• Home
  • »
  • News
  • »
  • national-international
  • »
  • ಒಳ ಉಡುಪು ತೆರೆದಿಟ್ಟು NEET ಪರೀಕ್ಷೆ ಬರೆಯಲು ವಿದ್ಯಾರ್ಥಿನಿಗೆ ಸೂಚನೆ; ಕೇರಳದಲ್ಲಿ ಶಾಕಿಂಗ್ ಘಟನೆ

ಒಳ ಉಡುಪು ತೆರೆದಿಟ್ಟು NEET ಪರೀಕ್ಷೆ ಬರೆಯಲು ವಿದ್ಯಾರ್ಥಿನಿಗೆ ಸೂಚನೆ; ಕೇರಳದಲ್ಲಿ ಶಾಕಿಂಗ್ ಘಟನೆ

ಸಾಂಕೇತಿ ಕಚಿತ್ರ

ಸಾಂಕೇತಿ ಕಚಿತ್ರ

ಪರೀಕ್ಷಾ ಕೇಂದ್ರ ಪ್ರವೇಶಿಸಲು ಒಳ ಉಡುಪು ಕಳಚುವಂತೆ ಹೇಳಿದ್ದು ವಿದ್ಯಾರ್ಥಿನಿಯ ಮೇಲೆ ಮಾನಸಿಕ ಆಘಾತ ಬೀರಿದೆ. ಉತ್ತಮವಾಗಿ ಪರೀಕ್ಷೆ ಎದುರಿಸಲು ಸಾಧ್ಯವಾಗಿಲ್ಲ ಎಂದು ವಿದ್ಯಾರ್ಥಿನಿಯ ಪೋಷಕರು ಕೊಲ್ಲಂ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.  

  • Share this:

    ತಿರುವನಂತಪುರಂ: NEET 2022 ಪರೀಕ್ಷೆಯಲ್ಲಿ ಪರೀಕ್ಷೆ ಕೊಠಡಿ ಪ್ರವೇಶಿಸಲು ವಿದ್ಯಾರ್ಥಿನಿಯೋಬ್ಬಳಿಗೆ ಒಳ ಉಡುಪು ಕಳಚುವಂತೆ ಸೂಚಿಸಿದ ಆಘಾತಕಾರಿ ಘಟನೆ ವರದಿಯಾಗಿದೆ. CNN News 18 ಈ ಕುರಿತು Exclusive ವರದಿ ಮಾಡಿದ್ದು  ಕೇರಳದ ಕೊಲ್ಲಂ ಜಿಲ್ಲೆಯ ಚಡಮಂಗಳದ ಮಾರ್ಥೋಮಾ  ಇನ್ಸ್​ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಸೆಂಟರ್​ನ NEET ಪರೀಕ್ಷಾ ಕೇಂದ್ರದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದಾಗಿ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿಯ ಪರವಾಗಿ ಪೋಷಕರು ಈಗಾಗಲೇ ದೂರು ದಾಖಲಿಸಿದ್ದಾರೆ. ಪರೀಕ್ಷಾ ಕೇಂದ್ರ ಪ್ರವೇಶಿಸಲು ಒಳ ಉಡುಪು ಕಳಚುವಂತೆ ಹೇಳಿದ್ದು ವಿದ್ಯಾರ್ಥಿನಿಯ ಮೇಲೆ ಮಾನಸಿಕ ಆಘಾತ ಬೀರಿದೆ. ಉತ್ತಮವಾಗಿ ಪರೀಕ್ಷೆ ಎದುರಿಸಲು ಸಾಧ್ಯವಾಗಿಲ್ಲ ಎಂದು ವಿದ್ಯಾರ್ಥಿನಿಯ ಪೋಷಕರು ಕೊಲ್ಲಂ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.  


    ಆದರೆ ಈ ಘಟನೆಯ ಕುರಿತು ಸ್ಥಳೀಯ ನೀಟ್ ಪರೀಕ್ಷಾ ಕೇಂದ್ರ ಜವಾಬ್ದಾರಿ ತೆಗೆದುಕೊಳ್ಳಲು ನಿರಾಕರಿಸಿದ್ದು, ಫ್ರಿಸ್ಕಿಂಗ್ ಮತ್ತು ಬಯೋಮೆಟ್ರಿಕ್ ತಪಾಸಣೆಯನ್ನು ಏಜೆನ್ಸಿಗಳಿಗೆ ವಹಿಸಲಾಗಿತ್ತು ಎಂದು ತಿಳಿಸಿದೆ. ದೂರಿನ ಪ್ರತಿ CNN News 18 ಗೆ ಲಭ್ಯವಾಗಿದೆ.


    100 ವಿದ್ಯಾರ್ಥಿನಿಯರಿಗೆ ಈ ರೀತಿ ಅವಮಾನ?
    ಪರೀಕ್ಷೆಯನ್ನು ತೆಗೆದುಕೊಳ್ಳುವ ಮೊದಲು ತಮ್ಮ ಒಳ ಉಡುಪನ್ನು ತೆಗೆಯುವಂತೆ  ಆರಂಭಿಕ 100 ವಿದ್ಯಾರ್ಥಿನಿಯರನ್ನು ಭಾನುವಾರ ಅವಮಾನಿಸಲಾಗಿದೆ. ಡ್ರೆಸ್ ಕೋಡ್ ಪ್ರಕಾರ, ವಿದ್ಯಾರ್ಥಿಗಳು ಪರೀಕ್ಷಾ ಹಾಲ್‌ಗೆ ಪ್ರವೇಶಿಸುವಾಗ ಯಾವುದೇ ಲೋಹದ ವಸ್ತು ಅಥವಾ ಪರಿಕರಗಳನ್ನು ಧರಿಸಲು ಮಾತ್ರವಷ್ಟೇ ಅನುಮತಿ ಇದ್ದಿರಲಿಲ್ಲ.  ಆದರೆ ವಿದ್ಯಾರ್ಥಿನಿಯರ ಬಳಿ ಒಳ ಉಡುಪನ್ನು ತೆಗೆದಿರು ಇಡುವಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಹೇಳಿದ್ದಾಗಿ ಆರೋಪ ಕೇಳಿಬಂದಿದೆ. ಈ ಕುರಿತು ವಿದ್ಯಾರ್ಥಿನಿಯೋರ್ವಳ  ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ. 


    ಮಾನಸಿಕ ಆಘಾತಕ್ಕೆ ಹೊಣೆ ಯಾರು?
    ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನವೇ ಮಾನಸಿಕ ಆಘಾತ ಎದುರಿಸಬೇಕಾಯಿತು ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಈಕುರಿತು ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 100 ಹುಡುಗಿಯರು ಈ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಈಕುರಿತು ಕೊಟ್ಟಾರಕ್ಕ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ.


    ಇದನ್ನೂ ಓದಿ: Husband Murder: ಜೀನ್ಸ್ ಪ್ಯಾಂಟ್​​ಗಾಗಿ ಗಂಡನನ್ನೇ ಕೊಲೆ ಮಾಡಿದ ಹೆಂಡತಿ; ಹಿಂಗ್ಯಾಕೆ ಆಯ್ತು?


    NEET ಪರೀಕ್ಷಾ ಕೇಂದ್ರಗಳಲ್ಲಿ ಮಹಿಳಾ ವಿದ್ಯಾರ್ಥಿಗಳು ಕಿರುಕುಳವನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷಗಳಲ್ಲೂ ಸಹ ಇದೇ ರೀತಿಯ ಆಘಾತಕಾರಿ ಘಟನೆಗಳು ನಡೆದಿದ್ದವು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.


    ಭಾರತದಲ್ಲಿ ಲಿಂಗ ತಾರತಮ್ಯ; ಉದಾಹರಣೆಗೆ ಈ ಘಟನೆಯೇ ಸಾಕು
    ಪರೀಕ್ಷೆ ಎಂಬುದು ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಮಹತ್ವದ್ದು. ಆದರೆ ಪರೀಕ್ಷಾ ಕೇಂದ್ರದ ಒಳ ಹೊಕ್ಕುವ ಮುನ್ನವೇ ಇಂತಹ ಮಾನಸಿಕ ಆಘಾತ ನಡೆದಲ್ಲಿ ಉತ್ತಮವಾಗಿ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗದು. ಅಲ್ಲದೇ ಭಾರತದಲ್ಲಿ ಲಿಂಗ ತಾರತಮ್ಯದ ಚಿತ್ರಣವನ್ನು ಸಹ ಈ ಘಟನೆ ಪ್ರತಿನಿಧಿಸುತ್ತದೆ ಎಂಬ ದೂರುಗಳು ಕೇಳಿಬಂದಿವೆ.


    ಇದನ್ನೂ ಓದಿ: K Chandrashekhar Rao: ಮೇಘಸ್ಫೋಟದ ಹಿಂದಿದ್ಯಾ ವಿದೇಶಿ ಕೈವಾಡ? ಕೆಸಿಆರ್‌ ಆರೋಪಿಸಿದ್ದು ಯಾರ ಮೇಲೆ?


    2017ರಲ್ಲಿ ಇದೇ ರೀತಿ ನಡೆದಿತ್ತು
    2017ರಲ್ಲಿ ಕಣ್ಣೂರಿನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷಾ ಕೇಂದ್ರದ ಒಳಹೊಕ್ಕುವ ಮುನ್ನ ವಿದ್ಯಾರ್ಥಿನಿಯೊಬ್ಬಳಿಗೆ ಒಳಉಡುಪು ತೆಗೆಯುವಂತೆ ಹೇಳಲಾಗಿತ್ತು. ಆಗ CBSE ಪರೀಕ್ಷೆ ನಡೆಸುವ ಜವಾಬ್ದಾರಿ ಹೊಂದಿತ್ತು. ಈಗ ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸುತ್ತದೆ. ಈ ಬಗ್ಗೆ ಪರೀಕ್ಷಾ ನಿರ್ವಾಹಕ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

    Published by:ಗುರುಗಣೇಶ ಡಬ್ಗುಳಿ
    First published: