿಷಯಗಳನ್ನು ಪರಿಶೀಲಿಸಬೇಕು?

ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಡೌನ್​ಲೋಡ್ ಮಾಡಿಕೊಂಡ ಬಳಿಕ ಅದರಲ್ಲಿ ಯಾವುದೇ ದೋಷವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹಾಗಿದ್ರೆ ಯಾವ ವಿಷಯಗಳ ಬಗ್ಗೆ ಪರಿಶೀಲನೆ ಅಗತ್ಯ? ಇಲ್ಲಿದೆ ಮಾಹಿತಿ.

1. ನಿಮ್ಮ ವೈಯಕ್ತಿಕ ವಿವರಗಳು ಸರಿಯಾಗಿದೆಯೇ ಎಂದು ನೋಡಿಕೊಳ್ಳಿ.

2. ಕಾಗುಣಿತ ತಪ್ಪಿದ್ದರೆ ಪರಿಶೀಲಿಸಿ

3. ಪರೀಕ್ಷಾ ಸ್ಥಳ ಮತ್ತು ಸಮಯ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.

4. ಕಾಗುಣಿತದೊಂದಿಗೆ ಶಾಲೆಯ ಹೆಸರು ಮತ್ತು ಇತರೆ ವಿವರಗಳ ಬಗ್ಗೆ ಗಮನ ಹರಿಸಿ.

5. ಕೊನೆಯದಾಗಿ ಕೋವಿಡ್ ಅಗತ್ಯ ಮಾರ್ಗಸೂಚಿಗಳನ್ನು ಓದಿ.

ಪರೀಕ್ಷೆಯಲ್ಲಿ 200 ಪ್ರಶ್ನೆಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಎ ವಿಭಾಗವು 35 ಪ್ರಶ್ನೆಗಳನ್ನು ಹೊಂದಿದ್ದರೆ, ಬಿ ವಿಭಾಗವು 15 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪ್ರಶ್ನೆಗೂ 4 ಅಂಕಗಳಿದ್ದು, ಪ್ರತೀ ತಪ್ಪು ಉತ್ತರಕ್ಕೆ ಒಂದು ಅಂಕವನ್ನು ಕಳೆಯಲಾಗುತ್ತದೆ.

ಇದನ್ನೂ ಓದಿ:NEET UG 2021 Exam: ಈ ವರ್ಷ ದುಬೈನಲ್ಲಿ ನಡೆಯಲಿದೆ ನೀಟ್ ಪರೀಕ್ಷೆ; ಅಭ್ಯರ್ಥಿಗಳು ಹೇಗೆ ರೆಡಿಯಾಗ್ಬೇಕು? ಇಲ್ಲಿದೆ ಫುಲ್ ಡೀಟೆಲ್ಸ್

ಈ ವರ್ಷ NEET 2021 ಪರೀಕ್ಷೆಯನ್ನು ಒಟ್ಟು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಹಿಂದಿ, ಪಂಜಾಬಿ, ಅಸ್ಸಾಮಿ, ಬೆಂಗಾಳಿ, ಒಡಿಯಾ, ಗುಜರಾತಿ, ಮರಾಠಿ, ತೆಲುಗು, ಮಲೆಯಾಳಂ, ಕನ್ನಡ, ತಮಿಳು, ಉರ್ದು ಮತ್ತು ಇಂಗ್ಲಿಷ್​ ಭಾಷೆಗಲ್ಲಿ ನೀಟ್​ ಪರೀಕ್ಷೆ ನಡೆಯಲಿದೆ. ಇವುಗಳಲ್ಲಿ ಪಂಜಾಬಿ ಮತ್ತು ಮಲೆಯಾಳಂ ಭಾಷೆಗಳನ್ನು ಇತ್ತೀಚೆಗೆ ಸೇರ್ಪಡೆ ಮಾಡಲಾಯಿತು.

ಇತ್ತೀಚೆಗೆ, ಶಿಕ್ಷಣ ಸಚಿವಾಲಯವು ತಮಿಳುನಾಡಿನಲ್ಲಿ ಹೆಚ್ಚುವರಿ ನೀಟ್​ ಯಜಿ ಪರೀಕ್ಷಾ ಕೇಂದ್ರಗಳನ್ನು ತೆರೆದಿದೆ. ಕೇಂದ್ರ ಶಿಕ್ಷಣ ಸಚಿವರು  ತಮಿಳುನಾಡಿನಲ್ಲಿ ಹೆಚ್ಚುವರಿ ನೀಟ್​ ಪರೀಕ್ಷಾ ಕೇಂದ್ರಗಳನ್ನು ಘೋಷಿಸಿದ್ದಾರೆ. ತಮಿಳುನಾಡಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚೆಂಗಲ್ ಪೇಟೆ, ವಿರುಧುನಗರ, ದಿಂಡಿಗಲ್ ಮತ್ತು ತಿರುಪ್ಪುರ್​ ಎಂಬ ನಾಲ್ಕು ನಗರಗಳನ್ನು ನೀಟ್​ ಪರೀಕ್ಷಾ ಕೇಂದ್ರಗಳ ಪಟ್ಟಿಗೆ ಸೇರಿಸಲಾಗಿದೆ.
Published by:Latha CG
First published: