ಪೋಷಕರ ಬಗ್ಗೆ ತನ್ನ ಕನಸೊಂದನ್ನು ನನಸು ಮಾಡಿಕೊಂಡ ನೀರಜ್ ಚೋಪ್ರಾ ..!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಶನಿವಾರ ತಮ್ಮ ಹೆತ್ತವರಾದ ಸತೀಶ್ ಕುಮಾರ್ ಮತ್ತು ಸರೋಜ್ ದೇವಿ ಅವರನ್ನು ವಿಮಾನದಲ್ಲಿ ಕರೆದೊಯ್ಯುವುದರೊಂದಿಗೆ ತಮ್ಮ ಒಂದು ಕನಸನ್ನು ಪೂರೈಸಿ ಕೊಂಡಿದ್ದಾರೆ.

ತಂದೆ ತಾಯಿಯೊಂದಿಗೆ ನೀರಜ್ ಚೋಪ್ರ.

ತಂದೆ ತಾಯಿಯೊಂದಿಗೆ ನೀರಜ್ ಚೋಪ್ರ.

  • Share this:

ಮಕ್ಕಳಿಗೆ ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕನಸು ಇರುವುದು ಸಾಮಾನ್ಯವಾದ ವಿಷಯ. ಆದರೆ ಎಷ್ಟು ಜನ ಮಕ್ಕಳಿಗೆ ತಮ್ಮ ತಂದೆ ತಾಯಿಯನ್ನು ಸಂತೋಷದಿಂದ ನೋಡಿಕೊಳ್ಳಲು ಆಗುತ್ತದೆ ಹೇಳಿ.ಆದರೆ ಕೆಲವೊಬ್ಬರಿಗೆ ತಾವು ಪೋಷಕರ ಬಗ್ಗೆ ಕಂಡಂತಹ ಕನಸು ಅವರೇ ನನಸು ಮಾಡಿಕೊಳ್ಳುವ ಭಾಗ್ಯ ದೊರೆಯುತ್ತದೆ. ಕೆಲವು ತಿಂಗಳುಗಳ ಹಿಂದೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಹೆಮ್ಮೆ ಪುತ್ರರಾದ ನೀರಜ್ ಚೋಪ್ರಾ ತಮ್ಮ ಪೋಷಕರ ಬಗ್ಗೆ ತಮಗಿರುವ ಒಂದು ಚಿಕ್ಕ ಕನಸನ್ನು ನನಸಾಗಿಸಿಕೊಂಡಿದ್ದಾರೆ.


ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಶನಿವಾರ ತಮ್ಮ ಹೆತ್ತವರಾದ ಸತೀಶ್ ಕುಮಾರ್ ಮತ್ತು ಸರೋಜ್ ದೇವಿ ಅವರನ್ನು ವಿಮಾನದಲ್ಲಿ ಕರೆದೊಯ್ಯುವುದರೊಂದಿಗೆ ತಮ್ಮ ಒಂದು ಕನಸನ್ನು ಪೂರೈಸಿ ಕೊಂಡಿದ್ದಾರೆ. ಜಾವೆಲಿನ್ ಆಟಗಾರ ಹರಿಯಾಣದ ಪಾಣಿಪತ್ ಮೂಲದವರಾಗಿದ್ದು, ಬಡ ಕುಟುಂಬವೊಂದರಿಂದ ಬಂದವರಾಗಿದ್ದಾರೆ.


ನೀರಜ್ ಖಾಂದ್ರ ಎಂಬ ಸಣ್ಣ ಹಳ್ಳಿಯಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು. ತಂದೆ ಸತೀಶ್ ಕುಮಾರ್ ಒಬ್ಬ ರೈತರಾಗಿದ್ದು, ತಾಯಿ ಸರೋಜ್ ದೇವಿ ಗೃಹಿಣಿಯಾಗಿದ್ದಾರೆ. ಅವರಿಗೆ ಇಬ್ಬರು ಸಹೋದರಿಯರೂ ಇದ್ದಾರೆ.


23 ವರ್ಷದ ನೀರಜ್ ಖಾಲಿ ವಿಮಾನದಲ್ಲಿ ತಮ್ಮ ಹೆತ್ತವರೊಂದಿಗೆ ಇರುವ ಒಂದೆರಡು ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿರುವ ಖಾತೆಯಲ್ಲಿ ಹಂಚಿಕೊಂಡು ಭಾವನಾತ್ಮಕ ಶೀರ್ಷಿಕೆಯನ್ನು ಸಹ ಅದಕ್ಕೆ ಬರೆದಿದ್ದಾರೆ. ಈ ಫೋಟೋವನ್ನು ಲಕ್ಷಾಂತರ ಜನರು ಇಷ್ಟ ಪಟ್ಟಿದ್ದಾರೆ.


ನೀರಜ್ ತಮ್ಮ ತಂದೆ ತಾಯಿಯ ಜೊತೆಗೆ ಎಲ್ಲಿಗೆ ಪ್ರಯಾಣಿಸುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ, ಆದರೆ ಚೋಪ್ರಾ ಪೋಷಕರು ತಾವು ಮೊದಲ ಬಾರಿ ವಿಮಾನ ಹತ್ತಿದ ತಕ್ಷಣವೇ ಮೂವರ ಮುಖದಲ್ಲಿ ಒಂದು ದೊಡ್ಡ ನಗು ಇತ್ತು ಎಂದು ಹೇಳಲಾಗುತ್ತಿದೆ.


"ನನ್ನ ಹೆತ್ತವರನ್ನು ಒಮ್ಮೆಯಾದರೂ ವಿಮಾನದಲ್ಲಿ ನಾನು ಕರೆದೊಯ್ಯಬೇಕೆಂದು ಒಂದು ಚಿಕ್ಕ ಕನಸು ಇತ್ತು. ಅದನ್ನು ಈಗ ನನಸು ಮಾಡಿಕೊಳ್ಳಲು ನನಗೆ ಸಾಧ್ಯವಾಯಿತು" ಎಂದು ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.


ಆಗಸ್ಟ್‌ನಲ್ಲಿ ಟೋಕಿಯೋ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಪ್ರದರ್ಶನದ ನಂತರ ನೀರಜ್ ಚೋಪ್ರಾ ಪ್ರಸ್ತುತ ವಿರಾಮದಲ್ಲಿದ್ದಾರೆ. ಚೋಪ್ರಾ ದೇಶಕ್ಕೆ ಹಿಂದಿರುಗಿದಾಗಿನಿಂದ ಸ್ವಲ್ಪವೂ ಬಿಡುವಿಲ್ಲದೆ ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದರಿಂದ ತುಂಬಾ ದಣಿದಿದ್ದರು ಮತ್ತು ಸ್ವಲ್ಪ ಜ್ವರದಿಂದಲೂ ಬಳಲುತ್ತಿದ್ದು, ಈಗ ಚೇತರಿಸಿಕೊಂಡಿದ್ದಾರೆ.


ಇದನ್ನೂ ಓದಿ: Kim Jong Un: ತೂಕ ಇಳಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ - ಹುಟ್ಟಿಕೊಂಡ ಹಲವಾರು ಪ್ರಶ್ನೆಗಳು

ಚೋಪ್ರಾ ಆಗಸ್ಟ್ 7 ರಂದು ಜಪಾನ್ ರಾಜಧಾನಿ ನಗರದಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದಾಗ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಮೊದಲ ಚಿನ್ನದ ಪದಕ ಗೆದ್ದರು. ಅಭಿನವ್ ಬಿಂದ್ರಾ ನಂತರ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ನೀರಜ್ ಚೋಪ್ರಾ ಪಾತ್ರರಾದರು.

First published: