ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪಾಕ್​ ಮಾಜಿ ಪ್ರಧಾನಿ: ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿ ಎಂದ ವೈದ್ಯಕೀಯ ಮಂಡಳಿ


Updated:July 23, 2018, 8:32 AM IST
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪಾಕ್​ ಮಾಜಿ ಪ್ರಧಾನಿ: ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿ ಎಂದ ವೈದ್ಯಕೀಯ ಮಂಡಳಿ
ನವಾಜ್​ ಶರೀಫ್​
  • Share this:
ನ್ಯೂಸ್​-18 ಕನ್ನಡ

ಬೆಂಗಳೂರು(ಜುಲೈ.23): ಬಹುಕೋಟಿ​ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲುಪಾಲಾಗಿರುವ ಮಾಜಿ ಪ್ರಧಾನಿ ನವಾಜ್​ ಷರೀಫ್​ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಕೂಡಲೇ ತುರ್ತು ಚಿಕಿತ್ಸೆಗಾಗಿ ಆದಿಯಾಲಾ ಜೈಲಿನಿಂದ ಆಸ್ಪತ್ರೆಗೆ ರವಾನಿಸಬೇಕು ಎಂದು ವೈದ್ಯಕೀಯ ಮಂಡಳಿ ಶಿಫಾರಸು ಮಾಡಿದೆ.

ಮಾಜಿ ಪ್ರಧಾನಿ ಷರೀಫ್​​ ಕಿಡ್ನಿ ಸಂಬಂಧಿತ ಖಾಯಿಲೆ ಡೀಹ್ರೈಡ್ರೇಷನ್​ನಿಂದ ಬಳಲುತ್ತಿದ್ದರು. ಇದೀಗ ಖಾಯಿಲೆ ಕೊನೆಯ ಹಂತಕ್ಕೆ ತಲುಪಿದೆ. ಹೀಗಾಗಿ ತುರ್ತು ಚಿಕಿತ್ಸೆಗಾಗಿ ಷರೀಫ್​ ಅವರನ್ನು ಆಸ್ಪತ್ರಗೆ ರವಾನಿಸಬೇಕು, ಇಲ್ಲವಾದಲ್ಲಿ ಪ್ರಾಣಕ್ಕೆ ಅಪಾಯ ಎಂದು ವೈದ್ಯಕೀಯ ಮಂಡಳಿ ವರದಿಗಳು ತಿಳಿಸಿವೆ.

ಇನ್ನು ಪನಾಮ ಪೇಪರ್ ಹಗರಣದಲ್ಲಿ ದೋಷಿ ಎಂದು ಸಾಬೀತಾಗಿ ಪಾಕಿಸ್ತಾನ ಸುಪ್ರೀಂಕೋರ್ಟ್​ ನವಾಜ್​ ಶರೀಫ್‍‍ಗೆ 10 ವರ್ಷ ಮತ್ತು ಮಗಳು ಮರಿಯಮ್​ ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸುಪ್ರೀಂ ಆದೇಶದ ಮೇರೆಗೆ ಪೊಲೀಸರು ಮಾಜಿ ಪ್ರಧಾನಿಗಳನ್ನು ಬಂಧಿಸಲು ಮುಂದಾಗಿದ್ದರು.

ಸುಪ್ರೀಂ ಆದೇಶದ ಬಳಿಕ ಪ್ಲೇನ್​ನಲ್ಲಿ ನವಾಜ್​ ಷರೀಫ್​ ಕುಟುಂಬ ಲಂಡನ್‍‍ನಿಂದ ಅಬುದಾಬಿಗೆ ಆಗಮಿಸಿ ಲಾಹೋರ್​ಗೆ ಬಂದಿಳಿದಿತ್ತು. ಈ ವೇಳೆ ಲಾಹೋರ್​ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ನ್ಯಾಬ್ ತಂಡದ ಅಧಿಕಾರಿಗಳು ಷರೀಫ್​ ಮತ್ತು ಅವರ ಮಗಳು ಮರಿಯಮ್​ರನ್ನು ಬಂಧಿಸಿದ್ದರು.
First published:July 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading