ರಾಜ್ಯಸಭೆ ಚುನಾವಣೆ: ಎನ್​ಡಿಎ ಬೆಂಬಲಿತ ಅಭ್ಯರ್ಥಿ ಹರಿವಂಶ ಸಿಂಗ್​ಗೆ ಗೆಲುವು; ಕನ್ನಡಿಗ ಬಿ.ಕೆ. ಹರಿಪ್ರಸಾದ್​ಗೆ ಸೋಲು

news18
Updated:August 9, 2018, 2:32 PM IST
ರಾಜ್ಯಸಭೆ ಚುನಾವಣೆ: ಎನ್​ಡಿಎ ಬೆಂಬಲಿತ ಅಭ್ಯರ್ಥಿ ಹರಿವಂಶ ಸಿಂಗ್​ಗೆ ಗೆಲುವು; ಕನ್ನಡಿಗ ಬಿ.ಕೆ. ಹರಿಪ್ರಸಾದ್​ಗೆ ಸೋಲು
news18
Updated: August 9, 2018, 2:32 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಆ.9): ರಾಜ್ಯಸಭೆಯ ನೂತನ ಉಪಸಭಾಪತಿ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿಯಾಗಿದ್ದ ಜೆಡಿಯು ಸಂಸದ ಹರಿವಂಶ ನಾರಾಯಣ ಸಿಂಗ್​ 20 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.


ಪಿ.ಜೆ. ಕುರಿಯನ್​ ಅವರಿಂದ ತೆರವಾದ ನಡೆದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ಹರಿವಂಶ ನಾರಾಯಣ ಸಿಂಗ್​ ಮತ್ತು ಯುಪಿಎ ಅಭ್ಯರ್ಥಿಯಾಗಿ ಕಾಂಗ್ರೆಸ್​ ಸಂಸದ ಬಿ.ಕೆ. ಹರಿಪ್ರಸಾದ್​ ಸ್ಪರ್ಧೆಯಲ್ಲಿದ್ದರು. ಇಂದ ನಡೆದ ಚುನಾವಣೆಯಲ್ಲಿ ಹರಿವಂಶ ಸಿಂಗ್​ ಅವರಿಗೆ 125 ಮತ್ತು ಹರಿಪ್ರಸಾದ್​ ಅವರಿಗೆ 105 ಮತಗಳು ಲಭಿಸಿವೆ.

ರಾಜ್ಯಸಭೆಯಲ್ಲಿ ಒಟ್ಟು 245 ಸದಸ್ಯರಿದ್ದು, ಇಂದಿನ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ 237 ಸಂಸದರು ಉಪಸ್ಥಿತರಿದ್ದರು. ಎಎಪಿ ಮತ್ತು ಪಿಡಿಪಿ ಪಕ್ಷಗಳು ಚುನಾವಣೆಯಿಂದ ದೂರ ಉಳಿದಿದ್ದವು. ಕರುಣಾನಿಧಿ ನಿಧನದ ಕಾರಣದಿಂದ ಇಂದು ಕನ್ನಿಮೋಳಿ ಕೂಡ ಸದನಕ್ಕೆ ಹಾಜರಾಗಿರಲಿಲ್ಲ.

ಎನ್​ಡಿಎ ಮಿತ್ರಪಕ್ಷವಾದ ಶಿವಸೇನೆ ಕಾಂಗ್ರೆಸ್​ ಅಭ್ಯರ್ಥಿಗೆ ಬೆಂಬಲ ಸೂಚಿಸಿತ್ತು. ಎನ್​ಡಿಎಯಿಂದ ಹರಿವಂಶ ಸಿಂಗ್​ ಅವರನ್ನು ಘೋಷಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಶಿವಸೇನೆ ವಿರೋಧಪಕ್ಷದ ಅಭ್ಯರ್ಥಿಗೆ ಬೆಂಬಲ ಘೋಷಿಸಿತ್ತು. ಆದರೆ, ಶಿವಸೇನೆ ಬೆಂಬಲ ವಾಪಾಸ್​ ಪಡೆದರೂ ಆತ್ಮವಿಶ್ವಾಸದಿಂದಲೇ ಇದ್ದ ಎನ್​ಡಿಎ ಈ ಚುನಾವಣೆಗೆ ಈ ಮೊದಲೇ ಸಿದ್ಧತೆ ಮಾಡಿಕೊಂಡಿತ್ತು.

ತಮ್ಮಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್​ ಅವರಿಗೆ ಬೆಂಬಲ ನೀಡುವಂತೆ ಜೆಡಿಯು ಸಂಸದ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಹಾಗೇ, ಒರಿಸ್ಸಾದ ಬಿಜೆಡಿ ಪಕ್ಷದ 9 ಸಂಸದರೂ ತಮಗೆ ಬೆಂಬಲ ನೀಡುವಂತೆ ಪ್ರಧಾನಿ ಮೋದಿ ಖುದ್ದಾಗಿ ಕರೆಮಾಡಿ ಬಿಜೆಡಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಅದರ ಪ್ರತಿಫಲವಾಗಿ ಎನ್​ಡಿಎ ಉಪಸಭಾಪತಿ ಹುದ್ದೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
Loading...

 

 

 
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ