ಭೂಪಾಲ್​ ಲೋಕಸಭಾ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಠಾಕೂರ್ ಆಯ್ಕೆಗೆ ಎನ್​ಡಿಎ ನಾಯಕರಿಂದಲೇ ವಿರೋಧ

ಮಹಾರಾಷ್ಟ್ರ ಎಟಿಎಸ್​ ಮುಖ್ಯಸ್ಥರಾಗಿದ್ದ ಹೇಮಂತ್​ ಕರ್ಕರೆ ಬಗ್ಗೆ ಪ್ರಗ್ಯಾ ಸಿಂಗ್​ ಠಾಕೂರ್​ ನೀಡಿರುವ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಕರ್ಕರೆ ಬಳಿ ಆಕೆಯ ವಿರುದ್ಧ ಸಾಕಷ್ಟು ಸಾಕ್ಷಿಗಳು ಇದ್ದುದರಿಂದಲೇ ಆಕೆಯನ್ನು ಮಾಲೇಗಾಂವ್​ ಪ್ರಕರಣದಲ್ಲಿ ಬಂಧಿಸಿದ್ದರು ಎಂದು ಕೇಂದ್ರ ಸಚಿವ ರಾಮದಾಸ್​ ಅಥಾವಳೆ ಹೇಳಿಕೆ ನೀಡಿದ್ದಾರೆ.

Sushma Chakre | news18
Updated:April 29, 2019, 11:35 AM IST
ಭೂಪಾಲ್​ ಲೋಕಸಭಾ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಠಾಕೂರ್ ಆಯ್ಕೆಗೆ ಎನ್​ಡಿಎ ನಾಯಕರಿಂದಲೇ ವಿರೋಧ
ರಾಮದಾಸ್ ಅಥಾವಳೆ
  • News18
  • Last Updated: April 29, 2019, 11:35 AM IST
  • Share this:
ಭೂಪಾಲ್ (ಏ. 29): ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಭೂಪಾಲ್​ನಲ್ಲಿ ಲೋಕಸಭಾ ಅಖಾಡಕ್ಕೆ ಇಳಿದಿರುವ ಬಿಜೆಪಿಯ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್​ ಆಯ್ಕೆಗೆ ಬಿಜೆಪಿ ಮಿತ್ರಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪ್ರಗ್ಯಾ ಠಾಕೂರ್​ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವರನ್ನು ಈ ಬಾರಿ ಭೂಪಾಲ್​ ಲೋಕಸಭಾ ಅಭ್ಯರ್ಥಿಯಾಗಿ ಘೋಷಿಸಿದ ನಂತರ ಬಿಜೆಪಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು.

ಇದೀಗ ಬಿಜೆಪಿಯ ಆಯ್ಕೆಯಗೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಮತ್ತು ಬಿಜೆಪಿ ಮಿತ್ರಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್​ ಇಂಡಿಯಾ ಅಧ್ಯಕ್ಷ ರಾಮದಾಸ್​ ಅಥಾವಳೆ, ಮಹಾರಾಷ್ಟ್ರ ಎಟಿಎಸ್​ (ಭಯೋತ್ಪಾದಕ ನಿಗ್ರಹ ದಳ) ಮುಖ್ಯಸ್ಥರಾಗಿದ್ದ ಹೇಮಂತ್​ ಕರ್ಕರೆ ಬಗ್ಗೆ ಪ್ರಗ್ಯಾ ಸಿಂಗ್​ ಠಾಕೂರ್​ ನೀಡಿರುವ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಕರ್ಕರೆ ಬಳಿ ಆಕೆಯ ವಿರುದ್ಧ ಸಾಕಷ್ಟು ಸಾಕ್ಷಿಗಳು ಇದ್ದುದರಿಂದಲೇ ಆಕೆಯನ್ನು ಮಾಲೇಗಾಂವ್​ ಪ್ರಕರಣದಲ್ಲಿ ಬಂಧಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಮಾಲೆಗಾಂವ್ ಬಾಂಬ್​ ಸ್ಫೋಟದ​​ ಆರೋಪಿ ಸಾಧ್ವಿ ಪ್ರಗ್ಯಾ ಬಿಜೆಪಿ ಸೇರ್ಪಡೆ; ಭೂಪಾಲ್​ನಲ್ಲಿ ದಿಗ್ವಿಜಯ ಸಿಂಗ್ ವಿರುದ್ಧ ಕಣಕ್ಕೆ?

ವಿವಾದ ಸೃಷ್ಟಿಸಿದ್ದ ಶಾಪದ ಹೇಳಿಕೆ:

ಈ ಹಿಂದೆ ಭೂಪಾಲ್​ನಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಹೇಮಂತ್​ ಕರ್ಕರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಮಾಲೇಗಾಂವ್​ ಬಾಂಬ್​ ಸ್ಫೋಟ ಪ್ರಕರಣದಲ್ಲಿ ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲದಿದ್ದರೂ ಹೇಮಂತ್​ ಕರ್ಕರೆ ನನ್ನನ್ನು ವಿನಾಕಾರಣ ಬಂಧಿಸಿ ಮಾನಸಿಕ ಹಿಂಸೆ ನೀಡಿದ್ದರು. ಜೈಲಿನಲ್ಲಿ ನನಗೆ ನೀಡಿದ್ದ ಕಿರುಕುಳವನ್ನು ಮರೆಯಲು ಸಾಧ್ಯವಿಲ್ಲ. ಆಗಲೇ ಅವರಿಗೆ ನಾನು ಶಾಪ ನೀಡಿದ್ದೆ. ಆ ಶಾಪದ ಕಾರಣದಿಂದಲೇ ಮುಂಬೈ ಬಾಂಬ್​ ದಾಳಿ ವೇಳೆ ಅವರು ಸಾವನ್ನಪ್ಪಿದರು. ನನ್ನ ಶಾಪ ಮತ್ತು ಅವರು ಮಾಡಿದ ಕರ್ಮಗಳಿಂದಲೇ ಅವರು ಅಂತ್ಯ ಕಂಡರು ಎಂದು ಹೇಳಿ ಹಲವರ ಟೀಕೆಗೆ ಕಾರಣರಾಗಿದ್ದರು.

'ಮುಂಬೈ ದಾಳಿಯ ಹುತಾತ್ಮ ಹೇಮಂತ್​ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ'; ಸಾಧ್ವಿ ಪ್ರಗ್ಯಾ ವಿವಾದಾತ್ಮಕ ಹೇಳಿಕೆಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಅಥಾವಳೆ, ಆಕೆಯ ಹೆಸರು ಮಾಲೇಗಾಂವ್​ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಸೇರಿತ್ತು. ಆಕೆಯ ವಿರುದ್ಧ ಹೇಮಂತ್​ ಕರ್ಕರೆ ಬಳಿ ಸಾಕಷ್ಟು ಸಾಕ್ಷಿಗಳೂ ಇದ್ದವು. ಹೇಮಂತ್​ ಕರ್ಕರೆ ಮುಂಬೈ ಬಾಂಬ್​ ಸ್ಫೋಟದ ವೇಳೆ ಜನರ ಜೀವ ರಕ್ಷಿಸಲು ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದವರು. ಅವರ ವಿಷಯದಲ್ಲಿ ಸಾಧ್ವಿ ಪ್ರಗ್ಯಾ ನೀಡಿದ ಹೇಳಿಕೆ ಖಂಡನೀಯ. ಲೋಕಸಭಾ ಅಭ್ಯರ್ಥಿಯಾಗಿ ಆಕೆಯನ್ನು ಆಯ್ಕೆ ಮಾಡುವ ಮುನ್ನ ಬಿಜೆಪಿ ನಮ್ಮ ಅಭಿಪ್ರಾಯ ಕೇಳಿದ್ದರೆ ನಾವು ಆಕೆಯನ್ನು ಕಣಕ್ಕಿಳಿಸಲು ಒಪ್ಪುತ್ತಿರಲಿಲ್ಲ ಎಂದಿದ್ದಾರೆ.

ನಿಮ್ಮ ನ್ಯೂಸ್​18 ಕನ್ನಡವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada

 

First published: April 29, 2019, 11:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading