ಇನ್ನೇನು ಕೋವಿಡ್-19 (Covid-19) ಸಾಂಕ್ರಾಮಿಕ ರೋಗದ ಪ್ರಕರಣಗಳು ಇಳಿಮುಖವಾಗುತ್ತಿವೆ ಎನ್ನುವಷ್ಟರಲ್ಲಿಯೇ ಮತ್ತೆ ದೇಶದಲ್ಲಿ ಕೋವಿಡ್ ಹೊಸ ರೂಪಾಂತರಿಯಾದ ಓಮೈಕ್ರಾನ್ ( Omicron) ಪ್ರಕರಣಗಳ ಸಂಖ್ಯೆ ಹಾಗೂ ಕೊರೊನಾ ಸೋಂಕಿತರು ಏರಿಕೆಯಾಗುವುದನ್ನು ನಾವು ನೋಡುತ್ತಿದ್ದೇವೆ. ಓಮೈಕ್ರಾನ್ ಪ್ರಕರಣಗಳ ಸಂಖ್ಯೆಯು ಈಗಾಗಲೇ ನಮ್ಮ ದೇಶದ ಬಹುತೇಕ ರಾಜ್ಯಗಳಲ್ಲಿ ಕಂಡು ಬಂದಿದ್ದು, ಈಗ ಈ ಪ್ರಕರಣಗಳ ಮೇಲೆ ತೀವ್ರ ನಿಗಾ ಇಡಲು ಮತ್ತು ಇವುಗಳ ಸಂಖ್ಯೆಯು ಹೆಚ್ಚಾಗದಂತೆ ನಿಯಂತ್ರಣ ಸಾಧಿಸಲು ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಡಿಡಿಎಂಎ) (Delhi Municipal Council) ಆದೇಶದ ಮೇರೆಗೆ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) (Delhi Disaster Management Authority( ತನ್ನ ವ್ಯಾಪ್ತಿಯಲ್ಲಿ ಬರುವಂತಹ ಬಹುತೇಕ ಬಾರಾತ್ ಘರ್ಗಳು, ವಿವಾಹ ಮೈದಾನಗಳು ( Wedding Grounds ) ಮತ್ತು ಸಮುದಾಯ ಕೇಂದ್ರಗಳಿಗೆ ಬುಕಿಂಗ್ ಮಾಡಿಸಿಕೊಳ್ಳುವುದನ್ನು ನಿಲ್ಲಿಸಿದೆ.
ಶೇಕಡಾ 100ರಷ್ಟು ಮರುಪಾವತಿ
ಪ್ರಸ್ತುತ ಈಗಾಗಲೇ ಬುಕಿಂಗ್ ಮಾಡಿರುವುದನ್ನು ಸಹ ರದ್ದುಗೊಳಿಸಲಾಗಿದೆ ಮತ್ತು ಅವರಿಗೆ ಶೇಕಡಾ 100ರಷ್ಟು ಮರುಪಾವತಿ ನೀಡಲಾಗುವುದು ಎಂದು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಘೋಷಿಸಿದೆ.
"ಎಲ್ಲಾ 9 ಬಾರಾತ್ ಘರ್ಗಳು, ಒಂದು ಶಾದಿ ಮೈದಾನ ಮತ್ತು 9 ಸಮುದಾಯ ಕೇಂದ್ರಗಳನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗಿದೆ. ಕೋವಿಡ್-19 ಮತ್ತು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಡಿಎಂಎ ಡಿಸೆಂಬರ್ 28ರಂದು ಹೊರಡಿಸಿದ ಆದೇಶಗಳ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಬುಕಿಂಗ್ ಗಳನ್ನು ರದ್ದುಗೊಳಿಸಲಾಗಿದೆ ಎಂದು ಎಲ್ಲಾ ಬುಕಿಂಗ್ ಪಾರ್ಟಿಗಳಿಗೆ ತಿಳಿಸಬಹುದು ಮತ್ತು ಆದ್ಯತೆಯ ಆಧಾರದ ಮೇಲೆ ಶೇಕಡಾ 100ರಷ್ಟು ಮರುಪಾವತಿ ನೀಡಲಾಗುವುದು" ಎಂದು ಎನ್ಡಿಎಂಸಿ ಅಧಿಕೃತ ಆದೇಶದಲ್ಲಿ ತಿಳಿಸಿದೆ.
ಶಾದಿ ಮೈದಾನದ ಬುಕಿಂಗ್ ರದ್ದು
"ಮುಂದಿನ ಅಧಿಕೃತ ಆದೇಶಗಳನ್ನು ಹೊರಡಿಸುವವರೆಗೆ ಮೇಲಿನ ಬಾರತ್ ಘರ್ ಮತ್ತು ಶಾದಿ ಮೈದಾನದ ಬುಕಿಂಗ್ ಅನ್ನು ತಕ್ಷಣ ನಿಲ್ಲಿಸುವಂತೆ ಐಟಿ ನಿರ್ದೇಶಕರನ್ನು ಕೋರಲಾಗಿದೆ ಮತ್ತು ಈಗಾಗಲೇ ಬುಕ್ ಮಾಡಿರುವ ಬುಕಿಂಗ್ ಪಕ್ಷಗಳಿಗೆ ತಮ್ಮ ನೋಂದಾಯಿತ ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ಬುಕಿಂಗ್ ಗಳನ್ನು ರದ್ದುಗೊಳಿಸುವ ಬಗ್ಗೆ ಪಠ್ಯ ಮತ್ತು ವಾಟ್ಸಪ್ ಸಂದೇಶಗಳನ್ನು ಕಳುಹಿಸುವ ಮೂಲಕ ಮಾಹಿತಿ ನೀಡಬಹುದು" ಎಂದು ತಿಳಿಸಿದೆ.
ಕೊರೊನಾ ಪ್ರಕರಣ ಏರಿಕೆ
ಎನ್ಡಿಎಂಸಿಯು ಬಾಪು ಧಾಮ್, ಖಾನ್ ಮಾರುಕಟ್ಟೆ, ಕಾಕಾ ನಗರ, ಕಿದ್ವಾಯಿ ನಗರ, ಲಕ್ಷ್ಮೀ ಬಾಯಿ ನಗರ, ಲೋಧಿ ರಸ್ತೆ, ಮಂದಿರ ಮಾರ್ಗ್, ಮೋತಿ ಬಾಗ್ ಮತ್ತು ನೇತಾಜಿ ನಗರದಲ್ಲಿ ತನ್ನ ಬರಾತ್ ಘರ್ಗಳನ್ನು ಹೊಂದಿದೆ. ಡಿಡಿಎಂಎ ಈ ವಾರದ ಆರಂಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಓಮೈಕ್ರಾನ್ ರೂಪಾಂತರದ ಪ್ರಕರಣಗಳ ನಡುವೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿಯೂ ಸಹ ಏರಿಕೆಯಾಗಿರುವುದರ ಬಗ್ಗೆ ಜನರಿಗೆ ಸುರಕ್ಷಿತವಾಗಿರಲು ಎಚ್ಚರಿಕೆ ನೀಡಿದೆ.
20 ಜನರ ಹಾಜರಾತಿಗೆ ಅನುಮತಿ
ಆದೇಶದ ಪ್ರಕಾರ, ಕೋರ್ಟ್ನಲ್ಲಿ ಅಥವಾ ಮನೆಯಲ್ಲಿ 20 ಜನರ ಹಾಜರಾತಿಯೊಂದಿಗೆ ಮಾತ್ರ ಮದುವೆಗಳಿಗೆ ಅನುಮತಿ ನೀಡಲಾಗುವುದು ಮತ್ತು ಯಾವುದೇ ಹೊರಾಂಗಣ ಸ್ಥಳವನ್ನು ಅನುಮತಿಸಲಾಗುವುದಿಲ್ಲ. "ನೋಡಲ್ ಅಧಿಕಾರಿಯನ್ನು ಸಹ ನೇಮಿಸಲಾಗಿದ್ದು, ಡಿಡಿಎಂಎ ಹೊರಡಿಸಿದ ಮಾರ್ಗಸೂಚಿಗಳು ಮತ್ತು ಎಸ್ಒಪಿಯನ್ನು ಎಲ್ಲಾ ಸರಿಯಾಗಿ ಅನುಸರಿಸಲಾಗುತ್ತಿದೆ ಎಂಬುದನ್ನು ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿರುತ್ತದೆ" ಎಂದು ಅದು ಹೇಳಿದೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ