ದೇಶದಲ್ಲಿ ಕಾಣೆಯಾಗಿದ್ದಾರೆ ಬರೋಬ್ಬರಿ 2 ಲಕ್ಷ ಮಕ್ಕಳು

ಎನ್​ಜಿವೊ ವರದಿಯ ಪ್ರಕಾರ 4 ಲಕ್ಷಕ್ಕೂ ಹೆಚ್ಚು ಮಕ್ಕಳು ಬಾಲಗೃಹದಲ್ಲಿದ್ದರು, ಆದರೆ ಕೇಂದ್ರದ ವರದಿಯಲ್ಲಿ 2 ಲಕ್ಷ ಕಾಣೆ. ಮಕ್ಕಳು ಕಾಣೆಯಾಗಿರುವುದಕ್ಕೆ ಕಾರಣವೇನು ಎಂದು ಹೌಹಾರಿದೆ ಸುಪ್ರೀಂ ಕೋರ್ಟ್​.

news18
Updated:August 21, 2018, 7:31 PM IST
ದೇಶದಲ್ಲಿ ಕಾಣೆಯಾಗಿದ್ದಾರೆ ಬರೋಬ್ಬರಿ 2 ಲಕ್ಷ ಮಕ್ಕಳು
ಸುಪ್ರೀಂ ಕೋರ್ಟ್​ ಸಾಂದರ್ಭಿಕ ಚಿತ್ರ
news18
Updated: August 21, 2018, 7:31 PM IST
- ಉತ್ಕರ್ಷ್​ ಆನಂದ್​

ನವದೆಹಲಿ (ಆಗಸ್ಟ್​ 21): ದೇಶದಲ್ಲಿ ಬರೋಬ್ಬರಿ 2 ಲಕ್ಷ ಮಕ್ಕಳು ಕಾಣೆಯಾಗಿದ್ದಾರೆ ಎಂದರೆ ನೀವು ನಂಬಲೇ ಬೇಕು. ಸುಪ್ರೀಂ ಕೋರ್ಟ್​ ಮುಂದೆ ಮಂಗಳವಾರ ಮಕ್ಕಳ ಕಾಣೆಯಾದ ಬಗೆಗಿನ ವರದಿ ಬಂದಾಗ ನ್ಯಾಯಮೂರ್ತಿಗಳು ಹೌಹಾರಿದ್ದಾರೆ.

ದೇಶದಲ್ಲಿ ಈ ವರೆಗೂ ಕಾಣೆಯಾಗಿರುವವರ ಸಂಖ್ಯೆ 2 ಲಕ್ಷ. ಬಾಲಗೃಹದಲ್ಲಿ ಆಶ್ರಯ ಪಡೆದಿರುವ ಮಕ್ಕಳ ಸಂಖ್ಯೆ 4.3 ಲಕ್ಷ ಎಂದು ಚೈಲ್ಡ್​ಲೈನ್​ ಎಂಬ ಎನ್​ಜಿವೊ ವರದಿ ನೀಡಿತ್ತು. ಆದರೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಂದ ಮಾಹಿತಿ ಪಡೆದು ವರದಿಯೊಂದನ್ನು ಸಿದ್ಧಪಡಿಸಿತ್ತು. ವರದಿಯಲ್ಲಿ ದೇಶಾದ್ಯಂತ 8,600 ಬಾಲಗೃಹವಿದ್ದು, 2.6 ಲಕ್ಷ ಮಕ್ಕಳು ಆಶ್ರಯ ಪಡೆದಿದ್ದಾರೆ ಎಂಬ ಅಂಕಿ ಅಂಶಗಳನ್ನು ನೀಡಿತ್ತು. ಎನ್​ಜಿವೊ ನೀಡಿದ ವರದಿಗೂ ಕೇಂದ್ರ ಸರ್ಕಾರ ನೀಡಿದ ವರದಿಗೂ ಅಜಗಜಾಂತರ ವ್ಯತ್ಯಾಸವಿದೆ.
ವರದಿಯನ್ನು ನೋಡಿದ ನ್ಯಾಯಮೂರ್ತಿ ಮದನ್​ ಬಿ ಲೋಕುರ್​ "ಉಳಿದ ಮಕ್ಕಳು ಎಲ್ಲಿಗೆ ಹೋದರು. ಅದರಲ್ಲಿ ಎಷ್ಟು ಮಕ್ಕಳು ಕಾಣೆಯಾಗಿದ್ದಾರೆ. ಯಾಕೆಂದರೆ ಮಕ್ಕಳನ್ನು ದತ್ತು ಪಡೆಯುವವರ ಸಂಖ್ಯೆಯೂ ಹೆಚ್ಚೇನಿಲ್ಲ. ನಮಗೆ ನಿಜಕ್ಕೂ ಈ ವರದಿಯನ್ನು ನೋಡಿ ಶಾಕ್​ ಆಗುತ್ತಿದೆ," ಎಂದರು.ಸುಪ್ರೀಂ ಕೋರ್ಟ್​ ಅಂಕಿಅಂಶಗಳನ್ನು ನೋಡಿ ಶಾಕ್​ ಆಗುವುದರ ಜತೆಗೆ, ಬೇಸರವನ್ನೂ ವ್ಯಕ್ತಪಡಿಸಿತು. ಸುಪ್ರೀಂ ಕೋರ್ಟ್​ನ ಅಮಿಕಾಸ್​ ಕ್ಯೂರಿ ಅಪರ್ಣಾ ಭಟ್​ ಈ ಮಾಹಿತಿಯನ್ನು ಕೋರ್ಟಿಗೆ ತಿಳಿಸಿದ ನಂತರ ನ್ಯಾಯಪೀಠ ಕೇಂದ್ರಕ್ಕೆ ಕಾರಣವನ್ನು ನೀಡವಂತೆ ಸೂಚಿಸಿದೆ. ಇಷ್ಟು ಸಂಖ್ಯೆಯಲ್ಲಿ ಮಕ್ಕಳು ಕಾಣೆಯಾಗಲು ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ಕೋರ್ಟ್​ ಕೇಂದ್ರಕ್ಕೆ ತಿಳಿಸಿದೆ.


Loading...

ಇದಕ್ಕೆ ಕೇಂದ್ರದ ಪರವಾಗಿ ಪ್ರತಿಕ್ರಿಯಿಸಿದ ವಕೀಲ ಆರ್​ ಬಾಲಸುಬ್ರಮಣ್ಯನ್​ ಕೋರ್ಟ್​ನ ಪ್ರಶ್ನೆಗೆ ಸಮಂಜಸ ಉತ್ತರ ನೀಡುವಲ್ಲಿ ವಿಫಲರಾದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೆಚ್ಚು ಹಣ ಪಡೆಯುವ ಸಲುವಾಗಿ ಬಾಲಗೃಹಗಳು ಸುಳ್ಳು ದಾಖಲೆಗಳನ್ನು ನೀಡಿವೆ, ಅದಕ್ಕಾಗಿಯೇ ಎನ್​ಜಿವೊ ನೀಡಿದ ವರದಿ ಮತ್ತು ಕೇಂದ್ರದ ವರದಿಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ ಎಂದರು. ಆದರೆ ಈ ವಾದವನ್ನು ಕೋರ್ಟ್​ ಒಪ್ಪಲು ತಯಾರಿರಲಿಲ್ಲ.

ಮುಂದಿನ ವಿಚಾರಣೆಯ ದಿನದಂದು ಕೇಂದ್ರ ರಾಜ್ಯ ಸರ್ಕಾರಗಳಿಂದ ಮಾಹಿತಿ ಪಡೆದು ಸೂಕ್ತ ಉತ್ತರ ಹೇಳಬೇಕು ಎಂದು ಖಡಕ್​ ಎಚ್ಚರಿಕೆಯನ್ನು ನ್ಯಾಯಪೀಠ ನೀಡಿತು.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ