ಅಮಾಯಕರ ಸಾವುಗಳ ನಡುವೆ ಮಾಜಿ ಪ್ರಧಾನಿ ಶಕ್ತಿ ಪ್ರದರ್ಶನ: ಸತ್ತ ಜೀವಗಳಿಗೆ ಉತ್ತರ ಕೊಡುವ ನೈತಿಕತೆ ‘ಷರೀಫ್​’ರಿಗೆ ಇದೆಯೇ?

Ganesh
Updated:July 13, 2018, 11:51 PM IST
ಅಮಾಯಕರ ಸಾವುಗಳ ನಡುವೆ ಮಾಜಿ ಪ್ರಧಾನಿ ಶಕ್ತಿ ಪ್ರದರ್ಶನ: ಸತ್ತ ಜೀವಗಳಿಗೆ ಉತ್ತರ ಕೊಡುವ ನೈತಿಕತೆ ‘ಷರೀಫ್​’ರಿಗೆ ಇದೆಯೇ?
Ousted Pakistani Prime Minister Nawaz Sharif gestures as he boards a Lahore-bound flight due for departure, at Abu Dhabi International Airport, UAE July 13, 2018. REUTERS/Drazen Gorgic - RC188D1CCA00
  • Share this:
ನ್ಯೂಸ್​-18 ಕನ್ನಡ


ನವದೆಹಲಿ(ಜುಲೈ.13): ಪನಾಮ ಪೇಪರ್ ಹಗರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಗುರಿಯಾಗಿದ್ದ ಪಾಕ್​ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂಧಿಸಲಾಗಿದೆ. ನವಾಜ್​ ಷರೀಫ್​ ಸೇರಿದಂತೆ ಮಗಳು ಮರಿಯಮ್​ ಅವರನ್ನು ಪಾಕ್​ ಪೊಲೀಸರು ಬಂಧಿಸಿದ್ದಾರೆ.ಹಲವು ಸುತ್ತುಗಳು ಬಳಿಕ ಪ್ಲೇನ್​ನಲ್ಲಿ ನವಾಜ್​ ಷರೀಫ್​ ಕುಟುಂಬ ಲಂಡನ್‍‍ನಿಂದ ಅಬುದಾಬಿಗೆ ಆಗಮಿಸಿ ಬಳಿಕ ಲಾಹೋರ್​ಗೆ ಬಂದಿಳಿದಿದೆ. ಲಾಹೋರ್​ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಪಾಕಿಸ್ತಾನದ ನ್ಯಾಬ್ ತಂಡದ ಅಧಿಕಾರಿಗಳು ಷರೀಫ್​ ಮತ್ತು ಅವರ ಮಗಳನ್ನು ಬಂಧಿಸಿದ್ದಾರೆ.


ಪನಾಮ ಪೇಪರ್ ಹಗರಣದಲ್ಲಿ ದೋಷಿ ಎಂದು ಸಾಬೀತಾಗಿ ಪಾಕಿಸ್ತಾನ ಸುಪ್ರೀಂಕೋರ್ಟ್​ ನವಾಜ್​ ಶರೀಫ್‍‍ಗೆ 10 ವರ್ಷ ಮತ್ತು ಮಗಳು ಮರಿಯಮ್​ ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಪಾಕ್​ ಪೊಲೀಸರಿಗೆ ಕೂಡಲೇ ಬಂಧಿಸುವಂತೆ ಆದೇಶ ನೀಡಿದ್ದು, ಬಂಧನಕ್ಕೊಳಗಾಗುವಂತೆ ಪಾಕ್​ ಮಾಜಿ ಪ್ರಧಾನಿಗೆ ನೋಟಿಸ್​ ಜಾರಿಗೊಳಿಸಿತ್ತು.

ಬಂಧನಕ್ಕೆ ಒಳಗಾಗುವುದು ಖಾತ್ರಿಯಾದ ಮೇಲೆಯೂ ಪಾಕ್​ ಮಾಜಿ ಪ್ರಧಾನಿ ಷರೀಫರು ತನಗೆ ಬೆಂಬಲ ನೀಡುವಂತೆ ಕರೆ ನೀಡಿದ್ದರು. ಈ ಕರೆಗೆ ಓಗೊಟ್ಟು ತನ್ನ ಪಕ್ಷದ ಪಾಕಿಸ್ತಾನ್​ ಮುಸ್ಲಿಂ ಲೀಗ್ ಕಾರ್ಯಕರ್ತರು ಬೀದಿಗಿಳಿದು ಗಲಭೆಗಳನ್ನು ಸೃಷ್ಟಿಸಿದರು. ಇದರ ಪರಿಮಾಣವಾಗಿ ಪಾಕ್​ನ ಎರಡು ಸ್ಥಳಗಳಲ್ಲಿ ಅವಳಿ ಬಾಂಬ್​ಸ್ಪೋಟ ನಡೆದವು.ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದು ವಿಪಕ್ಷದವರು ಚುನಾವಣಾ ಪ್ರಚಾರ ರ್ಯಾಲಿಗಳನ್ನು ನಡೆಸುತ್ತಿದ್ದು. ಇದನ್ನು ಗುರಿಯಾಗಿಸಿಕೊಂಡು ಉಗ್ರರ ಗುಂಪೊಂದು ಬಾಂಬ್ ದಾಳಿ ನಡೆಸಿದೆ. ಈ ಅಮಾನವೀಯ ಘಟನೆಯಲ್ಲಿ 70 ಮಂದಿ ಸಾವನ್ನಪ್ಪಿದ್ದು, 120ಕ್ಕೂ ಅಧಿಕ ಜನ ಸಾವು ನೋವಿನ ನಡುವೆ ಬಳಲುತ್ತಿದ್ದಾರೆ.


ಪಾಕಿಸ್ತಾನದ ಬಲೂಚಿಸ್ಥಾನದಲ್ಲಿ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ 70 ಮಂದಿ ಸಾವನಪ್ಪಿದ್ದಾರೆ. ಅಲ್ಲದೇ ಸುಮಾರು 120ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ ಎನ್ನುತ್ತಿವೆ ಮೂಲಗಳು. ನವಾಜ್ ಷರೀಫ್​ ಅವರ ಬಂಧನವನ್ನು ಖಂಡಿಸಿ ಗಲಭೆ ಸೃಷ್ಟಿಸಿದ್ದ ಕಾರಣ ಈ ದಾಳಿ ಸಂಭವಿಸಿದೆ ಎನ್ನಲಾಗಿದೆ.


120 ಜನ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಚುನಾವಣಾ ರ್ಯಾಲಿಯಲ್ಲಿ 1 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಜುಲೈ 25ರಂದು ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಸಲು ಈ ದಾಳಿ ನಡೆಸಲಾಗಿದೆ.ತಾನು ಜೈಲುಪಾಲಾಗುತ್ತೇನೆ ಎಂದು ಗೊತ್ತಿದ್ದ ನಾಯಕನೋರ್ವ ಗಲಭೆ ಸೃಷ್ಟಿಸಲು ಕರೆ ನೀಡಿದ್ದಾರೆ. ಸುರಕ್ಷಿತವಾಗಿ ಜೈಲು ಸೇರಿದ ನವಾಜ್​ ಷರೀಫರು ಈ ಸಾವುಗಳಿಗೆ ಉತ್ತರ ನೀಡುವ ನೈತಿಕತೆ ಇದೆಯೇ ಎನ್ನುವ ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ಒಬ್ಬ ಮಾಜಿ ಪ್ರಧಾನಿಗಾಗಿ 70 ಜನರನ್ನು ಬಲಿ ತೆಗೆದುಕೊಂಡಿದ್ದು ದೊಡ್ಡ ದುರಂತವೇ ಸರಿ.


ಅಮಾಯಕರ ಸಾವುಗಳ ನಡುವೆ ಶಕ್ತಿ ಪ್ರದರ್ಶಿಸಿದ ಮಾಜಿ ಪ್ರಧಾನಿ ಸುರಕ್ಷಿತವಾಗಿ ಜೈಲು ಸೇರಿದ್ಧಾರೆ. ತನ್ನ ಪಕ್ಷದ ಬೆಂಬಲಿಗರು ಇನ್ನು ಗಲಭೆಗಳನ್ನು ಮುಂದುವರಿಸಿದ್ದು, ಮತ್ತಷ್ಟು ಅನಾಹುತಗಳಿಗೆ ಪಾಕ್​ ಮಾಜಿ ಪ್ರಧಾನಿಗಳು ಕಾರಣರಾಗಲಿದ್ದಾರೆ ಎನ್ನುತ್ತಿವೆ ಮೂಲಗಳು.
First published:July 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ