Coronavirus: ದೆಹಲಿಯಲ್ಲಿ ಖಾಕಿ ಬೆನ್ನತ್ತಿದ ಕೋವಿಡ್ -1700 ಪೊಲೀಸರಿಗೆ ಪಾಸಿಟಿವ್

1700 Police Tests Positive: ಇನ್ನು ಈ ಬಗ್ಗೆ ನಿನ್ನೆ ಮಾತನಾಡಿದ ಸಿಎಂ ಅರವಿಂದ ಕೇಜ್ರಿವಾಲ್, ದೆಹಲಿಯಲ್ಲಿ ಯಾವುದೇ ಲಾಕ್ ಡೌನ್ ಮಾಡಲ್ಲ ಎಂದಿದ್ದಾರೆ. ಬಲವಂತದಿಂದ ದೆಹಲಿಯಲ್ಲಿ ರಾತ್ರಿ ಕರ್ಫ್ಯೂನಂತಹ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದೇವೆ. ಕಳೆದ ವರ್ಷ ಕೊರೊನಾ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಹೆಚ್ಚಿನ ಪ್ರಕರಣಗಳು ಸೌಮ್ಯವಾದ ರೋಗ ಲಕ್ಷಣಗಳನ್ನ ಒಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾಷ್ಷ್ರ ರಾಜಧಾನಿ (India capital) ದೆಹಲಿಯಲ್ಲಿ ದಿನೇ ದಿನೇ ಕೊರೊನಾ (Corona virus) ಸ್ಫೋಟಗೊಳ್ಳುತ್ತಿದೆ. ದೆಹಲಿಯಲ್ಲಿ 21, 259 ಹೊಸ ಕೊರೊನಾ ಕೇಸ್ ದಾಖಲಾಗಿದ್ದು, ಮೇ ನಂತರದ ದಾಖಲಾಗಿರೋ ಕೇಸ್ ಗಳಲ್ಲಿ ಇದೆ ಅತಿ ಹೆಚ್ಚಿನದಾಗಿದೆ. ದೆಹಲಿಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 15,90,155 ಮತ್ತು ಸಾವಿನ ಸಂಖ್ಯೆ 25,200 ರಷ್ಟಿದೆ. ಪಾಸಿಟಿವಿಟಿ ದರ (Positivity rate) ಶೇ 25.65 ರಷ್ಷು ಇದೆ. ಇನ್ನು ದೆಹಲಿಯಲ್ಲಿ ಕೊರೊನಾ ವಾರಿಯರ್ಸ್ (Corona warriors) ಗಳಿಗೆ ಕೊರೊನಾ ಸೋಂಕು ಹರಡುತ್ತಿರೋದು ಆತಂಕ ಮೂಡಿಸಿದೆ.

  ಕೊರೊನಾ ಹರಡುವಿಕೆಯನ್ನು ತಡೆಯಲು ಹರಸಾಹಸ ಪಡುತ್ತಿರೋ ಪೊಲೀಸರನ್ನೇ ಕೊರೊನಾ ಬೆಂಬಿಡದೆ ಕಾಡುತ್ತಿದೆ. ದೆಹಲಿಯಲ್ಲಿ 1700 ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪೊಲೀಸ್ ಪ್ರಧಾನ ಕಚೇರಿ ಸೇರಿದಂತೆ ಎಲ್ಲಾ ಘಟಕಗಳು ಹಾಗೂ ಎಲ್ಲ ಪೊಲೀಸ್ ಠಾಣೆಗಳಲ್ಲಿನ ಹಲವಾರು ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾ ಕಟ್ಟಿಹಾಕಲು ರಾಷ್ಷ್ರ ರಾಜಧಾನಿ (India capital) ದೆಹಲಿಯಲ್ಲಿಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನ ಕಳೆದಂತೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

  ದೆಹಲಿಯಲ್ಲಿ ಖಾಸಗಿ ಕಚೇರಿಗಳು ಬಂದ್!
  ದೆಹಲಿಯಲ್ಲಿ ಖಾಸಗಿ ಕಚೇರಿಗಳನ್ನು ಮುಚ್ಚುವಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಆದೇಶಿಸಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ನಿನ್ನೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ಖಾಸಗಿ ಕಂಪನಿಗಳಿಗೆ ಶೇ.50 ರಷ್ಟು ಸಿಬ್ಬಂದಿಯನ್ನು ಮಾತ್ರ ಕಚೇರಿಗೆ ಕರೆಯುವಂತೆ ತಿಳಿಸಲಾಗಿದೆ.

  ಇದನ್ನೂ ಓದಿ: ಅಮೆರಿಕದಲ್ಲಿ ಕೋವಿಡ್ ರುದ್ರತಾಂಡವ; ಒಂದೇ ದಿನ 13 ಲಕ್ಷ ಪ್ರಕರಣ- ಹೊಸ ದಾಖಲೆ

  `ಯಾವುದೇ ಲಾಕ್ ಡೌನ್ ಮಾಡಲ್ಲ’
  ಇನ್ನು ಈ ಬಗ್ಗೆ ನಿನ್ನೆ ಮಾತನಾಡಿದ ಸಿಎಂ ಅರವಿಂದ ಕೇಜ್ರಿವಾಲ್, ದೆಹಲಿಯಲ್ಲಿ ಯಾವುದೇ ಲಾಕ್ ಡೌನ್ ಮಾಡಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಬಲವಂತದಿಂದ ದೆಹಲಿಯಲ್ಲಿ ರಾತ್ರಿ ಕರ್ಫ್ಯೂನಂತಹ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದೇವೆ. ಕಳೆದ ವರ್ಷ ಕೊರೊನಾ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಹೆಚ್ಚಿನ ಪ್ರಕರಣಗಳು ಸೌಮ್ಯವಾದ ರೋಗ ಲಕ್ಷಣಗಳನ್ನ ಒಂದಿದೆ. ಒಮಿಕ್ರಾನ್ ಸೌಮ್ಯವಾಗಿದೆ ಆದರೆ ಹೆಚ್ಚು ಸಾಂಕ್ರಾಮಿಕವಾಗಿದೆ. ಹೀಗಾಗಲೇ ಹಲವು ಕಠಿಣ ಕ್ರಮಗಳನ್ನ ಕೈಗೊಳ್ಳಲಾಗಿದ್ದು ಕೊರೊನಾ ಕೇಸ್ ಕಡಿಮೆಯಾಗ್ತಿದ್ದಂತೆ ನಿರ್ಬಂಧಗಳನ್ನ ಕಡಿತಗೊಳಿಸೋದಾಗಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

  ದೆಹಲಿಯಲ್ಲಿ ಸೋಂಕಿತರಿಗೆ ಯೋಗ ಕ್ಲಾಸ್
  ಅರವಿಂದ ಕೇಜ್ರಿವಾಲ್ ಸರ್ಕಾರ ಕೊರೊನಾ ಸೋಂಕಿತರಿಗೆ ಯೋಗ ಕ್ಲಾಸ್ ನಡೆಸಲು ನಿರ್ಧರಿಸಿದೆ. ಮನೆಯಲ್ಲಿಯೇ ಐಸೋಲೇಷನ್ ಆಗಿರೋ ಸೋಂಕಿತರಿಗೆ ಆನ್ ಲೈನ್ ಮೂಲಕ ಯೋಗ ಮತ್ತು ಧ್ಯಾನ ತರಗತಿ ನಡೆಸಲು ಸರ್ಕಾರ ನಿರ್ಧರಿಸಿದೆ. 1 ಗಂಟೆಗಳ ಕಾಲ ಆನ್ ಲೈನ್ ನಲ್ಲಿ ತರಬೇತಿ ನಡೆಯಲಿದೆ.

  ಓಮೈಕ್ರಾನ್ ಕೇಸ್  ವರದಿಯಾಗಿಲ್ಲ

  ಇದನ್ನೂ ಓದಿ: ಲಾಕ್​ಡೌನ್​ ಇಲ್ಲ ಆದ್ರೆ, ಈ ನಿಯಮ ಪಾಲನೆ ಮಾಡುವುದು ಕಡ್ಡಾಯ

  ರಾಷ್ಷ್ರ ರಾಜಧಾನಿ ದೆಹಲಿಯಲ್ಲಿ ಇವತ್ತು ಒಮಿಕ್ರಾನ್ (Omicron) ಹೊಸ ರೂಪಾಂತರದ ಯಾವುದೇ ಪ್ರಕರಣ ದಾಖಲಾಗಿಲ್ಲ. ರಾಜ್ಯದಲ್ಲಿ ಇದುವರೆಗೆ 546 ಹೊಸ ಒಮಿಕ್ರಾನ್ ಪ್ರಕರಣಗಳ ದಾಖಲಾಗಿದೆ. ಇದು ಮಹಾರಾಷ್ಟ್ರ ಮತ್ತು ರಾಜಸ್ಥಾನದ ನಂತರ ದೇಶದಲ್ಲಿ ಮೂರನೇ ಅತಿ ಹೆಚ್ಚು ಪ್ರಕರಣವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರೋ ಮಾಹಿತಿ ಪ್ರಕಾರ ದೇಶದಲ್ಲಿ ಈವರೆಗೆ 4,868 ಒಮಿಕ್ರಾನ್ ಕೇಸ್ ದಾಖಲಾಗಿದ್ದು, 1,281 ಪ್ರಕರಣ ಮಹಾರಾಷ್ಟ್ರದಲ್ಲೇ ವರದಿಯಾಗಿದೆ.

  ಪಾವನ‌ ಎಚ್ ಎಸ್
  Published by:Sandhya M
  First published: