ಮೈತ್ರಿ ಸರ್ಕಾರದ ಬಗ್ಗೆ ಅಂತಿಮ ಮಾತುಕತೆ ಆಗಿಲ್ಲ: ಸೋನಿಯಾ ಭೇಟಿ ಬಳಿಕ ಶರದ್​​ ಪವಾರ್​​ ಸ್ಪಷ್ಟನೆ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಬದಲಿಗೆ ಸದ್ಯದ ರಾಜಕೀಯ ಮತ್ತು ಸಂಖ್ಯಾಬಲದ ಕುರಿತು ಚರ್ಚಿಸಿದ್ದೇವೆ. ಶಿವಸೇನೆ ಮತ್ತು ಕಾಂಗ್ರೆಸ್​ನೊಂದಿಗೆ ಮೈತ್ರಿ ಸರ್ಕಾರದ ಬಗ್ಗೆ ಕೊನೆಯ ಸುತ್ತಿನ ಮಾತುಕತೆ ನಡೆಸಬೇಕಾಗಿದೆ ಎಂದರು ಶರದ್​​ ಪವಾರ್​​.

news18-kannada
Updated:November 18, 2019, 10:26 PM IST
ಮೈತ್ರಿ ಸರ್ಕಾರದ ಬಗ್ಗೆ ಅಂತಿಮ ಮಾತುಕತೆ ಆಗಿಲ್ಲ: ಸೋನಿಯಾ ಭೇಟಿ ಬಳಿಕ ಶರದ್​​ ಪವಾರ್​​ ಸ್ಪಷ್ಟನೆ
ಶರದ್ ಪವಾರ್- ಸೋನಿಯಾ ಗಾಂಧಿ
  • Share this:
ನವದೆಹಲಿ(ನ.18): ಶಿವಸೇನೆಯೊಂದಿಗೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡುವ ಸಂಬಂಧ ಇನ್ನೂ ಅಂತಿಮ ಮಾತುಕತೆಯಾಗಿಲ್ಲ ಎಂದು ಎನ್​​ಸಿಪಿ ವರಿಷ್ಠ ಶರದ್​​ ಪವಾರ್​​ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ಮೈತ್ರಿ ಸರ್ಕಾರ ರಚನೆ ಕುರಿತಂತೆ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂಬುದು ಸ್ಪಷ್ಟಪಡಿಸಿದ್ದಾರೆ. 

ಇಂದು ಸಂಜೆ ಭಾರತದ ರಾಜಧಾನಿ ದೆಹಲಿಯಲ್ಲಿ ಸೋನಿಯಾ ಗಾಂಧಿಯವರನ್ನು ಶರದ್​​ ಪವಾರ್​​ ಭೇಟಿಯಾಗಿದ್ದರು. ಬಳಿಕ ಸುದ್ದಿಗಾರರ ಜತೆ ಮಾತಾಡಿದ ಎನ್​​ಸಿಪಿ ವರಿಷ್ಠ ಶರದ್​​ ಪವಾರ್​​, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಬದಲಿಗೆ ಸದ್ಯದ ರಾಜಕೀಯ ಮತ್ತು ಸಂಖ್ಯಾಬಲದ ಕುರಿತು ಚರ್ಚಿಸಿದ್ದೇವೆ. ಶಿವಸೇನೆ ಮತ್ತು ಕಾಂಗ್ರೆಸ್​ನೊಂದಿಗೆ ಮೈತ್ರಿ ಸರ್ಕಾರದ ಬಗ್ಗೆ ಕೊನೆಯ ಸುತ್ತಿನ ಮಾತುಕತೆ ನಡೆಸಬೇಕಾಗಿದೆ ಎಂದರು.

ಈ ಮುನ್ನ ಸಂಸತ್​​ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸಿಎಂ ಶರದ್​​ ಪವಾರ್​​​, ಶಿವಸೇನೆ-ಬಿಜೆಪಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದವು. ನಾವು ಕಾಂಗ್ರೆಸ್​ ಮೈತ್ರಿಯಾಗಿ ಸ್ಪರ್ಧೆ ಮಾಡಿದ್ದೆವು. ಹೀಗಾಗಿ ನಮ್ಮ ದಾರಿ ನಮ್ಮದು. ಅವರ ದಾರಿ ಅವರದು. ನಮ್ಮ ರಾಜಕೀಯ ನಾವು ಮಾಡುತ್ತೇವೆ. ಶಿವಸೇನೆ-ಬಿಜೆಪಿ ತಮ್ಮ ತಮ್ಮ ದಾರಿಯಲ್ಲಿ ಸಾಗಲಿ ಎಂದು ಹೇಳಿದ್ದರು.

ಇದನ್ನೂ ಓದಿ: ಪಿ. ಚಿದಂಬರಂ ಜಾಮೀನು ತೀರ್ಪಿನ ವೇಳೆ ದೆಹಲಿ ಹೈಕೋರ್ಟ್​ ಯಡವಟ್ಟು: ಆಕಸ್ಮಿಕ ತಪ್ಪು ಸರಿಪಡಿಸಿ ಎಂದು ಇಡಿ ಮನವಿ

ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಗೆ ಮುನ್ನ ಶರದ್​​ ಪವಾರ್​​ ಹೀಗೆ ಹೇಳಿಕೆ ನೀಡಿರುವುದರಿಂದ ಶಿವಸೇನೆಗೆ ಭಾರೀ ಹಿನ್ನಡೆಯಾಗಿದೆ. ಇದರಿಂದ ಮತ್ತೀಗ ಮಹಾರಾಷ್ಟ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುತೂಹಲಕ್ಕೆ ಇನ್ನಷ್ಟು ಹೆಚ್ಚಾಗಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ. ಯಾವ ಪಕ್ಷವೂ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿಲ್ಲ. ಬಿಜೆಪಿ ಜೊತೆಗಿನ ಮೈತ್ರಿಗೆ ತಿಲಾಂಜಲಿ ಬಿಟ್ಟಿರುವ ಶಿವಸೇನೆ ಈ ಬಾರಿ ಕಾಂಗ್ರೆಸ್​- ಎನ್​ಸಿಪಿ ಜೊತೆ ಸೇರಿ ಸರ್ಕಾರ ರಚಿಸಲಿದೆ ಎನ್ನಲಾಗಿತ್ತು. ಆದರೆ, ಆ ಬಗ್ಗೆಯೂ ಇನ್ನೂ ಅಂತಿಮ ತೀರ್ಮಾನ ಹೊರಬಿದ್ದಿಲ್ಲ ಎಂಬುದೀಗ ಬಹಿರಂಗವಾಗಿದೆ ಎನ್ನಲಾಗಿತ್ತು.

ಈ ಮುನ್ನ ಸರ್ಕಾರ ರಚಿಸುವಂತೆ ಮೊದಲು ಬಿಜೆಪಿಗೆ ನಂತರ ಶಿವಸೇನಾಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್​​ ಸಿಂಗ್​ ಕೊಶ್ಯಾರಿ ಆಹ್ವಾನಿ ನೀಡಿದ್ದರು. ಆದರೆ, ಉಭಯ ಪಕ್ಷಗಳು ರಾಜ್ಯಪಾಲರು ನೀಡಿದ ಗಡುವಿನೊಳಗೆ ಸರ್ಕಾರ ರಚಿಸಲು ವಿಫಲವಾದವು. ಹಾಗಾಗಿ ಮತ್ತೆ ನಿನ್ನೆ ಸರ್ಕಾರ ರಚನೆಗೆ ಎನ್​ಸಿಪಿಗೆ ಆಹ್ವಾನ ನೀಡಿದ್ದರು. ಅಲ್ಲದೇ ಎನ್​​ಸಿಪಿಗೆ ಸರ್ಕಾರ ರಚಿಸಲು ಇಂದು ರಾತ್ರಿ 8:30ರವರೆಗೂ ಗಡುವು ನೀಡಿದ್ದರು. ಈ ಮಧ್ಯೆ ರಾಜ್ಯಪಾಲರು ಏಕಾಏಕಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರುವುದು ಈಗ ರಾಜಕೀಯ ವಲದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ರಾಜ್ಯಪಾಲರ ಶಿಫಾರಸು ಕಳುಹಿಸಿದ ಬಳಿಕ ಕೇಂದ್ರ ಸಂಪುಟವು ಸಭೆ ನಡೆಸಿ ಒಪ್ಪಿಗೆ ಸೂಚಿಸಿತು. ಈ ಶಿಫಾರಸಿಗೆ ರಾಷ್ಟ್ರಪತಿಯವರೂ ಅಂಕಿತ ಹಾಕಿದ್ದಾರೆ.

ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ ರಾಜ್ಯಪಾಲರ ಕ್ರಮಕ್ಕೆ ಎನ್​ಸಿಪಿ, ಕಾಂಗ್ರೆಸ್​ ಮತ್ತು ಶಿವಸೇನೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ನಡುವೆಯೇ ಶಿವಸೇನೆ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದು, ಎನ್​ಸಿಪಿ ಪಕ್ಷಕ್ಕೆ ನೀಡಿರುವ ಗಡುವು ಅಂತ್ಯವಾಗುವ ಮುನ್ನ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಮಾಡಿರುವುದನ್ನು ಪ್ರಶ್ನಿಸಿದೆ. ಎನ್​ಸಿಪಿಗೆ ಬಹುಮತ ಸಾಬೀತುಪಡಿಸಲು ಇನ್ನಷ್ಟು ಸಮಯ ನೀಡದೇ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದನ್ನು ಶಿವಸೇನೆ ಪ್ರಶ್ನಿಸಿ, ತುರ್ತು ಅರ್ಜಿ ವಿಚಾರಣೆ ಮಾಡುವಂತೆ ಮನವಿ ಮಾಡಿದೆ. ಕಾಂಗ್ರೆಸ್​ ಹಿರಿಯ ಮುಖಂಡ ಮತ್ತು ಹಿರಿಯ ನ್ಯಾಯವಾದಿ ಕಪಿಲ್​ ಸಿಬಲ್​ ಶಿವಸೇನೆ ಪರ ಅರ್ಜಿ ಸಲ್ಲಿಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್​​ ಶಾಸಕ ತನ್ವೀರ್​​ ಸೇಠ್​​ಗೆ ಚಾಕು ಇರಿತ: ಶೀಘ್ರ ಗುಣಮುಖರಾಗಲಿ ಎಂದ ಸಿಎಂ ಯಡಿಯೂರಪ್ಪ

ಯಾವುದೇ ಪಕ್ಷದಿಂದಲೂ ಸರ್ಕಾರ ರಚಿಸುವ ಪ್ರಯತ್ನ ಕಂಡುಬರದ ಹಿನ್ನೆಲೆಯಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆನ್ನಲಾಗಿದೆ. ರಾಜ್ಯಪಾಲರ ಶಿಫಾರಸು ಪತ್ರ ಕೇಂದ್ರ ಸರ್ಕಾರವನ್ನು ತಲುಪಿದ್ದು, ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಈ ಮೂಲಕ ಬಿಜೆಪಿ, ಶಿವಸೇನೆ, ಕಾಂಗ್ರೆಸ್​ ಮತ್ತು ಎನ್​ಸಿಪಿ ನಡುವಿನ ಹಗ್ಗಜಗ್ಗಾಟಕ್ಕೆ ರಾಷ್ಟ್ರಪತಿ ಅಂಕುಶದ ಅಂತ್ಯ ಸಿಗಲಿದೆಯಾ? ಸಿಕ್ಕಿದ್ದೇ ಆದಲ್ಲಿ ಮುಂದಿನ ಬೆಳವಣಿಗೆಯ ಬಗ್ಗೆ ಇನ್ನೂ ಹೆಚ್ಚು ಕುತೂಹಲ ಮನೆ ಮಾಡುವಂತಾಗಿದೆ.
----------
First published: November 18, 2019, 7:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading