ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರು ಕೇಂದ್ರ ಚುನಾವಣಾ ಆಯೋಗದ (Central Election Commission) ವಿರುದ್ಧ ಕಿಡಿಕಾರಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ (Maharashtra CM) ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನೆ (Shiv Sena) ಬಣಕ್ಕೆ ಪಕ್ಷದ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ನೀಡುವಂತೆ ಆದೇಶ ನೀಡಿದ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ದೇಶದ ಹಿರಿಯ ರಾಜಕಾರಣಿ ಶರದ್ ಪವಾರ್, ಚುನಾವಣಾ ಆಯೋಗದಿಂದ ಇಂತಹ ನಿರ್ಧಾರವೊಂದನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ಹೇಳಿದ್ದಾರೆ.
ಕೆಲವು ಸಂಸ್ಥೆಗಳು ಎಲ್ಲರನ್ನೂ ಒಳಗೊಳ್ಳಿಸಿ ನ್ಯಾಯಯುತವಾಗಿ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಹೊಂದಿವೆ ಎಂದು ಹೇಳಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಚುನಾವಣಾ ಆಯೋಗವು ಒಂದು ಪ್ರಕರಣದ ನಿರ್ಧಾರವನ್ನು ಪ್ರಕಟಿಸಿದ್ದುದನ್ನು ನೀವು ಕೆಲವು ದಿನಗಳ ಹಿಂದೆ ನೋಡಿದ್ದೀರಿ. ಚುನಾವಣಾ ಆಯೋಗವು ಒಂದು ರಾಜಕೀಯ ಪಕ್ಷದ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಂಡು ಇನ್ನೊಂದು ರಾಜಕೀಯ ಪಕ್ಷಕ್ಕೆ ನೀಡುವುದನ್ನು ನೀವು ಯಾವತ್ತಾದರೂ ನೋಡಿದ್ದೀರಾ? ಪಕ್ಷದ ಸಂಪೂರ್ಣ ಹಿಡಿತವನ್ನು ಚುನಾವಣಾ ಆಯೋಗವೇ ಕಂಟ್ರೋಲ್ ಮಾಡುವುದನ್ನು ನಾನು ಯಾವತ್ತೂ ನೋಡಿಲ್ಲ ಎಂದು ಪವಾರ್ ಹೇಳಿದರು.
ಇದನ್ನೂ ಓದಿ: Uddhav Thackeray: ಕೇಂದ್ರ ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿಯ ಗುಲಾಮ: ಉದ್ಧವ್ ಠಾಕ್ರೆ ಆಕ್ರೋಶ
ಹೊಸ ಚಿಹ್ನೆಯನ್ನು ಘೋಷಿಸುವಂತೆ ಪವಾರ್ ಸಲಹೆ
ಈ ಹಿಂದೆ ಕೇಂದ್ರ ಚುನಾವಣಾ ಆಯೋಗವು ಶಿವಸೇನೆ ಪಕ್ಷದ ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡುವಂತೆ ಆದೇಶ ನೀಡಿದ ನಂತರ ಮಾತನಾಡಿದ್ದ ಶರದ್ ಪವಾರ್, ಚುನಾವಣಾ ಆಯೋಗದ ನಿರ್ಧಾರವನ್ನು ಒಪ್ಪಿಕೊಂಡು ಹೊಸ ಚಿಹ್ನೆಯನ್ನು ತೆಗೆದುಕೊಳ್ಳುವಂತೆ ಉದ್ಧವ್ ಠಾಕ್ರೆ ಅವರಿಗೆ ಸಲಹೆ ನೀಡಿದ್ದರು.
ದೊಡ್ಡ ಪರಿಣಾಮ ಬೀರೋದಿಲ್ಲ
ಇದು ಚುನಾವಣಾ ಆಯೋಗದ ನಿರ್ಧಾರ ಆಗಿರುವುದರಿಂದ ಒಮ್ಮೆ ನಿರ್ಧಾರ ನೀಡಿದ ನಂತರ ಯಾವುದೇ ಚರ್ಚೆ ಸಾಧ್ಯವಿಲ್ಲ. ಆಯೋಗದ ತೀರ್ಪನ್ನು ಸ್ವೀಕರಿಸಿ ಹೊಸ ಚಿಹ್ನೆ ತೆಗೆದುಕೊಳ್ಳಿ, ಹಳೆಯ ಚಿಹ್ನೆಯನ್ನು ಕಳೆದುಕೊಂಡಿರುವುದರಿಂದ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಜನರು ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ. ಈ ವಿಚಾರ ಮುಂದಿನ 15-30 ದಿನಗಳವರೆಗೆ ಚರ್ಚೆಯಲ್ಲಿ ಉಳಿಯುತ್ತದೆ, ಅಷ್ಟೆ ಎಂದು ಉದ್ಧವ್ ಠಾಕ್ರೆಗೆ ಪವಾರ್ ಧೈರ್ಯ ತುಂಬಿದ್ದರು.
ಇಂದಿರಾಗಾಂಧಿಗೂ ಎದುರಾಗಿತ್ತು ಇದೇ ಪರಿಸ್ಥಿತಿ
ಮುಂದುವರಿದು ಮಾತನಾಡಿದ್ದ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷ ಎರಡು ಹೋರಿಗಳ ಜೊತೆಗೆ ಕೈಯಲ್ಲಿ ನೊಗ ಹಿಡಿದುಕೊಂಡ ಚಿಹ್ನೆಯನ್ನು ಬದಲಾಯಿಸಬೇಕಾದ ಅನಿವಾರ್ಯತೆಯನ್ನು ಇಂದಿರಾಗಾಂಧಿ ಅವರು ಎದುರಿಸಿದ್ದು ನನಗೆ ನೆನಪಿದೆ. ಕಾಂಗ್ರೆಸ್‌ನಲ್ಲಿ ನೊಗವಿರುವ ಎರಡು ಎತ್ತುಗಳ ಚಿಹ್ನೆ ಇತ್ತು, ನಂತರ ಅವರು ಅದನ್ನು ಕಳೆದುಕೊಳ್ಳಬೇಕಾದ ಸನ್ನಿವೇಶ ಎದುರಾಯಿತು. ಆಗ ಹೊಸ ಚಿಹ್ನೆಯಾಗಿ 'ಕೈ' ಅಳವಡಿಸಿಕೊಂಡರು. ಜನರು ಅದನ್ನು ಒಪ್ಪಿಕೊಂಡರು ಕೂಡ.
ಹಾಗೆಯೇ ಕಾಂಗ್ರೆಸ್‌ನ ಹೊಸ ಚಿಹ್ನೆಯನ್ನು ಜನರು ಸ್ವೀಕರಿಸಿದ ರೀತಿಯಲ್ಲಿಯೇ ಉದ್ಧವ್ ಠಾಕ್ರೆ ಬಣದ ನೂತನ ಚಿಹ್ನೆಯನ್ನು ಕೂಡ ಜನರು ಸ್ವೀಕಾರ ಮಾಡಲಿದ್ದಾರೆ ಎಂದು ಶರದ್ ಪವಾರ್ ಹೇಳಿದ್ದರು.
ಇದನ್ನೂ ಓದಿ: Explained: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ, ಬೆಳಗಾವಿಗೆ ಸಂಬಂಧಿಸಿದಂತೆ ರಾಜ್ಯ ಈವರೆಗೆ ಅಂಗೀಕರಿಸಿರುವ ನಿರ್ಣಯಗಳಿವು!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ