ಸಲಿಂಗಿಗಳಿಗಾಗಿ 20 ವರ್ಷಗಳ ದೀರ್ಘ ಹೋರಾಟ ನಡೆಸಿದ ನ್ಯಾಯವಾದಿ ಇವರು!


Updated:September 6, 2018, 2:10 PM IST
ಸಲಿಂಗಿಗಳಿಗಾಗಿ 20 ವರ್ಷಗಳ ದೀರ್ಘ ಹೋರಾಟ ನಡೆಸಿದ ನ್ಯಾಯವಾದಿ ಇವರು!

Updated: September 6, 2018, 2:10 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಸೆ.06): ನಾಜ್​ ಫೌಂಡೇಷನ್​ ಹೆಸರಿನ ಎನ್​ಜಿಒ ಒಂದು ಸಲಿಂಗಿಗಳ ಹಕ್ಕುಗಳಿಗಾಗಿ ದೀರ್ಘ ಕಾಲದಿಂದ ಹೋರಾಟ ನಡೆಸುತ್ತಾ ಬಂದಿದೆ. 2013ರಲ್ಲಿ ಸಲಿಂಗ ಸಂಬಂಧವನ್ನು ಅಪರಾಧವೆಂದು ಘೋಷಿಸಿದ್ದ ಸಂದರ್ಭದಲ್ಲಿ ಇದೇ ಸಂಘಟನೆಯು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಈ ನಾಜ್​ ಫೌಂಡೇಷನ್​ ಪರವಾಗಿ ನ್ಯಾಯಾಲಯದಲ್ಲಿ ಧ್ವನಿಯಾಗಿದ್ದು ಅಂದರೆ ವಾದ ಮಂಡಿಸಿದ್ದು, ಆನಂದ್​ ಗ್ರೋವರ್​ ಎಂಬ ನ್ಯಾಯವಾದಿ.

ನ್ಯೂಸ್​ 18ನೊಂದಿಗೆ ಎಕ್ಸ್​ಕ್ಲೂಸಿವ್​ ಆಗಿ ಮಾತನಾಡಿದ ಗ್ರೋವರ್​ "ಸಲಿಂಗಿಗಳ ಅಧಿಕಾರಕ್ಕಾಗಿ ಕಳೆದ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಈ ಹೋರಾಟದಲ್ಲಿ ನಮಗೆ ಗೆಲುವಾಗುತ್ತದೆ ಎಂಬುವುದರಲ್ಲಿ ನನಗೆ ಯಾವ ಅನುಮಾನವಿರಲಿಲ್ಲ" ಎಂದಿದ್ದಾರೆ.

ಅಲ್ಲದೇ "ಈ ಹೋರಾಟ ಹೆಚ್​ಐವಿ ಪಾಸಿಟಿವ್​ ವ್ಯಕ್ತಿಗಳಿಗಾಗುತ್ತಿರುವ ಭೇದ ಭಾವದ ಕುರಿತಾಗಿ ಆರಂಭವಾಗಿತ್ತು. ಇಂತಹ ವ್ಯಕ್ತಿಗಳಿಗೆ ತೋರುತ್ತಿರುವ ಭೇದ ಭಾವವನ್ನು ನಿಲ್ಲಿಸುವಂತೆ ನಾನು ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದೆ" ಎಂದಿದ್ದಾರೆ ಗ್ರೋವರ್​.

"ಈ ಹೋರಾಟ 1998ರಲ್ಲಿ ಆರಂಭವಾಗಿತ್ತು. ಅಂದು ನಾವು ಹೆಚ್​ಐವಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದೆವು. ಉದ್ಯೋಗದ ಸ್ಥಳದಲ್ಲಿ ಹೆಚ್​ಐವಿ ಪಾಸಿಟಿವ್​ ವ್ಯಕ್ತಿಯೊಂದಿಗೆ ಯಾವುದೇ ಭೇದ ಭಾವ ಮಾಡಬಾರದೆಂದು ಈ ಹೋರಾಟ ಆರಂಭವಾಗಿತ್ತು. ಇನ್ನು ಹೆಚ್​ಐವಿ ಹಾಗೂ ಸಲಿಂಗ ರಿಲೇಷನ್​ಶಿಪ್​ ಇವೆರಡಕ್ಕೂ ಸಂಬಂಧವಿದೆ. ಹೀಗಾಗಿ ಸಲಿಂಗ ಸಂಬಂಧ ಇಟ್ಟುಕೊಂಡಿದ್ದ ಹಲವಾರು ಮಂದಿ ನಮ್ಮನ್ನು ಭೇಟಿಯಾಗಿದ್ದರು" ಎಂದಿದ್ದಾರೆ ಗ್ರೋವರ್​. ಈ ವಿಚಾರವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಇವೆಲ್ಲಕ್ಕೂ ಸೆಕ್ಷನ್​ 377 ಮೂಲ ಕಾರಣ ಎಂದು ತಿಳಿದು ಬಂದಿದೆ. ಹೀಗಿರುವಾಗ ಅವರಿಗೆ ನಾಜ್​ ಫೌಂಡೇಷನ್​ ಪರಿಚಯವಾಗಿದೆ. ಈ ಫೌಂಡೇಷನ್​ ಮೂಲತಃ ಸಲಿಂಗಿಗಳ ಅಧಿಕಾರಕ್ಕಾಗಿಯೇ ಹೋರಾಟ ನಡೆಸುತ್ತಿತ್ತು.

ಹಲವಾರು ಪ್ರಕರಣಗಳು ಬೆಳಕಿಗೆ ಬಂದವು. ಪೊಲೀಸರು ಇಂತಹ ವ್ಯಕ್ತಿಗಳಿಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದರು. ಪುರುಷ ಸಲಿಂಗಿಗಳನ್ನು ಸರಿ ಮಾಡಲು ಇಲೆಕ್ಟ್ರಿಕ್​ ಥೆರಪಿಯನ್ನು ಬಳಸಿಕೊಳ್ಳಲಾಗುತ್ತಿತ್ತು. ನಾವು ಹೀಗ್ಯಾಕೆ ಆಗುತ್ತಿದೆ ಎಂದು ತಿಳಿದುಕೊಳ್ಳಲು ಬಯಸಿದೆವು. ಅಂತಿಮವಾಗಿ ಸೆಕ್ಷನ್​ 377 ಇದಕ್ಕೆ ಮೂಲ ಕಾರಣ ಎಂಬ ನಿರ್ಧಾರಕ್ಕೆ ಬಂದೆವು. ದೆಹಲಿಯಲ್ಲಿ ನಾಜ್​ ಫೌಂಡೇಷನ್​ ಇದಕ್ಕಾಗಿ ಶ್ರಮಿಸುತ್ತಿದೆ ಎಂದು ತಿಳಿಯಿತು. ಹೀಗಾಗಿ ನಾವು 2001ರಲ್ಲಿ ನಾಜ್​ ಫೌಂಡೇಷನ್​ ಪರವಾಗಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆವು.
ಆನಂದ್​ ಗ್ರೋವರ್​


ಆರಂಭದಲ್ಲಿ ನ್ಯಾಯಾಲಯದಲ್ಲಿ ಈ ಪ್ರಕರಣದ ಕುರಿತಾಗಿ ವಿಚಾರಣೆ ನಡೆಸುವುದೂ ಬಹಳ ಕಷ್ಟವಾಗುತ್ತಿತ್ತಂತೆ, ಈ ಕುರಿತಾಗಿ ಮಾತನಾಡಿರುವ ಗ್ರೋವರ್​ "ಆರಂಭದಲ್ಲಿ ಇದಕ್ಕೆ ಸಂಬಂಧಿಸಿದಂತೆ ಲಿಸ್ಟಿಂಗ್​ ಆಗುತ್ತಿತ್ತು. ಆದರೆ ವಿಚಾರಣೆ ನಡೆಯುತ್ತಿರಲಿಲ್ಲ. ಬಳಿಕ ಮಾಧ್ಯಮಗಳೂ ಈ ಕುರಿತಾಗಿ ಸುದ್ದಿ ಮಾಡಲಾರಂಭಿಸಿದವು. ಇದರಿಂದ ನಮಗೆ ತುಂಬಾ ಉಪಕಾರವಾಯ್ತು" ಎಂದಿದ್ದಾರೆ.
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ