news18-kannada Updated:September 30, 2020, 4:39 PM IST
ಸಾಂದರ್ಭಿಕ ಚಿತ್ರ
ನವದೆಹಲಿ (ಸೆ.30): ಭಾರತದಲ್ಲಿ ದಿನವೊಂದಕ್ಕೆ ಸರಾಸರಿ 87 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ಎಂದು ಆಘಾತಕಾರಿ ವರದಿಯನ್ನು ಸರ್ಕಾರ ನೀಡಿದೆ. 2019ರಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಕುರಿತು ವರದಿ ಬಿಡುಗಡೆ ಮಾಡಿದ್ದು, ಈ ಆಘಾತಕಾರಿ ಅಂಶ ಹೊರಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ7ರಷ್ಟು ಹೆಚ್ಚಿದೆ ಎಂದು ತಿಳಿಸಿದೆ. ಒಂದು ವರ್ಷದಲ್ಲಿ 4,05,861 ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು ನಡೆದಿದ್ದು, 2018ಕ್ಕೆ ಹೋಲಿಸಿದರೆ, ಮಹಿಳೆಯರ ಮೇಲಿನ ದೌರ್ಜನ್ಯ ಸಂಖ್ಯೆ ಅಧಿಕಗೊಂಡಿದೆ. ಹತ್ರಸ್ನ ಯುವತಿ ಅತ್ಯಾಚಾರದ ಬಳಿಕ ಈ ಕೇಂದ್ರ ಸರ್ಕಾರದ ಎನ್ಸಿಆರ್ಬಿ ಈ ಅಂಕಿಅಂಶಗಳ ದಾಖಲೆ ಹೊರಹಾಕಿದೆ.
2018ರಲ್ಲಿ 3,78,236 ಅಪರಾಧ ಪ್ರಕರಣಗಳು ಮಹಿಳೆಯರ ವಿರುದ್ಧ ದಾಖಲಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೊ (ಎನ್ಸಿಆರ್ಬಿ) ತಿಳಿಸಿದೆ. 2019ರಲ್ಲಿ ಮಹಿಳೆಯರ ಮೇಲೆ 32.033 ಅತ್ಯಾಚಾರ ಪ್ರಕರಣಗಳು ನಡೆದಿವೆ. ಈ ದಾಖಲಾತಿ ಗಮನಿಸಿದರೆ, ಕಳೆದ ವರ್ಷಕ್ಕಿಂತ ಇದರ ಸಂಖ್ಯೆ ಹೆಚ್ಚಿದೆ. 2018ರಲ್ಲಿ 33,356 ಅತ್ಯಾಚಾರ ಪ್ರಕರಣಗಳು ದೇಶಾದ್ಯಾಂತ ನಡೆದಿದೆ. ಇನ್ನು 2017ರಲ್ಲಿ 32,559 ಅತ್ಯಾಚಾರ ಪ್ರಕರಣ ದಾಖಲಾಗಿದೆ,
ಇನ್ನು ಈ ಪ್ರಕರಣಗಳಲ್ಲಿ ಹೆಚ್ಚಿನವು ಮಹಿಳೆಯ ಗಂಡ ಅಥವಾ ಅವರ ಸಂಬಂಧಿಕರ ಕ್ರೌರ್ಯ (ಶೇ.30.9) ನಡೆದಿವೆ. ಮಹಿಳೆಯರ ಮೇಲಿನ ಆಕ್ರೋಶದಿಂದ (ಶೇ.21.8)ಹಲ್ಲೆ ನಡೆಸಲಾಗಿದೆ, ಮಹಿಳೆಯರ ಅಪಹರಣ (ಶೇ17.9) ನಡೆದಿದೆ ಎಂದು ಎನ್ಸಿಆರ್ಬಿ ದಾಖಲೆ ತಿಳಿಸಿದೆ. ಪ್ರತಿ ಲಕ್ಷ ಮಹಿಳಾ ಜನಸಂಖ್ಯೆಯ ಅಪರಾಧ ಪ್ರಮಾಣವನ್ನು ಗಮನಿಸಿದಾಗ 2018ರಲ್ಲಿ 58.8ರಷ್ಟಿದ್ದ ಪ್ರಕರಣಗಳು 2019ಕ್ಕೆ 62.4ರಷ್ಟಾಗಿದೆ.
ಕೇಂದ್ರ ಗೃಹ ಇಲಾಖೆ ಅಡಿ ಈ ಎನ್ಸಿಆರ್ಬಿ ಕಾರ್ಯ ನಿರ್ವಹಿಸುತ್ತದೆ. ಭಾರತೀಯ ದಂಡ ಸಂಹಿತೆ ಮತ್ತು ದೇಶದ ವಿಶೇಷ ಮತ್ತು ಸ್ಥಳೀಯ ಕಾನೂನುಗಳಿಂದ ಈ ಇಲಾಖೆ ದತ್ತಾಂಶ ಸಂಗ್ರಹಿಸುವ ಕಾರ್ಯ ಮಾಡುತ್ತದೆ.
ಇದನ್ನು ಓದಿ: ಯೋಗಿ ಆದಿತ್ಯನಾಥ್ ಕಾವಿಧಾರಿಗಳ ಪಾಲಿನ ಕಳಂಕ; ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಿದ್ದರಾಮಯ್ಯ ಆಕ್ರೋಶ
ಎರಡು ವಾರದ ಹಿಂದೆ ಉತ್ತರ ಪ್ರದೇಶದ ಹತ್ರಾಸ್ನ 19 ವರ್ಷದ ಯುವತಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ಆಕೆ ಸ್ಥಿತಿ ಚಿಂತಾಜನಕವಾಗಿತ್ತು. ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಯುವತಿ ಮೃತಪಟ್ಟಿದ್ದು, ಉತ್ತರ ಪ್ರದೇಶದ ಪೊಲೀಸರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಇನ್ನು ಕುಟುಂಬದವರಿಗೆ ಯುವತಿಯ ಮೃತ ದೇಹವನ್ನು ನೀಡದ ಉತ್ತರಪ್ರದೇಶದ ಪೊಲೀಸರು ನಿನ್ನೆ ಮಧ್ಯರಾತ್ರಿ 2.30ರ ವೇಳೆಗೆ ಅಂತ್ಯಕ್ರಿಯೆ ಮಾಡಿದ್ದಾರೆ. ಪೊಲೀಸರ ನಡೆಯ ಬಗ್ಗೆ ಈಗ ಅನುಮಾನ ವ್ಯಕ್ತವಾಗಿದೆ. ಜೊತೆಗೆ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
Published by:
Seema R
First published:
September 30, 2020, 4:27 PM IST