Wrong Transaction: ಶಾಲೆಗೆ ಹೋಗೋ ಮಕ್ಕಳ ಖಾತೆಯಲ್ಲಿ 900 ಕೋಟಿ ರೂಪಾಯಿ, ದುಡ್ಡು ನೋಡಿ ಬ್ಯಾಂಕ್ ಮ್ಯಾನೇಜರ್ ಶಾಕ್!

900 Crore On Bank Account: : ಶಾಖೆಯ ಮ್ಯಾನೇಜರ್ ಮನೋಜ್ ಗುಪ್ತಾ ಈ ವಿಷಯ ತಿಳಿದು ಅಚ್ಚರಿಗೊಂಡಿದ್ದು,   ಮಕ್ಕಳು ಹಣವನ್ನು ಹಿಂಪಡೆಯುವುದನ್ನು ತಡೆದಿದ್ದಾರೆ.ಇನ್ನು ಈ ಬಗ್ಗೆ  ತನಿಖೆಗೆ ಆದೇಶಿಸಲಾಗಿದ್ದು,  ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಿಹಾರದಲ್ಲಿ(Bihar) ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗಳಲ್ಲಿ(Bank Account)  ದೊಡ್ಡ ಮೊತ್ತದ ಹಣ ಪಾವತಿಯಾಗಿದ್ದು, ಅದು ಅವರ ಕುಟುಂಬವನ್ನು ಮಾತ್ರವಲ್ಲದೇ, ಇಡೀ ಹಳ್ಳಿಯನ್ನು ಅಚ್ಚರಿಗೊಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.  ಮೂಲಗಳ ಪ್ರಕಾರ, ಗುರುಚಂದ್ರ ವಿಶ್ವಾಸ್ ಮತ್ತು ಅಸಿತ್ ಕುಮಾರ್ ಎನ್ನುವ ಮಕ್ಕಳ  ಖಾತೆಗಳಲ್ಲಿ ₹ 900 ಕೋಟಿಗಿಂತ ಹೆಚ್ಚು ಮೊತ್ತವನ್ನು ಜಮಾ ಮಾಡಲಾಗಿದೆ.  ಹುಡುಗರಿಬ್ಬರೂ ಕತಿಹಾರ್ ಜಿಲ್ಲೆಯ ಬಗೌರಾ ಪಂಚಾಯತ್‌ನ ಪಾಸ್ಟಿಯಾ ಗ್ರಾಮದಲ್ಲಿ ನಿವಾಸಿಗಳಾಗಿದ್ದು, ಖಾತೆಯಲ್ಲಿ ಹಣವನ್ನು ಕಂಡು ಅಚ್ಚರಿಕೊಂಡಿದ್ದಾರೆ. 

ರಾಜ್ಯ ಸರ್ಕಾರವು ಶಾಲಾ ಸಮವಸ್ತ್ರಕ್ಕಾಗಿ  ಠೇವಣಿ ಮಾಡಿದ ಮೊತ್ತದ ಬಗ್ಗೆ ತಿಳಿದುಕೊಳ್ಳಲು ಹುಡುಗರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಳೀಯ ಕೇಂದ್ರೀಕೃತ ಕೇಂದ್ರಕ್ಕೆ (CPC) ಭೇಟಿ ನೀಡಿದ್ದರು, ಆದರೆ ಭಾರೀ ಮೊತ್ತದ ಹಣದ ಬಗ್ಗೆ ತಿಳಿದ ನಂತರ ಅವರ ಮಕ್ಕಳಿಗೆ ಆಘಾತ ಉಂಟಾಗಿದೆ.  ಹುಡುಗರು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ವಿಶ್ವಾಸ್ ಖಾತೆಯಲ್ಲಿ ₹ 60 ಕೋಟಿ ಇದ್ದರೆ, ಕುಮಾರ್ ಅವರ ಖಾತೆಯಲ್ಲಿ ಇದ್ದಕ್ಕಿದ್ದಂತೆ ₹ 900 ಕೋಟಿ ಇತ್ತು ಎಂದು  ಮೂಲಗಳು ತಿಳಿಸಿವೆ.

ಶಾಖೆಯ ಮ್ಯಾನೇಜರ್ ಮನೋಜ್ ಗುಪ್ತಾ ಈ ವಿಷಯ ತಿಳಿದು ಅಚ್ಚರಿಗೊಂಡಿದ್ದು,   ಮಕ್ಕಳು ಹಣವನ್ನು ಹಿಂಪಡೆಯುವುದನ್ನು ತಡೆದಿದ್ದಾರೆ.ಇನ್ನು ಈ ಬಗ್ಗೆ  ತನಿಖೆಗೆ ಆದೇಶಿಸಲಾಗಿದ್ದು,  ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಕೆಲಸ ಕಳೆದುಕೊಂಡ ನಿರುದ್ಯೋಗಿಗಳಿಗೆ ಸರ್ಕಾರದಿಂದ ಶೇ 50ರಷ್ಟು ಭತ್ಯೆ; ಮಾಡಬೇಕಿರುವುದು ಇಷ್ಟೇ!

ಖಗರಿಯಾ ಜಿಲ್ಲೆಯಲ್ಲಿ ಸಹ  ಇದೇ ರೀತಿಯ ಪ್ರಕರಣವೊಂದು ವರದಿಯಾದ ಒಂದು ದಿನದ ನಂತರ  ಈ ಪ್ರಕರಣ ಬೆಳಕಿಗೆ ಬಂದಿದೆ. ಖಾಸಗಿ ಟ್ಯೂಟರ್  ರಂಜಿತ್ ದಾಸ್ ಎಂಬ ವ್ಯಕ್ತಿಯಲ್ಲಿ  ಅಕೌಂಟ್​ನಲ್ಲಿ ಬ್ಯಾಂಕ್  ಅಧಿಕಾರಿಗಳ  ತಪ್ಪಿನಿಂದಾಗಿ ₹ 5.5 ಲಕ್ಷ  ಪಾವತಿಯಾಗಿತ್ತು. ಆದರೆ ಅವರಿಗೆ ನೋಟಿಸ್ ನೀಡಿದರೂ ಮೊತ್ತವನ್ನು ಹಿಂದಿರುಗಿಸಲು ನಿರಾಕರಿಸಿದರು. ಆ ವ್ಯಕ್ತಿ ಸರ್ಕಾರದಿಂದ ಕಳುಹಿಸಿದ ಹಣ ಎಂದು ಭಾವಿಸಿ, ಅದನ್ನು ಉಪಯೋಹಿಸಲು ನಿರ್ಧರಿಸಿದ್ದರು.

ಕೊರೊನಾ ಮತ್ತು ಲಾಕ್​ಡೌನ್  ಕಾರಣದಿಂದ ಸರ್ಕಾರವು ನನ್ನ ಖಾತೆಗೆ ಹಣವನ್ನು ನನಗೆ ಕಳುಹಿಸಿದೆ ಎಂದು ನಾನು ಭಾವಿಸಿದೆ. ಈ ದಿನಗಳಲ್ಲಿ, ಬಹಳಷ್ಟು ಬ್ಯಾಂಕಿಂಗ್ ವಂಚನೆಗಳು ನಡೆಯುತ್ತವೆ ಮತ್ತು ಹಾಗಾಗಿ ನಾನು ಹಿಂತಿರುಗಿಸಲಿಲ್ಲ. ಹಾಗೆಯೇ ನಾನು ಕೆಲವು ಅಗತ್ಯಗಳನ್ನು ಹೊಂದಿದ್ದರಿಂದ, ನಾನು 1,60, 970 ರೂ ಖರ್ಚು ಮಾಡಿದೆ ಎಂದಿದ್ದಾರೆ.  ಅಲ್ಲದೇ ನನಗೆ ಬೇಕಾದಾಗ ಸರ್ಕಾರವು ಸ್ವಲ್ಪ ಹಣವನ್ನು ಕಳುಹಿಸಿರುವುದಕ್ಕೆ ನನಗೆ ಸಂತೋಷವಾಯಿತು.  ಅಲ್ಲದೇ ಬೇರೆ ಹೇಗೆ ನನ್ನ ಖಾಲಿ ಖಾತೆಗೆ ಹಣ ತಲುಪಬಹುದು ಎಂದು ದಾಸ್ ಪೊಲೀಸರಿಗೆ  ಮಾಹಿತಿ ನೀಡಿದ್ದಾರೆ.

ಈ ವರ್ಷ ಮಾರ್ಚ್​ ತಿಂಗಳಿನಲ್ಲಿ ನನ್ನ ಬ್ಯಾಂಕ್​ ಖಾತೆಗೆ ಹಣ ಬಂದಾಗ ನಾನು ತುಂಬಾ ಖುಷಿಪಟ್ಟಿದ್ದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲರ ಬ್ಯಾಂಕ್​ ಖಾತೆಗೂ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಹೇಳಿದ್ದರು. ಅಂತೆಯೇ ಅವರು ಕೊಟ್ಟ ಮಾತಿನಂತೆ ಮೊದಲ ಕಂತಿನಲ್ಲಿ 5 ಲಕ್ಷ ಹಣ ಹಾಕಿದ್ದಾರೆ. ನಾನು ಎಲ್ಲಾ ಹಣವನ್ನು ಖರ್ಚು ಮಾಡಿದ್ದೇನೆ. ಈಗ ನನ್ನ ಬ್ಯಾಂಕ್ ಖಾತೆಯಲ್ಲಿ ಯಾವುದೇ ಹಣವಿಲ್ಲ‘‘ ಎಂದು ದಾಸ್​ ಪೊಲೀಸರ ಬಳಿ ಹೇಳಿದ್ದಾನೆ.

ಇದನ್ನೂ ಓದಿ: ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಹೀಗೆ ತಪ್ಪಿ ಬಂದ ಹಣವನ್ನು ಖರ್ಚು ಮಾಡಿದ ದಾಸ್​ನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮೀಣ ಬ್ಯಾಂಕ್​ನ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ಮಾನ್ಸಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸದ್ಯ ಆತ ಖರ್ಚು ಮಾಡಿರುವ ಅಷ್ಟೂ ಹಣವನ್ನು ಪೊಲೀಸರು ಹೇಗೆ ರಿಕವರಿ ಮಾಡುತ್ತಾರೆ ಎನ್ನುವುದೇ ಕುತೂಹಲಕಾರಿ ಸಂಗತಿ.
Published by:Sandhya M
First published: