• Home
 • »
 • News
 • »
 • national-international
 • »
 • Sharad Pawar Health: ಶರದ್ ಪವಾರ್ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು

Sharad Pawar Health: ಶರದ್ ಪವಾರ್ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು

ಶರದ್ ಪವಾರ್

ಶರದ್ ಪವಾರ್

ಶರದ್ ಪವಾರ್ ಅವರು ಈ ಹಿಂದೆ ಕಳೆದ ವರ್ಷ ಏಪ್ರಿಲ್ 11 ರಂದು ಆಸ್ಪತ್ರೆಗೆ ದಾಖಲಾಗಿದ್ದರು.  ಆ ಸಂದರ್ಭದಲ್ಲಿ ಪಿತ್ತಕೋಶದಲ್ಲಿ ಕಲ್ಲು ಇರುವುದು ಪತ್ತೆಯಾದ ಕಾರಣ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

 • News18 Kannada
 • Last Updated :
 • Bangalore [Bangalore], India
 • Share this:

  ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ಅವರ ಆರೋಗ್ಯ (Sharad Pawar Health Updates) ಹದಗೆಟ್ಟಿದೆ. ಸದ್ಯ  ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನವೆಂಬರ್ 2 ರಂದು ಶರದ್ ಪವಾರ್ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ.  ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ನವೆಂಬರ್ 4 ಮತ್ತು5 ರಂದು ಶಿರಡಿಯಲ್ಲಿ ನಡೆಯಲಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸಭೆಗಳಲ್ಲಿ ಶರದ್ ಪವಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. 


  ಶರದ್ ಪವಾರ್ ಅವರು ಈ ಹಿಂದೆ ಕಳೆದ ವರ್ಷ ಏಪ್ರಿಲ್ 11 ರಂದು ಆಸ್ಪತ್ರೆಗೆ ದಾಖಲಾಗಿದ್ದರು.  ಆ ಸಂದರ್ಭದಲ್ಲಿ ಪಿತ್ತಕೋಶದಲ್ಲಿ ಕಲ್ಲು ಇರುವುದು ಪತ್ತೆಯಾದ ಕಾರಣ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.


  ಭಾರತ್ ಜೋಡೊ ಯಾತ್ರೆಗೆ ಬೆಂಬಲ ನೀಡಿದ್ದ ಶರದ್ ಪವಾರ್
  ಕೆಲವು ದಿನಗಳ ಮುನ್ನವಷ್ಟೇ  ಕಾಂಗ್ರೆಸ್ ಮುಖಂಡರಾದ ಅಶೋಕ್ ಚವಾಣ್ ಮತ್ತು ಬಾಳಾಸಾಹೇಬ್ ಥೋರಟ್ ಭೇಟಿಯಾಗಿ ರಾಹುಲ್ ಗಾಂಧಿ ಕೈಗೊಂಡಿರುವ ಯಾತ್ರೆಯ ಭಾಗವಾಗುವಂತೆ ತಮಗೆ ಆಹ್ವಾನ ನೀಡಿದ್ದರು ಎಂದು ಪವಾರ್ ಹೇಳಿದ್ದರು.


  ಇದನ್ನೂ ಓದಿ: Two Finger Test Ban: ಕನ್ಯತ್ವ ನಿರ್ಧರಿಸುವ ಪರೀಕ್ಷೆ ನಿಷೇಧಿಸಿದ ಸುಪ್ರೀಂಕೋರ್ಟ್


  ಕಾಂಗ್ರೆಸ್‌ ದೇಶದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ದ್ವೇಷವನ್ನು ತೊಡೆದುಹಾಕಲು ಮತ್ತು ಸಮಾಜದಲ್ಲಿ ಏಕತೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ ವ್ಯಾಖ್ಯಾನಿಸಿದ್ದರು. ಎನ್‌ಸಿಪಿ ಮತ್ತು ಇತರ ರಾಜಕೀಯ ಪಕ್ಷಗಳು ಸಹ ರಾಜ್ಯದಲ್ಲಿ ಕಾಂಗ್ರೆಸ್ ಕೈಗೊಂಡ ಭಾರತ್ ಜೋಡೊ ಯಾತ್ರೆಯಲ್ಲಿ ಸಾಧ್ಯವಾದಲ್ಲೆಲ್ಲಾ ಸೇರಿಕೊಳ್ಳುತ್ತವೆ ಎಂದು ಅವರು ಅಕ್ಟೋಬರ್ 23 ರಂದು ತಿಳಿಸಿದ್ದರು.


  ರಾಷ್ಟ್ರಪತಿ ರೇಸ್‌ನಿಂದ ಹಿಂದೆ ಸರಿದಿದ್ದ ಶರದ್ ಪವಾರ್
  ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ "ನಾನು ರಾಷ್ಟ್ರಪತಿ ಚುನಾವಣೆಯ ರೇಸ್‌ನಲ್ಲಿ ಇಲ್ಲ, ನಾನು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವುದಿಲ್ಲ" ಅಂತ 81 ವರ್ಷದ ಮಾಜಿ ರಕ್ಷಣಾ ಸಚಿವ, ಹಿರಿಯ ರಾಜಕಾರಣಿ ಶರದ್ ಪವಾರ್ ಹೇಳಿದ್ದರಲ್ಲದೇ ರಾಷ್ಟ್ರಪತಿ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.


  ಇದನ್ನೂ ಓದಿ: China: ಕಮ್ಯುನಿಸ್ಟ್ ಲೀಗ್ ಬಣವನ್ನು ಬದಿಗೊತ್ತಿದ ಚೀನಾ ಅಧ್ಯಕ್ಷ!


  ಶರದ್​ ಪವಾರ್​ ಅವರು ಸದಾ ಸಾಮಾನ್ಯ ಜನರೊಂದಿಗೆ ಇರುವ ವ್ಯಕ್ತಿ. ಅವರು ತಮ್ಮನ್ನು ರಾಷ್ಟ್ರಪತಿ ಭವನಕ್ಕೆ ಸೀಮಿತಗೊಳಿಸಿಕೊಳ್ಳಲು ಇಷ್ಟ ಪಡುತ್ತಿಲ್ಲ ಅಂತ ಎನ್‌ಸಿಪಿ ಮುಖಂಡರು ಹೇಳಿದ್ದರು. 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸದಲ್ಲಿ ಪವಾರ್ ನಿರತರಾಗಿದ್ದಾರೆ ಎಂದು ವರದಿಯಾಗಿದೆ.


  ಮೊದಲ ಬಾರಿ ಮೂವರು ನಾಯಕರು ಒಂದೇ ವೇದಿಕೆಯಲ್ಲಿ
  ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿ ಚುನಾವಣೆ ಸಂದರ್ಭದಲ್ಲಿ ಎನ್‌ಸಿಪಿಯ ಶರದ್ ಪವಾರ್, ಶಿವಸೇನೆ ಬಂಡಾಯ ಗುಂಪಿನ ಏಕನಾಥ್ ಶಿಂಧೆ ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಭೋಜನದ ವೇಳೆ ಭೇಟಿಯಾಗಿದ್ದರು. ಆದರೆ, ಇದು ರಾಜಕೀಯ ನಡೆಯಲ್ಲ ಎಂದು ಎರಡೂ ಕಡೆಯವರು ಈ ಭೇಟಿಯ ಬಗ್ಗೆ ಹೇಳಿದ್ದರು. ವಿವಿಧ ರಾಜಕೀಯ ಪಕ್ಷಗಳ ಅನೇಕ ನಾಯಕರು ಕೇವಲ 'ಕ್ರಿಕೆಟ್ ಸಂಭ್ರಮ ಆಚರಿಸಲು' ಒಟ್ಟಾಗಿ ಸೇರುತ್ತಾರೆ ಎಂದು ತಿಳಿಸಿದ್ದರು.


  ಶಿವಸೇನೆಯ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾದ ನಂತರ ಇದೇ ಮೊದಲ ಬಾರಿಗೆ ವಿವಿಧ ರಾಜಕೀಯ ಪಕ್ಷಗಳ ಈ ಮೂವರು ನಾಯಕರು ಒಂದೇ ವೇದಿಕೆಯಲ್ಲಿ ಸೇರಿದ್ದರು. ಮುಂಬೈ ಕ್ರಿಕೆಟ್ ಸಂಸ್ಥೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಈ ಸಭೆಯಲ್ಲಿ ಚರ್ಚಿಸಲಾಗಿತ್ತು. ಇನ್ನು ಕೆಲವು ತಿಂಗಳ ಹಿಂದೆ ಏಕನಾಥ್ ಶಿಂಧೆ ಅವರು ಶಿವಸೇನೆ ವಿರುದ್ಧ ಬಂಡಾಯವೆದ್ದು ಬಿಜೆಪಿಯ ನೆರವಿನೊಂದಿಗೆ ಹೊಸ ಸರ್ಕಾರ ರಚಿಸಿದ್ದರು ಎಂಬುವುದು ಉಲ್ಲೇಖನೀಯ.

  Published by:ಗುರುಗಣೇಶ ಡಬ್ಗುಳಿ
  First published: