ನಿರ್ಮಲಾ ಸೀತಾರಾಮನ್​ ಹಿಂದೆ ಪ್ರಧಾನಿ ಮೋದಿ ಹೆದರಿ ಅಡಗಿ ಕುಳಿತಿದ್ದಾರೆ; ರಾಹುಲ್​ ಗಾಂಧಿ ವ್ಯಂಗ್ಯ

ನಿರ್ಮಲಾ ಸೀತಾರಾಮನ್​ ಭಾರತದ ರಕ್ಷಣಾ ಸಚಿವರು. ಅವರ ಬಗ್ಗೆ ದೇಶಕ್ಕೆ ಮೊದಲ ಪ್ರಧಾನಿಯನ್ನು ನೀಡಿದ ಪಕ್ಷದ ಮುಖ್ಯಸ್ಥರು ಈ ರೀತಿ ಮಾತನಾಡಬಾರದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಕೂಡ ರಾಹುಲ್​ ಗಾಂಧಿ ಈ ಕುರಿತು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

Seema.R | news18
Updated:January 10, 2019, 12:53 PM IST
ನಿರ್ಮಲಾ ಸೀತಾರಾಮನ್​ ಹಿಂದೆ ಪ್ರಧಾನಿ ಮೋದಿ ಹೆದರಿ ಅಡಗಿ ಕುಳಿತಿದ್ದಾರೆ; ರಾಹುಲ್​ ಗಾಂಧಿ ವ್ಯಂಗ್ಯ
ರಾಹುಲ್​ ಗಾಂಧಿ
Seema.R | news18
Updated: January 10, 2019, 12:53 PM IST
ನವದೆಹಲಿ (ಜ.10): ಮಹಿಳೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಡಗಿ ಕುಳಿತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್​ ವಿರುದ್ಧ ಕಾಂಗ್ರೆಸ್​ ಅಧ್ಯಕ್ಷರು ಕೀಳುಮಟ್ಟದ ಹೇಳಿಕೆಗಳನ್ನು ನೀಡುವ ಮೂಲಕ ಸ್ತ್ರೀದ್ವೇಷಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಮಹಿಳಾ ಆಯೋಗ ರಾಹುಲ್​ ಗಾಂಧಿಗೆ ನೋಟಿಸ್​ ಜಾರಿ ಮಾಡಿದೆ.

ರಫೇಲ್​ ಹಗರಣದ ಸಂಬಂಧ ಪ್ರಧಾನಿ ನರೇಂದ್ರ ಮೋದಿಯನ್ನು ರಕ್ಷಿಸಿ ‘ಮಹಿಳೆ ಸಮರ್ಥನೆ ಮಾಡಿಕೊಂಡರು ಎಂದು ರಾಹುಲ್​ ಗಾಂಧಿ ಲೇವಡಿ ಮಾಡಿದರು

56 ಇಂಚಿನ ಎದೆಯ ಸೇವಕ ಓಡಿ ಹೋಗಿ ಮಹಿಳೆಗೆ ನನ್ನನ್ನು ನಾನು ರಕ್ಷಿಸಿಕೊಳ್ಳುವುದಿಲ್ಲ. ನನ್ನನ್ನು ರಕ್ಷಿಸಿ ಎಂದು ಕೇಳಿ ಕೊಂಡರು. ಇದಕ್ಕಾಗಿ ಮಹಿಳೆ ಎರಡುವರೆ ಗಂಟೆಗಳ ಕಾಲ ಅವರನ್ನು ಸಮರ್ಥಿಸಿ ರಕ್ಷಣೆ ಮಾಡಿಕೊಂಡರು. ನಾನು ನಿಮಗೆ ನೇರವಾಗಿ ಪ್ರಶ್ನಿಸುತ್ತೇನೆ ಹೌದು ಅಥವಾ ಇಲ್ಲ ಎಂದಷ್ಟೇ ಉತ್ತರಿಸಿ. ಆದರೆ ಮಹಿಳೆ ಈ ಕುರಿತು ಉತ್ತರಿಸುವುದು ಬೇಡ ಎಂದು ರಾಜಸ್ಥಾನದ ಸಮಾವೇಶದಲ್ಲಿ ಮೋದಿ ವಿರುದ್ಧ ವಾಕ್ಸಾಮರ ನಡೆಸಿದರು.

 
ರಾಹುಲ್​ ಗಾಂಧಿ ಮಹಿಳೆ ಎಂದು ಬಳಸಿ ಮಾತನಾಡಿರುವ ಕ್ರಮಕ್ಕೆ ಟೀಕೆ ವ್ಯಕ್ತಪಡಿಸಿರು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ, ಗಾಂಧಿ ಮಹಿಳೆಯರನ್ನು ಗೌರವಿಸಬೇಕು. ಅವರ ಹೇಳಿಕೆ ಬಗ್ಗೆ ವಿವರಿಸಿ ಅವರು ಕ್ಷಮೆಯಾಚಿಸಬೇಕು ಎಂದರು. ನಿರ್ಮಲಾ ಸೀತಾರಾಮನ್​ ಭಾರತದ ರಕ್ಷಣಾ ಸಚಿವರು. ಅವರ ಬಗ್ಗೆ ದೇಶಕ್ಕೆ ಮೊದಲ ಪ್ರಧಾನಿಯನ್ನು ನೀಡಿದ ಪಕ್ಷದ ಮುಖ್ಯಸ್ಥರು ಈ ರೀತಿ ಮಾತನಾಡಬಾರದು. “ಗಂಡಸಂತೆ ವರ್ತಿಸಿ” ಎಂದು ರಾಹುಲ್​ ಗಾಂಧಿ ಹೇಳಿರುವ ಪದದ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಡಸಾಲ್ಟ್ ನೀಡಿದ್ದ ಸಮಯದಲ್ಲೇ ಎಚ್​ಎಎಲ್ 100 ರಫೇಲ್ ಯುದ್ಧ ವಿಮಾನ ತಯಾರಿಸಿ ಕೊಡುತ್ತಿತ್ತು; ನಿವೃತ್ತ ನಿರ್ದೇಶಕ

ಗಾಂಧಿಯ ಈ ವಾಗ್ದಾಳಿ ಕುರಿತು ಆಗ್ರಾದಲ್ಲಿ ಮಾತನಾಡಿದ ಮೋದಿ ಗಾಂಧಿ ಲಿಂಗತಾರತಮ್ಯ ಮಾಡುತ್ತಿದ್ದಾರೆ. ನಮ್ಮ ರಕ್ಷಣಾ ಸಚಿವರು ಸಂಸತ್ತಿನಲ್ಲಿ ಎಲ್ಲರ ಬಾಯಿ ಮುಚ್ಚಿಸಿದರು. ಅವರ ಸುಳ್ಳುಗಳನ್ನು ಹೊರತೆಗೆದುರು. ಇದರಿಂದ ಅವರನ್ನು ಅವಮಾನಗೊಳಿಸಲಾಗುತ್ತಿದೆ, ಇದು ದೇಶದ ಮಹಿಳೆಯರಿಗೆ ಮಾಡುವ ಅವಮಾನ ಎಂದರು. ಅಲ್ಲದೇ ರಫೇಲ್​ ಪ್ರಕರಣವನ್ನು ನಿರ್ಮಲಾ ಅವರು ಅದ್ಬುತವಾಗಿ ಸಮರ್ಥನೆ ಮಾಡಿಕೊಂಡರು ಎಂದು ಪ್ರಶಂಸಿದರು.

 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಕೂಡ ರಾಹುಲ್​ ಗಾಂಧಿ ಈ ಕುರಿತು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ