Chhattisgarh Encounter: ಛತ್ತೀಸ್​ಗಢ ಎನ್​ಕೌಂಟರ್; ಓರ್ವ ಪೊಲೀಸ್ ಅಧಿಕಾರಿ, ನಾಲ್ವರು ನಕ್ಸಲರು ಸಾವು

Naxal Encounter: ಇದೇ ಜಾಗದಲ್ಲಿ 2009ರಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಎಸ್​ಪಿ ಸೇರಿದಂತೆ 29 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಯ್ಪುರ (ಮೇ 9): ಛತ್ತೀಸ್​ಗಢದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಓರ್ವ ಪೊಲೀಸ್ ಅಧಿಕಾರಿ ಮತ್ತು ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ಛತ್ತೀಸ್​ಗಢದ ಪರ್ದೋನಿ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿರುವ ನಕ್ಸಲರ ಮೃತದೇಹಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆ ವೇಳೆ ಓರ್ವ ಸಬ್​ ಇನ್​ಸ್ಪೆಕ್ಟರ್​ ಗಂಭೀರವಾಗಿ ಗಾಯಗೊಂಡಿದ್ದರು. ನಕ್ಸಲರ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: Vande Bharat Mission 2.0: ವಂದೇ ಭಾರತ್​ ಮಿಷನ್​ನಡಿ ಭಾರತೀಯರ ರಕ್ಷಣೆ; ಮೇ 15ರಿಂದ 2ನೇ ಹಂತದ ಕಾರ್ಯಾಚರಣೆ

ಎನ್​ಕೌಂಟರ್ ನಡೆದ ಜಾಗದಲ್ಲಿ 1 ಎಕೆ-47 ರೈಫಲ್, 1 ಎಸ್​ಎಲ್​ಆರ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ಜಾಗದಲ್ಲಿ 2009ರಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಎಸ್​ಪಿ ಸೇರಿದಂತೆ 29 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು.
First published: