Noida Twin Tower: ಗಗನಚುಂಬಿ ಕಟ್ಟಡ ಬೀಳೋದು ನೋಡುವುದಕ್ಕೆ ಜನರ ಕಾತರ, ಅಕ್ಕಪಕ್ಕದ ಬಿಲ್ಡಿಂಗ್‌ಗಳೆಲ್ಲ ಈಗ ಭರ್ತಿ!

ನೋಯ್ಡಾದ ಸೂಪರ್‌ಟೆಕ್‌ ಅವಳಿ ಕಟ್ಟಡಗಳ ಸಮೀಪವಿರುವ ಬಹುಮಹಡಿ ಕಟ್ಟಡಗಳು ಇದೀಗ ವಿಐಪಿ ಗ್ಯಾಲರಿಗಳಾಗಿ ಮಾರ್ಪಟ್ಟಿದ್ದು, ಭಾರತದ ಅತ್ಯಂತ ಎತ್ತರದ ಕಟ್ಟಡಗಳ ಕೆಡವುವಿಕೆಯ (Demolition) ಚಿತ್ರಣವನ್ನು ನೇರವಾಗಿ ಕಣ್ತುಂಬಿಕೊಳ್ಳಲು ವೀಕ್ಷಕರಿಂದ ಭರ್ತಿಯಾಗಿದೆ. ಸೂಪರ್‌ಟೆಕ್ ಕಟ್ಟಡದ ಸಮೀಪವಿರುವ ಬಹುಮಹಡಿ ಕಟ್ಟಡಗಳ ನಿವಾಸಿಗಳ ಸಂಬಂಧಿಕರು ಹಾಗೂ ಸ್ನೇಹಿತರು ಇದನ್ನು ನೇರವಾಗಿ ನೋಡುವುದಕ್ಕಾಗಿ ಮನೆಯ ಬಾಲ್ಕನಿಗಳನ್ನು ಕಾಯ್ದಿರಿಸುತ್ತಿದ್ದಾರೆ!

ನೋಯ್ಡಾದ ಸೂಪರ್‌ಟೆಕ್ ಅವಳಿ ಕಟ್ಟಡ

ನೋಯ್ಡಾದ ಸೂಪರ್‌ಟೆಕ್ ಅವಳಿ ಕಟ್ಟಡ

  • Share this:
ನೋಯ್ಡಾದ ಸೂಪರ್‌ಟೆಕ್‌ ಅವಳಿ ಕಟ್ಟಡಗಳ (Twin Building) ಸಮೀಪವಿರುವ ಬಹುಮಹಡಿ ಕಟ್ಟಡಗಳು ಇದೀಗ ವಿಐಪಿ ಗ್ಯಾಲರಿಗಳಾಗಿ ಮಾರ್ಪಟ್ಟಿದ್ದು, ಭಾರತದ ಅತ್ಯಂತ ಎತ್ತರದ ಕಟ್ಟಡಗಳ ಕೆಡವುವಿಕೆಯ (Demolition) ಚಿತ್ರಣವನ್ನು ನೇರವಾಗಿ ಕಣ್ತುಂಬಿಕೊಳ್ಳಲು ವೀಕ್ಷಕರಿಂದ ಭರ್ತಿಯಾಗಿದೆ. ಸೂಪರ್‌ಟೆಕ್ ಕಟ್ಟಡದ ಸಮೀಪವಿರುವ ಬಹುಮಹಡಿ ಕಟ್ಟಡಗಳ ನಿವಾಸಿಗಳ ಸಂಬಂಧಿಕರು (Families) ಹಾಗೂ ಸ್ನೇಹಿತರು (friends) ಕೆಡವು ಕಾರ್ಯವನ್ನು ನೇರವಾಗಿ ನೋಡುವುದಕ್ಕಾಗಿ ಮನೆಯ ಬಾಲ್ಕನಿಗಳನ್ನು ಕಾಯ್ದಿರಿಸುತ್ತಿದ್ದಾರೆ. ಇನ್ನು ಕೆಲವು ಮನೆಗಳಲ್ಲಿ ಸಂಪೂರ್ಣ ಕುಟುಂಬ ಸದಸ್ಯರು ಭಾನುವಾರ ಮಧ್ಯಾಹ್ನ 2:30ಕ್ಕೆ ಒಂದಾಗಿ ಸೇರಲಿದ್ದು ಜೀವನದಲ್ಲಿ ಒಮ್ಮೆ ಮಾತ್ರ ಸಂಭವಿಸುವ ಈ ಕ್ಷಣವನ್ನು ಕಣ್ತುಂಬಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ದೊರಕಿದೆ.

ಬೈನಾಕ್ಯುಲರ್‌ಗಳು, ವಿಡಿಯೋ ಕರೆ ಹಾಗೂ ಪ್ರವೇಶ ಶುಲ್ಕ
ಕೆಡವು ಕಾರ್ಯ ನಡೆಯುವ ಸಲುವಾಗಿ ಕಟ್ಟಡದ ಆಸುಪಾಸಿನಲ್ಲಿ ಟ್ರಾಫಿಕ್ ನಿರ್ಬಂಧಗಳನ್ನು ವಿಧಿಸಿರುವುದರಿಂದ ಕೆಲವೊಬ್ಬರು ಸ್ನೇಹಿತರು ಬಂಧುಗಳು ಹಿಂದಿನ ದಿನವೇ ಮನೆಯಲ್ಲಿರುತ್ತಾರೆಂದು ನಿವಾಸಿಗಳು ತಿಳಿಸಿದ್ದಾರೆ. ATS ಹ್ಯಾಮ್‌ಲೆಟ್‌ನ ನಿವಾಸಿಯಾಗಿರುವ ಅಲೋಕ್ ಸಹದೇವ್ ಹೇಳುವಂತೆ ಅವರಿಗೆ 7 ವರ್ಷದ ಮೊಮ್ಮಗನಿದ್ದು ಆತ ಕೂಡ ತನ್ನ ಹೆತ್ತವರೊಂದಿಗೆ ಬೈನಾಕ್ಯುಲರ್‌ನಲ್ಲಿ ಈ ದೃಶ್ಯವನ್ನು ನೋಡುವುದಕ್ಕಾಗಿ ಬರಲಿದ್ದಾನೆ ಎಂದು ತಿಳಿಸಿದ್ದಾರೆ. ಇನ್ನು ಯುಎಸ್‌ನಲ್ಲಿರುವ ಕುಟುಂಬಸ್ಥರಿಗೆ ವಿಡಿಯೋ ಕರೆಯ ಮೂಲಕ ಕೆಡವುವಿಕೆಯ ದೃಶ್ಯಾವಳಿಗಳನ್ನು ತೋರಿಸುವ ಯೋಜನೆ ಇರುವುದಾಗಿ ಅಲೋಕ್ ಹೇಳಿದ್ದಾರೆ.

ಇನ್ನು ಪ್ರತಿ ವ್ಯಕ್ತಿಗೆ 500 ರೂಗಳಂತೆ ಪ್ರವೇಶ ಶುಲ್ಕವನ್ನು ವಿಧಿಸಿರುವುದಾಗಿಯೂ ಅಲೋಕ್ ತಮ್ಮ ಬಂಧುಗಳೊಂದಿಗೆ ಹಾಸ್ಯಮಾಡಿರುವುದಾಗಿ ಹೇಳಿಕೊಂಡಿದ್ದು,  ಕೆಡವುವಿಕೆಯ ದೃಶ್ಯಾವಳಿಗಳಿಗೆ ಅವರು ಸಾಕ್ಷಿಯಾಗಬಹುದು. ಇನ್ನು ನಮ್ಮ ಕಟ್ಟಡದ 16 ನೇ ಮಹಡಿ ಬುಕ್ ಆದರೆ ನಾನು ಅತಿಥಿಗಳನ್ನು ನಮ್ಮ ನೆರೆಹೊರೆಯವರ ಸ್ಥಳಕ್ಕೆ ಕಳುಹಿಸುತ್ತೇನೆ ಎಂಬುದಾಗಿ ಅಲೋಕ್ ಹೇಳುತ್ತಾರೆ.

ಅಕ್ಕಪಕ್ಕದ ಮನೆಯವರಲ್ಲಿ ಸ್ಥಳ ಕಾಯ್ದಿರಿಸುವಂತೆ ಮನವಿ
ಇನ್ನೊಬ್ಬ ನಿವಾಸಿ ಅಂಶು ಸರ್ದಾ ತನಗಿಂತ ಇನ್ನಾರೂ ಕೂಡ ಇಷ್ಟೊಂದು ಉತ್ಸಾಹಿಗಳಾಗಿರಲಿಕ್ಕಿಲ್ಲ ಎಂದಿದ್ದಾರೆ. ತನ್ನ ಆರು ಜನ ಸ್ನೇಹಿತರೊಂದಿಗೆ ಪಾರ್ಟಿಯನ್ನು ಆಯೋಜಿಸಿದ್ದು ಸ್ನ್ಯಾಕ್ಸ್ ಹಾಗೂ ಪಾನೀಯಗಳೊಂದಿಗೆ ಕೆಡವುವಿಕೆಯ ದೃಶ್ಯಗಳನ್ನು ತನ್ನ ಟವರ್‌ನ ಟೆರೇಸ್‌ನಿಂದಲೇ ವೀಕ್ಷಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Building Demolition: 9 ಸೆಕೆಂಡ್​ಗಳಲ್ಲಿ ಕೊನೆಯಾಗಲಿದೆ 9 ವರ್ಷಗಳ ಹೋರಾಟ, ಇದು ಅವಳಿ ಕಟ್ಟಡದ ಕತೆ!

ನಾನು ಆ ದಿನಕ್ಕಾಗಿ ಕಾಯುತ್ತಿದ್ದೇನೆ. ಎಲ್ಲವೂ ಸರಿಯಾಗಿದ್ದರೆ ಈ ದಿನಕ್ಕಾಗಿ ಕಾನೂನು ಹೋರಾಟ ನಡೆಸಿದ ನಿವಾಸಿಗಳ ಗೆಲುವನ್ನು ಅವರೊಂದಿಗೆ ಸೇರಿ ಆಚರಿಸುತ್ತೇನೆ ಎಂದಿದ್ದಾರೆ. ಇನ್ನು ಬಿಸಿ ಬಿಸಿ ಚಹಾದೊಂದಿಗೆ ಬಾಲ್ಕನಿಯಲ್ಲಿದ್ದುಕೊಂಡು ಭಾರತದ ಅತಿದೊಡ್ಡ ಕಟ್ಟಡದ ಕೆಡವುವ ದೃಶ್ಯವನ್ನು ನೋಡುವುದಾಗಿ ಹೇಳಿದ್ದಾರೆ. ಇನ್ನು ಬಂಧು ಬಾಂಧವರೂ ಕೂಡ ಕರೆ ಮಾಡಿ ನಮಗೂ ಸ್ಥಳ ಕಾಯ್ದಿರಿಸಿ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ ಎಂಬುದು ನಿವಾಸಿಗಳ ಮಾತಾಗಿದೆ. 3,700 ಕೆಜಿ ಸ್ಫೋಟಕಗಳನ್ನು ಸ್ಫೋಟಿಸುವ ಶಬ್ಧ ಹೇಗಿರುತ್ತದೆ ಎಂಬುದನ್ನು ನೇರವಾಗಿ ನೋಡಿ ಕೇಳಬೇಕು ಎಂದು ಹೇಳಿದ್ದಾರೆ.

ಊರವರಲ್ಲಿ ಹೆಚ್ಚಿದ ಕುತೂಹಲ 
ಸೆಕ್ಟರ್ 110 ಲೋಟಸ್ ನ 7 ನೇ ಮಹಡಿಯಲ್ಲಿ ವಾಸಿಸುತ್ತಿರುವ ಪ್ರಮೋದ್ ಜಾದವ್ ಕಟ್ಟಡವನ್ನು 9-12 ಸೆಕೆಂಡ್‌ಗಳಲ್ಲಿ ಸ್ಫೋಟಿಸುತ್ತಾರೆ. ಹಾಗಿದ್ದರೆ ಆ ದೃಶ್ಯ ಮತ್ತು ಧ್ವನಿ ಹೇಗಿರಬಹುದು ಎಂಬ ಕುತೂಹಲ ನನ್ನಲ್ಲಿ ಮನೆಮಾಡಿದೆ. ನಾನು ಕಟ್ಟಡ ಕೆಡವುವಿಕೆಯ ಹಲವಾರು ವಿಡಿಯೋಗಳನ್ನು ನೋಡಿದ್ದೇನೆ. ಆದರೆ ನಿಜ ಜೀವನದಲ್ಲಿ ನೇರವಾಗಿ ಇದೇ ಮೊದಲ ಬಾರಿಗೆ ನೋಡುತ್ತಿರುವುದು ಹಾಗಾಗಿ ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Noida Twin Tower: 70 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಅವಳಿ ಗೋಪುರ ಧ್ವಂಸಕ್ಕೆ ಕಾರಣವಾಗಿದ್ದೇ ಈ ವಿಚಾರ

ಇನ್ನು ಉತ್ಸಾಹ ಕಾತರಗಳ ನಡುವೆ ಹೆಚ್ಚಿನ ನಿವಾಸಿಗಳಲ್ಲಿ ಆತಂಕ ಕೂಡ ಮನೆಮಾಡಿದೆ ಎಂದು ಸಹದೇವ್ ಹೇಳುತ್ತಾರೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಸಹದೇವ್ ತಮ್ಮ ವಾಟ್ಸ್ಯಾಪ್‌ನಲ್ಲಿ ಹೆಚ್ಚಿನ ಸಂದೇಶಗಳನ್ನು ಈ ಕುರಿತೇ ಸ್ವೀಕರಿಸಿದ್ದಾರೆ. ಅದರಲ್ಲಿ ಹೆಚ್ಚಿನ ಸಂದೇಹಗಳನ್ನು ನಿವಾರಿಸಿರುವುದಾಗಿಯೂ ಯಾವುದೇ ಅಪಾಯಗಳು ಎದುರಾಗುವುದಿಲ್ಲವೆಂದು ಭರವಸೆ ನೀಡಿರುವುದಾಗಿ ಸಹದೇವ್ ಹೇಳುತ್ತಾರೆ. ಇನ್ನು ನಿವಾಸಿಗಳಲ್ಲಿ ಕೆಲವರು ಕೆಡವುವಿಕೆಯ ದಿನ ಯಾವುದೇ ಹಾನಿ ಸಂಭವಿಸದೇ ಇರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇನ್ನು ಕೆಡವುವಿಕೆಯಿಂದ ಸಂಭವಿಸಬಹುದಾದ ಧೂಳಿನ ಪರಿಣಾಮ ಪರಿಸರದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು 18 ರ ಹರೆಯದ ಯಶ್ವಿ ಸಿಂಗ್ ಯೋಚನೆಯಾಗಿದೆ.
Published by:Ashwini Prabhu
First published: