• Home
  • »
  • News
  • »
  • national-international
  • »
  • Maharashtra Politics: 'ಮಹಾ' ರಾಜಕೀಯದಲ್ಲಿ ಮತ್ತೆ ತಿರುವು? ಶಿಂಧೆ, ಫಡ್ನವೀಸ್​ ಜೊತೆ ಪವಾರ್​ ಡಿನ್ನರ್, ಏನಿದರ ಒಳಗುಟ್ಟು?

Maharashtra Politics: 'ಮಹಾ' ರಾಜಕೀಯದಲ್ಲಿ ಮತ್ತೆ ತಿರುವು? ಶಿಂಧೆ, ಫಡ್ನವೀಸ್​ ಜೊತೆ ಪವಾರ್​ ಡಿನ್ನರ್, ಏನಿದರ ಒಳಗುಟ್ಟು?

ಶಿಂಧೆ, ಫಡ್ನವೀಸ್​ ಜೊತೆ ಪವಾರ್​ ಡಿನ್ನರ್, ಏನಿದರ ಒಳಗುಟ್ಟು?

ಶಿಂಧೆ, ಫಡ್ನವೀಸ್​ ಜೊತೆ ಪವಾರ್​ ಡಿನ್ನರ್, ಏನಿದರ ಒಳಗುಟ್ಟು?

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಂಬೈ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ಒಂದು ದಿನ ಬಾಕಿ ಇರುವಾಗ ಇಂದು ಭೋಜನ ಕೂಟದಲ್ಲಿ ಭೇಟಿಯಾಗಲಿದ್ದಾರೆ.

  • Share this:

ಮುಂಬೈ(ಅ.19): ಮಹಾರಾಷ್ಟ್ರದಲ್ಲಿ (Maharashtra) ಇಂದು ಅಂದರೆ ಬುಧವಾರ ವಿವಿಧ ಪಕ್ಷಗಳ ಮೂವರು ಹಿರಿಯ ನಾಯಕರು ಒಂದೇ ಮೇಜಿನಲ್ಲಿ ಜೊತೆಯಾಗಲಿದ್ದಾರೆ. ಎನ್‌ಸಿಪಿ ಅಂದರೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (Nationalist Congress Party)ಅಧ್ಯಕ್ಷ ಶರದ್ ಪವಾರ್ ಅವರು ಬುಧವಾರ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Maharashtra Chief Minister Eknath Shinde) ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಅವರೊಂದಿಗೆ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ ಇಂದು ಈ ಮೂವರು ಯೋಧರು ಒಟ್ಟಿಗೆ ಭೋಜನ ಮಾಡುತ್ತಾರೆ ಎಂದು ಹೇಳಲಾಗಿದೆ. ಆದರೆ, ಈ ಸಭೆಯನ್ನು ರಾಜಕೀಯೇತರ ಎಂದು ಬಣ್ಣಿಸಲಾಗುತ್ತಿದೆ.


ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿ ಚುನಾವಣೆ ಗುರುವಾರ ನಡೆಯಲಿದ್ದು, ಈ ಸಂದರ್ಭದಲ್ಲಿ ಎನ್‌ಸಿಪಿಯ ಶರದ್ ಪವಾರ್, ಶಿವಸೇನೆ ಬಂಡಾಯ ಗುಂಪಿನ ಏಕನಾಥ್ ಶಿಂಧೆ ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಭೋಜನದ ವೇಳೆ ಭೇಟಿಯಾಗಲಿದ್ದಾರೆ. ಆದರೆ, ಇದು ರಾಜಕೀಯ ನಡೆಯಲ್ಲ ಎಂದು ಎರಡೂ ಕಡೆಯವರು ಈ ಭೇಟಿಯ ಬಗ್ಗೆ ಹೇಳಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಅನೇಕ ನಾಯಕರು ಕೇವಲ 'ಕ್ರಿಕೆಟ್ ಸಂಭ್ರಮ ಆಚರಿಸಲು' ಒಟ್ಟಾಗಿ ಸೇರುತ್ತಾರೆ ಎಂದು ಅವರು ಒತ್ತಾಯಿಸಿದರು.


ಇದನ್ನೂ ಓದಿ:Maharashtra: ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣಕ್ಕೆ ಹೊಸ ಹೆಸರು, ಚಿಹ್ನೆ ಕೊಟ್ಟ ಚುನಾವಣಾ ಆಯೋಗ!


ವಾಂಖೆಡೆ ಸ್ಟೇಡಿಯಂನಲ್ಲಿ ಭೋಜನ


ಆಂಗ್ಲ ವೆಬ್‌ಸೈಟ್ ಇಂಡಿಯನ್ ಎಕ್ಸ್‌ಪ್ರೆಸ್‌ನ ಸುದ್ದಿ ಪ್ರಕಾರ, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಇತರರು ಬುಧವಾರ ಮುಂಬೈನ ಗರ್ವೇರ್ ಕ್ಲಬ್ ಆಫ್ ವಾಂಖೆಡೆ ಸ್ಟೇಡಿಯಂನಲ್ಲಿ ಭೋಜನ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.


ಕ್ರೀಡೆಯ ಹಿನ್ನೆಲೆಯಲ್ಲಿ ನಡೆಯುವ ಸಭೆ


ಅದೇ ಸಮಯದಲ್ಲಿ, ದೇವೇಂದ್ರ ಫಡ್ನವಿಸ್ ಅವರ ಸಹವರ್ತಿಯೊಬ್ಬರು ಎಂಸಿಎ ಅಂದರೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಅತ್ಯಂತ ಪ್ರತಿಷ್ಠಿತ ಸಂಘವಾಗಿದ್ದು, ಫಡ್ನವಿಸ್ ಮತ್ತು ಪವಾರ್ ಅವರ ಔತಣಕೂಟವು ಎಂಸಿಎಗೆ ಸಂಬಂಧಿಸಿದೆ. ಹೀಗಾಗಿ ಈ ಸಭೆಯು ಸಂಪೂರ್ಣವಾಗಿ ಕ್ರೀಡೆಯ ಹಿನ್ನೆಲೆಯಲ್ಲಿ ನಡೆಯುತ್ತಿದ್ದು, ಇದನ್ನು ರಾಜಕೀಯದೊಂದಿಗೆ ತಳುಕು ಹಾಕಬಾರದೆಂದು ಮನವಿ ಮಾಡಿದ್ದಾರೆ.


ಮೊದಲ ಬಾರಿ ಮೂವರು ನಾಯಕರು ಒಂದೇ ವೇದಿಕೆಯಲ್ಲಿ


ಮಾಧ್ಯಮ ವರದಿಗಳ ಪ್ರಕಾರ, ಶಿವಸೇನೆಯ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾದ ನಂತರ ಇದೇ ಮೊದಲ ಬಾರಿಗೆ ವಿವಿಧ ರಾಜಕೀಯ ಪಕ್ಷಗಳ ಈ ಮೂವರು ನಾಯಕರು ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಎರಡೂ ಕಡೆಯ ಮೂಲಗಳನ್ನು ನಂಬುವುದಾದರೆ ಮುಂಬೈ ಕ್ರಿಕೆಟ್ ಸಂಸ್ಥೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇನ್ನು ಕೆಲವು ತಿಂಗಳ ಹಿಂದೆ ಏಕನಾಥ್ ಶಿಂಧೆ ಅವರು ಶಿವಸೇನೆ ವಿರುದ್ಧ ಬಂಡಾಯವೆದ್ದು ಬಿಜೆಪಿಯ ನೆರವಿನೊಂದಿಗೆ ಹೊಸ ಸರ್ಕಾರ ರಚಿಸಿದ್ದರು ಎಂಬುವುದು ಉಲ್ಲೇಖನೀಯ.


ಇದನ್ನೂ ಓದಿ: Khosta-2: ಮತ್ತೆ ವೈರಸ್​ ಆತಂಕ, ಲಸಿಕೆಗೂ ಜಗ್ಗಲ್ಲ ಕೊರೋನಾದ ಹೊಸ ರೂಪಾಂತರ!


ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಬೆದರಿಕೆ ಕರೆ: ಪೊಲೀಸರಿಂದ ತೀವ್ರ ತನಿಖೆ


ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಹಾಕಲಾದ ಜೀವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯಿಸಿದ್ದಾರೆ. ಏಕನಾಥ್ ಶಿಂಧೆ ಅವರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣದಡಿ ಮುಂಬೈನ  ಘಾಟ್‌ಕೋಪರ್‌ನ 36 ವರ್ಷದ ವ್ಯಕ್ತಿಯೋರ್ವನನ್ನು ಈಗಾಗ್ಲೇ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.


ಮಾಧ್ಯಮದವರೊಂದಿಗೆ ಮಾತನಾಡಿದ ದೇವೇಂದ್ರ ಫಡ್ನವೀಸ್ , ಮುಖ್ಯಮಂತ್ರಿ ವಿರುದ್ಧ ಹಾಕಲಾದ ಬೆದರಿಕೆಯ ಬಗ್ಗೆ ರಾಜ್ಯ ಗೃಹ ಇಲಾಖೆಗೆ ತಿಳಿದು ಬಂದಿದೆ. ಹೀಗಾಗಿ ಮುಖ್ಯಮಂತ್ರಿಗಳ ಭದ್ರತೆ ಮತ್ತಿತರ ವಿಚಾರಗಳ ಬಗ್ಗೆ ಸಂಪೂರ್ಣ ಗಮನ ಹರಿಸುತ್ತಿದ್ದೇವೆ. ಜೀವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

Published by:Precilla Olivia Dias
First published: