ಭಾರತಕ್ಕೆ ಬಂದ ಅಫ್ಘಾನಿಸ್ತಾನದವರ ಹೊಟ್ಟೆಯಲ್ಲಿತ್ತು 30 ಕೋಟಿ ಮೌಲ್ಯದ ಹೆರಾಯಿನ್!

ದೆಹಲಿಯಲ್ಲಿ ಇತ್ತೀಚೆಗೆ ಮಾದಕ ವ್ಯಸನದ ಬಳಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. 

news18-kannada
Updated:September 13, 2019, 9:54 PM IST
ಭಾರತಕ್ಕೆ ಬಂದ ಅಫ್ಘಾನಿಸ್ತಾನದವರ ಹೊಟ್ಟೆಯಲ್ಲಿತ್ತು 30 ಕೋಟಿ ಮೌಲ್ಯದ ಹೆರಾಯಿನ್!
ಬಂಧಿತರು
  • Share this:
ನವದೆಹಲಿ (ಸೆ.13): ಅಫ್ಘಾನಿಸ್ತಾನದ ಕಂದಾಹಾರದಿಂದ ದೆಹಲಿಗೆ ಬಂದ ಮೂವರ ಬಳಿ 1.3 ಕೆಜಿ ತೂಕದ ಹೆರಾಯಿನ್​ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 30 ಕೋಟಿ ರೂ.ಗೂ ಅಧಿಕವಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಮಾದಕ ದ್ರವ್ಯ ಹೊತ್ತು ಕೆಲವರು ದೆಹಲಿಗೆ ಬರುತ್ತಿದ್ದಾರೆ ಎನ್ನುವ ಬಗ್ಗೆ ಗುಪ್ತಚರ ಇಲಾಖೆ ಮೊದಲೇ ಮಾಹಿತಿ ಕಲೆ ಹಾಕಿತ್ತು. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದು ಮೂವರನ್ನು ಬಂಧಿಸಿ ಪೊಲೀಸರು ತಪಾಸಣೆ ನಡೆಸಿದ್ದರು. ಆದರೆ, ಯಾವುದೇ ಮಾದಕ ದ್ರವ್ಯ ಸಿಕ್ಕಿರಲಿಲ್ಲ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅವರ ಹೊಟ್ಟೆಯಲ್ಲಿ 1.8 ಕೆಜಿ ಹೆರಾಯಿನ್ ಇರುವ ವಿಚಾರ ಗೊತ್ತಾಗಿದೆ.

ಅಫ್ಘಾನಿಸ್ತಾನದವರ ಸಂಪರ್ಕದಲ್ಲಿದ್ದ ನೈಜೀರಿಯಾ ಮೂಲದವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ 6.50 ಕೆಜಿ ಹೆರಾಯಿನ್​ ಲಭ್ಯವಾಗಿದೆ. ಘಟನೆ ನಂತರದಲ್ಲಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಹೆಚ್ಚಿಸಲಾಗಿದೆ. ಅಲ್ಲದೆ, ಸಾಕಷ್ಟು ಕಡೆಗಳಲ್ಲಿ ದಾಳಿ ನಡೆಸಿ, ಶೋಧ ಕಾರ್ಯ ನಡೆಸಲಾಗುತ್ತಿದೆ.ದೆಹಲಿಯಲ್ಲಿ ಇತ್ತೀಚೆಗೆ ಮಾದಕ ವ್ಯಸನದ ಬಳಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading