ಅಮೆರಿಕದ ಊಬರ್ ಪ್ರಯಾಣದ ವೇಳೆ ಎರಡು ವರ್ಷದಲ್ಲಿ 6000 ಲೈಂಗಿಕ ಹಲ್ಲೆ ಘಟನೆ

ಊಬರ್ ಸಂಸ್ಥೆ ಇದೇ ಮೊದಲ ಬಾರಿಗೆ ಪ್ರಯಾಣ ಅಸುರಕ್ಷತೆಯ ಮಾಹಿತಿಯನ್ನು ಹೊರಗೆಡವಿದೆ. ಅಮೆರಿಕದಲ್ಲಿ ಕಳೆದ ವರ್ಷ ಊಬರ್ ಸಂಸ್ಥೆ 130 ಕೋಟಿ ಸಂಖ್ಯೆಯಷ್ಟು ಪ್ರಯಾಣ ಸೇವೆ ನೀಡಿದೆ. ಇದಕ್ಕೆ ಹೋಲಿಸಿದರೆ ಅಪರಾಧ ಘಟನೆಗಳ ಪ್ರಮಾಣ ತೀರಾ ನಗಣ್ಯ. ಅಂದರೆ, ಒಂದು ಲಕ್ಷ ಪ್ರಯಾಣ ಸೇವೆಯಲ್ಲಿ ಇಂಥ ಎರಡು ದುರ್ಘಟನೆಗಳು ನಡೆದಿವೆ ಎಂದು ಕಂಪನಿ ಹೇಳಿಕೊಂಡಿದೆ.

news18
Updated:December 6, 2019, 11:17 AM IST
ಅಮೆರಿಕದ ಊಬರ್ ಪ್ರಯಾಣದ ವೇಳೆ ಎರಡು ವರ್ಷದಲ್ಲಿ 6000 ಲೈಂಗಿಕ ಹಲ್ಲೆ ಘಟನೆ
ಊಬರ್ ಟ್ಯಾಕ್ಸಿ
  • News18
  • Last Updated: December 6, 2019, 11:17 AM IST
  • Share this:
ಸ್ಯಾನ್ ಫ್ರಾನ್ಸಿಸ್ಕೋ(ಡಿ. 06): ಭಾರತ ಸೇರಿ ಹಲವು ದೇಶಗಳಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಪ್ರಯಾಣ ಸೇವೆ ನೀಡುತ್ತಿರುವ ಅಮೆರಿಕ ಮೂಲದ ಊಬರ್ ಸಂಸ್ಥೆ ಲೈಂಗಿಕ ಅಪರಾಧ ಘಟನೆಗಳ ಬಗ್ಗೆ ವರದಿ ನೀಡಿದೆ. ಊಬರ್ ರೈಡಿಂಗ್ ವೇಳೆ 2017 ಮತ್ತು 2018ರಲ್ಲಿ ಹೆಚ್ಚೂಕಡಿಮೆ 6 ಸಾವಿರದಷ್ಟು ಲೈಂಗಿಕ ಅಪರಧ ಘಟನೆಗಳು ನಡೆದಿವೆ ಎಂದು ಈ ವರದಿಯಲ್ಲಿದೆ. 2018ರ ಒಂದೇ ವರ್ಷದಲ್ಲಿ 3 ಸಾವಿರಕ್ಕೂ ಹೆಚ್ಚು ಲೈಂಗಿಕ ಹಲ್ಲೆಗಳು ನಡೆದಿವೆ ಎಂದು ಊಬರ್ ಹೇಳಿಕೊಂಡಿದೆ. ಈ ಘಟನೆಗಳಲ್ಲಿ 9 ಮಂದಿ ಕೊಲೆ ಹಾಗೂ 58 ಅಪಘಾತ ಪ್ರಕರಣಗಳು ಸೇರಿವೆ.

ಊಬರ್ ಸಂಸ್ಥೆ ಇದೇ ಮೊದಲ ಬಾರಿಗೆ ಪ್ರಯಾಣ ಅಸುರಕ್ಷತೆಯ ಮಾಹಿತಿಯನ್ನು ಹೊರಗೆಡವಿದೆ. ಅಮೆರಿಕದಲ್ಲಿ ಕಳೆದ ವರ್ಷ ಊಬರ್ ಸಂಸ್ಥೆ 130 ಕೋಟಿ ಸಂಖ್ಯೆಯಷ್ಟು ಪ್ರಯಾಣ ಸೇವೆ ನೀಡಿದೆ. ಇದಕ್ಕೆ ಹೋಲಿಸಿದರೆ ಅಪರಾಧ ಘಟನೆಗಳ ಪ್ರಮಾಣ ತೀರಾ ನಗಣ್ಯ. ಅಂದರೆ, ಒಂದು ಲಕ್ಷ ಪ್ರಯಾಣ ಸೇವೆಯಲ್ಲಿ ಇಂಥ ಎರಡು ದುರ್ಘಟನೆಗಳು ನಡೆದಿವೆ ಎಂದು ಕಂಪನಿ ಹೇಳಿಕೊಂಡಿದೆ.

ಈಗ ಅಮೆರಿಕದಲ್ಲಿ ಊಬರ್​ಗೆ ಪ್ರತಿಸ್ಪರ್ಧಿಯಾಗಿರುವ ಲಿಫ್ಟ್ (Lyft) ಸಂಸ್ಥೆ ಕೂಡ ತನ್ನ ಕ್ಯಾಬ್ ಸೇವೆಯಲ್ಲಿ ನಡೆದಿರುವ ಲೈಂಗಿಕ ಅಪರಾಧ ಮೊದಲಾದ ದುರ್ಘಟನೆಗಳ ಪಟ್ಟಿಯನ್ನು ಮಾಡಲು ಯೋಜಿಸಿದೆ.

ಇದನ್ನೂ ಓದಿ: ವಾರಂಗಲ್ ಮಾದರಿಯಲ್ಲೇ ನಡೆದೋಯ್ತು ಎನ್​ಕೌಂಟರ್; ಎರಡೂ ಪ್ರಕರಣದ ಹಿಂದಿದೆ ಕನ್ನಡಿಗ ವಿಶ್ವನಾಥ್ ಸಜ್ಜನವರ್ ಖದರ್!

ಅಮೆರಿಕದಲ್ಲಿ ಕ್ಯಾಬ್ ಸೇವೆಯಲ್ಲಿ ಅಪರಾಧಗಳು ನಡೆಯುತ್ತವೆ ಎಂಬ ಆರೋಪ ಸಾಕಷ್ಟು ಕಾಲದಿಂದಲೂ ಕೇಳಿಬರುತ್ತಿದೆ. ಕ್ಯಾಬ್ ಸೇವೆಯ ಪ್ರಾರಂಭದ ದಿನಗಳಲ್ಲಿ ಹೆಚ್ಚಿನ ವಿಚಾರಣೆ ಇಲ್ಲದೆಯೇ ಕಾರ್ ಮಾಲೀಕರನ್ನು ಸೇವೆಯ ವ್ಯಾಪ್ತಿಗೆ ತರಲಾಗಿತ್ತು. ಆದರೆ, ಅಪರಾಧ ಪ್ರಕರಣಗಳು ನಡೆದಂತೆ ಊಬರ್ ಮತ್ತಿತರ ಕ್ಯಾಬ್ ಸೇವೆ ಸಂಸ್ಥೆಗಳು ತಮ್ಮ ಡ್ರೈವರ್​ಗಳ ವಿಚಾರದಲ್ಲಿ ಹೆಚ್ಚು ಜಾಗರೂಕರಾಗತೊಡಗಿವೆ. ಕಳೆದ ಒಂದು ವರ್ಷದಲ್ಲಿ ಊಬರ್ ಸಂಸ್ಥೆ ಅಮೆರಿಕದೊಂದರಲ್ಲೇ 40 ಸಾವಿರ ಚಾಲಕರನ್ನು ಸೇವೆಯಿಂದ ವಿಮುಕ್ತಿಗೊಳಿಸಿದೆ.

ಭಾರತದಲ್ಲಿ 2017ರಲ್ಲಿ ಊಬರ್ ಕ್ಯಾಬ್​ನಲ್ಲಿ ಮಹಿಳೆ ಮೇಲೆ ಚಾಲಕ ಅತ್ಯಾಚಾರ ಎಸಗಿದ್ದು ದೊಡ್ಡ ಸುದ್ದಿಯಾಗಿತ್ತು. ಅಮೆರಿಕದ ಊಬರ್ ಕಚೇರಿಯಲ್ಲೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಆಗಿನಿಂದ ಊಬರ್ ಹೆಚ್ಚು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

(ವರದಿ: ನ್ಯೂಯಾರ್ಕ್ ಟೈಮ್ಸ್)ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 6, 2019, 11:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading