HOME » NEWS » National-international » NEET 2020 TO BE HELD TODAY WITH OVER 15 LAKH ASPIRANTS MAY APPEAR SNVS

NEET 2020 – ಹಲವು ಆತಂಕಗಳ ಮಧ್ಯೆ ಇಂದು ನೀಟ್ ಪರೀಕ್ಷೆ; ಕೋವಿಡ್ ಮುಂಜಾಗ್ರತಾ ಕ್ರಮ ಜಾರಿ

ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್ ಸೇರಿದಂತೆ ಕೋವಿಡ್-19 ಮುಂಜಾಗ್ರತಾ ಕ್ರಮಗಳೊಂದಿಗೆ ಇಂದು ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಯಾದ ಎನ್ಇಇಟಿ ಇಂದು ದೇಶಾದ್ಯಂತ ನಡೆಯುತ್ತಿದೆ.

news18
Updated:September 13, 2020, 8:14 AM IST
NEET 2020 – ಹಲವು ಆತಂಕಗಳ ಮಧ್ಯೆ ಇಂದು ನೀಟ್ ಪರೀಕ್ಷೆ; ಕೋವಿಡ್ ಮುಂಜಾಗ್ರತಾ ಕ್ರಮ ಜಾರಿ
ಸಾಂದರ್ಭಿಕ ಚಿತ್ರ
  • News18
  • Last Updated: September 13, 2020, 8:14 AM IST
  • Share this:
ನವದೆಹಲಿ(ಸೆ. 13): ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಭಯದ ಮಧ್ಯೆ ಇವತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್​ಇಇಟಿ) ನಡೆಯುತ್ತಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎನ್​ಟಿಎ ಆಯೋಜಿಸಿರುವ ವೈದ್ಯಕೀಯ ವೃತ್ತಿಪರ ಕೋರ್ಸ್​​ಗಳ ಈ ಪ್ರವೇಶ ಪರೀಕ್ಷೆಯಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಒಟ್ಟು 15.97 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೊಂದಾಯಿಸಿದ್ದಾರೆ. ಸಾಮಾಜಿಕ ಅಂತರ ಪಾಲನೆ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 2,546ರಿಂದ 3,843ಕ್ಕೆ ಏರಿಸಲಾಗಿದೆ. ಒಂದು ಕೊಠಡಿಯಲ್ಲಿ 24 ಬದಲು ಗರಿಷ್ಠ 12 ಪರೀಕ್ಷಾರ್ಥಿಗಳನ್ನಷ್ಟೇ ಕೂರಿಸಬೇಕೆಂದು ಸೂಚಿಸಲಾಗಿದೆ. ಇದರಿಂದಾಗಿ ಹಲವೆಡೆ ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಬದಲಾವಣೆ ಆಗಿದೆ. ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಮಾಡುವ ವೇಳೆ ಮತ್ತು ಅಲ್ಲಿಂದ ನಿರ್ಗಮಿಸುವ ವೇಳೆ ಸಾಮಾಜಿಕ ಅಂತರ ಪಾಲನೆಯಾಗುವಂತೆ ಎಚ್ಚರ ವಹಿಸಲಾಗುತ್ತಿದೆ.

ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷಾ ಮಾರ್ಗಸೂಚಿಗಳನ್ನ ತಿಳಿಸಲಾಗಿದೆ. ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿವ ವಿದ್ಯಾರ್ಥಿಗಳು ಮಾಸ್ಕ್ ಮತ್ತು ಸ್ಯಾನಿಟೈಸರ್ ಹೊಂದಿರಬೇಕು. ಅಲ್ಲಿಯೇ ಮಾಸ್ಕ್ ಒದಗಿಸಲಾಗುತ್ತದೆ. ಇನ್ನು, ಕೆಲ ರಾಜ್ಯಗಳಲ್ಲಿ ಲಾಕ್​ಡೌನ್ ಇರುವ ಹಿನ್ನೆಲೆಯಲ್ಲಿ ನೀಟ್ ಪರೀಕ್ಷಾರ್ಥಿಗಳಿಗಾಗಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಪೂರ್ಣ ವಿದ್ಯಾರ್ಥಿ ವೇತನ; ನಟ ಸೋನು ಸೂದ್ ಘೋಷಣೆ

ಆದರೆ, ಕೆಲ ವಿದ್ಯಾರ್ಥಿಗಳು, ಪೋಷಕರು ಮತ್ತು ಸಂಘಟನೆಗಳ ವಿರೋಧದ ನಡುವೆ ಪರೀಕ್ಷೆ ಆಯೋಜಿಸಲಾಗುತ್ತಿರುವುದು ಗಮನಾರ್ಹ. ವಿದ್ಯಾರ್ಥಿಗಳ ಜೀವವನ್ನು ಅಪಾಯದಲ್ಲಿಟ್ಟು ಪರೀಕ್ಷೆ ನಡೆಸುವ ಅಗತ್ಯವೇನು ಎಂಬುದು ವಿರೋಧಿಗಳ ಆಕ್ಷೇಪ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಿಕ್, ತಮಿಳುನಾಡು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ದೆಲಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಮುಖಂಡರು ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನ ಮುಂದೂಡಬೇಕೆಂದು ಒತ್ತಾಯಿಸಿದ್ದರು. ತಮಿಳುನಾಡಿನಲ್ಲಿ ವಿರೋಧದ ಪ್ರಮಾಣ ಹೆಚ್ಚಿದೆ. ಇಲ್ಲಿ ನಿನ್ನೆ ಮದುರೈನ ಜ್ಯೋತಿ ಶ್ರೀದುರ್ಗ ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನಷ್ಟು ಕಹಿವಾತಾವರಣ ನೆಲಸುವಂತೆ ಮಾಡಿದೆ.

ಕೆಲ ದಿನಗಳ ಹಿಂದೆ ಎಂಜಿನಿಯರಿಂಗ್ ಕೋರ್ಸ್​ಗಳ ಪ್ರವೇಶಕ್ಕೆ ಜೆಇಇ ಪರೀಕ್ಷೆಗಳನ್ನ ಯಶಸ್ವಿಯಾಗಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸುವುದು ಒಳ್ಳೆಯದು. ಕಷ್ಟಪಟ್ಟು ಓದಿದ ಮಕ್ಕಳು ಮುಂದಿನ ಕೋರ್ಸ್​ಗಳ ಸೇರ್ಪಡೆಗೆ ಇದು ಅಗತ್ಯ ಇದೆ ಎಂಬುದು ಸಮರ್ಥಕರ ವಾದ. ಸುಪ್ರೀಂ ಕೋರ್ಟ್ ಕೂಡ ಪರೀಕ್ಷೆಗಳಿಗೆ ತಡೆ ನೀಡಲು ನಿರಾಕರಿಸಿದೆ.
Published by: Vijayasarthy SN
First published: September 13, 2020, 8:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories