ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಮುಂದಾದ ಎನ್​ಸಿಪಿ-ಶಿವಸೇನೆ-ಕಾಂಗ್ರೆಸ್​; ನಾಳೆ ರಾಜ್ಯಪಾಲರ ಭೇಟಿ

ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಮೂರು ಪಕ್ಷಗಳು ಕನಿಷ್ಠ ಕಾರ್ಯಸೂಚಿಗೆ ಒಪ್ಪಿಗೆ ನೀಡಿದ್ದೇವೆ. ಪಕ್ಷಗಳ ಹಿರಿಯ ನಾಯಕರು ನಾಳೆ ರಾಜ್ಯಪಾಲರನ್ನು ಭೇಟಿಯಾಗಲಿದ್ದು, ಸರ್ಕಾರ ರಚನೆ ಕುರಿತು ಪ್ರಸ್ತಾಪಿಸಲಿದ್ದಾರೆ - ಶರದ್​ ಪವಾರ್​​

Seema.R | news18-kannada
Updated:November 15, 2019, 3:40 PM IST
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಮುಂದಾದ ಎನ್​ಸಿಪಿ-ಶಿವಸೇನೆ-ಕಾಂಗ್ರೆಸ್​; ನಾಳೆ ರಾಜ್ಯಪಾಲರ ಭೇಟಿ
ಸೋನಿಯಾ, ಶರದ್​ ಪವಾರ್​​, ಉದ್ಧವ್​​ ಠಾಕ್ರೆ
  • Share this:
ಮುಂಬೈ (ನ.15): ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಜಂಟಿಯಾಗಿ ಸರ್ಕಾರ ರಚಿಸಲಿದ್ದು, ಮಹಾರಾಷ್ಟ್ರದಲ್ಲಿ ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ರಚಿಸಲಿದೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷಗಳು ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನೆಲೆ ರಾಷ್ಟ್ರಪತಿ ಆಡಳಿತ ಹೇರಲಾಗಿದ್ದು, ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಈ ನಡುವೆ ಸರ್ಕಾರ ರಚನೆ ನಡೆಸುವ ಕಸರತ್ತನ್ನು ಶಿವಸೇನೆ, ಎನ್​ಸಿಪಿ ಮುಂದುವರೆಸಿದೆ. ಈ ಕುರಿತು ಮತ್ತೊಂದು ಸುತ್ತಿನ ಮಾತುಕತೆ ನಡೆಸಿರುವ ಕಾಂಗ್ರೆಸ್, ಎನ್​ಸಿಪಿ, ಶಿವಸೇನೆ ಸರ್ಕಾರ ರಚಿಸುವ ಕುರಿತು ಮತ್ತೊಮ್ಮೆ ಮಾತುಕತೆ ನಡೆಸಿ, ಸರ್ಕಾರ ರಚನೆ ಕುರಿತು ಒಮ್ಮತ ತೀರ್ಮಾನ ನಡೆಸಿವೆ.

ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಮೂರು ಪಕ್ಷಗಳು ಕನಿಷ್ಠ ಕಾರ್ಯಸೂಚಿಗೆ ಒಪ್ಪಿಗೆ ನೀಡಿದ್ದೇವೆ. ಪಕ್ಷಗಳ ಹಿರಿಯ ನಾಯಕರು ನಾಳೆ ರಾಜ್ಯಪಾಲರನ್ನು ಭೇಟಿಯಾಗಲಿದ್ದು, ಸರ್ಕಾರ ರಚನೆ ಕುರಿತು ಪ್ರಸ್ತಾಪಿಸಲಿದ್ದಾರೆ ಎಂದರು.

ಭಿನ್ನಾಭಿಪ್ರಾಯಗಳ ಹೊರತಾಗಿ ಮೂರು ಪಕ್ಷಗಳು ಸರ್ಕಾರ ರಚಿಸಲಿದ್ದು, ನಾವು ಐದು ವರ್ಷಗಳ ಕಾಲ ಆಡಳಿತ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಮೂರು ಪಕ್ಷಗಳು ಸರ್ಕಾರ ರಚನೆ ಮಾಡುವ ಕುರಿತು ಟೀಕಿಸಿದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​, ಆರು ತಿಂಗಳಿಗಿಂತ ಹೆಚ್ಚಾಗಿ ಇವರು ಸರ್ಕಾರ ರಚಿಸುವುದಿಲ್ಲ. ಮರಳಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಭವಿಷ್ಯ ನುಡಿದಿದ್ದರು.

ಇದನ್ನು ಓದಿ: ಸೋಮವಾರದ ನಂತರ ಸಮ-ಬೆಸ ಸಂಖ್ಯೆ ಯೋಜನೆ ಮುಂದುವರಿಕೆಗೆ ಚಿಂತನೆ; ಅರವಿಂದ್​ ಕೇಜ್ರೀವಾಲ್

ಈ ಕುರಿತು ಪ್ರತಿಕ್ರಿಯಿಸಿದ ಅವರು, ದೇವೇಂದ್ರ ಅವರ ಬಗ್ಗೆ ನನಗೆ ಹಲವು ವರ್ಷಗಳಿಂದ ಗೊತ್ತು. ಆದರೆ ಅವರು ಜ್ಯೋತಿಷ್ಯದ ವಿದ್ಯಾರ್ಥಿ ಎಂದು ತಿಳಿದಿರಲಿಲ್ಲ ಎಂದರು.ಇನ್ನು ಸಿಎಂ ಸ್ಥಾನ ಹಂಚಿಕೆ ಕುರಿತು ಮಾತನಾಡಿರುವ ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​, ಶಿವಸೇನಾ ಮತ್ತು ಬಿಜೆಪಿ ನಡುವೆ ಸಿಎಂ ಸ್ಥಾನಕ್ಕಾಗಿ ಹಗ್ಗಜಗ್ಗಾಟ ನಡೆದಿತ್ತು. ಹಾಗಾಗಿ ನಾವು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ. ಶಿವಸೇನೆಗೆ ಸಿಎಂ ಹುದ್ದೆ ಬಿಟ್ಟುಕೊಡಲಾಗಿದ್ದು, ಎನ್​ಸಿಪಿ, ಕಾಂಗ್ರೆಸ್​ನಿಂದ ಉಪಮುಖ್ಯಮಂತ್ರಿಗಳು ಅಧಿಕಾರದಲ್ಲಿರಲಿದ್ದಾರೆ ಎಂದರು.
First published:November 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ